ಒಪ್ಪೋ A ಸರಣಿಯ ಹೊಸ ಸ್ಮಾರ್ಟ್‌ಫೋನ್‌; 108 ಮೆಗಾಪಿಕ್ಸೆಲ್ ಕ್ಯಾಮೆರಾ?

|

ಗ್ರಾಹಕ ಎಲೆಕ್ಟ್ರಾನಿಕ್ಸ್ ತಯಾರಕ ಕಂಪೆನಿಯಾಗಿರುವ ಒಪ್ಪೋ, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಹೆಸರು ಪಡೆದಿದೆ. ಇದರ ಜೊತೆಗೆ ಸ್ಮಾರ್ಟ್ ವಿಡಿಯೋ ಡಿವೈಸ್‌, ಆಡಿಯೊ ಡಿವೈಸ್‌ಗಳು, ಪವರ್ ಬ್ಯಾಂಕ್‌ಗಳು ಸೇರಿದಂತೆ ಇನ್ನಿತರೆ ಗ್ಯಾಜೆಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಒಪ್ಪೋ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದೀಗ ಮತ್ತೆ ಒಪ್ಪೋ A ಸರಣಿಯ ಸ್ಮಾರ್ಟ್‌ಫೋನ್ ಲಾಂಚ್‌ ಮಾಡಲು ಸಿದ್ಧತೆ ನಡೆಸಿದ್ದು, ಈ ಫೋನ್ ಬರೋಬ್ಬರಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಬಹುಪಾಲು ಒಪ್ಪೋ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇರುತ್ತವೆ. ಇದರ ಬೆನ್ನಲ್ಲೇ ಈಗ ಒಪ್ಪೋ ಕಂಪೆನಿ ಒಪ್ಪೋ A ಸರಣಿಯ ಹೊಸ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದೆ. ಆದರೆ, ಲಾಂಚ್‌ ಆಗುವ ಪೂರ್ವದಲ್ಲೇ ಫೋನ್‌ನ ಕೆಲವು ಫೀಚರ್ಸ್‌ ಟೆಕ್‌ ವಲಯದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಪ್ರಮುಖವಾಗಿ 67W ವೇಗದ ಚಾರ್ಜಿಂಗ್ ಆಯ್ಕೆಯನ್ನು ಈ ಫೋನ್ ಹೊಂದಿರಲಿದೆ ಎಂದು ತಿಳಿದುಬಂದಿದೆ.

ಟಿಪ್‌ಸ್ಟರ್

ಈ ಸ್ಮಾರ್ಟ್‌ಫೋನ್‌ ಬಗ್ಗೆ ಟಿಪ್‌ಸ್ಟರ್ ವರದಿ ಮಾಡಿದ್ದು, ಅದರ ಪ್ರಕಾರ, ಒಪ್ಪೋದ ಈ ಹೊಸ ಸ್ಮಾರ್ಟ್‌ಫೋನ್ ಅತ್ಯುತ್ತಮ ಫೀಚರ್ಸ್‌ ಮೂಲಕ ಕಾರ್ಯನಿರ್ವಹಿಸಲಿದೆಯಂತೆ. ಹಾಗೆಯೇ ಈ ಫೋನ್‌ ಒಪ್ಪೋ A ಸರಣಿಯಲ್ಲಿ ಇದುವರೆಗೂ ಲಾಂಚ್‌ ಆಗಿರುವ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ ಎಂದು ಟಿಪ್‌ಸ್ಟರ್ ಹೇಳಿದೆ. ಆದರೆ, ನಿಖರವಾಗಿ ಈ ಫೋನ್‌ ಏನೆಲ್ಲಾ ಪ್ರಮುಖ ಫೀಚರ್ಸ್‌ ಹೊಂದಿದೆ, ಯಾವಾಗ ಲಾಂಚ್‌ ಆಗುತ್ತದೆ ಎಂಬ ಬಗ್ಗೆ ಒಪ್ಪೋ ಕಂಪೆನಿ ಮಾತ್ರ ಮಾಹಿತಿ ಬಹಿರಂಗಪಡಿಸಿಲ್ಲ.

