'ಒಪ್ಪೊ ಕೆ1' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆ!

|

ಜನಪ್ರಿಯ ಒಪ್ಪೊ ಕಂಪನಿಯು 'ಕೆ' ಸರಣಿಯಲ್ಲಿ ಕಳೆದ ವರ್ಷ ಲಾಂಚ್ ಮಾಡಿದ್ದ 'ಒಪ್ಪೊ ಕೆ1'' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ಟ್ರೆಂಡ್ ಮೂಡಿಸಿತ್ತು. ಆದ್ರೆ ಇದೀಗ ಆ ಫೋನ್ ಮತ್ತೆ ಗ್ರಾಹಕರನ್ನು ಸೆಳೆಯುವ ಸೂಚನೆ ನೀಡಿದೆ. ಏಕೆಂದರೇ ಒಪ್ಪೊ ಕಂಪನಿಯು ಒಪ್ಪೊ ಕೆ1 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ಮಿಡ್‌ರೇಂಜ್‌ ಪ್ರೈಸ್‌ನಲ್ಲಿ ಗುರುತಿಸಿಕೊಂಡಿದ್ದ ಈ ಫೋನ್ ಈಗ ಅಗ್ಗದ ದರದಲ್ಲಿ ಸಿಗಲಿದೆ.

ಒಪ್ಪೊ ಕೆ1

ಹೌದು, ಒಪ್ಪೊ ಸಂಸ್ಥೆಯ 'ಒಪ್ಪೊ ಕೆ1' ಸ್ಮಾರ್ಟ್‌ಫೋನ್ ದರ ಕಡಿತ ಕಂಡಿದ್ದು, ಆರಂಭಿಕ ವೇರಿಯಂಟ್ ಕೇವಲ 13,990ರೂ.ಗಳಿಗೆ ದೊರೆಯುತ್ತದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ ಪೈ ಹಾಗೂ ಕಲರ್ ಓಎಸ್‌ 6 ಗೆ ಅಪ್‌ಡೇಟ್‌ ಪಡೆದಿದೆ. ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಉಳಿದಂತೆ 'ಒಪ್ಪೊ ಕೆ1' ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ.

ಡಿಸೈನ್ ಹೇಗಿದೆ

ಡಿಸೈನ್ ಹೇಗಿದೆ

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಸುಂದರ ಬಾಹ್ಯ ನೋಟವನ್ನು ಹೊಂದಿದ್ದು, ಸುತ್ತಲು ಶೈನಿಂಗ್ ನೊಂದಿಗೆ ಗ್ಲಾಸಿ ಲುಕ್‌ ಆಕಾರದಲ್ಲಿ ನೋಡುಗರ ಕಣ್ಮನ ಸೆಳೆಯುವಂತಿದೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಹೊಂದಿದ್ದು, ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 3D ಗ್ಲಾಸ್ ಪ್ಯಾನೆಲ್ ನೀಡಲಾಗಿದೆ. ಸೆಲ್ಫೀ ಕ್ಯಾಮೆರಾ ಮುಂಬದಿಯ ಮೇಲ್ಭಾಗದ ಮಧ್ಯದಲ್ಲಿದೆ. ಹಿಂಬದಿಯ ಮೂಲೆಯಲ್ಲಿ ಎರಡು ಬ್ಯಾಕ್ ಕ್ಯಾಮೆರಾ ಹೊಂದಿದೆ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಈ ಸ್ಮಾರ್ಟ್‌ಫೋನ್ 19.5:9 ಅನುಪಾತದೊಂದಿಗೆ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, ಸ್ಕ್ರೀನ್ ಮತ್ತು ಫೋನಿನ ಬಾಡಿಯ ನಡುವಿನ ಅಂತರ ಶೇ. 91 ರಷ್ಟು ಅನುಪಾತ ವಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್ ಹೊಂದಿದೆ. ಅಮೋಎಲ್‌ಇಡಿ ಸಹಿತ ವಾಟರ್ ಡ್ರಾಪ್ ಡಿಸ್‌ಫ್ಲೇಯನ್ನು ಹೊಂದಿದ್ದು, ಕಡಿಮೆ ಅಂಚಿನಿಂದ ಕೂಡಿದೆ.

ಪ್ರೊಸೆಸರ್ ಹೇಗಿದೆ

ಪ್ರೊಸೆಸರ್ ಹೇಗಿದೆ

ಕ್ವಾಲ್ಕಂ ಸ್ನಾಪ್‌ಡ್ರಾಗನ್ 660 ಸಾಮರ್ಥ್ಯದ ಕೃತಕ್ ಬುದ್ಧಿಮತ್ತೆಯ ಪ್ರೊಸೆಸರ್ ಹೊಂದಿದ್ದು ಜತೆಗೆ ಕಿರಿಯೂ 260 ಸಿಪಿಯು ಉತ್ತಮ ಕಾರ್ಯನಿರ್ವಣೆಗೆ ಸಹಕರಿಸಲಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನೂ ಬಾಹ್ಯ ಸಂಗ್ರಹಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಒಪ್ಪೊ ಕೆ 1 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಒಟ್ಟು ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾ 16 ಮೆಗಾಪಿಕ್ಸಲ್ ಹೊಂದಿದ್ದರೆ, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಇದರೊಂದಿಗೆ ಮುಂಬದಿಯಲ್ಲಿ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಒಪ್ಪೊ ಮೊದಲಿನಿಂದಲೂ ಸೆಲ್ಫೀಗಾಗಿ ಹೆಚ್ಚು ಗಮನ ನೀಡುತ್ತಾ ಬಂದಿದೆ.

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ಒಪ್ಪೊ ಕೆ1 ಸ್ಮಾರ್ಟ್‌ಫೋನ್‌ 3,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ನಿರಾತಂಕವಾಗಿ ಒಂದು ದಿನದವರೆಗೂ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಇದರೊಂದಿಗೆ ಒಪ್ಪೊ 3.5mm ನ ಆಡಿಯೋ ಜಾಕ್‌ ನೀಡಿದ್ದು, ಹೆಡ್‌ಫೋನಿನಲ್ಲಿ ಆಡಿಯೋ ಕ್ಚಾಲಿಟಿಯೂ ಉತ್ತಮವಾಗಿ ಕೇಳಿಸುತ್ತದೆ. ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Oppo K1 is a mid-range smartphone that launched in India as one of the cheapest with in-display fingerprint sensor. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X