ವಿಶ್ವದಲ್ಲಿಯೇ ಮೋದಿ ಮೋಡಿಗೆ ಎರಡನೆಯ ಸ್ಥಾನ

By Shwetha
|

ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆ 16.1 ಮಿಲಿಯನ್ ಫಾಲೋವರ್ ಅನ್ನು ತಲುಪಿದೆ. ಈ ಸಲುವಾಗಿ ಟ್ವಿಟ್ಟರ್ ಮೋದಿಯವರನ್ನು ಅಭಿನಂದಿಸಿದ್ದು, ಮೋದಿಯವರ ವಾಲ್‌ನಲ್ಲಿ ಇದನ್ನು ಸೂಚಿಸಿದೆ. ಜಗತ್ತಿನಲ್ಲಿಯೇ ರಾಜಕಾರಣಿಗಳಲ್ಲಿ ಬರಾಕ್ ಒಬಾಮಾರ ನಂತರ ಟ್ವಿಟ್ಟರ್‌ನಲ್ಲಿ ಎರಡನೆ ಸ್ಥಾನವನ್ನು ಮೋದಿಯವರು ಪಡೆದುಕೊಂಡಿದ್ದಾರೆ. ಇನ್ನು ಭಾರತದಲ್ಲಿ ಸಿನಿಸ್ಟಾರ್‌ಗಳಾದ ಅಮಿತಾಭ್ ಹಾಗೂ ಶಾರುಖ್ ನಂತರ ಮೋದಿಯವರಿಗೆ ಮೂರನೇ ಸ್ಥಾನ

ಓದಿರಿ: ಫೇಸ್‌ಬುಕ್ ಕಚೇರಿಯಲ್ಲಿ ಮೋಡಿ ಮಾಡಿದ ನರೇಂದ್ರ ಮೋದಿ

ಇಂದಿನ ಲೇಖನದಲ್ಲಿ ಮೋದಿವರ ಟ್ವಿಟ್ಟರ್ ಸಾಧನೆಯನ್ನು ನಾವು ಕೊಂಡಾಡಲಿದ್ದು ಈ ಮಆ ಮುತ್ಸದ್ದಿ ಸಾಮಾಜಿಕ ತಾಣದಲ್ಲಿ ಹೇಗೆ ಜನಪ್ರಿಯಗೊಂಡಿದ್ದಾರೆ ಮತ್ತು ಈ ಜನಪ್ರಿಯತೆಯ ಹಿಂದೆ ಅವರ ಸಾಧನೆಗಳೇನು ಎಂಬುದನ್ನು ಅರಿತುಕೊಳ್ಳೋಣ.

16 ಮಿಲಿಯನ್ ಫಾಲೋವರ್

16 ಮಿಲಿಯನ್ ಫಾಲೋವರ್

ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯು 16 ಮಿಲಿಯನ್ ಫಾಲೋವರ್‌ಗಳನ್ನು ತಲುಪಿದೆ. ಕಳೆದ ಒಂದು ವರ್ಷದಿಂದ ಫಾಲೋವರ್ ಸಂಖ್ಯೆ ಹೆಚ್ಚಿದೆ.

ಎರಡು ತಿಂಗಳಲ್ಲಿ ಟ್ವಿಟ್ಟರ್ ಸಾಧನೆ

ಎರಡು ತಿಂಗಳಲ್ಲಿ ಟ್ವಿಟ್ಟರ್ ಸಾಧನೆ

ಬರೇ ಎರಡು ತಿಂಗಳಲ್ಲಿ, ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯು ಇನ್ನೊಂದು ಮಿಲಿಯನ್ ಫಾಲೋವರ್‌ಗಳ ಹೆಚ್ಚಳವನ್ನು ಕಂಡುಕೊಂಡಿದೆ. ಒಟ್ಟು ಫಾಲೋವರ್‌ಗಳು 16.1 ಮಿಲಿಯನ್

11.9 ಮಿಲಿಯನ್ ಫಾಲೋವರ್ ಹೆಚ್ಚಳ

11.9 ಮಿಲಿಯನ್ ಫಾಲೋವರ್ ಹೆಚ್ಚಳ

ಸಪ್ಟೆಂಬರ್ 22, 2015 ರಂದು ಫಾಲೋವರ್ಸ್ 15 ಮಿಲಿಯನ್ ಅನ್ನು ದಾಟಿದೆ. ಮೇ 26, 2014 ಕ್ಕೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 11.9 ಮಿಲಿಯನ್ ಫಾಲೋವರ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾರೆ.

