ಒಪ್ಪೋ ರೆನೋ 9 ಸರಣಿಯ ಫೋನ್‌ಗಳು ಬಿಡುಗಡೆಗೆ ಸಿದ್ಧ; ಲೀಕ್‌ ಫೀಚರ್ಸ್‌ ಹೇಗಿವೆ?

|

ಒಪ್ಪೋ ಕಂಪೆನಿ ಈಗಾಗಲೇ ಅತ್ಯಾಕರ್ಷಕ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಿದೆ. ಇದರ ಜೊತೆಗೆ ಒಪ್ಪೋ ತನ್ನ ಸ್ಮಾರ್ಟ್‌ಫೋನ್‌ ವಲಯದಲ್ಲಿ ಫೈಂಡ್‌ x ಸೀರಿಸ್‌, ರೆನೋ ಸೀರಿಸ್, F, A, K ಸೀರಿಸ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಇದರ ನಡುವೆ ಈ ವರ್ಷದ ಜುಲೈನಲ್ಲಿ ಒಪ್ಪೋ ರೆನೋ 8 ಪ್ರೊ 5G ಹಾಗೂ ಒಪ್ಪೋ ರೆನೋ 8 5G ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿತ್ತು. ಇದೀಗ 9 ಸರಣಿಗೆ ಪದಾರ್ಪಣೆ ಮಾಡಿದ್ದು, ಈ ಸರಣಿಯಲ್ಲಿನ ಮೂರು ಸ್ಮಾರ್ಟ್‌ಫೋನ್‌ಗಳ ಅನಾವರಣಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದೆ.

ಒಪ್ಪೋ

ಹೌದು, ಒಪ್ಪೋ ನವೆಂಬರ್ ಅಂತ್ಯದ ವೇಳೆಗೆ ಚೀನಾದಲ್ಲಿ ರೆನೋ 9 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವುದಾಗಿ ಘೋಷಿಸಿದೆ. ಅದರೆ, ಇದಕ್ಕೂ ಮೊದಲೇ ಈ ಫೋನ್‌ಗಳ ಫೀಚರ್ಸ್‌ ಲೀಕ್‌ ಆಗಿದ್ದು, ಅದರಂತೆ ರೆನೋ 9, ರೆನೋ 9 ಪ್ರೊ ಹಾಗೂ ರೆನೋ 9 ಪ್ರೊ+ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಇನ್ಮುಂದೆ ಸದ್ದು ಮಾಡಲಿವೆ. ಈ ಸಂಬಂಧ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ಲೀಕ್‌ ಆದ ಮಾಹಿತಿಯನ್ನು ವರದಿ ಮಾಡಿದೆ. ಹಾಗಿದ್ರೆ ಈ ಫೋನ್‌ಗಳು ಯಾವ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ, ಏನೆಲ್ಲಾ ಪ್ರಮುಖ ಫೀಚರ್ಸ್‌ ಹೊಂದಿರಲಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ಹೇಗಿರಲಿದೆ?

ಡಿಸ್‌ಪ್ಲೇ ಹೇಗಿರಲಿದೆ?

ರೆನೋ 9, ರೆನೋ 9 ಪ್ರೊ ಹಾಗೂ ರೆನೋ 9 ಪ್ರೊ+ ಸ್ಮಾರ್ಟ್‌ಫೋನ್‌ಗಳು 6.7 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಈ ಡಿಸ್‌ಪ್ಲೇ ಕರ್ವ್ಡ್ ರಚನೆ ಹೊಂದಿಗೆ ಎಂದು ಹೇಳಲಾಗುತ್ತಿದೆ. ಹಾಗೆಯೇ FHD+ ರೆಸಲ್ಯೂಶನ್ ಆಯ್ಕೆಯ ಜೊತೆಗೆ 120Hz ರಿಫ್ರೆಶ್ ರೇಟ್‌, 10 ಬಿಟ್ ಬಣ್ಣಗಳು, 2160Hz PWM ಡಿಮ್ಮಿಂಗ್‌ ಫೀಚರ್ಸ್‌ ಪಡೆದಿರಲಿವೆ.

ಒಪ್ಪೋ ರೆನೋ 9 ಫೋನ್‌ನ ಫೀಚರ್ಸ್‌

ಒಪ್ಪೋ ರೆನೋ 9 ಫೋನ್‌ನ ಫೀಚರ್ಸ್‌

ರೆನೋ 9 ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 64 ಮೆಗಾಪಿಕ್ಸೆಲ್ + 2-ಮೆಗಾಪಿಕ್ಸೆಲ್‌ನ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿ ಹಾಗೂ 67W ವೇಗದ ಚಾರ್ಜಿಂಗ್ ಫೀಚರ್ಸ್‌ ಇದರಲ್ಲಿದೆ ಎಂದು ಹೇಳಲಾಗಿದೆ.

