ಭಾರತಕ್ಕೆ ಫೋನ್‌ಪೇ ಸ್ಥಳಾಂತರ; ಸಾವಿರಾರು ಕೋಟಿ ತೆರಿಗೆ ಪಾವತಿ

|

ಫೋನ್‌ಪೇ ಭಾರತೀಯ ಡಿಜಿಟಲ್ ಪಾವತಿ ಕಂಪೆನಿಯಾಗಿದ್ದು, ಡಿಸೆಂಬರ್ 2015 ರಿಂದ ತನ್ನದೇ ಆದ ಸೇವೆ ನೀಡುತ್ತಾ ಬರುತ್ತಿದೆ. ಅದರಲ್ಲೂ ಡಿಜಿಟಲ್‌ ಇಂಡಿಯಾಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ತನ್ನ ಪ್ರಧಾನ ಕಚೇರಿಯನ್ನು ಭಾರತಕ್ಕೆ ಸ್ಥಳಾಂತರಿಸಲು 1 ಶತಕೋಟಿ ಡಾಲರ್‌ ತೆರಿಗೆಯನ್ನು ಪಾವತಿಸಿರುವುದಾಗಿ ತಿಳಿದುಬಂದಿದೆ. ಈ ಮೂಲಕ ಫೋನ್‌ಪೇ ಫ್ಲಿಪ್‌ಕಾರ್ಟ್‌ ತೆಕ್ಕೆಯಿಂದ ಹೊರಬಂದಿದ್ದು, ಇನ್ಮುಂದೆ ಸ್ವತಂತ್ರವಾಗಿ ಕೆಲಸ ಮಾಡಲಿದೆ.

ಫೋನ್‌ಪೇ

ಹೌದು, ಫೋನ್‌ಪೇ ಹಾಗೂ ಫ್ಲಿಪ್‌ಕಾರ್ಟ್‌ ವಾಲ್‌ಮಾರ್ಟ್ ಅಡಿಯಲ್ಲಿ ಕೆಲಸ ಮಾಡಲಿದ್ದು, ಈಗ ಫ್ಲಿಪ್‌ಕಾರ್ಟ್‌ ನಿಂದ ಬೇರೆಯಾಗಿರುವ ಫೋನ್‌ಪೇ ಪ್ರಧಾನ ಕಚೇರಿಯನ್ನು ಸಿಂಗಾಪುರದಿಂದ ಭಾರತಕ್ಕೆ ಸ್ಥಳಾಂತರಿಸಲಿದೆ. ಇದರಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಈ ಎರಡೂ ಸಂಸ್ಥೆಗಳ ದೊಡ್ಡ ಪಾಲುದಾರನಾಗಿ ಅಮೆರಿಕಾದ ವಾಲ್‌ಮಾರ್ಟ್‌ ಗುರುತಿಸಿಕೊಂಡಿದೆ.

8,300 ಕೋಟಿ ತೆರಿಗೆ ಪಾವತಿ

8,300 ಕೋಟಿ ತೆರಿಗೆ ಪಾವತಿ

ಈವರೆಗೂ ಫ್ಲಿಪ್‌ಕಾರ್ಟ್‌ ತೆಕ್ಕೆಯಲ್ಲಿ ಕಾರ್ಯನಿರ್ವಹಣೆ ನಡೆಸುತ್ತಿದ್ದ ಫೋನ್‌ಪೇ ಇನ್ಮುಂದೆ ಸ್ವತಂತ್ರ ಭಾರತೀಯ ಉದ್ಯಮವಾಗಿ ಗುರುತಿಸಿಕೊಳ್ಳಲಿದ್ದು, ಈ ಕಾರಣಕ್ಕಾಗಿಯೇ ತನ್ನ ಪ್ರಧಾನ ಕಚೇರಿಯನ್ನು ಭಾರತದಲ್ಲಿ ಸ್ಥಾಪನೆ ಮಾಡಲು ಮುಂದಾಗಿದೆ. ಈ ಪ್ರಕ್ರಿಯೆಗೆ ಸುಮಾರು $1 ಶತಕೋಟಿ ಹಣವನ್ನು ಅಂದರೆ ಭಾರತೀಯ ರುಪಾಯಿಗಳಲ್ಲಿ 8,300 ಕೋಟಿ ತೆರಿಗೆಯನ್ನು ಭಾರತಕ್ಕೆ ಪಾವತಿಸಿದೆ ಎಂದು ತಿಳಿದುಬಂದಿದೆ.

