ಫೋನ್‌ಪೇ ಇನ್ಮುಂದೆ ಫ್ಲಿಪ್‌ಕಾರ್ಟ್ ತೆಕ್ಕೆಯಲ್ಲಿರುವುದಿಲ್ಲ; ಹಾಗಿದ್ರೆ ಮುಂದಿನ ನಡೆ ಏನು?

|

ಯಪಿಐ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲಿ ಫೋನ್‌ಪೇ ಅಗ್ರಸ್ಥಾನದಲ್ಲಿದ್ದು, ಬಳಕೆದಾರರಿಗೆ ಹೆಚ್ಚಿನ ಭದ್ರತೆಯೊಂದಿಗೆ ಪಾವತಿ ಸೇವೆ ನೀಡುತ್ತಾ ಬರುತ್ತಿದೆ. ಅದರಂತೆ ಫ್ಲಿಪ್‌ಕಾರ್ಟ್‌ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಫೋನ್‌ಪೇ ಈಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ ಹಾಗೂ ಫೋನ್‌ಪೇಗೆ ಒಂದು ರೀತಿಯ ಅವಿನಾಭಾವ ಕಳಚಿದಂತಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್ ಸಹ ತನ್ನ ವ್ಯಾಪಾರ ಕಾರ್ಯಾಚರಣೆಗಳನ್ನು ಫೋನ್‌ಪೇನಿಂದ ಸಂಪೂರ್ಣವಾಗಿ ಪ್ರತ್ಯೇಕಿಸಿದೆ.

ಫೋನ್‌

ಹೌದು, ಫೋನ್‌ ಪೇ ಗ್ರೂಪ್ ಅನ್ನು 2016 ರಲ್ಲಿ ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬೆಳವಣಿಗೆ ನಂತರ ಇದೀಗ ಈ ಎರಡೂ ಕಂಪೆನಿಗಳು ಅಮೆರಿಕಾದ ಕಂಪೆನಿಯೊಂದರ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಿದ್ರೆ, ಯಾವ ಕಾರಣಕ್ಕೆ ಬೇರ್ಪಟ್ಟಿವೆ?, ಮುಂದಿನ ಮಾತೃತ್ವ ಕಂಪೆನಿ ಯಾವುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಸಂಪೂರ್ಣ ಭಾರತದ ಕಂಪೆನಿಯಾಗಲಿದೆ ಫೋನ್‌ಪೇ

ಸಂಪೂರ್ಣ ಭಾರತದ ಕಂಪೆನಿಯಾಗಲಿದೆ ಫೋನ್‌ಪೇ

ಫೋನ್‌ಪೇ ಅನ್ನು ಸಂಪೂರ್ಣ ಭಾರತದ ಕಂಪೆನಿಯನ್ನಾಗಿ ಮಾಡುವ ಕ್ರಮವನ್ನು ಈ ಮೂಲಕ ಪೂರ್ಣಗೊಳಿಸಿಕೊಳ್ಳುತ್ತಿದೆ. ಇದಕ್ಕಾಗಿ ಈ ವರ್ಷದ ಆರಂಭದಿಂದಲೂ ಕೆಲಸ ಕಾರ್ಯಗಳು ಜರುಗುತ್ತಿದ್ದವು. ಹಾಗೆಯೇ 2018 ರಲ್ಲಿ ವಾಲ್‌ಮಾರ್ಟ್‌ ಫ್ಲಿಪ್‌ಕಾರ್ಟ್‌ನಲ್ಲಿ 77% ಪಾಲನ್ನು ಪಡೆದುಕೊಂಡಿದೆ. ಆ ವೇಳೆ ಫೋನ್‌ಪೇ ಸಹ ಫ್ಲಿಪ್‌ಕಾರ್ಟ್‌ನ ಭಾಗವಾಗಿದ್ದನ್ನು ನೆನಪಿಸಿಕೊಳ್ಳಬಹುದು.

ಭಾರತಕ್ಕೆ ಫೋನ್‌ಪೇ

ಭಾರತಕ್ಕೆ ಫೋನ್‌ಪೇ

ಈ ವರ್ಷದ ಆರಂಭದಲ್ಲಿ ಫೋನ್‌ಪೇ ತನ್ನ ಕಾರ್ಯಸ್ಥಳವನ್ನು ಸಿಂಗಾಪುರದಿಂದ ಭಾರತಕ್ಕೆ ಬದಲಾಯಿಸುತ್ತಿದೆ. ಅದರಲ್ಲೂ ಈ ವರ್ಷದ ಅಕ್ಟೋಬರ್‌ನಲ್ಲಿ ಫೋನ್ ಪೇ ತನ್ನ ವಿಮಾ ಬ್ರೋಕಿಂಗ್ ಸೇವೆಗಳು ಮತ್ತು ಸಂಪತ್ತಿನ ಬ್ರೋಕಿಂಗ್ ವ್ಯವಹಾರವನ್ನು ಒಳಗೊಂಡಂತೆ ಸಿಂಗಾಪುರದ ಎಲ್ಲಾ ವ್ಯವಹಾರಗಳು ಮತ್ತು ಅಂಗಸಂಸ್ಥೆಗಳನ್ನು PhonePe Pvt Ltd - India ಗೆ ಸ್ಥಳಾಂತರಿಸಿದೆ.

