ಭಾರತದಲ್ಲಿ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್‌ ಲಾಂಚ್‌; ಕೈಗೆಟಕುವ ಬೆಲೆಯ ಜೊತೆಗೆ ಹಲವು ಫೀಚರ್ಸ್‌!

|

ಈಗಂತೂ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಒಂದಕ್ಕೊಂದು ಮೀರಿಸುವ ಫೀಚರ್ಸ್‌ಗಳನ್ನು ಪಡೆದುಕೊಂಡು ಮಾರಾಟ ಆಗುತ್ತಿದೆ. ಆದರಂತೆ ಪ್ರಮುಖ ಕಂಪೆನಿಗಳು ಕೈಗೆಟಕುವ ಬೆಲೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ವಾಚ್‌ಗಳನ್ನು ಪ್ರೀಮಿಯಂ ನೋಟದೊಂದಿಗೆ ಮಾರಾಟ ಮಾಡುತ್ತಿವೆ. ಇದರ ಸಾಲಿಗೆ ಈಗ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಸೇರಿಕೊಳ್ಳಲಿದೆ. ಈ ವಾಚ್‌ ಬ್ಲೂಟೂತ್ ಕಾಲಿಂಗ್‌ ಆಯ್ಕೆ ಪಡೆದುಕೊಂಡಿದೆ.

ಬ್ಲೂಟೂತ್ ಕಾಲಿಂಗ್‌

ಹೌದು, ಬ್ಲೂಟೂತ್ ಕಾಲಿಂಗ್‌ ಆಯ್ಕೆಯೊಂದಿಗೆ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಈ ವಾಚ್‌ ಅತ್ಯಾಕರ್ಷಕ ನೋಟದೊಂದಿಗೆ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟ್ ಪಡೆದುಕೊಂಡಿದ್ದು, ಇದರ ಇನ್ನಿತರೆ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಈ ವಾಚ್‌ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ವಾಚ್‌ನ ವಿನ್ಯಾಸ

ವಾಚ್‌ನ ವಿನ್ಯಾಸ

ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್‌ (Pebble Frost Smartwatch) 1.87 ಇಂಚಿನ IPS 2.5D ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, ಬಲಭಾಗದ ಕ್ರೌನ್‌ ಬಟನ್‌ ಆಯ್ಕೆ ವಾಚ್‌ಗೆ ಇನ್ನಷ್ಟು ಹೆಚ್ಚಿನ ಆಕರ್ಷಣೆ ನೀಡಲಿದೆ. ಅದರಂತೆ ಈ ವಾಚ್‌ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದ್ದು, ನಿಮಗೆ ಇಷ್ಟವಾಗುವ ವಾಚ್‌ ಫೇಸ್‌ ಆಯ್ಕೆ ಮಾಡಲು ಸಹಾಯಕವಾಗಲಿದೆ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಪೆಬ್ಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್‌ ಅನ್ನು ದುಬಾರಿ ಆಪಲ್ ವಾಚ್ ಜೊತೆಗೆ ಹೋಲಿಕೆ ಮಾಡಬಹುದಾಗಿದೆ. ಯಾಕೆಂದರೆ ಇದು ಆಪಲ್‌ ವಾಚ್‌ ಶೈಲಿಯನ್ನೇ ಹೋಲಲಿದ್ದು, SPO2, 24X7 ಹೃದಯ ಬಡಿತ ಮಾನಿಟರಿಂಗ್ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಸ್ಟೆಪ್ ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಮಾನಿಟರ್, ಸ್ಟಾಪ್‌ವಾಚ್ ಮತ್ತು ಪಾಸ್‌ವರ್ಡ್ ಲಾಕ್ ಇದರ ಪ್ರಮುಖ ಫೀಚರ್ಸ್‌ಗಳಾಗಿವೆ.

ಸ್ಪೋರ್ಟ್ಸ್‌

ಹಾಗೆಯೇ ಹಲವು ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಪ್ರತಿ ಆಟಕ್ಕೂ ನೀವು ಸಿದ್ಧವಾಗಿರಲು ಅನುವು ಮಾಡಿಕೊಡುತ್ತದೆ. ಜೊತೆಗೆ ಹವಾಮಾನ ಎಚ್ಚರಿಕೆಗಳನ್ನು ನೀಡುವುದರೊಂದಿಗೆ ನಿಮ್ಮ ಫಿಟ್‌ನೆಸ್ ಮತ್ತು ಹೊರಾಂಗಣ ಚಟುವಟಿಕೆಗಳ ಮೇಲೆ ಕೆಲಸ ಮಾಡುತ್ತದೆ. ಇನ್ನು ಆಂಡ್ರಾಯ್ಡ್‌ ಮತ್ತು ಐಓಎಸ್ ಗಾಗಿ ಎಐ ಸಕ್ರಿಯಗೊಳಿಸಿದ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌ನಿಂದ ಈ ವಾಚ್‌ ಪ್ಯಾಕ್‌ ಆಗಿದೆ.