ಒಪ್ಪೋ ರೆನೋ 9 ಪ್ರೋ ಫೀಚರ್ಸ್‌

ಒಪ್ಪೋ ರೆನೋ 9 ಪ್ರೋ ಫೀಚರ್ಸ್‌

ಒಪ್ಪೋ ರೆನೋ 9 ಪ್ರೋ ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 8100 ಮ್ಯಾಕ್ಸ್ ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ನ ಸೆಕೆಂಡರಿ ಕ್ಯಾಮೆರಾ ರಚನೆ ಪಡೆದಿರಲಿದೆ. ಇದರ ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 67W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ ಎಂದು ತಿಳಿದುಬಂದಿದೆ.

ಒಪ್ಪೋ ರೆನೋ 9 ಪ್ರೊ+

ಒಪ್ಪೋ ರೆನೋ 9 ಪ್ರೊ+

ಒಪ್ಪೋ ರೆನೋ 9 ಪ್ರೊ+ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಪ್ಲಸ್ ಜನ್ 1 ಪ್ರೊಸೆಸರ್‌ನ ಬಲ ಪಡೆದಿರಲಿದ್ದು, ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ ಪ್ರಮುಖ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ನ ಕ್ಯಾಮೆರಾ ಆಯ್ಕೆ ಇರಲಿದೆ. ಇನ್ನು 80W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದೆ ಎಂದು ನಂಬಲಾಗಿದೆ.

32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ

ಪ್ರಮುಖ ವಿಷಯ ಎಂದರೆ ಲೀಕ್‌ ಅದ ಮಾಹಿತಿ ಪ್ರಕಾರ ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿವೆ ಹಾಗೆಯೇ. ಎರಡೂ ಪ್ರೊ ಮಾದರಿಗಳ ಪ್ರಮುಖ ಕ್ಯಾಮೆರಾಗಳು ಮಾರಿಸಿಲಿಕಾನ್ X ISP ಫೀಚರ್ಸ್‌ ಪಡೆದುಕೊಂಡಿರಲಿದ್ದು, ಅದ್ಭುತವಾದ ಫೋಟೋಗಳನ್ನು ಸೆರೆಹಿಡಿಯಲು ಸಹಾಯಕವಾಗಲಿದೆ. ಜೊತೆಗೆ ಈ ಫೋನ್‌ಗಳು ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ಆಯ್ಕೆ ಹೊಂದಿರಲಿವೆ ಎಂದು ನಂಬಲಾಗಿದೆ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ರೆನೋ 9 ಹಾಗೂ ರೆನೋ 9 ಪ್ರೊ ಸ್ಮಾರ್ಟ್‌ಫೋನ್ ವೈಬ್ರೇಷನ್‌ ಗಾಗಿ ರೋಟರ್ ಮೋಟರ್ ಹೊಂದಿವೆ. ಆದರೆ, ರೆನೋ ಪ್ರೊ+ ಸ್ಮಾರ್ಟ್‌ಫೋನ್‌ X- ಆಕ್ಸಿಸ್ ಲೀನಿಯರ್ ಮೋಟಾರ್ ಆಯ್ಕೆಯನ್ನು ಪಡೆದುಕೊಂಡಿದೆ ಎಂಬ ಮಾಹಿತಿ ದೃಢವಾಗಿದೆ. ಜೊತೆಗೆ ರೆನೋ 9 ಹಾಗೂ ರೆನೋ 9 ಪ್ರೊ ಸ್ಮಾರ್ಟ್‌ಫೋನ್ ಸುಮಾರು 7.19 ಮಿಮೀ ದಪ್ಪ ಹಾಗೂ 174 ಗ್ರಾಂ ತೂಕ ಹೊಂದಿರಲಿವೆ ಎಂದು ಹೇಳಲಾಗುತ್ತಿದ್ದು, ರೆನೋ 9 ಪ್ರೊ+ 7.99mm ಅಳತೆ ಹಾಗೂ 192 ಗ್ರಾಂ ನಷ್ಟು ತೂಕ ಹೊಂದಿರಲಿದೆ.

Best Mobiles in India

English summary
Oppo company has already launched smartphones with exciting features. Meanwhile, Oppo is all set to launch the Reno 9 series of phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X