ಭಾರತದಲ್ಲಿ 'ಒಪ್ಪೊ F15' ಸ್ಮಾರ್ಟ್‌ಫೋನ್ ಬಿಡುಗಡೆ!.ಬೆಲೆ ಎಷ್ಟು?..ಫೀಚರ್ಸ್‌ ಏನು?

|

ಚೀನಾ ಮೂಲದ ಒಪ್ಪೊ ಕಂಪನಿಯು ಭಾರತದಲ್ಲಿ ಇಂದು (ಜ.16) 'ಒಪ್ಪೊ ಎಫ್‌ 15' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಶಿಯೋಮಿ ಕೆ20 ಹಾಗೂ ರಿಯಲ್‌ ಮಿ ಎಕ್ಸ್‌2 ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಸೆಡ್ಡು ಹೊಡೆಯುವ ಲಕ್ಷಣಗಳನ್ನು ಹೊಂದಿದೆ. 48ಎಂಪಿ ಸೆನ್ಸಾರ್ ಕ್ಯಾಮೆರಾ, RAM ಮತ್ತು ಹಿಲಿಯೊ P70 ಪ್ರೊಸೆಸರ್ ಮೇನ್ ಹೈಲೈಟ್ಸ್‌ಗಳಾಗಿವೆ.

ಒಪ್ಪೊ ಸಂಸ್ಥೆಯು

ಹೌದು, ಒಪ್ಪೊ ಸಂಸ್ಥೆಯು ಜನಪ್ರಿಯ F ಸರಣಿಯಲ್ಲಿ ಹೊಸದಾಗಿ 'ಒಪ್ಪೊ F15' ಹೆಸರಿನ ಮೀಡ್‌ರೇಂಜ್ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಇದೇ ಜನೆವರಿ 24 ರಿಂದ ಇ-ಕಾಮರ್ಸ್‌ಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ತಾಣಗಳಲ್ಲಿ ಫಸ್ಟ್‌ ಸೇಲ್ ಆರಂಭಿಸಲಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 19,990ರೂ.ಗಳಾಗಿದೆ. ಹಾಗಾದರೆ ಒಪ್ಪೊ ಎಫ್‌15 ಸ್ಮಾರ್ಟ್‌ಫೋನಿನ ಇನ್ನುಳಿದ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶ್‌ನ ಸಾಮರ್ಥ್ಯದೊಂದಿಗೆ 6.4 ಇಂಚಿನ AMOLED ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.7% ಆಗಿದೆ. ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ನೀಡಲಾಗಿದೆ.

ಪ್ರೊಸೆಸರ್ ಕಾರ್ಯ

ಪ್ರೊಸೆಸರ್ ಕಾರ್ಯ

ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P70 ಚಿಪ್‌ಸೆಟ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಹಾಗೂ ಕಲರ್ ಓಎಸ್‌ 6 ಬೆಂಬಲ್ ಇದೆ. ಜೊತೆಗೆ ARM Mali G72 GPU ಗ್ರಾಫಿಕ್ಸ್‌ ಬೆಂಬಲ ಸಹ ಪಡೆದಿದೆ. ಇನ್ನು ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಬಹುದಾದ ಅವಕಾಶ ಇದೆ.

48ಎಂಪಿ ಕ್ಯಾಮೆರಾ

48ಎಂಪಿ ಕ್ಯಾಮೆರಾ

ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.7 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್‌ನೊಂದಿಗೆ 8ಎಂಪಿಯ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು f/2.0 ಅಪರ್ಚರ್‌ ಬೆಂಬಲದೊಂದಿಗೆ 2ಎಂಪಿಯ ಸೆನ್ಸಾರ್ ಪಡೆದಿವೆ. ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್‌ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 20W ಸಪೋರ್ಟ್‌ನೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ. ಹಾಗೆಯೇ 4G VoLTE, ವೈಫೈ 802, ಬ್ಲೂಟೂತ್ 4.2, ಯುಎಸ್‌ಬಿ-ಸಿ, ಜಿಪಿಎಸ್‌, ಆಡಿಯೊ ಜಾಕ್, ಸೌಲಭ್ಯ ಜೊತೆಗೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯವನ್ನು ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ 'ಒಪ್ಪೊ ಎಫ್‌15' ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 19,990ರೂ. ಆಗಿದೆ. ಇನ್ನು ಈ ಫೋನ್ 8GB RAM ಮತ್ತು 128GB ವೇರಿಯಂಟ್ ಫ್ರಿ-ಆರ್ಡರ್‌ಗೆ ಲಭ್ಯವಿದೆ. ಇದೇ ಜನೆವರಿ 24ರಂದು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ತಾಣಗಳಲ್ಲಿ ಮಾರಾಟ ಶುರುವಾಗಲಿದೆ.

Best Mobiles in India

English summary
Oppo F15 ships with a 6.4-inch AMOLED display, 48-megapixel quad rear camera, Helio P70 chipset and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X