ಭಾರತದಲ್ಲಿ ಆಪ್ಟೋಮಾದ ಗೇಮಿಂಗ್ ಪ್ರೊಜೆಕ್ಟರ್ ಲಾಂಚ್‌; ಮನೆಯಲ್ಲೇ ಥಿಯೇಟರ್‌!

|

ಆಪ್ಟೋಮಾ ಸಂಸ್ಥೆಯು ವಿವಿಧ ಫೀಚರ್ಸ್‌ ಇರುವ ಪ್ರೊಜೆಕ್ಟರ್ ಗಳನ್ನು ಅನಾವರಣ ಮಾಡುವ ಬ್ರ್ಯಾಂಡ್ ಆಗಿದ್ದು, ಇದರ ನಡುವೆ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಹಾಗೂ ಆಕರ್ಷಕ ಫೀಚರ್ಸ್‌ ಇರುವ ಗೇಮಿಂಗ್ ಪ್ರೊಜೆಕ್ಟರ್ ಅನ್ನು ಆನಾವರಣ ಮಾಡಿದೆ. ಈ ಪ್ರೊಜೆಕ್ಟರ್‌ 8.3 ಮಿಲಿಯನ್ ಪಿಕ್ಸೆಲ್‌ಗಳನ್ನು ಪ್ರದರ್ಶಿಸುವ ಸಾಮರ್ಥ್ಯ ತನ್ನದಾಗಿಸಿಕೊಂಡಿರುವುದು ವಿಶೇಷ.

ಭಾರತದಲ್ಲಿ ಆಪ್ಟೋಮಾದ ಗೇಮಿಂಗ್ ಪ್ರೊಜೆಕ್ಟರ್ ಲಾಂಚ್‌; ಮನೆಯಲ್ಲೇ ಥಿಯೇಟರ್‌!

ಹೌದು, ಆಪ್ಟೋಮಾ ಕಂಪೆನಿಯು DLP ಪ್ರೊಜೆಕ್ಟರ್ ಬ್ರ್ಯಾಂಡ್ ಮತ್ತು ಪ್ರೊಜೆಕ್ಷನ್ ಡಿವೈಸ್‌ಗಳನ್ನು ಪರಿಚಯಿಸಿ ಭಾರೀ ಜನಮನ್ನಣೆ ಗಳಿಸಿಕೊಂಡಿದೆ. ಇದರ ನಡುವೆ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಉತ್ಪನ್ನವನ್ನು ಅನಾವರಣಗೊಳಿಸಿದ್ದು, ಈ ಡಿವೈಸ್‌ ಭಾರತೀಯ ಗ್ರಾಹಕರಿಗೆ ಹೆಚ್ಚಿನ ಮನರಂಜನಾ ಅನುಭವ ನೀಡಲು ಮುಂದಾಗಿದೆ. ಅದರಂತೆ ಈ ಡಿವೈಸ್‌ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ 4K UHD DLP ಚಿಪ್‌ಸೆಟ್ ಅನ್ನು ಹೊಂದಿದೆ. ಹಾಗಿದ್ರೆ, ಇದರ ಇನ್ನಿತರೆ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌
ಉನ್ನತ ಕಾರ್ಯಕ್ಷಮತೆಯ ಡಿಎಮ್‌ಡಿ ಮತ್ತು XPR ವಿಡಿಯೋ ಸಂಸ್ಕರಣಾ ತಂತ್ರಜ್ಞಾನವನ್ನು ಹೊಂದಿದ್ದು, ತ್ವರಿತವಾಗಿ 8.3 ಮಿಲಿಯನ್ ಪಿಕ್ಸೆಲ್‌ಗಳನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ 1080P ಗಿಂತ ನಾಲ್ಕು ಪಟ್ಟು ಹೆಚ್ಚು ರೆಸಲ್ಯೂಶನ್ ಸಾಮರ್ಥ್ಯ ಇದರಿಂದ ಲಭ್ಯ. ಇದರೊಂದಿಗೆ 240Hz ರಿಫ್ರೆಶ್ ರೇಟ್, 4ms ಇನ್‌ಪುಟ್ ಲ್ಯಾಗ್ ಮತ್ತು ಗೇಮರ್ ಮೋಡ್ ಕ್ಯಾಲಿಬ್ರೇಶನ್‌ನೊಂದಿಗೆ ಪ್ಯಾಕ್‌ ಆಗಿದೆ.

ಭಾರತದಲ್ಲಿ ಆಪ್ಟೋಮಾದ ಗೇಮಿಂಗ್ ಪ್ರೊಜೆಕ್ಟರ್ ಲಾಂಚ್‌; ಮನೆಯಲ್ಲೇ ಥಿಯೇಟರ್‌!

GT2160HDR ಶಾರ್ಟ್-ಥ್ರೋ ಲೆನ್ಸ್ ಅನ್ನು ಹೊಂದಿದ್ದು, ಈ ಮೂಲಕ ಬಳಕೆದಾರರು ಕೇವಲ ನಾಲ್ಕು ಅಡಿ ದೂರದಿಂದ 120 ಇಂಚಿನ ಕರ್ಣೀಯ ಚಿತ್ರವನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ ಈ ಪ್ರೊಜೆಕ್ಟರ್ ಸಾಮಾನ್ಯ ಗಾತ್ರದ ಲಿವಿಂಗ್ ರೂಮ್‌ನಲ್ಲಿ 300 ಇಂಚುಗಳಷ್ಟು ಪ್ರೊಜೆಕ್ಟ್ ವಿಸ್ತರಣೆ ಮಾಡಬಹುದಾದ ಆಯ್ಕೆ ನೀಡಲಾಗಿದೆ.

