ಭಾರತದಲ್ಲಿ ಒಪ್ಪೋ F19s ಫೋನ್ ಲಾಂಚ್!..ಬೆಲೆ ಎಷ್ಟು?.ಫೀಚರ್ಸ್‌ ಏನು?

|

ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಒಪ್ಪೊ ಸಂಸ್ಥೆಯು ತನ್ನ ಬಹು ನಿರೀಕ್ಷಿತ F19s ಸ್ಮಾರ್ಟ್‌ಫೋನ್‌ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಮಾಡೆಲ್‌ ಅನ್ನು ಪಡೆದಿದೆ.

ಸ್ಮಾರ್ಟ್‌ಫೋನ್

ಹೌದು, ಒಪ್ಪೋ ಸಂಸ್ಥೆಯು ದೇಶದ ಮಾರುಕಟ್ಟೆಯಲ್ಲಿ ಒಪ್ಪೋ F19s ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಪಡೆದುಕೊಂಡಿದೆ. ಜೊತೆಗೆ AMOLED ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಾಗಾದರೇ ಒಪ್ಪೋ F19s ಸ್ಮಾರ್ಟ್‌ಫೋನ್ ಇತರೆ ಫೀಚರ್ಸ್‌ಗಳು ಹೇಗಿವೆ ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ಒಪ್ಪೊ ಎಫ್ F19s ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 6.43-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್‌ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 20: 9 ಆಕಾರ ಅನುಪಾತ ಹೊಂದಿದ್ದು, ಸ್ಕ್ರೀನ್ ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.7 ಆಗಿದೆ.

ಪ್ರೊಸೆಸರ್ ಸಾಮರ್ಥ್ಯ ಏನು

ಪ್ರೊಸೆಸರ್ ಸಾಮರ್ಥ್ಯ ಏನು

ಒಪ್ಪೊ ಎಫ್ F19s ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಪಡೆದುಕೊಂಡಿವೆ. ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಮಾಡೆಲ್‌ ಅನ್ನು ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ನೀಡಲಾಗಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಟ್ರಿಪಲ್ ಕ್ಯಾಮೆರಾ ಸೆನ್ಸಾರ್

ಒಪ್ಪೊ ಎಫ್ F19s ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿದೆ. ತೃತೀಯ ಕ್ಯಾಮೆರಾ ಕ್ರಮವಾಗಿ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿದೆ. ಇದರೊಂದಿಗೆ ಎಡಿಟಿಂಗ್ ಆಯ್ಕೆಗಳನ್ನು ಪಡೆದಿದೆ.

ಬ್ಯಾಟರಿ ಪವರ್ ಎಷ್ಟು?

ಬ್ಯಾಟರಿ ಪವರ್ ಎಷ್ಟು?

ಒಪ್ಪೊ ಎಫ್ F19s ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಪಡೆದಿದ್ದು, 33W ಫ್ಲ್ಯಾಶ್ ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ v5, USB ಟೈಪ್-ಸಿ, USB OTG ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಆನ್‌ಬೋರ್ಡ್ ಸಂವೇದಕಗಳು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಜಿಯೋಮ್ಯಾಗ್ನೆಟಿಕ್ ಇಂಡಕ್ಷನ್, ಸಾಮೀಪ್ಯ ಸೆನ್ಸರ್, ಅಂಡರ್-ಸ್ಕ್ರೀನ್ ಲೈಟ್ ಸೆನ್ಸರ್, ಆಕ್ಸಲರೇಶನ್ ಸೆನ್ಸರ್, ಗ್ರಾವಿಟಿ ಸೆನ್ಸರ್ ಮತ್ತು ಗೈರೊಸ್ಕೋಪ್ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೊ ಎಫ್ F19s ಸ್ಮಾರ್ಟ್‌ಫೋನ್ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆಯು 19,990ರೂ. ಆಗಿದೆ. ಗ್ಲೋವಿಂಗ್ ಬ್ಲ್ಯಾಕ್, ಗ್ಲೋವಿಂಗ್ ಗೋಲ್ಡ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಫೋನ್ ಫ್ಲಿಪ್‌ಕಾರ್ಟ್‌ ಮತ್ತು ಒಪ್ಪೋ ವೆಬ್‌ಸೈಟ್‌ ಮೂಲಕ ಖರೀದಿಗೆ ಲಭ್ಯ ಆಗುತ್ತದೆ.

ಒಪ್ಪೋ A16s ಸ್ಮಾರ್ಟ್‌ಫೋನ್‌

ಒಪ್ಪೋ A16s ಸ್ಮಾರ್ಟ್‌ಫೋನ್‌

ಒಪ್ಪೋ A16s ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52-ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20: 9 ಆಕಾರ ಅನುಪಾತ ಮತ್ತು 60Hz ರಿಫ್ರೆಶ್ ದರವನ್ನು ಹೊಂದಿದೆ. ಇದು ವಾಟರ್‌ಡ್ರಾಪ್ ಶೈಲಿಯ ಡಿಸ್‌ಪ್ಲೇ ನೋಚ್ ಅನ್ನು ಒಳಗೊಂಡಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಲರ್ಓಎಸ್ 11.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಬಹುದಾಗಿದೆ.

Best Mobiles in India

English summary
Oppo F19s With 5,000mAh Battery Launched in India: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X