ಎಲ್.ಇ.ಡಿ ಟಿವಿ ಬಿಡುಗಡೆಗೆ ಅಮೆಜಾನ್ ಜೊತೆ ಕೈಜೋಡಿಸಿದ ಫಿಲಿಪ್ಸ್.
ಭಾರತದಲ್ಲಿ ಫಿಲಿಪ್ಸಿನ ಅಧಿಕೃತ ಲೈಸೆನ್ಸ್ ಪಾಲುದಾರರಾದ ಪಿ.ಇ ಎಲೆಕ್ಟ್ರಾನಿಕ್ಸ್, ಹೊಸ ಯುಗದ ಎಲ್.ಇ.ಡಿ ಟಿವಿಗಳನ್ನು ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾದ ಜೊತೆಗೂಡಿ ಬುಧವಾರ ಬಿಡುಗಡೆಗೊಳಿಸಿತು.

10,000 ರೂ ಕೆಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು
1 - 65 ಇಂಚಿನ ಬಾಗಿದ 4ಕೆ ಅಲ್ಟ್ರಾ ಹೆಚ್.ಡಿ ಎಲ್.ಇ.ಡಿ ಟಿವಿ ಮತ್ತು 65 ಇಂಚಿನ ಪೂರ್ತಿ ಹೆಚ್.ಡಿ ಟಿವಿಗಳು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಹೆಚ್.ಡಿ ಡಿಟಿಎಚ್ ಸೇವೆ, ಆಟ, ಸಂಗೀತ, ಸಿನಿಮಾ, ಸಾಮಾಜಿಕ ಜಾಲತಾಣ ಮತ್ತು ಇನ್ನೂ ಅಧಿಕ ಸೇವೆಗಳನ್ನು ನೀಡುತ್ತದೆ.
2 - ಈ ಹೊಸ ಯುಗದ ಸಾಧನದಲ್ಲಿ, ಬಳಕೆದಾರರು ಹಿಂದಿ, ಇಂಗ್ಲೀಷ್, ಪಂಜಾಬಿ, ಮಲಯಾಳಂ ಮತ್ತು ಇನ್ನಿತರೆ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸಬಹುದು, ಡೌನ್ ಲೋಡ್ ಮಾಡಿಕೊಳ್ಳಬಹುದು.
ಈ ಟಿವಿಗಳು ಆಸಕ್ತಿದಾಯಕ ಆನ್ ಲೈನ್ ಆಟಗಳನ್ನು ಆಡುವ ಅವಕಾಶವನ್ನೂ ಒದಗಿಸುತ್ತದೆ. ಆ್ಯಂಡ್ರಾಯ್ಡ್ ಆ್ಯಪ್ ಸ್ಟೋರ್ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ಸ್ಕೈಪ್ ಮತ್ತು ಇನ್ನೂ ಅನೇಕ ತಂತ್ರಾಂಶಗಳನ್ನು ಉಪಯೋಗಿಸಬಹುದು.

3 - “ಜನರ ಅವಶ್ಯಕತೆಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಈ ಹೊಸ ಯುಗದ ಹತ್ತಲವು ರೀತಿಯಲ್ಲಿ ಉಪಯೋಗಿಸಬಹುದಾದ ಟಿವಿಗಳನ್ನು ಫಿಲಿಪ್ಸ್ ಬಿಡುಗಡೆ ಮಾಡಿದೆ. ಈ ಎಲ್.ಇ.ಡಿ ಟಿವಿಗಳಿಂದ ನಾವೊಂದು ಕ್ರಾಂತಿಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಕ್ರಾಂತಿಯಲ್ಲಿ ಗ್ರಾಹಕರು ಏನನ್ನು ಯಾವಾಗ ನೋಡಬೇಕೆಂದು ನಿರ್ಧರಿಸುತ್ತಾರೆ, ಅದು ಸಿನಿಮಾಗಳಿರಬಹುದು, ಸಂಗೀತ, ಆಟ, ಲೈವ್ ಟಿವಿ ಅಥವಾ ಸಾಮಾಜಿಕ ಜಾಲತಾಣವಿರಬಹುದು. ಈ ಹೊಸ ಶ್ರೇಣಿಯ ಎಲ್.ಇ.ಡಿ ಟಿವಿಗಳು ಇನ್ನೊಂದು ವಾರದೊಳಗೆ ಅಮೆಜಾನ್.ಇನ್ ನಲ್ಲಿ ಮಾತ್ರ ಲಭ್ಯವಿರುತ್ತದೆ” ಎಂದು ಪಿ.ಇ ಎಲೆಕ್ಟ್ರಾನಿಕ್ಸಿನ ಸಿಒಒ ನೀರಜ್ ಸೇಥಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಂಡ್ರಾಯ್ಡ್ ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?
4 - ಈ ಹೊಸ ಯುಗದ ಫಿಲಿಪ್ಸ್ ಎಲ್.ಇ.ಡಿ ಟಿವಿಗಳ ಬೆಲೆ 69,990 ಹಾಗೂ 59,990 ರುಪಾಯಿಗಳು. ಇದು ಅಮೆಜಾನ್ ಇಂಡಿಯಾದಲ್ಲಿ ಮಾತ್ರ ಲಭ್ಯ.
ಮೂಲ ಐ.ಎ.ಎನ್.ಎಸ್


Click it and Unblock the Notifications