4,000 ಲ್ಯುಮೆನ್‌ಗಳ ಹೊಳಪು
ಆಪ್ಟೋಮಾದ GT2160HDR 4,000 ಲ್ಯುಮೆನ್‌ಗಳ ಹೊಳಪನ್ನು ಹೊಂದಿರಲಿದ್ದು, ಎದ್ದುಕಾಣುವ ಚಿತ್ರವನ್ನು ಯೋಜಿಸುತ್ತದೆ. ಡಿವೈಸ್‌ಗಳು ವಿಶೇಷವಾದ ಬಣ್ಣ ಮಾಪನಾಂಕ ನಿರ್ಣಯ ಮತ್ತು ಹೆಚ್‌ಡಿ ಟಿವಿ ರೆಕ್ ಅನ್ನು ಮೀರಿಸುವ ಹೊಂದಾಣಿಕೆ ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತದೆ.

HDR ಹ್ಯೂ ಮತ್ತು ಟೋನ್ ಮ್ಯಾಪಿಂಗ್
HDR ಹ್ಯೂ ಮತ್ತು ಟೋನ್ ಮ್ಯಾಪಿಂಗ್ ತಂತ್ರಜ್ಞಾನದಂತಹ ಹಲವಾರು ಉಪಯುಕ್ತ ಫೀಚರ್ಸ್‌ಗಳು ಇದರಲ್ಲಿದ್ದು, HDR/HLG ಚಲನಚಿತ್ರಗಳು ಮತ್ತು ಗೇಮ್‌ಗಳನ್ನು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸರಿಯಾದ ಬಣ್ಣ ಮತ್ತು ಡೈನಾಮಿಕ್ ಕಾಂಟ್ರಾಸ್ಟ್‌ನೊಂದಿಗೆ ಡಿಸ್‌ಪ್ಲೇ ಮಾಡಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಆಪ್ಟೋಮಾದ ಗೇಮಿಂಗ್ ಪ್ರೊಜೆಕ್ಟರ್ ಲಾಂಚ್‌; ಮನೆಯಲ್ಲೇ ಥಿಯೇಟರ್‌!

ಆಟೋಮ್ಯಾಟಿಕ್‌ ಮೋಡ್‌ ಬದಲಾವಣೆ
ಆಪ್ಟೋಮಾದ ಗೇಮರ್ ಮೋಡ್ ಅನ್ನು ಚಿತ್ರದ ಡಾರ್ಕ್ ಭಾಗಗಳ ಸ್ಪಷ್ಟತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ GT2160HDR HDR ಎನ್‌ಕೋಡ್ ಮಾಡಿದ ಗೇಮ್ ಅನ್ನು ಪತ್ತೆ ಮಾಡಿದರೆ, ಅದು ಆಟೋಮ್ಯಾಟಿಕ್‌ ಆಗಿ ಹೆಚ್‌ಡಿಆರ್‌ ಡಿಸ್‌ಪ್ಲೇ ಮೋಡ್ ಅನ್ನು ಆನ್ ಮಾಡುತ್ತದೆ. ಗೇಮ್‌ ಹೆಚ್‌ಡಿಆರ್‌ ಎನ್‌ಕೋಡ್ ಆಗಿಲ್ಲದಿದ್ದರೆ, GT2160HDR HDR SIM ಮೋಡ್ ಅನ್ನು ಹೊಂದಿದ್ದು, ಅದು ಗೇಮ್‌ ದೃಶ್ಯಗಳಿಗೆ ಹೆಚ್‌ಡಿಆರ್‌ ಎಫೆಕ್ಟ್‌ ಅನ್ನು ನೀಡುತ್ತದೆ.

ಕನೆಕ್ಟಿವಿಟಿ ಆಯ್ಕೆ
ಈ ಡಿವೈಸ್‌ ವೈ-ಫೈ, ಬ್ಲೂಟೂತ್, ಯುಎಸ್‌ಬಿ, ಎರಡು ಹೆಚ್‌ಡಿಎಮ್‌ಐ 2.0 ಪೋರ್ಟ್‌ಗಳೊಂದಿಗೆ ಸುಲಭ ಕನೆಕ್ಟಿವಿಟಿ ಸಂಪರ್ಕ ಇರಲಿದ್ದು, ಇದು ಕಂಟೆಂಟ್‌ ಹಂಚಿಕೆಯನ್ನು ಸುಲಭಗೊಳಿಸಲು ಆಪಲ್‌ TV 4K, PS4 ಪ್ರೊ, ಮತ್ತು XBOX ಒನ್‌ X ನಂತಹ ಬಾಹ್ಯ 4K ಡಿವೈಸ್‌ಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಇದರ ಬೆಲೆ ಹಾಗೂ ಲಭ್ಯತೆ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲ.

Best Mobiles in India

English summary
Optoma GT2160HDR true 4K UHD short throw cinema gaming projector launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X