ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇದೆಯೇ?... ಹಾಗಿದ್ರೆ ಈ ವಿಷಯ ನಿಮಗೆ ಗೊತ್ತಿರಲೇಬೇಕು!

|

ಇದು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯ ವಿಷಯವಾಗಿದೆ. ಯಾಕೆಂದರೆ ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಎಲ್ಲಾ ರೀತಿಯ ಹಣಕಾಸು ವಹಿವಾಟುಗಳಿಗೆ ಪ್ರಮುಖ ದಾಖಲೆಯಾಗಿದ್ದು, ಎಲ್ಲಾಕಡೆ ಹಾಗೂ ಎಲ್ಲಾ ಸಮಯದಲ್ಲೂ ಅವಶ್ಯಕವಾಗಿದೆ. ಆದರೆ, ಪ್ಯಾನ್‌ ಕಾರ್ಡ್‌ ವಿಷಯದಲ್ಲಿ ನೀವು ಈ ರೀತಿಯ ತಪ್ಪೇನಾದರೂ ಮಾಡಿದ್ದರೆ ಇಂದೇ ಸರಿಪಡಿಸಿಕೊಳ್ಳಿ, ಇಲ್ಲವಾದರೆ ಭಾರೀ ಬೆಲೆ ತೆರಬೇಕಾದೀತು.

ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇದೆಯೇ?... ಈ ವಿಷಯ ನಿಮಗೆ ಗೊತ್ತಿರಲೇಬೇಕು!

ಹೌದು, ಒಬ್ಬ ವ್ಯಕ್ತಿ ಅಥವಾ ಕಂಪನಿಯ ತೆರಿಗೆ ಹೊಣೆಗಾರಿಕೆಯನ್ನು ನಿರ್ಣಯಿಸುವಲ್ಲಿ ಹಾಗೂ ಎಲ್ಲಾ ಹಣಕಾಸು ವಹಿವಾಟುಗಳ ಜಾಡನ್ನು ಆದಾಯ ತೆರಿಗೆ ಪ್ರಾಧಿಕಾರವು ಮೇಲ್ವಿಚಾರಣೆ ಮಾಡಲು ಪ್ಯಾನ್‌ಕಾರ್ಡ್‌ ಸಹಾಯ ಮಾಡಲಿದೆ. ಈ ಮೂಲ ತೆರಿಗೆ ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ. ಅದಾಗ್ಯೂ ನೀವು ಈ ತಪ್ಪನ್ನು ಮಾಡಿದ್ದರೆ 10,000 ರೂ. ಗಳ ದಂಡ ಪಾವತಿ ಮಾಡಬೇಕಾಗುತ್ತದೆ.

ಒಬ್ಬ ವ್ಯಕ್ತಿ ಒಂದು ಕಾರ್ಡ್‌ ಅನ್ನು ಮಾತ್ರ ಹೊಂದಿರಬೇಕು
ಸಾಮಾನ್ಯವಾಗಿ ಕೆಲವರು ತಿಳಿಯದೇ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪ್ಯಾನ್‌ ಕಾರ್ಡ್‌ಗಳನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ಸರ್ಕಾರಕ್ಕೆ ತೆರಿಗೆ ವಂಚಿಸುವ ಉದ್ದೇಶದಿಂದ ಹಲವು ಪ್ಯಾನ್ ಕಾರ್ಡ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಇನ್ಮುಂದೆ ಈ ಆಟ ನಡೆಯುವುದಿಲ್ಲ. ಈ ಬಗ್ಗೆ ಕಟ್ಟೆಚ್ಚರ ವಹಿಸಿರುವ ಇಲಾಖೆ ಒಂದಕ್ಕಿಂತ ಹೆಚ್ಚು ಪ್ಯಾನ್‌ ಕಾರ್ಡ್‌ ಹೊಂದಿರುವವರಿಗೆ ದಂಡದ ಬಿಸಿ ನೀಡಲಿದೆ.