ನೋಟಿಫಿಕೇಶನ್‌ ನೋಡಬಹುದು

ನೋಟಿಫಿಕೇಶನ್‌ ನೋಡಬಹುದು

ಈ ವಾಚ್‌ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಆಗುವುದರಿಂದ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಬರುವ ಯಾವುದೇ ನೋಟಿಫಿಕೇಶನ್‌ ಅನ್ನು ವಾಚ್‌ನಲ್ಲಿಯೇ ನೋಡಬಹುದಾಗಿದೆ. ಹಾಗೆಯೇ ಬ್ಲೂಟೂತ್ ಕಾಲ್‌ ಫೀಚರ್ಸ್‌ ಬಳಕೆ ಮಾಡಿಕೊಂಡು ಕರೆಗಳನ್ನು ಮಾಡಬಹುದು ಹಾಗೂ ಸ್ವೀಕರಿಸಬಹುದು. ಇದರಿಂದ ಸ್ಮಾರ್ಟ್‌ವಾಚ್ ಹ್ಯಾಂಡ್ಸ್-ಫ್ರೀ ಸ್ಪೀಕರ್ ಸಿಸ್ಟಮ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದಿಷ್ಟೇ ಅಲ್ಲದೆ, ಕ್ಯಾಲೆಂಡರ್, ಕ್ಯಾಮೆರಾ ಕಂಟ್ರೋಲ್‌, ಕ್ಯಾಲ್ಕುಲೇಟರ್ ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಮಾಡುವ ಆಯ್ಕೆಯನ್ನು ಈ ವಾಚ್‌ನಲ್ಲಿ ನೀಡಲಾಗಿದೆ.

 IP67

ಈ ಸ್ಮಾರ್ಟ್‌ವಾಚ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟ್ ಪಡೆದುಕೊಂಡಿದ್ದು, ಬೆಲೆ ಹಾಗೂ ಕೆಲವು ಫೀಚರ್ಸ್‌ನಲ್ಲಿ ಬೋಟ್, ನಾಯ್ಸ್ ಮತ್ತು ಫೈರ್-ಬೋಲ್ಟ್‌ನಂತಹ ಬ್ರ್ಯಾಂಡ್‌ಗಳ ವಿರುದ್ಧ ಸ್ಪರ್ಧಿಸಲಿದೆ. ಅದರಲ್ಲೂ ಬ್ಲೂಟೂತ್ ಕಾಲ್‌ ಆಯ್ಕೆ ಇರುವ ಸ್ಮಾರ್ಟ್‌ವಾಚ್‌ಗಳಲ್ಲಿ ಈ ವಾಚ್‌ ಸಹ ಉತ್ತಮ ವಾಚ್‌ ಆಗಿ ಗುರುತಿಸಿಕೊಳ್ಳಲಿದೆ ಎಂದು ಕಂಪೆನಿ ಹೇಳಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಸ್ಮಾರ್ಟ್‌ವಾಚ್ ಒಂದು ಪೂರ್ಣ ಚಾರ್ಜ್‌ನಲ್ಲಿ 5 ದಿನಗಳವರೆಗೆ ಹಾಗೂ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 7 ದಿನಗಳವರೆಗೆ ಕೆಲಸ ಮಾಡಲಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಪೆಬಲ್ ಫ್ರಾಸ್ಟ್ ಬೆಲೆ

ಭಾರತದಲ್ಲಿ ಪೆಬಲ್ ಫ್ರಾಸ್ಟ್ ಬೆಲೆ

ಇನ್ನು ಈ ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 1,999 ರೂ. ಗಳನ್ನು ನಿಗದಿ ಮಾಡಲಾಗಿದ್ದು, ವಿಂಟರ್ ಫೈರ್, ವಿಂಟರ್ ಬ್ಲೂ, ಕ್ಲಾಸಿಕ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಮಿಸ್ಟಿ ಗ್ರೇ ಎಂಬ ನಾಲ್ಕು ಬಣ್ಣದಲ್ಲಿ ನಿಮಗೆ ಲಭ್ಯವಾಗಲಿದೆ. ಅದರಂತೆ ಈ ವಾಚ್‌ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಕಂಪೆನಿಯ ಅಧಿಕೃತ ಸೈಟ್‌ ಮೂಲಕವೂ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

Best Mobiles in India

English summary
Pebble Frost Smartwatch With Bluetooth Calling Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X