ಸ್ಮಾರ್ಟ್‌ಫೋನ್

ವದಂತಿಯ ವರದಿಗಳ ಪ್ರಕಾರ, ಈ ಸ್ಮಾರ್ಟ್‌ಫೋನ್ ಸ್ಪೋರ್ಟ್ ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 2160Hz ಪಲ್ಸ್-ವಿಡ್ತ್ ಮಾಡ್ಯುಲೇಶನ್ (PWM) ಡಿಮ್ಮಿಂಗ್‌ ಫೀಚರ್ಸ್‌ ಆಯ್ಕೆಯನ್ನು ಪಡೆದಿರಲಿದೆ. ಈ ಫೀಚರ್ಸ್‌ ನಿಂದ ಡಿಸ್‌ಪ್ಲೇ ಹೆಚ್ಚು ಮಿನುಗುವುದನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ ಆಕರ್ಷಕ ಡಿಸ್‌ಪ್ಲೇ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಹೋಲ್-ಪಂಚ್ ರಚನೆಯನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಒಪ್ಪೋ A ಸರಣಿ

ಒಪ್ಪೋ A ಸರಣಿ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಆರಂಭಿಕ ಕೊಡುಗೆಯಾಗಿ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿವೆ. ಅದರಂತೆ ಬಿಡುಗಡೆಗೆ ಸಿದ್ಧಗೊಂಡಿರುವ A ಸರಣಿಯ ಹೊಸ ಸ್ಮಾರ್ಟ್‌ಫೋನ್‌ ಸಹ ಬಜೆಟ್‌ ಬೆಲೆಯಲ್ಲಿ ಲಭ್ಯವಾಗಬಹುದು ಎಂದು ತಿಳಿದುಬಂದಿದೆ. ಇದರ ನಡುವೆ ಭಾರತದಲ್ಲಿ ಮೂರು ಒಪ್ಪೋ A ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಜೆಟ್‌ ಬೆಲೆಗೆ ಲಾಂಚ್‌ ಮಾಡಲಾಗಿದೆ.

ಸ್ಮಾರ್ಟ್‌ಫೋನ್‌

ಈ ತಿಂಗಳು ಭಾರತದಲ್ಲಿ ಲಾಂಚ್‌ ಆದ ಒಪ್ಪೋ A ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಪ್ಪೋ A17 ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್‌ ಹಿಲಿಯೋ G35 SoC ನಿಂದ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ಗೆ ಒಪ್ಪೋ ಕೊಡುಗೆ ಬೆಲೆಯಾಗಿ 12,499ರೂ. ಗಳನ್ನು ನಿಗದಿ ಮಾಡಿದೆ. ಇದರ ಜೊತೆಗೆ ಒಪ್ಪೋ A77s ಸ್ಮಾರ್ಟ್‌ಫೋನ್‌ 6.56 ಇಂಚಿನ ಹೆಚ್‌ಡಿ+ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು ಸ್ನಾಪ್‌ಡ್ರಾಗನ್ 680 SoC ನಿಂದ ಕಾರ್ಯನಿರ್ವಸುತ್ತದೆ. ಅದರಂತೆ ಒಪ್ಪೋ ಈ ಫೋನ್‌ಗೆ 17,999ರೂ. ಗಳ ಬೆಲೆಯನ್ನು ನಿಗದಿ ಮಾಡಿದೆ.

 A17k

ಮೂರನೇ ಫೋನ್‌ ಆದ ಒಪ್ಪೋ A17k ಸ್ಮಾರ್ಟ್‌ಫೋನ್‌ 6.56 ಇಂಚಿನ 720 x 1612 ಪಿಕ್ಸೆಲ್‌ ರೆಸಲ್ಯೂಶನ್‌ ಇರುವ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಹೆಚ್ಚಿನ ರಕ್ಷಣೆ ಪಡೆದಿದೆ. ಇದರ ಜೊತೆಗೆ ಮೀಡಿಯಾ ಟೆಕ್ MT6765 ಹಿಲಿಯೋ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 12 ರಲ್ಲಿ ರನ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ಗೆ ಒಪ್ಪೋ 10,499ರೂ. ಗಳನ್ನು ಆರಂಭಿಕ ಕೊಡುಗೆ ದರವಾಗಿ ನಿಗದಿ ಮಾಡಿದೆ.

Best Mobiles in India

English summary
Oppo has made a name for itself by introducing budget priced smartphones. Meanwhile, the stage is now set for the launch of another new A series smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X