ಕಾರ್ಡ್‌ ಅನ್ನು ಐಟಿ ಇಲಾಖೆಗೆ ಒಪ್ಪಿಸಿ
ಎರಡು ಪ್ಯಾನ್ ಕಾರ್ಡ್‌ ಹೊಂದಿದ್ದರೆ ಐಟಿ ಇಲಾಖೆಯು ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸುತ್ತದೆ ಹಾಗೂ ಕಾನೂನಿನ ಪ್ರಕಾರ ದಂಡವನ್ನು ವಿಧಿಸುತ್ತದೆ. ಅದರಲ್ಲೂ ಪ್ಯಾನ್‌ಕಾರ್ಡ್‌ನಲ್ಲಿ ಏನಾದರೂ ದೋಷ ಕಂಡುಬಂದರೆ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಹೀಗಾಗಿ ಎರಡು ಪ್ಯಾನ್ ಕಾರ್ಡ್ ಹೊಂದಿರುವವರು ತಕ್ಷಣವೇ ಇಲಾಖೆಗೆ ಒಪ್ಪಿಸಬೇಕಿದೆ.

ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇದೆಯೇ?... ಈ ವಿಷಯ ನಿಮಗೆ ಗೊತ್ತಿರಲೇಬೇಕು!

ತಪ್ಪಾದ ಪ್ಯಾನ್‌ ಮಾಹಿತಿ ನೀಡಿದ್ರೆ ದಂಡ
ಇನ್ನು ತಪ್ಪಾದ ಪ್ಯಾನ್‌ ಮಾಹಿತಿಯನ್ನು ಒದಗಿಸುವ ವ್ಯಕ್ತಿಗೆ ಐಟಿ ಇಲಾಖೆಯು 10,000 ರೂ. ಗಳ ದಂಡ ವಿಧಿಸಬಹುದು. ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್ ಅನ್ನು ಸಲ್ಲಿಸುವ ಸಮಯದಲ್ಲಿ ಅಥವಾ ಪ್ಯಾನ್‌ ಕಾರ್ಡ್ ವಿವರಗಳನ್ನು ನಮೂದಿಸಬೇಕಾದ ಇತರ ಸನ್ನಿವೇಶಗಳಲ್ಲಿ ಈ ನಿಬಂಧನೆಯು ಅಗತ್ಯವಾಗಿದೆ.

ಈ ಕಾರಣಕ್ಕೆ ನೀವು ಏನಾದರೂ ಎರಡು ಪ್ಯಾನ್‌ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆ ಒಂದೇ ಒಂದು ಕಾರ್ಡ್‌ ಅನ್ನು ಸ್ವ ಇಚ್ಚೆಯಿಂದ ಹಿಂದಿರುಗಿಸಬೇಕಿದೆ. ಈ ಮೂಲಕ ದಂಡದಿಂದ ಪಾರಾಗಬಹುದು.

ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇದೆಯೇ?... ಈ ವಿಷಯ ನಿಮಗೆ ಗೊತ್ತಿರಲೇಬೇಕು!

ಹೆಚ್ಚುವರಿ ಪ್ಯಾನ್‌‌ ಕಾರ್ಡ್‌ ಹಿಂದುರುಗಿಸಲು ಏನು ಮಾಡಬೇಕು?

ಹಂತ 1
ನಿಮ್ಮ ಬಳಿ ಇರುವ ಎರಡನೇ ಕಾರ್ಡ್‌ ಅನ್ನು ರಿಟರ್ನ್‌ ಮಾಡಲು ಆಫ್‌ಲೈನ್ ಹಾಗೂ ಆನ್‌ಲೈನ್‌ ಅವಕಾಶವನ್ನು ಕಲ್ಪಿಸಲಾಗಿದೆ . ಇದಕ್ಕಾಗಿ ನೀವು ಮೊದಲು ಐಟಿ ಇಲಾಖೆಯ ಅಧಿಕೃತ ತಾಣವಾದ incometaxindia.gov.in ಗೆ ಭೇಟಿ ನೀಡಬೇಕು.

