ಈ ರೀತಿ ಮಾಡಿದ್ರೆ, ನಿಮ್ಮ ಫೋನ್‌ ಸ್ಪೀಕರ್ ಸೌಂಡ್‌ ಸಿಸ್ಟಮ್‌ನಂತೆ ಕೇಳಿಸುತ್ತೆ!

|

ಸಣ್ಣ ಪುಟ್ಟ ಪಾರ್ಟಿ, ಗೆಳೆಯರ ಕಿಟ್ಟಿ ಪಾರ್ಟಿಗಳು ಸೇರಿದಂತೆ ಇತರೆ ಸಂಭ್ರದ ಕ್ಷಣಗಳಿಗೆ ಮ್ಯೂಸಿಕ್/ ಹಾಡು ಬೂಸ್ಟ್‌ ನೀಡಲಿದ್ದು, ಅದಕ್ಕೆ ಬೆಸ್ಟ್ ಸೌಂಡ್‌ ಇರುವ ಸ್ಪೀಕರ್‌ಗಳು ಅಗತ್ಯ. ಈ ನಿಟ್ಟಿನಲ್ಲಿ ಪ್ರಸ್ತುತ ಪೋರ್ಟೆಬಲ್‌ ವಾಯರ್‌ಲೆಸ್‌ ಸ್ಪೀಕರ್‌ಗಳು ಸದ್ದು ಮಾಡುತ್ತಿವೆ. ಅದಾಗ್ಯೂ, ಇಂದಿನ ಕೆಲವು ಸ್ಮಾರ್ಟ್‌ಫೋನ್‌ಗಳ ಸ್ಪೀಕರ್‌ಗಳು ಡಾಲ್ಬಿ ಸೌಲಭ್ಯ ಪಡೆದಿದ್ದು, ಅಧಿಕ ಹಾಗೂ ಗುಣಮಟ್ಟದ ಆಡಿಯೋ ಔಟ್‌ಪುಟ್‌ ನೀಡುತ್ತವೆ. ಹಾಗೆಯೇ ಫೋನ್‌ ಸ್ಪೀಕರ್‌ ಅನ್ನು ಸೌಂಡ್‌ ಸಿಸ್ಟಮ್‌ ನಂತೆ ಮಾಡಬಹುದೇ?

ಸ್ಮಾರ್ಟ್‌ಫೋನ್‌ಗಳು

ಸದ್ಯದ ಬಹುತೇಕ ಸ್ಮಾರ್ಟ್‌ಫೋನ್‌ಗಳು ಕೆಳಭಾಗದಲ್ಲಿ ಒಂದೇ ಸ್ಪೀಕರ್ ಅನ್ನು ಹೊಂದಿದ್ದು ಅದು ಸಾಕಷ್ಟು ಜೋರಾಗಿರುತ್ತದೆ. ಅಲ್ಲದೇ ಕೆಲವು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಸಹ ಉತ್ತಮವಾದ ಸ್ಟಿರಿಯೊ ಸ್ಪೀಕರ್‌ಗಳ ಸೆಟ್ ಅನ್ನು ಒಳಗೊಂಡಿವೆ. ಹೀಗಾಗಿ ಇಂತಹ ಫೋನ್‌ಗಳಲ್ಲಿ ವಾಲ್ಯೂಮ್ ಅನ್ನು ಹೆಚ್ಚಿಸಲು ಬಾಹ್ಯ ಸ್ಪೀಕರ್ ಅನ್ನು ಸಂಪರ್ಕಿಸುವ ಅಗತ್ಯ ಇರಲ್ಲ.