ಮಾತೃ ಸಂಸ್ಥೆಯಾಗಲಿದೆ ವಾಲ್‌ಮಾರ್ಟ್

ಮಾತೃ ಸಂಸ್ಥೆಯಾಗಲಿದೆ ವಾಲ್‌ಮಾರ್ಟ್

ಇನ್ಮುಂದೆ ಫ್ಲಿಪ್‌ಕಾರ್ಟ್ ಹಾಗೂ ಫೋನ್‌ಪೇ ಯುಎಸ್ ಮೂಲದ ವಾಲ್‌ಮಾರ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ವಾಲ್‌ಮಾರ್ಟ್‌ ಎರಡೂ ವ್ಯಾಪಾರ ಗ್ರೂಫ್‌ಗಳಲ್ಲಿ ಬಹುಪಾಲು ಷೇರುದಾರರಾಗಿ ವಾಲ್‌ಮಾರ್ಟ್‌ ಉಳಿಯಲಿದೆ. ಹಾಗೆಯೇ ಈ ವಹಿವಾಟಿನ ಭಾಗವಾಗಿ ವಾಲ್‌ಮಾರ್ಟ್ ನೇತೃತ್ವದಲ್ಲಿ ಕೆಲಸ ಮಾಡುವ ಫ್ಲಿಪ್‌ಕಾರ್ಟ್ ಸಿಂಗಾಪುರ್ ಮತ್ತು ಫೋನ್‌ಪೇ ಸಿಂಗಾಪುರದ ಷೇರುದಾರರು ನೇರವಾಗಿ ಭಾರತದಲ್ಲಿ ಷೇರುಗಳನ್ನು ಖರೀದಿ ಮಾಡಲಿದ್ದಾರೆ.

ಫ್ಲಿಪ್‌ಕಾರ್ಟ್‌ಗೆ ಸ್ವಲ್ಪ ಕಷ್ಟ

ಫ್ಲಿಪ್‌ಕಾರ್ಟ್‌ಗೆ ಸ್ವಲ್ಪ ಕಷ್ಟ

ಈ ಪ್ರಕ್ರಿಯೆಯಿಂದ ಫೋನ್‌ಪೇಗೆ ಏನು ತೊಂದರೆಯಾಗದಿದ್ದರೂ ಫ್ಲಿಪ್‌ಕಾರ್ಟ್‌ ಮೌಲ್ಯಮಾಪನ ವಿಷಯಕ್ಕೆ ಬಂದರೆ ಸ್ವಲ್ಪ ಕುಸಿತ ಸಂಭವಿಸಲಿದೆ. ಈ ಪ್ರತ್ಯೇಕತೆಯು ಫ್ಲಿಪ್‌ಕಾರ್ಟ್‌ನ ಮೌಲ್ಯಮಾಪನವನ್ನು $37.6 ಶತಕೋಟಿಯಿಂದ ಸುಮಾರು $33 ಶತಕೋಟಿಗೆ ಕಡಿಮೆ ಮಾಡಲಿದೆ.

2019 ರಿಂದಲೂ ಈ ಪ್ರಕ್ರಿಯೆ ಇತ್ತು

2019 ರಿಂದಲೂ ಈ ಪ್ರಕ್ರಿಯೆ ಇತ್ತು

ದೈತ್ಯ ಗ್ರಾಹಕ ಸೇವಾ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್‌ ಹಾಗೂ ಫೋನ್‌ಪೇ ಪ್ರತ್ಯೇಕತೆ ಪ್ರಕ್ರಿಯೆ 2019 ರಲ್ಲಿಯೇ ಆರಂಭವಾಗಿತ್ತು. ಇನ್ಮುಂದೆ ಫೋನ್‌ಪೇ ಸ್ವತಂತ್ರವಾಗಿ ಕೆಲಸ ಮಾಡಲಿದ್ದು, ಸ್ವತಂತ್ರವಾಗಿ ಹಣ ಸಂಗ್ರಹಿಸಲು ಮತ್ತು ಬಾಹ್ಯ ಹೂಡಿಕೆದಾರರನ್ನು ಮಂಡಳಿಗೆ ತರಲು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡಲಿದೆ. ಇದರ ಭಾಗವಾಗಿಯೇ ಡಿಸೆಂಬರ್ 2020 ರಲ್ಲಿ, ವಾಲ್‌ಮಾರ್ಟ್ ನೇತೃತ್ವದ ಒಂದು ಸುತ್ತಿನಲ್ಲಿ $ 700 ಮಿಲಿಯನ್ ಪ್ರಾಥಮಿಕ ಬಂಡವಾಳವನ್ನು ಸಂಗ್ರಹಿಸಿತ್ತು. ಅದು ಈಗ $ 5.5ಶತಕೋಟಿ ಮೌಲ್ಯವನ್ನು ಹೊಂದಿದೆ.

ಹೊಸ ನಿಧಿಗಾಗಿ ಫೋನ್‌ ಪೇ ಹುಡುಕಾಟ

ಹೊಸ ನಿಧಿಗಾಗಿ ಫೋನ್‌ ಪೇ ಹುಡುಕಾಟ

ಫ್ಲಿಪ್ ಕಾರ್ಟ್‌ನಿಂದ ಬೇರ್ಪಟ್ಟಿರುವ ಫೋನ್‌ ಪೇ ಹೊಸ ನಿಧಿಗಾಗಿ ಹುಡುಕುತ್ತಿದ್ದು, ಇದರಲ್ಲಿ ಖಾಸಗಿ ಈಕ್ವಿಟಿ ಸಂಸ್ಥೆ ಜನರಲ್ ಅಟ್ಲಾಂಟಿಕ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರ ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತುಕತೆಗಳನ್ನು ಮುಂದುವರೆಸಿದೆ.

Best Mobiles in India

English summary
PhonePe is no longer Flipkart company; Why the separation? .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X