ಹಂತ 2
ನಂತರ 'ಹೊಸ ಪ್ಯಾನ್ ಕಾರ್ಡ್/ಬದಲಾವಣೆಗಾಗಿ ವಿನಂತಿ' ಅಥವಾ 'ಪಾನ್ ಡೇಟಾ ತಿದ್ದುಪಡಿ' ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಫಾರ್ಮ್‌ ತೆರೆದುಕೊಳ್ಳುತ್ತದೆ ಅದನ್ನು ಭರ್ತಿ ಮಾಡಿ. ನಂತರದಲ್ಲಿ ಆ ಫಾರ್ಮ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಸಮೀಪದ ಯಾವುದೇ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಕಚೇರಿಗೆ ಸಲ್ಲಿಸಿ.

ಇನ್‌ಸ್ಟಂಟ್‌ ಪ್ಯಾನ್‌ ಕಾರ್ಡ್ ಪಡೆಯಲು ಈ ಕ್ರಮ ಅನುಸರಿಸಿ
ಹಂತ 1
ನಿಮ್ಮ ಬಳಿ ಸದ್ಯಕ್ಕೆ ಪ್ಯಾನ್‌ ಕಾರ್ಡ್‌ ಇಲ್ಲ ಎಂದಾದರೆ ಮೊದಲು ಆದಾಯ ತೆರಿಗೆ ವೆಬ್‌ಸೈಟ್ https://www.incometax.gov.in/iec/foportal ಗೆ ಲಾಗ್ ಇನ್ ಮಾಡಿ.
ನಂತರ 'Instant e-PAN' ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ e-PAN ಆಯ್ಕೆ ಕಾಣಿಸಿಕೊಳ್ಳುತ್ತದೆ.

ಹಂತ 2
ಇದಾದ ಬಳಿಕ ನೀವು ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಈ ವೇಳೆ ನಿಮ್ಮ ಪ್ಯಾನ್ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬಹುದಾಗಿದೆ. ಈ ವಿಭಾಗದಲ್ಲಿ ನಿಮಗೆ ಹಲವು ನಿಯಮಗಳು ಮತ್ತು ಷರತ್ತುಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ಓದಿ ನಂತರ 'ಅಂಗೀಕರಿಸಿ' ಮೇಲೆ ಕ್ಲಿಕ್ ಮಾಡಿ.

ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇದೆಯೇ?... ಈ ವಿಷಯ ನಿಮಗೆ ಗೊತ್ತಿರಲೇಬೇಕು!

ಹಂತ 3
ನಂತರದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ಕೇಳಲಾದ ಜಾಗದಲ್ಲಿ ಭರ್ತಿ ಮಾಡಿ. ಬಳಿಕ ನೀಡಿರುವ ವಿವರಗಳನ್ನು ಓದಿದ ನಂತರ ಕನ್ಫರ್ಮ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

ಹಂತ 4
ಈ ವೇಳೆ ನಿಮ್ಮ ಪ್ಯಾನ್‌ ಕಾರ್ಡ್‌ ಪಿಡಿಎಫ್ ರೂಪದಲ್ಲಿ ನಿಮ್ಮ ಇಮೇಲ್ ಐಡಿಗೆ ರವಾನೆಯಾಗುತ್ತದೆ. ಅಲ್ಲಿಂದ ನೀವು ಅದನ್ನು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಪ್ರಮುಖ ವಿಷಯ ಎಂದರೆ ಈ ಇ-ಪ್ಯಾನ್ ಪಡೆಯಲು ಯಾವುದೇ ಶುಲ್ಕವಿರುವುದಿಲ್ಲ.

Best Mobiles in India

English summary
PAN card holder to avoid paying penalty, return your additional PAN card to IT department, details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X