ಸ್ಮಾರ್ಟ್‌ಫೋನ್‌ಗಳು

ಆದರೆ ಕೆಲವು ಹಳೆಯ ಸ್ಮಾರ್ಟ್‌ಫೋನ್‌ಗಳು ಸ್ಪೀಕರ್ ಹೊಂದಿದ್ದರು ಕೆಲವೊಮ್ಮೆ ಅವು ಜೋರಾಗಿ ಆಡಿಯೋ ಔಟ್‌ಪುಟ್‌ ನೀಡಲ್ಲ. ಬಹುಶಃ ಸ್ಪೀಕರ್‌ನಲ್ಲಿ ಧೂಳು ಸೇರಿರಬಹುದು ಅಥವಾ ಕೆಲವು ಹಾರ್ಡ್‌ವೇರ್ ಸಮಸ್ಯೆಯೂ ಅದಕ್ಕೆ ಕಾರಣ ಆಗಿರಬಹುದು. ಆದರೆ ಕೆಲವು ಅಗತ್ಯ ಸೆಟ್ಟಿಂಗ್ ಮೂಲಕ ಫೋನ್‌ನ ಸೌಂಡ್ ಔಟ್‌ಪುಟ್ ಅನ್ನು ಸ್ಪೀಕರ್‌ನಂತೆ ಜೋರಾಗಿ ಮಾಡಬಹುದು. ಹಾಗಾದರೆ ಫೋನಿನ ಸೌಂಡ್‌ ಅಧಿಕ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸ್ಪೀಕರ್ ಸೌಂಡ್‌ ಹೆಚ್ಚಿಸಲು ಈಕ್ವಲೈಜರ್ (Equalizer) ಅನ್ನು ಬಳಸಿ

ಸ್ಪೀಕರ್ ಸೌಂಡ್‌ ಹೆಚ್ಚಿಸಲು ಈಕ್ವಲೈಜರ್ (Equalizer) ಅನ್ನು ಬಳಸಿ

ಪ್ರಸ್ರುತ ಸಾಂಗ್‌ಪ್ಲೇ ಮಾಡಲು ಸಾಮಾನ್ಯವಾಗಿ ಸ್ಪಾಟಿಫೈ, ಸಾವನ್, ಸೇರಿದಂತೆ ಮ್ಯೂಸಿಕ್ ಆಪ್‌ಗಳ ಮೂಲಕ ಹಾಡುಗಳನ್ನು ಪ್ಲೇ ಮಾ. ಈ ಪ್ರತಿಯೊಂದು ಅಪ್ಲಿಕೇಶನ್‌ಗಳು ಔಟ್‌ಪುಟ್ ಆಡಿಯೊ ಗುಣಮಟ್ಟವನ್ನು ಆಯ್ಕೆ ಮಾಡಲು ಬಿಲ್ಟ್‌ಇನ್ ಸೆಟ್ಟಿಂಗ್ ಅನ್ನು ಹೊಂದಿದ್ದು, ಅದನ್ನು ಸಾಧ್ಯವಾದಷ್ಟು ಅಧಿಕ ಸೌಂಡ್‌ ಸೆಟ್ಟಿಂಗ್‌ಗಳಿಗೆ ಹೊಂದಿಸಲಾಗಿದೆ ಎಂದು ಖಾತ್ರಿ ಮಾಡಿಕೊಳ್ಳಿ.

ಸ್ಪೀಕರ್ ಸೌಂಡ್‌ ಹೆಚ್ಚಿಸಲು ಥರ್ಡ್‌ಪಾರ್ಟಿ ಆಪ್ಸ್‌ ಅನ್ನು ಬಳಸಿ

ಸ್ಪೀಕರ್ ಸೌಂಡ್‌ ಹೆಚ್ಚಿಸಲು ಥರ್ಡ್‌ಪಾರ್ಟಿ ಆಪ್ಸ್‌ ಅನ್ನು ಬಳಸಿ

ಆಂಡ್ರಾಯ್ಡ್‌ ಫೋನಿನಲ್ಲಿ ವಾಲ್ಯೂಮ್ ಅನ್ನು ಹೆಚ್ಚಿಸಲು ಸುಲಭವಾದ ಮಾರ್ಗವೆಂದರೆ 'ವಾಲ್ಯೂಮ್ ಬೂಸ್ಟರ್' (Volume Booster) ನಂತಹ ಇತರೆ ಯಾವುದೇ ಥರ್ಡ್‌ಪಾರ್ಟಿ ಆಪ್ಸ್‌ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದು. ಇಂತಹ ಆಪ್‌ಗಳು ಫೋನಿನ ಆಡಿಯೋ ಔಟ್‌ಪುಟ್ ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡಲಿವೆ.

