ಜಿಮೇಲ್‌ನಲ್ಲಿ ಪ್ಯಾಕೇಜ್ ಟ್ರ್ಯಾಕಿಂಗ್ ಫೀಚರ್ಸ್‌; ಆರ್ಡರ್‌ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಿರಿ

|

ಗೂಗಲ್‌ನಿಂದ ಹಲವಾರು ಪ್ರಮುಖ ಸೇವೆಗಳು ಗ್ರಾಹಕರಿಗೆ ಲಭ್ಯವಾಗುತ್ತಿದ್ದು, ಅದರಲ್ಲಿ ಜಿಮೇಲ್‌ ಸಹ ಬಹುಮುಖ್ಯ ಹಾಗೂ ಅಗತ್ಯವಾದ ಆಪ್‌ ಆಗಿದೆ. ಜಿಮೇಲ್‌ ಎಲ್ಲಾ ರೀತಿಯಲ್ಲೂ ಬಳಕೆಯಾಗುತ್ತಿದ್ದು, ಹೊಸ ಹೊಸ ಹೊಸ ಫೀಚರ್ಸ್‌ ಪಡೆದು ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತಿದೆ. ಇದರ ಭಾಗವಾಗಿ ಸದ್ಯಕ್ಕೆ ಪ್ಯಾಕೇಜ್ ಟ್ರ್ಯಾಕಿಂಗ್ ಎಂಬ ಫೀಚರ್ಸ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇನ್ನಿತರೆ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವಿವಿಧ ಉತ್ಪನ್ನಗಳನ್ನು ಆರ್ಡರ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಲ್ಲೂ ಒಮ್ಮೆ ಆರ್ಡರ್‌ ಮಾಡಿದ ನಂತರ ಪದೇ ಪದೇ ಆಪ್‌ ಓಪನ್ ಮಾಡಿ ಟ್ರ್ಯಾಕಿಂಗ್‌ ಮಾಡುವುದು ಕೆಲವರಿಗೆ ಕಷ್ಟಕರವಾದ ಕೆಲಸವಾಗಿದೆ. ಈ ಕೆಲಸವನ್ನು ತಗ್ಗಿಸುವ ಉದ್ದೇಶದಿಂದಲೇ ಗೂಗಲ್‌ ಜಿ ಮೇಲ್‌ನಲ್ಲಿ ಪ್ಯಾಕೇಜ್ ಟ್ರ್ಯಾಕಿಂಗ್ ಎಂಬ ಹೊಸ ಫೀಚರ್ಸ್‌ ನೀಡಿದೆ.

ಶಾಪಿಂಗ್‌

ಸಾಮಾನ್ಯವಾಗಿ ಯಾವುದೇ ಶಾಪಿಂಗ್‌ ಆಪ್‌ಗಳಲ್ಲಿ ಶಾಪಿಂಗ್ ಮಾಡಿದರೆ ಆ ಸಂಬಂಧ ಇಮೇಲ್ಗಳು ಬರುತ್ತವೆ. ಆದರೆ, ಜಿಮೇಲ್‌ನ ಈ ಇನ್‌ಬಾಕ್ಸ್ ಹಲವಾರು ಸಂದೇಶಗಳು ಲೋಡ್‌ ಆಗುವುದರಿಂದ ಆರ್ಡರ್‌ ಸಂಬಂಧದ ಮಾಹಿತಿ ಪಡೆದುಕೊಳ್ಳುವುದು ಕಷ್ಟ. ಇದಕ್ಕಾಗಿಯೇ ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಸುಲಭವಾದ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಈ ಹೊಸ ಫೀಚರ್ಸ್‌ ಅನ್ನು ಗೂಗಲ್‌ ಜಿಮೇಲ್‌ಗೆ ನವೆಂಬರ್ ತಿಂಗಳಿನಲ್ಲಿ ಪರಿಚಯಿಸಿದೆ.

