'ಪೋಕ್ಮನ್‌ ಗೋ' ಗೇಮ್‌ ಆಡೋದು ಆರೋಗ್ಯಕ್ಕೆ ಒಳ್ಳೇದಂತೆ!!

Written By:

'ಪೋಕ್ಮನ್ ಗೋ' ಗೇಮ್‌ ಗೂಗಲ್‌ನಲ್ಲಿ ಪೋರ್ನ್‌ಗಿಂತ ಹೆಚ್ಚು ಸರ್ಚ್‌ ಆಗುತ್ತಿರುವ ಬಗ್ಗೆ ಇತ್ತೀಚೆಗೆತಾನೆ ಹೇಳಿದ್ವಿ. ಇದೇ ಹೆಚ್ಚು ಕೂತೂಹಲಕಾರಿ ವಿಷಯವಾಗಿತ್ತು. ಆದರೆ ಈಗ ಇದರ ಬಗ್ಗೆ ಎಲ್ಲರೂ ಬಾಯಿಯ ಮೇಲೆ ಕೈಯಿಟ್ಟು ಕೇಳುವಂತ ಅಚ್ಚರಿ ಮಾಹಿತಿಯೊಂದು ಹರಿದಾಡುತ್ತಿದೆ.

ಜಿಪಿಎಸ್‌ ಆಧಾರಿತ 'ಪೋಕ್ಮನ್‌ ಗೋ' ರಿಯಾಲಿಟಿ ಮೊಬೈಲ್‌ ಗೇಮ್‌ ಆಡುವುದರಿಂದ ಆರೋಗ್ಯಕ್ಕೆ ಒಳ್ಳೇದಂತೆ. ಅಮೆರಿಕದ ತಜ್ಞರೊಬ್ಬರು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಆರೋಗ್ಯದ ಪ್ರಯೋಜಗಳು ಇವೆ ಎಂದು ಹೇಳಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಪೋಕ್ಮನ್‌ ಗೋ; ಪೋರ್ನ್‌'ಗಿಂತ ಗೂಗಲ್‌ನಲ್ಲಿ ಹೆಚ್ಚಾಗಿ ಸರ್ಚ್ ಆಗುತ್ತಿರುವುದೇಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೋಕ್ಮನ್‌ ಗೋ ಆಡುವುದರಿಂದ ಹೆಲ್ತ್‌ಗೆ ಒಳ್ಳೇದಂತೆ

ಪೋಕ್ಮನ್‌ ಗೋ ಆಡುವುದರಿಂದ ಹೆಲ್ತ್‌ಗೆ ಒಳ್ಳೇದಂತೆ

ಟೆಕ್ಸಾಸ್‌ನ ಎ ಅಂಟ್‌ ಎಂ ನರ್ಸಿಂಗ್ ಕಾಲೇಜಿನಲ್ಲಿ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕರಾಗಿರುವ 'ಮ್ಯಾಟ್ ಹೊಫ್ಫ್‌ಮ್ಯಾನ್‌' , "catch ‘em all" ಗೇಮ್‌ ಆಡುವವರನ್ನು ಪೋಕ್‌ ಮಾಡುತ್ತಾ ವಿಶಾಲ ಪ್ರದೇಶದಲ್ಲಿ ಓಡಾಡುವಂತೆ ಮಾಡುತ್ತದೆ. ವಿಶಾಲವಾಗಿ ಮತ್ತು ದೂರದ ಪ್ರದೇಶದಲ್ಲಿ ಪೋಕ್ಮನ್‌ ಅನ್ನು ಸರ್ಚ್‌ ಮಾಡುತ್ತಾ ಹೋಗುವುದರಿಂದ ದಿನನಿತ್ಯದ ವ್ಯಾಯಾಮ ಆಗುತ್ತದೆ ಎಂದು ಹೇಳಿದ್ದಾರೆ.

ಅಭಿವೃದ್ದಿ

ಅಭಿವೃದ್ದಿ

'ಪೋಕ್ಮನ್‌ ಗೋ' ಗೇಮ್‌ನಲ್ಲಿ ಆಟಗಾರ ಟ್ರೈನರ್‌ ಆಗಿ ಗುರುತಿಸಿಕೊಂಡು, ಪೋಕ್ಮನ್‌ ಹುಡುಕಲು ಕಡ್ಡಾಯವಾಗಿ ಸುತ್ತಮುತ್ತಲ ಪ್ರದೇಶವನ್ನು ಓಡಾಡುತ್ತಾನೆ ಮತ್ತು ನಿರ್ದಿಷ್ಟ ಪ್ರದೇಶಗಳಲ್ಲಿ ಪೋಕ್‌ಸ್ಟಾಪ್‌ ಪಡೆಯುತ್ತಾನೆ. ಅಲ್ಲದೇ ಪೋಕ್‌ ಬಾಲ್ಸ್, ಪೋಕ್‌ ಮೊಟ್ಟೆಗಳನ್ನು ಮತ್ತು ಇತರೆ ವಸ್ತುಗಳನ್ನು ಸಂಗ್ರಹಿಸುತ್ತಾನೆ. ಈ ರೀತಿಯ ಹಲವು ಚಟುವಟಿಕೆಗಳು ಹೆಚ್ಚಿನ ವಾಕಿಂಗ್ ಮಾಡಿಸುತ್ತವೆ.