ಫೋನಿನ ಸ್ಪೀಕರ್‌ ಸ್ವಚ್ಛಗೊಳಿಸಿ ಸೌಂಡ್‌ ಹೆಚ್ಚಿಸಿ

ಫೋನಿನ ಸ್ಪೀಕರ್‌ ಸ್ವಚ್ಛಗೊಳಿಸಿ ಸೌಂಡ್‌ ಹೆಚ್ಚಿಸಿ

ಸ್ಪೀಕರ್‌ಗಳು ಸೂಕ್ಷ್ಮವಾಗಿರುತ್ತವೆ ಮತ್ತು ಕೆಲವೊಮ್ಮೆ ನಾವು ನಮ್ಮ ಫೋನ್‌ಗಳನ್ನು ಧೂಳಿನ ವಾತಾವರಣದಲ್ಲಿ ಬಳಸಿದಾಗ, ಸಣ್ಣ ಸಣ್ಣ ಧೂಳಿನ ಕಣಗಳು ಸ್ಪೀಕರ್‌ನಲ್ಲಿ ಸೇರಿರುತ್ತವೆ. ಈ ರೀತಿ ಆದಾಗ ಸ್ಪೀಕರ್‌ಗಳು ಬ್ಲಾಕ್ ಆದಂತೆ ಆಗಿ ಸೌಂಡ್‌ ಸರಿಯಾಗಿ ಕೇಳಿಸುವುದಿಲ್ಲ. ಹಾಗೂ ಆಡಿಯೋ ಔಟ್‌ಪುಟ್‌ ಸಹ ಕಡಿಮೆ ಆಗುತ್ತದೆ. ಇನ್ನು ಧೂಳ ಸ್ವಚ್ಛಗೊಳಿಸಲು ಉತ್ತಮವಾದ ಬ್ರಷ್ ಅನ್ನು ಬಳಸಬಹುದು.

ಸ್ಮಾರ್ಟ್‌ಫೋನ್‌ ಸ್ಪೀಕರ್‌ಗೆ ಅಡೆತಡೆ ಮಾಡದಿರಿ

ಸ್ಮಾರ್ಟ್‌ಫೋನ್‌ ಸ್ಪೀಕರ್‌ಗೆ ಅಡೆತಡೆ ಮಾಡದಿರಿ

ಸ್ಮಾರ್ಟ್‌ಫೋನ್‌ ಸ್ಪೀಕರ್‌ನ ಜಾಗದ ಮೇಲೆ ನಿಮ್ಮ ಬೆರಳುಗಳು ಇಟ್ಟಾಗ ಸೌಂಡ್‌ಔಟ್‌ ಪುಟ್‌ ಕಡಿಮೆ ಆಗುತ್ತದೆ. ಹಾಗೆಯೇ ಸ್ಪೀಕರ್ ಸ್ಥಳ ಕೆಳಮುಖವಾಗಿ ಇರುವಂತೆ ಫೋನ್ ಇಟ್ಟಾಗ ಸಹ ಆಡಿಯೋ ಬ್ಲಾಕ್ ಆಗುತ್ತದೆ. ಇದಲ್ಲದೆ ಫೋನ್‌ನ ಕವರ್‌ನಿಂದ ಸಹ ಕೆಲವೊಮ್ಮೆ ಸ್ಪೀಕರ್‌ಗೆ ಅಡೆ ತಡೆ ಆಗಿರುತ್ತವೆ ಇಂತಹ ಸಂದರ್ಭಗಳಲ್ಲಿಯೂ ಸೌಂಡ್‌ ಕಡಿಮೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಫೋನಿನ ಸ್ಪೀಕರ್‌ ಸ್ಥಳ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಇದರಿಂದ ಸೌಂಡ್‌ ಔಟ್‌ಪುಟ್‌ ಸ್ಪಷ್ಟವಾಗಿರುತ್ತದೆ ಹಾಗೂ ಅಧಿಕವಾಗಿ ಕೇಳುತ್ತದೆ.

Best Mobiles in India

English summary
Phone Tips: Few Tips to Increase your Phone Sound Output.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X