ಈ ಪ್ಯಾಕೇಜ್ ಟ್ರ್ಯಾಕಿಂಗ್‌ನಿಂದ ಏನೆಲ್ಲಾ ಮಾಹಿತಿ ಲಭ್ಯ

ಈ ಪ್ಯಾಕೇಜ್ ಟ್ರ್ಯಾಕಿಂಗ್‌ನಿಂದ ಏನೆಲ್ಲಾ ಮಾಹಿತಿ ಲಭ್ಯ

ಈ ಫೀಚರ್ಸ್‌ ಸಹಾಯದಿಂದ ಜಿಮೇಲ್‌ ನಿಮ್ಮ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡುತ್ತದೆ. ಹಾಗೆಯೇ ಆರ್ಡರ್ ಮಾಡಿದ ನಂತರ ಇನ್‌ಬಾಕ್ಸ್‌ನಲ್ಲಿ ಡೆಲಿವರಿ ವಿವರಗಳನ್ನು ಪ್ರದರ್ಶಿಸುತ್ತದೆ. ಟ್ರ್ಯಾಕಿಂಗ್ ಸಂಖ್ಯೆಗಳೊಂದಿಗೆ ನಿಮ್ಮ ಇನ್‌ಬಾಕ್ಸ್‌ನ ಲಿಸ್ಟ್‌ ವ್ಯೂ ನಲ್ಲಿಯೂ ಸಹ ಸಂಬಂಧಿಸಿದ ವಿತರಣಾ ವಿವರಗಳನ್ನು ಪ್ರದರ್ಶಿಸುತ್ತದೆ. ಹಾಗೆಯೇ ಆರ್ಡರ್‌ ಸಂಬಂಧ ಬರುವ ಪ್ರತಿಯೊಂದು ಇಮೇಲ್‌ನಲ್ಲೂ ಪ್ರಸ್ತುತ ವಿತರಣಾ ಸ್ಟೇಟಸ್‌ ಅನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಲೇಬಲ್‌ ಆಯ್ಕೆ

ಲೇಬಲ್‌ ಆಯ್ಕೆ

ಈ ಮಾಹಿತಿಯ ಜೊತೆಗೆ ನಿಮಗೆ ಅನುಕಲವಾಗುವ ಮತ್ತಷ್ಟು ಸೌಲಭ್ಯ ಸಹ ಈ ಫೀಚರ್ಸ್‌ನಲ್ಲಿ ಇದೆ. ಅಂದರೆ ಪ್ಯಾಕೇಜ್‌ ಯಾವಾಗ ಬರುತ್ತದೆ, ನಿರೀಕ್ಷಿತ ದಿನಾಂಕ ಯಾವುದು ಹಾಗೂ ನಾಳೆ ಆಗಮನ, ಇಂದು ತಲುಪುತ್ತದೆ, ಪ್ಯಾಕೇಜ್‌ ತಲುಪಿಸಲಾಗಿದೆ ಎಂಬಿತ್ಯಾದಿ ಮಾಹಿತಿಯ ಲೇಬಲ್‌ಗಳು ಲಭ್ಯವಾಗುತ್ತವೆ. ನೀವೇನಾದರೂ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ ಸೇರಿದಂತೆ ಇನ್ನಿತರೆ ಪ್ಲಾಟ್‌ಫಾರ್ಮ್‌ನಲ್ಲಿ ಏನಾದರೂ ಆರ್ಡರ್‌ ಮಾಡಿದ್ದು ಆ ಮಾಹಿತಿಯನ್ನು ಜಿಮೇಲ್ ಮೂಲಕ ಟ್ರ್ಯಾಕ್‌‌ ಮಾಡಲು ಮುಂದಾದರೆ ಸೆಟ್ಟಿಂಗ್‌ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ.