8.8 ಮಿಲಿಯನ್ ಫಾಲೋವರ್ಸ್

8.8 ಮಿಲಿಯನ್ ಫಾಲೋವರ್ಸ್

ಸಪ್ಟೆಂಬರ್ 17, 2014 ರಿಂದ ಸಪ್ಟೆಂಬರ್ 17, 2015 ರವರೆಗೆ 8.8 ಮಿಲಿಯನ್ ಫಾಲೋವರ್ಸ್‌ಗಳನ್ನು ಇವರು ಹೊಂದಿದ್ದಾರೆ. ಎಂಬುದಾಗಿ ಟ್ವಿಟ್ಟರ್ ಹೇಳಿದೆ.

ಮೋದಿಯವರಿಂದ ಹೊಸ ದಾಖಲೆ

ಮೋದಿಯವರಿಂದ ಹೊಸ ದಾಖಲೆ

ಭಾರತೀಯ ಖಾತೆಯಲ್ಲಿ 12 ತಿಂಗಳ ಕಾಲಾವಧಿಯಲ್ಲಿ ಫಾಲೋವರ್‌ಗಳ ಸಂಖ್ಯೆಯಲ್ಲಿ ಪ್ರಧಾನಿಯವರು ಹೊಸ ದಾಖಲೆಯನ್ನೇ ಬರೆದಿದ್ದಾರೆ.

ಅಮಿತಾಬ್ ಬಚ್ಚನ್ ಫಾಲೋವರ್ಸ್ ಹೆಚ್ಚು

ಅಮಿತಾಬ್ ಬಚ್ಚನ್ ಫಾಲೋವರ್ಸ್ ಹೆಚ್ಚು

ಪ್ರಸ್ತುತ ಜನಪ್ರಿಯ ಬಾಲಿವುಡ್ ನಟ ಅಮಿತಾಬ್ ಬಚ್ಚನ್ 17.8 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಅಂತೆಯೇ ಶಾರುಖ್ ಖಾನ್ 16.2 ಮಿಲಿಯನ್ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಮೋದಿ ಹೆಚ್ಚು ಸಕ್ರಿಯ

ಟ್ವಿಟ್ಟರ್‌ನಲ್ಲಿ ಮೋದಿ ಹೆಚ್ಚು ಸಕ್ರಿಯ

2009 ರಿಂದ ಟ್ವಿಟ್ಟರ್‌ನಲ್ಲಿ ಸಕ್ರಿಯಗೊಂಡಿರುವ ಮೋದಿ, ಹೆಚ್ಚು ಫಾಲೋವ್ಡ್ ಭಾರತೀಯ ರಾಜಕಾರಣಿ ಎಂದೆನಿಸಿದ್ದಾರೆ. ಅಂತೆಯೇ ವಿಶ್ವದಲ್ಲಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಎರಡನೆಯ ರಾಜಕಾರಣಿಯಾಗಿದ್ದಾರೆ.

ಬರಾಕ್ ಒಬಾಮಾ ಪ್ರಥಮ ಸ್ಥಾನ

ಬರಾಕ್ ಒಬಾಮಾ ಪ್ರಥಮ ಸ್ಥಾನ

ಬರಾಕ್ ಒಬಾಮಾ ಫಾಲೋವರ್ಸ್ 66.1 ಮಿಲಿಯನ್ ಆಗಿದ್ದು ಇವರು ಪ್ರಥಮ ಸ್ಥಾನದಲ್ಲಿದ್ದಾರೆ.

ಶಾರುಖ್ ಪೈಪೋಟಿ

ಶಾರುಖ್ ಪೈಪೋಟಿ

ಭಾರತದ ಪ್ರಧಾನ ಮಂತ್ರಿಗಳು ಮತ್ತು ಬಾಲಿವುಡ್ ಬಾದ್‌ಷಾ ಎರಡನೆಯ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿಯನ್ನು ನಡೆಸುತ್ತಿದ್ದಾರೆ.

ಪ್ರಥಮ ಸ್ಥಾನ ಯಾರಿಗೆ

ಪ್ರಥಮ ಸ್ಥಾನ ಯಾರಿಗೆ

ಈ ವರ್ಷದ ಟ್ವಿಟ್ಟರ್ ಯುದ್ಧದಲ್ಲಿ ಪ್ರಥಮ ಸ್ಥಾನವನ್ನು ಯಾರು ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

English summary
Number of followers of Prime Minister Narendra Modi, @narendramodi, on social media site Twitter has crossed 16 million mark, with the addition of a record number of followers during the last one year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X