ಭಾರತದಲ್ಲಿ ಇಂಟರ್‌ನೆಟ್ ಬಳಸುವ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ?!

2017ರ ಅಂಕಿ ಅಂಶದಂತೆ ವಿಶ್ವದಲ್ಲಿ ಮಹಿಳೆಯರಿಗಿಂತ ಶೇ. 12ರಷ್ಟು ಪುರುಷರು ಹೆಚ್ಚಾಗಿ ಅಂತರ್ಜಾಲ ಬಳಸುತ್ತಿದ್ದಾರೆ.

|

ಭಾರತದಲ್ಲಿ ಅಂತರ್ಜಾಲ ಬಳಕೆಯಲ್ಲಿ ಮಹಿಳೆಯರಿಗೆ ಹೋಲಿಸಿದರೆ ಪುರುಷರು ಮುಂದಿದ್ದು, ದೇಶದ ಒಟ್ಟು ಮಹಿಳೆಯರಲ್ಲಿ ಕೇವಲ ಶೇ. 29ರಷ್ಟು ಮಂದಿ ಮಾತ್ರವೇ ಅಂತರ್ಜಾಲ ಬಳಸುತ್ತಿದ್ದಾರೆ ಎಂದು ಯುನಿಸೆಫ್ ಬಿಡುಗಡೆ ಮಾಡಿರುವ 'ಸ್ಟೇಟ್ ಆಫ್ ದಿ ವರ್ಲ್ಡ್ಸ್ ಚಿಲ್ಟ್ರನ್‌ 2017' ವರದಿಯಲ್ಲಿ ಹೇಳಲಾಗಿದೆ.!!

ಹೌದು, ವಿದ್ಯುನ್ಮಾನ ಕ್ಷೇತ್ರದಲ್ಲಿಯೂ ಲಿಂಗ ಅಸಮಾನತೆ ಎದ್ದು ಕಾಣುತ್ತಿದೆ ಎಂದು ವಿಶ್ವಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ತಿಳಿಸಿದ್ದು, 2017ರ ಅಂಕಿ ಅಂಶದಂತೆ ವಿಶ್ವದಲ್ಲಿ ಮಹಿಳೆಯರಿಗಿಂತ ಶೇ. 12ರಷ್ಟು ಪುರುಷರು ಹೆಚ್ಚಾಗಿ ಅಂತರ್ಜಾಲ ಬಳಸುತ್ತಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಮೂರನೇ ಒಂದರಷ್ಟು ಮಹಿಳೆಯರು ಮಾತ್ರವೇ ಅಂತರ್ಜಾಲ ಬಳಸುತ್ತಿದ್ದಾರೆ ಎಂದು ಹೇಳಿದೆ.!!

ಭಾರತದಲ್ಲಿ ಇಂಟರ್‌ನೆಟ್ ಬಳಸುವ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ?!

ಇನ್ನು ಈ ವರದಿ ಬಿಡುಗಡೆ ವೇಳೆ ಯುನಿಸೆಫ್‌ನ ಭಾರತ ಪ್ರತಿನಿಧಿ ಯಾಸ್ಮಿನ್ ಅಲಿ ಹಕ್‌ ಈ ಬಗ್ಗೆ ಮಾತನಾಡಿದ್ದು, ಭಾರತ ಪ್ರಮುಖ ಮಾಹಿತಿ ತಂತ್ರಜ್ಞಾನ ದೇಶವಾಗಿದೆ. ಮಕ್ಕಳು ಎಲ್ಲಿ ಬದುಕುತ್ತಿವೆ ಎಂಬುದು ಮುಖ್ಯವಾಗಿಲ್ಲ. ಬದಲಾಗಿ ವಿದ್ಯುನ್ಮಾನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.!!

ಭಾರತದಲ್ಲಿ ಇಂಟರ್‌ನೆಟ್ ಬಳಸುವ ಮಹಿಳೆಯರ ಸಂಖ್ಯೆ ಎಷ್ಟು ಗೊತ್ತಾ?!

ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳು ಮಕ್ಕಳ ಕಲಿಕೆಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ. ಜತೆಗೆ ಹಲವು ಸಮಸ್ಯೆಗಳನ್ನೂ ಸೃಷ್ಟಿಸುತ್ತವೆ. ಹಾಗಾಗಿ ಅಂತರ್ಜಾಲವನ್ನು ರಕ್ಷಣಾತ್ಮಕವಾಗಿ ಬಳಸುವ ಬಗ್ಗೆ ಮಕ್ಕಳಿಗೆ ಪೋಷಕರು ಉತ್ತಮ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.!!

ಓದಿರಿ: ಡಿಸೆಂಬರ್ 15, 16ನೇ ತಾರೀಖು ಆನ್‌ಲೈನ್ ಶಾಪಿಂಗ್ ಮಾಡುವುದನ್ನು ಮರೆಯದಿರಿ!!..ಯಾಕೆ ಗೊತ್ತಾ?

Best Mobiles in India

English summary
girls in rural areas often face restrictions while using the Information and Communications Technology. to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X