ಆನ್‌ಲೈನ್‌ ಗೇಮ್‌ ಆಡುವವರೇ ಈ ಹೊಸ ರೂಲ್ಸ್‌ ತಿಳಿದುಕೊಳ್ಳಿ; ಕರಡು ಅಧಿಸೂಚನೆ ಬಿಡುಗಡೆ

|

ಸ್ಮಾರ್ಟ್‌ಫೋನ್‌ ಅಥವಾ ಸ್ಮಾರ್ಟ್‌ಡಿವೈಸ್‌ನಲ್ಲಿ ಕರೆ ಹಾಗೂ ಇನ್ನಿತರೆ ಬಳಕೆ ಜೊತೆಗೆ ಗೇಮಿಂಗ್‌ಗಾಗಿಯೂ ಹೆಚ್ಚಿನ ಬಳಕೆ ಮಾಡುತ್ತೇವೆ. ಅದರಲ್ಲೂ ಕೆಲವು ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಗೇಮಿಂಗ್‌ ಉದ್ದೇಶಕ್ಕೆಂದೇ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುತ್ತಿವೆ. ಇತ್ತೀಚೆಗೆ ಇದೊಂದು ಶ್ರೀಮಂತ ಉದ್ಯಮವಾಗಿ ಹೊರಹೊಮ್ಮುತ್ತಿದ್ದು, ಇದರ ಭಾಗವಾಗಿಯೇ ಹಲವಾರು ಆನ್‌ಲೈನ್‌ ಗೇಮಿಂಗ್‌ ಆಪ್‌ಗಳು ಭಾರೀ ಸದ್ದು ಮಾಡುತ್ತಿವೆ.

ಆನ್‌ಲೈನ್‌

ಹೌದು, ಆನ್‌ಲೈನ್‌ ಗೇಮಿಂಗ್‌ ಇತ್ತೀಚೆಗೆ ಭಾರೀ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖ ನಟ ನಟಿಯರೇ ಈ ಗೇಮ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವದರಿಂದ ಯಾವುದೇ ಗೇಮಿಂಗ್ ಕಂಪೆನಿಗಳಾದರೂ ಸಹ ಸದ್ಯಕ್ಕೆ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿವೆ. ಇದರೊಂದಿಗೆ ಕೆಲವೊಂದಷ್ಟು ಜನ ಗೇಮ್‌ನಲ್ಲಿ ಹಣ ಗಳಿಸಿಕೊಂಡರೆ, ಇನ್ನೊಂದಷ್ಟು ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಆನ್‌ಲೈನ್ ಗೇಮಿಂಗ್‌ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದೆ.

ಗೇಮಿಂಗ್

ಆನ್‌ಲೈನ್ ಗೇಮಿಂಗ್ ಅನ್ನು ಸರ್ಕಾರ ಇನ್ಮುಂದೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಇದನ್ನು ಕಂಟ್ರೋಲ್‌ ಮಾಡುವ ಸ್ವಯಂ ನಿಯಂತ್ರಣ ಸಂಸ್ಥೆಯನ್ನು ಈ ಮೂಲಕ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಸರ್ಕಾರವು ಐಟಿ ಕಾಯ್ದೆ 87ರ ಅಡಿಯಲ್ಲಿ ಕಾನೂನು ರೂಪಿಸಲಿದ್ದು, 30 ದಿನಗಳೊಳಗೆ ಸರ್ಕಾರವು ಪಾಲುದಾರರಿಂದ ಅಭಿಪ್ರಾಯ ಕೇಳಿದೆ. ಇದಾದ ನಂತರ ಕಂಪೆನಿಗಳು ಸ್ವಯಂ ನಿಯಂತ್ರಣ ಸಂಸ್ಥೆಯನ್ನು ರಚಿಸಬೇಕಾಗುತ್ತದೆ. ಯಾಕೆಂದರೆ ಗೇಮಿಂಗ್ ಸೈಟ್ ಅನ್ನು ನೋಂದಾಯಿಸಲು ಇದು ಅಗತ್ಯವಾದ ಕ್ರಮವಾಗಿ ಮಾರ್ಪಡಿಸಲು ಸರ್ಕಾರ ತನ್ನದೇ ಆದ ನೀತಿ ನಿಯಮಗಳನ್ನು ಸಿದ್ಧ ಮಾಡಿಕೊಂಡಿದೆ.

