ಏರ್‌ಟೆಲ್ 5G ಪ್ಲಸ್ ಅನ್ನು ಬೆಂಬಲಿಸಲಿವೆ ಒಪ್ಪೋದ ಈ ಫೋನ್‌ಗಳು!

|

ಭಾರತದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳು ಎರಡು ವರ್ಷದ ಹಿಂದೆಯೇ 5G ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಈ ನಡುವೆ ಭಾರತದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ 5G ಸೇವೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ಗಳು ಇನ್ಮುಂದೆ 5G ಬೆಂಬಲದಲ್ಲಿ ಕಾರ್ಯನಿರ್ವಹಿಸಲಿವೆ. ಅದರಲ್ಲೂ ಒಪ್ಪೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಈಗ ಈ ಸೇವೆಯನ್ನು ಪಡೆಯಬಹುದಾಗಿದೆ.

ಒಪ್ಪೋ

ಹೌದು, ಒಪ್ಪೋ ಕಂಪೆನಿ‌ ಶನಿವಾರ(ಅ.8) ಮಹತ್ತರವಾದ ಘೋಷಣೆ ಮಾಡಿದೆ. ಅದೇನೆಂದರೆ ಒಪ್ಪೋ 5G ಮೊಬೈಲ್‌ಗಳನ್ನು ಹೊಂದಿರುವ ಗ್ರಾಹಕರು ಏರ್‌ಟೆಲ್‌ 5G ಸೇವೆಯನ್ನು ಪಡೆಯಬಹುದು ಎಂದು ಮಾಹಿತಿ ನೀಡಿದೆ. ಅದೂ ಸಹ ಒಪ್ಪೋ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್‌ ಮಾಡದೆಯೇ ಈ ಸೇವೆ ಪಡೆಯಬಹುದು. ಇದಿಷ್ಟೇ ಅಲ್ಲದೇ ಯಾವುದೇ ಸ್ಥಳದಲ್ಲಿದ್ದರೂ 5G ಸೇವೆ ಇವರಿಗೆ ಲಭ್ಯವಾಗಲಿದೆ.

ಒಪ್ಪೋ

ಒಪ್ಪೋ ಕಂಪೆನಿ ಶುಕ್ರವಾರವಷ್ಟೇ ತನ್ನ ಎಲ್ಲಾ 5G ಆಧಾರಿತ ಫೋನ್‌ಗಳು ಈಗ ಏರ್‌ಟೆಲ್ 5G ಪ್ಲಸ್ ಅನ್ನು ಬೆಂಬಲಿಸುತ್ತವೆ ಎಂದು ಘೋಷಣೆ ಮಾಡಿತ್ತು. ಭಾರತದಲ್ಲಿ ಏರ್‌ಟೆಲ್ 5G ಪ್ಲಸ್ ಎಂಬ ಹೆಸರಿನಲ್ಲಿ 5G ಸೇವೆಗಳನ್ನು ಆರಂಭಿಸಿದ ಮೊದಲ ಟೆಲಿಕಾಂ ಸೇವಾ ಪೂರೈಕೆದಾರ ಎಂಬ ಹೆಗ್ಗಳಿಕೆಗೆ ಏರ್‌ಟೆಲ್‌ ಪಾತ್ರವಾಗಿದೆ. ಏರ್‌ಟೆಲ್‌ ಈ ವಾರದ ಆರಂಭದಲ್ಲಿ ಎಂಟು ನಗರಗಳಲ್ಲಿ ಸೇವೆ ಆರಂಭಿಸುವುದಾಗಿಯೂ ತಿಳಿಸಿತ್ತು.

5G

ನಮ್ಮ 5G ಬೆಂಬಲಿತ ಡಿವೈಸ್‌ಗಳು 5G ನೆಟ್‌ವರ್ಕ್‌ನ್ನು ಬೆಂಬಲಿಸಲು ಸಜ್ಜಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಪಟ್ಟುಬಿಡದೆ ಕೆಲಸ ಮಾಡಿದ್ದೇವೆ ಎಂದು ಒಪ್ಪೋ ಕಂಪೆನಿ ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿತ್ತು. ಹಾಗೆಯೇ ಇದನ್ನು ಏರ್‌ಟೆಲ್ ರೀಟ್ವೀಟ್ ಮಾಡಿಕೊಂಡಿದೆ. ಇದರ ಜೊತೆಗೆ ಯಾವ್ಯಾವ ಸ್ಮಾರ್ಟ್‌ಫೋನ್‌ಗಳು ಏರ್‌ಟೆಲ್‌ 5G ನೆಟ್‌ವರ್ಕ್‌ಗೆ ಬೆಂಬಲ ನೀಡಲಿದೆ ಎಂಬುದನ್ನು ಪಟ್ಟಿಮಾಡಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದರಲ್ಲಿ ರೆನೋ 8 ಪ್ರೊ, ರೆನೋ 8, F21s ಪ್ರೊ, K10, F21 ಪ್ರೊ, ಮತ್ತು A74 ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಹೆಸರಿಸಿದೆ. ಏರ್‌ಟೆಲ್ 5G ಪ್ಲಸ್ ತಂತ್ರಜ್ಞಾನವು ಇಲ್ಲಿ ನಮೂದಿಸಲಾದ 5G ರೆಡಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಪೋರ್ಟ್‌ ಮಾಡಲಿದೆ ಎಂದು ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

