ಒಪ್ಪೋದಿಂದ ಎರಡು ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಅನಾವರಣ; ಅತ್ಯಾಕರ್ಷಕ ನೋಟ

|

ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈವರೆಗೂ ಸ್ಯಾಮ್‌ಸಂಗ್‌ ಗ್ಯಾಲಕ್ಷಿ Z ಫ್ಲಿಪ್ ಸ್ಮಾರ್ಟ್‌ಫೋನ್ ನ ಹೆಸರು ಮಾತ್ರ ಕೇಳಿಬರುತ್ತಿತ್ತು. ಆದರೆ, ಈ ಸಾಲಿಗೆ ಈಗ ಒಪ್ಪೋ ಕಂಪೆನಿ ಎರಡು ಫೋಲ್ಡಬಲ್‌ ಫೋನ್‌ಅನ್ನು ಅನಾವರಣ ಮಾಡಿದೆ. ಸದ್ಯಕ್ಕೆ ಈ ಶೈಲಿಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಗ್ರಾಹಕರು ತನ್ನ ಬೇಡಿಕೆಗೆ ಅನುಗುಣವಾಗಿ ಈಗ ಈ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

'

ಫೋಲ್ಡಬಲ್‌

ಹೌದು, ಫೋಲ್ಡಬಲ್‌ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಏಕಾಂಗಿಯಾಗಿಯಾಗಿದ್ದ ಸ್ಯಾಮ್‌ಸಂಗ್‌ ಗ್ಯಾಲಕ್ಷಿ Z ಫ್ಲಿಪ್‌ಗೆ ಒಪ್ಪೋ ಫೈಂಡ್‌ N2 ಹಾಗೂ ಫೈಂಡ್‌ N2 ಫ್ಲಿಪ್‌ ಸ್ಮಾರ್ಟ್‌ಫೋನ್‌ಗಳು ಜೊತೆಯಾಗಿವೆ. ಈ ಫೋನ್‌ಗಳು ಭಿನ್ನ ಪ್ರೊಸೆಸರ್‌ ಹಾಗೂ ಕ್ಯಾಮೆರಾ ಆಯ್ಕೆ ಜೊತೆಗೆ ವಿಶೇಷ ಡಿಸ್‌ಪ್ಲೇ ರಚನೆಯನ್ನು ಹೊಂದಿವೆ. ಹಾಗಿದ್ರೆ, ಇವುಗಳ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಒಪ್ಪೋ ಫೈಂಡ್‌ N2 ಸ್ಮಾರ್ಟ್‌ಫೋನ್ 7.6 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 1,792 x 1,920 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಪುಸ್ತಕದ ರೀತಿಯ ರಚನೆ ಹೊಂದಿದ್ದು, ಇನ್ನೊಂದು ಬದಿಯಲ್ಲಿ 5.54 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಆಯ್ಕೆ ಇದ್ದು, ಈ ಡಿಸ್‌ಪ್ಲೇ 1,020 × 2080 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ.

ಫೋನ್

ಮತ್ತೊಂದು ಫೋನ್ ಆದ ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ , 6.8 ಇಂಚಿನ ಫುಲ್‌ ಹೆಚ್‌ಡಿ + ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 1,080×2,520 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಇದರೊಂದಿಗೆ ಪ್ಯಾನಲ್‌ನಲ್ಲಿ 3.62 ಇಂಚಿನ ವಿಶೇಷ ಡಿಸ್‌ಪ್ಲೇ ಸಹ ನೀಡಲಾಗಿದೆ.

ಪ್ರೊಸೆಸರ್‌ ಮಾಹಿತಿ

ಪ್ರೊಸೆಸರ್‌ ಮಾಹಿತಿ

ಒಪ್ಪೋ ಫೈಂಡ್ N2 ಸ್ಮಾರ್ಟ್‌ಫೋನ್‌ ಅಕ್ಟಾ ಕೋರ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನ್‌ ಆಂಡ್ರಾಯ್ಡ್‌ 13 ಆಧಾರಿತ ಕಲರ್‌ಓಎಸ್‌ 13.0 ಗೆ ಬೆಂಬಲ ನೀಡಲಿದೆ. ಇನ್ನು ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್‌ ಸಹ ಆಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್‌ 13.0 ನಲ್ಲಿ ರನ್‌ ಆಗಲಿದೆ.

ಒಪ್ಪೋ ಫೈಂಡ್ N2

ಒಪ್ಪೋ ಫೈಂಡ್ N2 ಸ್ಮಾರ್ಟ್‌ಫೋನ್‌ 12GB + 256GB, 16GB + 512GB ವೇರಿಯಂಟ್‌ನಲ್ಲಿ ಲಭ್ಯವಿದ್ದು, ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ 8GB + 256GB, 12GB + 256GB ಮತ್ತು 16GB + 512GB ನ ಮೂರು ವೇರಿಯಂಟ್‌ನಲ್ಲಿ ಲಭ್ಯವಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಒಪ್ಪೋ ಫೈಂಡ್ N2 ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಹಾಗೆಯೇ ಒಪ್ಪೋ ಫೈಂಡ್ N2 ಫ್ಲಿಪ್ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದ್ದು, ಇದರಲ್ಲಿ 50MP ಪ್ರಮುಖ ಕ್ಯಾಮೆರಾ ಹಾಗೂ 32MP ಸೆಲ್ಪಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಒಪ್ಪೋ ಫೈಂಡ್ N2 ಸ್ಮಾರ್ಟ್‌ಫೋನ್ 4,520mAh ಸಾಮರ್ಥ್ಯದ ಡ್ಯುಯಲ್ ಸೆಲ್ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 67W ನ ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ ಗೆ ಬೆಂಬಲ ನೀಡಲಿದೆ. ಜೊತೆಗೆ ಒಪ್ಪೋ ಫೈಂಡ್ N2 ಫ್ಲಿಪ್ ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದೂ ಸಹ 44W ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಒಪ್ಪೋ ಫೈಂಡ್‌ N2 ಸ್ಮಾರ್ಟ್ ಫೋನ್‌ನ 12GB + 256GB ವೇರಿಯಂಟ್‌ಗೆ CNY 7,999 (ಸುಮಾರು 95,000 ರೂ. ಗಳು) , 16GB + 512GB ವೇರಿಯಂಟ್‌ಗೆ CNY 8,999 (ಸುಮಾರು 1,06,800ರೂ. ಗಳು ) ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ಅನ್ನು ಕ್ಲೌಡ್ ವೈಟ್, ಪಿಂಕ್ ಗ್ರೀನ್ ಮತ್ತು ಪ್ಲೇನ್ ಬ್ಲ್ಯಾಕ್ ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.

ಫೈಂಡ್‌

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ನಲ್ಲಿ ಮೂರು ವೇರಿಯಂಟ್‌ ಇದ್ದು, 8GB + 256GB ವೇರಿಯಂಟ್‌ಗೆ CNY 5,999 (ಸುಮಾರು 71,000 ರೂ. ಗಳು), 12GB + 256GB ವೇರಿಯಂಟ್‌ಗೆ CNY 6,399 (ಸುಮಾರು. 76,000 ರೂ. ಗಳು) ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಸಹ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ಈ ಎರಡೂ ಫೋನ್‌ಗಳು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಅನಾವರಣಗೊಂಡಿದ್ದು, ಜಾಗತಿಕವಾಗಿ ಈ ಫೋನ್‌ಗಳು ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂಬ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
Oppo Find N2, Find N2 Flip launched ; price and specification.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X