ಕರಡು ಅಧಿಸೂಚನೆ

ಕರಡು ಅಧಿಸೂಚನೆ

ಆನ್‌ಲೈನ್ ಗೇಮಿಂಗ್‌ಗಾಗಿ ಸರ್ಕಾರ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಈ ಸಂಬಂಧ ಕೆಲವು ನಿಯಮಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಎಐ, ವಿಆರ್‌ ಹಾಗೂ ಮೆಟಾವರ್ಸ್ ಅನ್ನು ಸೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಆನ್‌ಲೈನ್ ಗೇಮರುಗಳಿಗಾಗಿ ಕೆವೈಸಿ

ಆನ್‌ಲೈನ್ ಗೇಮರುಗಳಿಗಾಗಿ ಕೆವೈಸಿ

ಮಹಿಳೆಯರು ಮತ್ತು ಮಕ್ಕಳನ್ನು ಈ ಗೇಮಿಂಗ್‌ ವ್ಯವಸ್ಥೆಯಿಂದ ಸುರಕ್ಷಿತವಾಗಿಸಲು ಕ್ರಮ ಜರುಗಿಸಲಾಗಿದೆ. ಅದರಲ್ಲೂ ಆನ್‌ಲೈನ್‌ ಗೇಮಿಂಗ್‌ಗಳಲ್ಲಿ ಹಣವನ್ನು ಪಣಕ್ಕೆ ಇಡಲಾಗುತ್ತದೆ. ಜೊತೆಗೆ ಹಣ ಗಳಿಸುವ ಪ್ರಕ್ರಿಯೆ ಸಹ ನಡೆಯುತ್ತದೆ. ಆದರೆ, ಇದು ಆನ್‌ಲೈನ್‌ ಬೆಟ್ಟಿಂಗ್‌ ಆಗದೆ ಕೇವಲ ಆಟವಾದರೆ ಮಾತ್ರ ಇದನ್ನು ಅನುಮತಿಸಲು ಸಾಧ್ಯ ಎಂದು ಸರ್ಕಾರ ತಾಕೀತು ಮಾಡಿದೆ. ಇದಕ್ಕಾಗಿಯೇ ಆನ್‌ಲೈನ್ ಗೇಮರುಗಳಿಗಾಗಿ ಕೆವೈಸಿ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಕ್ರಿಪ್ಟೋ ಅಥವಾ ಯಾವುದೇ ಇನ್ನಿತರ ಅಪಾಯವನ್ನು ತಪ್ಪಿಸಬಹುದಾಗಿದೆ.

ಭಾರತಕ್ಕೆ ಎರಡನೇ ಸ್ಥಾನ

ಭಾರತಕ್ಕೆ ಎರಡನೇ ಸ್ಥಾನ

ಅನ್‌ಲೈನ್‌ ಗೇಮಿಂಗ್‌ಗೆ ಹೆಚ್ಚಿನ ಬೇಡಿಕೆ ಇರುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಆನ್‌ಲೈನ್‌ ಗೇಮರ್‌ಗಳನ್ನು ಕಾಣಬಹುದಾಗಿದೆ. ಅದರಲ್ಲೂ ನಿಖರವಾಗಿ ಹೇಳಬೇಕಾದರೆ 400 ಮಿಲಿಯನ್ ಆಟಗಾರರು ಭಾರತದಲ್ಲಿ ಇದ್ದಾರೆ. ಇದರೊಂದಿಗೆ ಭಾರತ ಗೇಮಿಂಗ್‌ ಕ್ಷೇತ್ರದಲ್ಲಿ 21 ಪ್ರತಿಶತದಷ್ಟು ಬೆಳವಣಿಗೆ ದಾಖಲಿಸಿದೆ.

