ಭಾರತದಲ್ಲಿ ಒಪ್ಪೋ A17k ಸ್ಮಾರ್ಟ್‌ಫೋನ್‌ ಲಾಂಚ್: ಬಜೆಟ್‌ ಬೆಲೆಗೆ ಲಭ್ಯ!

|

ಒಪ್ಪೋ ಕಂಪೆನಿ ಈಗಾಗಲೇ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಜನಪ್ರಿಯಗೊಂಡಿದೆ. ಅಗ್ಗದ ಬೆಲೆಗೆ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಾ ಬರುತ್ತಿರುವ ಒಪ್ಪೋ ಈಗ ಮತ್ತೊಂದು ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಅನಾವರಣ ಮಾಡಿದೆ. ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 6.56 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರ ಜೊತೆಗೆ ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕಾರ್ಯನಿರ್ವಹಿಸಲಿದೆ.

ಒಪ್ಪೋ

ಹೌದು, ಒಪ್ಪೋದಿಂದ ಹೊಸ ಒಪ್ಪೋ A17k ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಡಿವೈಸ್‌ 3GB RAM ಜೊತೆಗೆ 4GB ವರ್ಚುವಲ್ RAM ಟೆಕ್ನಾಲಜಿಯ ಆಯ್ಕೆಯನ್ನೂ ಸಹ ಪಡೆದುಕೊಂಡಿದೆ. ರಿಯರ್‌ ಹಾಗೂ ಸೆಲ್ಫಿಗಾಗಿ ಸಿಂಗಲ್‌ ಕ್ಯಾಮೆರಾ ರಚನೆ ಪಡೆದಿದೆ. ಹಾಗೆಯೇ ಇದು ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ರಿಯಲ್‌ಮಿ C35, ರೆಡ್ಮಿ A1+ ಹಾಗೂ ಮೊಟೊ E32 ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುತ್ತದೆ ಎನ್ನಲಾಗುತ್ತಿದೆ.

A17k

ಒಪ್ಪೋ A17k ಬಿಡುಗಡೆಯೊಂದಿಗೆ ಭಾರತದಲ್ಲಿ ತನ್ನ A ಸರಣಿ ಶ್ರೇಣಿಯನ್ನು ವಿಸ್ತರಿಸಿಕೊಂಡಿದೆ. ಈ ಹೊಸ ಒಪ್ಪೋ ಸ್ಮಾರ್ಟ್‌ಫೋನ್ 4G ಬೆಂಬಲಿತ ಸ್ಮಾರ್ಟ್‌ಫೋನ್‌ ಆಗಿದೆ. ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ವೆನಿಲ್ಲಾ A17 ನಂತರ ಇದು A17 ಸರಣಿಯ ಎರಡನೇ ಸ್ಮಾರ್ಟ್‌ಫೋನ್ ಆಗಿದ್ದು, ಈ ಹಿಂದೆ ಲಾಂಚ್‌ ಆದ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಇದು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಹಾಗಿದ್ರೆ ಇದರ ಬೆಲೆ ಎಷ್ಟು?, ಇತರೆ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಒಪ್ಪೋ A17k ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್‌ಡಿ+ ರೆಸಲ್ಯೂಶನ್ ಜೊತೆಗೆ ಐಪಿಎಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಇದು 720x1612ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. 60Hz ರಿಫ್ರೆಶ್ ರೇಟ್‌, 600nits ಬ್ರೈಟ್‌ನೆಸ್‌ ನೀಡುವ ಫೀಚರ್ಸ್‌ ಪಡೆದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಒಪ್ಪೋ A17k ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 12 ಜೊತೆಗೆ ColorOS 12.1 ಅನ್ನು ಪಡೆದಿದ್ದು, ಒಪ್ಪೋ A17k ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ನಿಂದ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 3GB RAM ಜೊತೆಗೆ 4GB ವರ್ಚುವಲ್ RAM ಹೊಂದಿದ್ದು, 64GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ ಇಂಟರ್ನಲ್‌ ಸ್ಟೋರೇಜ್‌ ಅನ್ನು 1TB ವರೆಗೆ ಹೆಚ್ಚಿಗೆ ಮಾಡಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ.

ಸಿಂಗಲ್‌ ಕ್ಯಾಮೆರಾ

ಸಿಂಗಲ್‌ ಕ್ಯಾಮೆರಾ

ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್‌ ಆಟೋಫೋಕಸ್ ಸೆನ್ಸರ್ ಹಾಗೂ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಫೀಕ್ಸೆಡ್‌ ಫೋಕಸ್ ಸೆನ್ಸರ್‌ಕ್ಯಾಮೆರಾ ರಚನೆ ಹೊಂದಿದ್ದು, ಇವು OIS ಫೀಚರ್ಸ್‌ ಪಡೆದಿಲ್ಲ. ಹಾಗೆಯೇ IPX4 ರೇಟಿಂಗ್‌ನೊಂದಿಗೆ ಫ್ಲ್ಯಾಶ್ ರೆಸಿಸ್ಟೆಂಟ್‌ ವಿಶೇಷತೆ ಪಡೆದಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಒಪ್ಪೋ A17k ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸೈಡ್‌ ಫಿಂಗರ್ ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯೊಂದಿಗೆ ಅಲ್ಟ್ರಾವಾಲ್ಯೂಮ್‌ ಮೋಡ್‌ ಫೀಚರ್ಸ್‌ ಇದರಲ್ಲಿದೆ. ಇನ್ನು 3.5mm ಹೆಡ್‌ಫೋನ್ ಜ್ಯಾಕ್ ಇದರಲ್ಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಒಪ್ಪೋ A17k ಸ್ಮಾರ್ಟ್‌ಫೋನ್‌ 4GB + 64GB ವೇರಿಯಂಟ್‌ ನಲ್ಲಿ ಲಭ್ಯವಿದ್ದು, ಇದಕ್ಕೆ 10,499ರೂ. ನಿಗದಿ ಮಾಡಲಾಗಿದೆ. ಈ ಮೊಬೈಲ್‌ ಗೋಲ್ಡ್ ಮತ್ತು ನೇವಿ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರು ಒಪ್ಪೋ ವೆಬ್‌ಸೈಟ್ ಹಾಗೂ ಇ-ಕಾಮರ್ಸ್‌ ಆನ್‌ಲೈನ್ ಸೈಟ್‌ ನಲ್ಲಿ ಹಾಗೂ ದೇಶದಾದ್ಯಂತ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Oppo company has already become popular by introducing attractive smartphones. Now Oppo has unveiled A17k smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X