ವಾಲ್‌ಮಾರ್ಟ್

ವಾಲ್‌ಮಾರ್ಟ್ 2018 ರಲ್ಲಿ ಭಾರತೀಯ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ನಿಯಂತ್ರಿತ ಪಾಲನ್ನು ಖರೀದಿ ಮಾಡಿತ್ತು. ಇದಾದ ನಂತರ ಕಂಪೆನಿಯು ಕಳೆದ ತಿಂಗಳು ಫ್ಲಿಪ್‌ಕಾರ್ಟ್‌ನಿಂದ ಫೋನ್‌ಪೇ ಅನ್ನು ಬೇರ್ಪಡಿಸುವ ಕೆಲಸವನ್ನು ಪೂರ್ಣಗೊಳಿಸಿದೆ. ಆದರೂ ಸಹ ಈ ಎರಡೂ ಕಂಪೆನಿಗಳಲ್ಲಿ ದೊಡ್ಡ ಪಾಲುದಾರನಾಗಿರುವುದು ವಿಶೇಷ.

ಫ್ಲಿಪ್‌ಕಾರ್ಟ್

ಡಿಸೆಂಬರ್‌ನಲ್ಲಿ ಫ್ಲಿಪ್‌ಕಾರ್ಟ್ ಮತ್ತು ಫೋನ್‌ಪೇ ತಮ್ಮ ಪ್ರತ್ಯೇಕತೆಯನ್ನು ಪೂರ್ಣಗೊಳಿಸಿದ್ದು, ಎರಡೂ ಘಟಕಗಳು ವಾಲ್‌ಮಾರ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ. ಈ ವಹಿವಾಟಿನ ಭಾಗವಾಗಿ ವಾಲ್‌ಮಾರ್ಟ್ ನ ಅಸ್ತಿತ್ವದಲ್ಲಿರುವ ಫ್ಲಿಪ್‌ಕಾರ್ಟ್ ಸಿಂಗಾಪುರ ಮತ್ತು ಫೋನ್‌ಪೇ ಸಿಂಗಾಪುರದ ಷೇರುದಾರರು ನೇರವಾಗಿ ಫೋನ್‌ಪೇ ಭಾರತದಲ್ಲಿ ಷೇರುಗಳನ್ನು ಖರೀದಿಸಿದ್ದಾರೆ. ಇದು ಫೋನ್‌ಪೇ ಅನ್ನು ಸಂಪೂರ್ಣವಾಗಿ ಭಾರತದ ಕಂಪೆನಿಯನ್ನಾಗಿ ಮಾಡುವ ಕ್ರಮವಾಗಿದೆ.

ಭಾರತದಲ್ಲೇ ಷೇರು ಖರೀದಿ

ಭಾರತದಲ್ಲೇ ಷೇರು ಖರೀದಿ

ಫೋನ್‌ಪೇ ಈಗಾಗಲೇ ಜನರಲ್ ಅಟ್ಲಾಂಟಿಕ್, ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿ ಸೇರಿದಂತೆ ಇತರರಿಂದ ಸುಮಾರು 12 ಶತಕೋಟಿ ಡಾಲರ್‌ ಮೌಲ್ಯದೊಂದಿಗೆ ಭಾರಿ ಹಣವನ್ನು ಸಂಗ್ರಹಿಸಿದೆ. ಇದರ ನಂತರ ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಭಾರತದಲ್ಲಿ ಫೋನ್‌ಪೇ ಷೇರುಗಳನ್ನು ಹೊಸ ಬೆಲೆಗೆ ಖರೀದಿಸಿದೆ. ಇದರಿಂದಾಗಿ ಕಂಪೆನಿಯು ಸುಮಾರು 8,000 ಕೋಟಿ ತೆರಿಗೆ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ

ಇಲ್ಲಿಯವರೆಗೆ ಫೋನ್‌ಪೇ ತನ್ನ ಸಂಪೂರ್ಣ ವ್ಯವಹಾರ ಮತ್ತು ಕಾರ್ಯಾಚರಣೆಯನ್ನು ಸಿಂಗಾಪುರದಿಂದ ಮಾಡುತ್ತಿತ್ತು. ಯಾಕೆಂದರೆ ತೆರಿಗೆಯ ಕಡಿಮೆ ಹೊಣೆಗಾರಿಕೆ ಮತ್ತು ವಿದೇಶಿ ಹೂಡಿಕೆಯನ್ನು ಸುಲಭವಾಗಿ ಹೆಚ್ಚಿಸುವುದು ಇದರ ಗುರಿಯಾಗಿತ್ತು. ಈ ಮೂಲಕ ಸಿಂಗಾಪುರದಿಂದ ಸಾರ್ವಜನಿಕರಿಗೆ ವಿದೇಶಿ ವಿನಿಮಯ ಸೌಲಭ್ಯಗಳನ್ನು ಒದಗಿಸುವುದು ಕೂಡ ಸುಲಭವಾಗಿತ್ತು. ಆದರೆ, ಇನ್ಮುಂದೆ ಈ ಎಲ್ಲಾ ಕಾರ್ಯಗಳು ಭಾರತದಿಂದಲೇ ಜರುಗುತ್ತದೆ. ಅದರಲ್ಲೂ ಬೆಂಗಳೂರಿನಿಂದಲೇ ಎನ್ನುವುದು ಇನ್ನಷ್ಟು ವಿಶೇಷ.

ಸಿಂಗಾಪುರದಲ್ಲಿ 8 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳ ಕೇಂದ್ರ ಕಚೇರಿ

ಸಿಂಗಾಪುರದಲ್ಲಿ 8 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳ ಕೇಂದ್ರ ಕಚೇರಿ

ಸಿಂಗಾಪುರ ಇಂಡಿಯಾ ಬ್ರೀಫಿಂಗ್ ವರದಿ ಗಮನಿಸಿದರೆ ದೇಶದ 8 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ ಗಳು ಸಿಂಗಾಪುರದಲ್ಲಿಯೇ ಇವೆಯಂತೆ. ಈ ಸಂಖ್ಯೆ 2000 ನೇ ಇಸವಿಯಿಂದ ಇತ್ತೀಚಿನದು. ಇದೆಲ್ಲದರ ನಡುವೆ ಫೋನ್‌ ಪೇ ಮಾತ್ರ ಸಿಂಗಾಪುರ ಬಿಟ್ಟು ಬರುತ್ತಿದ್ದು, ಇದರಲ್ಲಿ ಪ್ರಮುಖ ಮೂರು ವಿಶೇಷ ಕಾರಣಗಳನ್ನು ಗುರುತಿಸಬಹುದಾಗಿದೆ. ಅವುಗಳೆಂದರೆ ಭಾರತದ ಕಂಪೆನಿಯಾಗುತ್ತಿರುವುದು, ಇನ್ನೊಂದು ಫ್ಲಿಪ್‌ಕಾರ್ಟ್‌ನಿಂದ ಬೇರ್ಪಟ್ಟಿರುವುದು, ಮತ್ತೊಂದು ಈಗಾಗಲೇ ಫೋನ್‌ಪೇ ಸಾಕಷ್ಟು ಹಣ ಸಂಗ್ರಹಿಸಿರುವುದು.

Best Mobiles in India

English summary
Paid Most of $1 Billion Tax to Move PhonePe Headquarters to India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X