ಈ ಕ್ರಮ ಅನುಸರಿಸಿ

ಈ ಕ್ರಮ ಅನುಸರಿಸಿ

ಮೊದಲು ನಿಮ್ಮ ಫೋನ್‌ನಲ್ಲಿ ಜಿಮೇಲ್‌ ಆಪ್‌ ಓಪನ್ ಮಾಡಿ, ನಂತರ ಮೇಲಿನ ಎಡ ಮೂಲೆಯಲ್ಲಿ ಕಂಡು ಬರುವ ಮೂರು ಗೆರೆಗಳ ಮೇಲೆ ಟ್ಯಾಪ್‌ ಮಾಡಿ. ಇದಾದ ಬಳಿಕ ಸೆಟ್ಟಿಂಗ್ ವಿಭಾಗಕ್ಕೆ ತೆರಳಲು ಕೆಳಗೆ ಸ್ಕ್ರಾಲ್‌ ಮಾಡಿ. ಸೆಟ್ಟಿಂಗ್‌ ವಿಭಾಗದಲ್ಲಿ ಜಿಮೇಲ್‌ ಖಾತೆಯನ್ನು ಸೆಲೆಕ್ಟ್ ಮಾಡಿ, ಬಳಿಕ ಜನರಲ್ ಟ್ಯಾಬ್ ಅಡಿಯಲ್ಲಿ, ಪ್ಯಾಕೇಜ್ ಟ್ರ್ಯಾಕಿಂಗ್ ಪಕ್ಕದಲ್ಲಿರುವ ಬಾಕ್ಸ್ ಅನ್ನು ಪರಿಶೀಲಿಸಿ ಸಕ್ರಿಯಗೊಳಿಸಿಕೊಳ್ಳಿ.

ಆಕ್ಟಿವ್‌

ನೀವು ಫೀಚರ್ಸ್‌ ಅನ್ನು ಆಕ್ಟಿವ್‌ ಮಾಡಿದ ನಂತರ ಜಿಮೇಲ್‌ ಆಟೋಮ್ಯಾಟಿಕ್‌ ಆಗಿ ಆರ್ಡರ್ ಸ್ಟೇಟಸ್‌ಗಳನ್ನು ವೀಕ್ಷಣೆ ಮಾಡಲು ಹಾಗೂ ನಿಮ್ಮ ಇನ್‌ಬಾಕ್ಸ್‌ನಲ್ಲಿ ಅವುಗಳನ್ನು ಡಿಸ್‌ಪ್ಲೇ ಮಾಡಲು ಟ್ರ್ಯಾಕಿಂಗ್ ಸಂಖ್ಯೆಗಳನ್ನು ಬಳಕೆ ಮಾಡಿಕೊಳ್ಳುತ್ತದೆ. ಈ ಸೇವೆ ಬೇಡ ಎಂದಾದಲ್ಲಿ ಇದೇ ಮಾರ್ಗ ಅನುಸರಿಸಿಕೊಂಡಿ ಸೆಟ್ಟಿಂಗ್ ವಿಭಾಗಕ್ಕೆ ಬಂದು ಫೀಚರ್ಸ್‌ ಆಪ್‌ ಮಾಡಬಹುದು.

ಪ್ಯಾಕೇಜ್‌

ಇನ್ನು ಜಿಮೇಲ್‌ನಲ್ಲಿ ವಿಳಂಬವಾಗುವ ಪ್ಯಾಕೇಜ್‌ ಬಗ್ಗೆಯೂ ಲೇಬಲ್ ಅನ್ನು ಪ್ರದರ್ಶಿಸುತ್ತದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಈ ಎಲ್ಲಾ ಮಾಹಿತಿಗಳು ಇನ್‌ಬಾಕ್ಸ್‌ನ ಮೇಲ್ಭಾಗದಲ್ಲಿ ಕಾಣುವಂತೆ ಮಾಡಲು ಜಿಮೇಲ್‌ ಕಾರ್ಯನಿರತವಾಗಿದೆ. ಈ ಫೀಚರ್ಸ್‌ ಅನ್ನು ಆರಂಭದಲ್ಲಿ ಯುಎಸ್‌ನಲ್ಲಿ ಪರಿಚಯಿಸಲಾಗಿತ್ತು.ಇದೀಗ ಜಗತ್ತಿನಾದ್ಯಂತ ಬಳಕೆದಾರರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಆದಾಗ್ಯೂ, ಡೆಸ್ಕ್‌ಟಾಪ್ ಆವೃತ್ತಿಗೆ ಈ ಫೀಚರ್ಸ್‌ ಪರಿಚಯಿಸಿಲ್ಲ.

Best Mobiles in India

English summary
package tracking feature in Gmail: A quick guide.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X