ಮೇಡ್‌ ಇನ್‌ ಇಂಡಿಯಾ ಇಯರ್‌ಬಡ್ಸ್‌ ಲಾಂಚ್‌; ಇಬಿಇಎಲ್ ಫೀಚರ್ಸ್‌ ಆಯ್ಕೆ

|

ಪ್ಲೇಗೋ ಸಂಸ್ಥೆಯು ಈಗಾಗಲೇ ಹೆಡ್‌ಫೋನ್‌, ಇಯರ್‌ಫೋನ್‌, ಇಯರ್‌ಬಡ್ಸ್‌ ಹಾಗೂ ಗೇಮ್‌ಪ್ಯಾಡ್ ಗಳನ್ನು ಅನಾವರಣ ಮಾಡಿದ್ದು, ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದೆ. ಅದರಂತೆ ಸುಧಾರಿತ ತಂತ್ರಜ್ಙಾನ ಇರುವ ಡಿವೈಸ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಇದೀಗ ಮಾರುಕಟ್ಟೆಗೆ ಹೊಸ ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಿದೆ. ಇದು ಮೇಡ್‌ ಇನ್‌ ಇಂಡಿಯಾ ಇಯರ್‌ಬಡ್ಸ್‌ ಆಗಿದ್ದು, ಯುವಜನತೆಯನ್ನು ಗುರಿಯಾಗಿಸಿಕೊಂಡು ಪರಿಚಯಿಸಲಾಗಿದೆ.

ಹೌದು, ಪ್ಲೇಗೋ ಸಂಸ್ಥೆಯು ಪ್ಲೇಗೋ ಮ್ಯೂಝ್ ಸ್ಪೀಕರ್‌, ಬಡ್ಸ್‌ಲೈಟ್‌ ಇಯರ್‌ಬಡ್ಸ್‌ ಹಾಗೂ ಪ್ಲೌಂಟ್‌ ನೆಕ್‌ಬ್ಯಾಂಡ್ ಅನ್ನು ಈ ವರ್ಷದ ಏಪ್ರಿಲ್‌ನಲ್ಲಿ ಲಾಂಚ್‌ ಮಾಡಿತ್ತು. ಇದರ ಸಾಲಿಗೆ ಈಗ ಪ್ಲೇಗೋ ಡುರಾ T26 ಇಯರ್‌ಬಡ್ಸ್‌ (PLAYGO DURA T26) ಸೇರಿಕೊಳ್ಳಲಿದೆ. ಈ ಇಯರ್‌ಬಡ್ಸ್‌ 30 ಗಂಟೆಗಳ ಪ್ಲೇ ಟೈಮ್‌ ನೀಡಲಿದ್ದು ಇದರ ಪ್ರಮುಖ ಫೀಚರ್ಸ್‌ ಏನು? ಭಾರತದಲ್ಲಿ ಇದಕ್ಕೆ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಪ್ಲೇಗೋ ಡುರಾ T26 ಸ್ಪೋರ್ಟ್ಸ್ ಪ್ರೀಮಿಯಂ ಜೊತೆಗೆ ಇನ್-ಇಯರ್ ವಿನ್ಯಾಸ ಪಡೆದುಕೊಂಡಿದ್ದು, ನೋಡಲು ಅತ್ಯಾಕರ್ಷಕ ಎನಿಸಿವೆ. ಅದರಲ್ಲೂ ಈ ಇಯರ್‌ಬಡ್ಸ್‌ ಅನ್ನು ದೀರ್ಘವಾಗಿ ಬಳಕೆ ಮಾಡಿದರೂ ಕಿವಿಗೆ ಯಾವುದೇ ತೊಂದರೆ ಆಗಬಾರದ ರೀತಿ ರೂಪಿಸಲಾಗಿದೆ. ಇದರೊಂದಿಗೆ ದೈನಂದಿನ ಚಟುವಟಿಕೆಗಳಾದ ಜಿಮ್‌ ಹಾಗೂ ಇನ್ನಿತರೆ ಸಂದರ್ಭದಲ್ಲಿಯೂ ಇವು ಕಿವಿಯಲ್ಲಿ ಫಿಟ್‌ ಆಗಿ ಕೂರಲಿವೆ.

ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ

ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ

ಈ ಇಯರ್‌ಬಡ್ಸ್‌ ಸುಧಾರಿತ ಬೇಸ್ ಎಕ್ಸ್‌ಟ್ರಾ ಲೌಡ್ (EBEL) ಡ್ರೈವರ್‌ಗಳ ಆಯ್ಕೆಯನ್ನು ಹೊಂದಿದ್ದು, ಅದೇ ರೀತಯಾಗಿ ಮೈಕ್ರೊಫೋನ್ ಹೆಚ್‌ಡಿ ಸೌಂಡ್‌ ಗುಣಮಟ್ಟವನ್ನು ಬಳಕೆದಾರರಿಗೆ ಒದಗಿಸುತ್ತದೆ. ಇದರೊಂದಿಗೆ ಎನ್ವಿರಾನ್‌ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಫೀಚರ್ಸ್‌ ಇದ್ದು, ಎಷ್ಟೇ ಗಲಾಟೆಯ ವಾತಾವರಣದಲ್ಲಿ ಇದ್ದರೂ ಯಾವುದೇ ಸಮಸ್ಯೆಯಾಗದೆ ನೀವು ಕರೆ ಅಥವಾ ಇನ್ನಿತರೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾಗಿದೆ.

ಟಚ್‌ ಕಂಟ್ರೋಲ್‌ ಫೀಚರ್ಸ್

ಟಚ್‌ ಕಂಟ್ರೋಲ್‌ ಫೀಚರ್ಸ್

ಈ ಇಯರ್‌ಬಡ್ಸ್‌ ಟಚ್‌ ಕಂಟ್ರೋಲ್‌ ಫೀಚರ್ಸ್‌ ಪಡೆದುಕೊಂಡಿದ್ದು, ಈ ಮೂಲಕ ನೀವು ಸ್ಮಾರ್ಟ್‌ಫೋನ್ ಅನ್ನು ನಿಯಂತ್ರಣ ಮಾಡಬಹುದು. ಅದಮರೆ ನೀವು ಈ ಬಡ್ಸ್‌ ಮೂಲಕ ಮ್ಯೂಸಿಕ್ ಪ್ಲೇ ಮಾಡಬಹುದು, ಪಾಸ್‌ ಮಾಡಬಹುದು ಹಾಗೂ ಸೌಂಡ್‌ ಕಂಟ್ರೋಲ್‌ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಕರೆಯನ್ನು ರಿಸೀವ್‌ ಮಾಡುವ ಅಥವಾ ತಿರಸ್ಕರಿಸುವ ಕೆಲಸವನ್ನೂ ಬಡ್ಸ್‌ಗಳಿಂದ ಮಾಡಬಹುದಾಗಿದ್ದು, ಈ ಬಡ್ಸ್‌ಗಳು ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆಗೂ ಬೆಂಬಲ ನೀಡುತ್ತವೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಹೊಸ ಪ್ಲೇಗೋ ಡುರಾ ಇಯರ್‌ಬಡ್ಸ್‌ ಒಂದು ಪೂರ್ಣ ಚಾರ್ಜ್‌ನಲ್ಲಿ 30 ಗಂಟೆಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿದೆ. ಹಾಗೆಯೇ ಇದರಲ್ಲಿನ ಪ್ರತಿ ಬಡ್ಸ್ ಒಂದು ಪೂರ್ಣ ಚಾರ್ಜ್‌ನಲ್ಲಿ 10 ಗಂಟೆಗಳ ವರೆಗೆ ಪ್ಲೇ ಟೈಮ್‌ ನೀಡಲಿದೆ. ಇದರೊಂದಿಗೆ ಬಳಕೆದಾರರು ಕೇವಲ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 5 ಗಂಟೆಗಳವರೆಗೆ ಆಡಿಯೊವನ್ನು ಆಲಿಸಬಹುದು ಎಂದು ಕಂಪೆನಿ ತಿಳಿಸಿದೆ. ಇನ್ನು ಬಡ್ಸ್‌ಗಳು 50mAh ಸಾಮರ್ಥ್ಯದ ಬ್ಯಾಟರಿಯಿಂದ ಕಾರ್ಯನಿರ್ವಹಿಸಲಿದ್ದು, ಚಾರ್ಜಿಂಗ್ ಕೇಸ್ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಯುಎಸ್‌ಬಿ ಟೈಪ್ C ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಪ್ಲೇಗೋ ಡುರಾ ಇಯರ್‌ಬಡ್‌ಗೆ 1,499 ರೂ. ಗಳ ಆಫರ್ ಬೆಲೆ ನಿಗದಿ ಮಾಡಲಾಗಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣದ ವೇರಿಯಂಟ್‌ನಲ್ಲಿ ಲಭ್ಯವಿದ್ದು, ನಿಮಗೆ ಈ ಇಯರ್‌ಬಡ್ಸ್‌ ಬೇಕೆಂದರೆ ಅಮೆಜಾನ್‌ ಹಗೂ ಫ್ಲಿಪ್‌ಕಾರ್ಟ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹಾಗೆಯೇ ಪ್ಲೇಗೋ ಅಧಿಕೃತ ವೆಬ್‌ಸೈಟ್‌ ಮೂಲಕವೂ ಖರೀದಿ ಮಾಡಬಹುದು.

Best Mobiles in India

English summary
Playgo DuraT26 Unveiled in India; price and specification.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X