5G ಪ್ಲಸ್

ಇನ್ನು ಈ ಏರ್‌ಟೆಲ್‌ 5G ಪ್ಲಸ್ ಸೇವೆಯು ಆರಂಭದಲ್ಲಿ ದೆಹಲಿ, ಮುಂಬೈ, ಚೆನ್ನೈ, ಮಂಗಳೂರು, ಹೈದರಾಬಾದ್‌, ಸಿಲಿಗುರಿ, ನಾಗಪುರ ಹಾಗೂ ವಾರಣಾಸಿಯಲ್ಲಿ ಸೇವೆ ನೀಡುತ್ತಿದೆ. ಈ ನಗರದ ಒಪ್ಪೋ 5G ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಫೋನ್‌ ಅನ್ನು ಅಪ್‌ಗ್ರೇಡ್‌ ಮಾಡದೆಯೇ ಹಲವು ಒಪ್ಪೋ ಸ್ಮಾರ್ಟ್‌ಫೋನ್‌ ಬಳಕೆದಾರರು 5G ಸೇವೆ ಬಳಕೆ ಮಾಡಬಹುದಾಗಿದೆ ಹಾಗೆಯೇ ಕೆಲವು ಫೋನ್‌ಗಳಿಗೆ ಸಾಫ್‌ವೇರ್‌ ಅಪ್‌ಗ್ರೇಡ್‌ ಮಾಡಬೇಕಿದೆ. ಅವುಗಳೆಂದರೆ ರಿಯಲ್‌ಮಿ ಹಾಗೂ ಇತರೆ ಸ್ಮಾರ್ಟ್‌ಫೋನ್‌ಗಳು. ಇನ್ನು ಆಪಲ್‌ನಲ್ಲಿಯೂ ಈ ಸೇವೆಯ ಸಪೋರ್ಟ್‌ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಅಪ್‌ಗ್ರೇಡ್‌ ಮಾಡುವುದು ಹೇಗೆ?

ಅಪ್‌ಗ್ರೇಡ್‌ ಮಾಡುವುದು ಹೇಗೆ?

ಒಪ್ಪೋ ಫೋನ್‌ನಲ್ಲಿ 5G ಸಕ್ರಿಯಗೊಳಿಸಲು ನಿಮ್ಮ ಒಪ್ಪೋ ಸ್ಮಾರ್ಟ್‌ಫೋನ್‌ನ ನೆಟ್‌ವರ್ಕ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್ ಪ್ರೆಫರೆನ್ಸ್ ಟ್ಯಾಬ್‌ನಲ್ಲಿ 5G ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ನಂತರ ನಿಮ್ಮ ಪ್ರದೇಶದಲ್ಲಿ ಏರ್‌ಟೆಲ್ 5G ಪ್ಲಸ್ ಸೇವೆ ಇದ್ದರೆ ನಿಮ್ಮ ನೆಟ್‌ವರ್ಕ್ ಸ್ವಯಂಚಾಲಿತವಾಗಿ ಬದಲಾಗುತ್ತದೆ. ಇನ್ನು ಏರ್‌ಟೆಲ್ ತನ್ನ 5G ಪ್ಲಸ್ ಸೇವೆಗಳಿಗೆ ಸದ್ಯಕ್ಕೆ ಯಾವುದೇ ಹೆಚ್ಚುವರಿ ವೆಚ್ಚವನ್ನು ತೆಗೆದುಕೊಳ್ಳುತ್ತಿಲ್ಲ. ಹಾಗೆಯೇ ಬೇರೆ ಸಿಮ್‌ ಕಾರ್ಡ್‌ ಅನ್ನು ಬದಲಾಯಿಸು ಅಗತ್ಯ ಸಹ ಇರುವುದಿಲ್ಲ ಎಂದು ಏರ್‌ಟೆಲ್ ಮಾಹಿತಿ ನೀಡಿದೆ.

ಏರ್‌ಟೆಲ್‌ 5G ಪ್ಲಸ್

ಏರ್‌ಟೆಲ್‌ 5G ಪ್ಲಸ್

ಏರ್‌ಟೆಲ್‌ 5G ಪ್ಲಸ್ ಅನ್ನು ಬೆಂಬಲಿಸುವ ಒಪ್ಪೋ ಫೋನ್‌ಗಳ ವಿವರ ಇಲ್ಲಿದೆ

  • ಒಪ್ಪೋ ರೆನೋ 5G ಪ್ರೊ
  • ಒಪ್ಪೋ ರೆನೋ 6
  • ಒಪ್ಪೋ ರೆನೋ 6 ಪ್ರೊ
  • ಒಪ್ಪೋ F19 Pro ಪ್ಲಸ್
  • ಒಪ್ಪೋ A53s
  • ಒಪ್ಪೋ A74
  • ಒಪ್ಪೋ ರೆನೋ 7 Pro 5G
  • ಒಪ್ಪೋ F21 Pro 5G
  • ಒಪ್ಪೋ ರೆನೋ 7
  • ಒಪ್ಪೋ ರೆನೋ 8
  • ಒಪ್ಪೋ ರೆನೋ 8 ಪ್ರೊ
  • ಒಪ್ಪೋ K10 5G
  • ಒಪ್ಪೋ F21s ಪ್ರೊ 5G

Best Mobiles in India

English summary
Several telecom companies in India have introduced 5G enabled smartphones in the market two years ago. Now all Oppo smartphones will support 5G service.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X