ಗೇಮಿಂಗ್

ಇನ್ನು ಆನ್‌ಲೈನ್ ಗೇಮಿಂಗ್ 18% ಜಿಎಸ್‌ಟಿ ಪಾಲನ್ನು ನೀಡುತ್ತಿದ್ದು, ಆನ್‌ಲೈನ್ ಗೇಮಿಂಗ್‌ಗೆ 28% ಜಿಎಸ್‌ಟಿ ವಿಧಿಸಲು ರಾಜ್ಯ ಹಣಕಾಸು ಮಂತ್ರಿಗಳ ಗುಂಪು ಸಲಹೆ ಸಹ ನೀಡಿದೆ. ಆನ್‌ಲೈನ್ ಗೇಮಿಂಗ್ ವಲಯವು 2021 ರಲ್ಲಿ 13,600 ಕೋಟಿ ರೂ. ಮೌಲ್ಯದ್ದಾಗಿದ್ದು, 2024-25 ರ ವೇಳೆಗೆ 29,000 ಕೋಟಿ ರೂ. ಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಕರಡು ಪ್ರತಿಯಲ್ಲಿ ಏನಿದೆ?

ಕರಡು ಪ್ರತಿಯಲ್ಲಿ ಏನಿದೆ?

ಹೊಸ ಕರಡು ನೀತಿಯ ಪ್ರಕಾರ, ಆನ್‌ಲೈನ್ ಗೇಮಿಂಗ್ ಕಂಪೆನಿಗಳಿಗೆ ಸ್ವಯಂ-ನಿಯಂತ್ರಕ ಕಾರ್ಯವಿಧಾನ, ಆಟಗಾರರ ಕಡ್ಡಾಯ ಪರಿಶೀಲನೆ ಮತ್ತು ಭೌತಿಕ ಭಾರತೀಯ ವಿಳಾಸಗಳನ್ನು ಸರ್ಕಾರವು ಪ್ರಸ್ತಾಪಿಸಿದೆ. ಜೊತೆಗೆ ಈ ಆನ್‌ಲೈನ್ ಗೇಮಿಂಗ್ ಕಂಪೆನಿಗಳನ್ನು ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿಯಲ್ಲಿ ತರಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಫೆಬ್ರವರಿಯಿಂದ ನಿಯಮಗಳು ಅನ್ವಯ

ಫೆಬ್ರವರಿಯಿಂದ ನಿಯಮಗಳು ಅನ್ವಯ

ಇನ್ನು ಎಲ್ಲಾ ಆನ್‌ಲೈನ್ ಗೇಮ್‌ಗಳು ಮತ್ತು ಆನ್‌ಲೈನ್ ಗೇಮಿಂಗ್ ಕಂಪೆನಿಗಳಿಗೆ ನಿಯಮಗಳನ್ನು ಮುಂದಿನ ತಿಂಗಳು ಫೆಬ್ರವರಿಯಿಂದ ಅನ್ವಯಿಸಲಾಗುತ್ತದೆ ಎನ್ನಲಾಗಿದೆ. ಜೊತೆಗೆ ಆನ್‌ಲೈನ್ ಗೇಮಿಂಗ್ ಕಂಪೆನಿಗಳು ಭಾರತದಲ್ಲಿ ಅನ್ವಯವಾಗುವ ಕಾನೂನುಗಳನ್ನು ಅನುಸರಿಸುವುದು ಅವಶ್ಯಕ ಎಂದು ಉಲ್ಲೇಖಿಸಲಾಗಿದೆ.

Best Mobiles in India

English summary
Online gaming draft rules in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X