ಜಸ್ಟ್ ಪೋಕ್ಮನ್‌ ಗೋ ಪ್ರಾರಂಭಿಸಿ

ಜಸ್ಟ್ ಪೋಕ್ಮನ್‌ ಗೋ ಪ್ರಾರಂಭಿಸಿ

"ಜಸ್ಟ್ 'ಪೋಕ್ಮನ್ ಗೋ' ರಿಯಾಲಿಟಿ ಗೇಮ್‌ ಪ್ರಾರಂಭಿಸುವುದು ನನ್ನ ಹವ್ಯಾಸವಾಗಿದ್ದು, ಇದು ನನಗೆ ಹೆಚ್ಚು ಆರೋಗ್ಯದ ಪ್ರಯೋಜನಗಳನ್ನು ನೀಡುತ್ತಿದೆ" ಎಂದು ಹೊಫ್ಫ್‌ಮ್ಯಾನ್‌ ವಿಶ್ವವಿದ್ಯಾನಿಲಯದಲ್ಲಿ ಹೇಳಿದ್ದಾರೆ.

 1 ಅಥವಾ 2 ಗಂಟೆಗಳ ಕಾಲ ಆಟ

1 ಅಥವಾ 2 ಗಂಟೆಗಳ ಕಾಲ ಆಟ

"ಪ್ರಸ್ತುತ ನಾನು ಒಂದು ಅಥವಾ ಎರಡು ಗಂಟೆಗಳ ಕಾಲ 'ಪೋಕ್ಮನ್‌ ಗೋ' ಆಟವಾಡುತ್ತಾ ಕೆಲವೊಮ್ಮೆ ಪೋಕ್‌ಸ್ಟಾಪ್‌ಗಳನ್ನು ಪತ್ತೆಹಚ್ಚುತ್ತೇನೆ. ಒಂದು ಮೊಟ್ಟೆ ಪಡೆಯುತ್ತೇನೆ. ತರಬೇತುದಾರ ಕಡ್ಡಾಯವಾಗಿ ಯಾವ ಕಡೆಯಾದರೂ ಸರಿ 1 ರಿಂದ 6 ಮೈಲಿಗಳಷ್ಟು ನಡೆದಾಡಬಹುದು. ಇದರಿಂದ ನಿರೀಕ್ಷೆಗಿಂತ ಹೆಚ್ಚು ವ್ಯಾಯಾಮವಾಗುತ್ತಿದೆ" ಸಂತೋಷದಿಂದ ಹೇಳಿದ್ದಾರೆ.

ಸಾಮಾಜಿಕ ಸಂವಹನ

ಸಾಮಾಜಿಕ ಸಂವಹನ

'ಪೋಕ್ಮನ್‌ ಗೋ' ರಿಯಾಲಿಟಿ ರಿಯಲ್‌ ಲೈಪ್‌ನಷ್ಟೇ ಕ್ರೇಜಿ ಚಟುವಟಿಕೆಗಳನ್ನು ಹೊಂದಿದೆ. ಗೇಮ್‌ ಹಲವು ಜನರನ್ನು ಒಟ್ಟಿಗೆ ಕರೆತಂದು ಸಾಮಾಜಿಕ ಸಂವಹನಕ್ಕೆ ನೆರವು ನೀಡುತ್ತದೆ. ಇದರಿಂದ ಸಕಾರಾತ್ಮಕ ಪರಿಣಾಮವು ನಮ್ಮ ಭಾವನೆಗಳ ಮೇಲೆ ಮತ್ತು ಮಾನಸಿಕ ಆರೋಗ್ಯಕ್ಕೆ ಅನುಕೂಲವಾಗಿದೆ ಎಂದು 'ಪೋಕ್ಮನ್‌ ಗೋ' ಹವ್ಯಾಸಿ ಆಟಗಾರ ಹೊಫ್ಫ್‌ಮ್ಯಾನ್‌ ವಿಶೇಷ ಮಾಹಿತಿ ನೀಡಿದ್ದಾರೆ.

'ಪೋಕ್ಮನ್ ಗೋ' ಅಹಿಂಸಾತ್ಮಕ ಆಟ

'ಪೋಕ್ಮನ್ ಗೋ' ಅಹಿಂಸಾತ್ಮಕ ಆಟ

'ಪೋಕ್ಮನ್ ಗೋ' ಅಹಿಂಸಾತ್ಮಕ ಆಟವಾಗಿದ್ದು, ಕುಟುಂಬದ ಸದಸ್ಯರನ್ನು ವಾಕ್‌ ಮಾಡುತ್ತಾ ಆಟವಾಡಲು ಪ್ರೇರೇಪಣೆ ನೀಡುತ್ತದಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
‘Playing Pokemon Go is good for health’. Read more about this in kannada.gizobot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot