ವಾರ್ಷಿಕ ಅವಧಿಯ ರೀಚಾರ್ಜ್ ಮಾಡಿಸಬೇಕೆ?..ಹಾಗಿದ್ರೆ ಈ ಪ್ಲ್ಯಾನ್ ಬೆಸ್ಟ್!

|

ಜಿಯೋ, ವೊಡಾಫೋನ್ ಮತ್ತು ಏರ್‌ಟೆಲ್‌ ಟೆಲಿಕಾಂಗಳು ಗ್ರಾಹಕರನ್ನು ಸೆಳೆಯಲು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಆದರೆ ಮುಂದಿನ ತ್ರೈಮಾಸಿಕದಲ್ಲಿ ಅಥವಾ ಅದರ ನಂತರದ ತ್ರೈಮಾಸಿಕದಲ್ಲಿ ಈ ಟೆಲಿಕಾಂಗಳು ಶುಲ್ಕ ಹೆಚ್ಚಳವನ್ನು ಮಾಡುವ ನಿರೀಕ್ಷೆಗಳಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಪ್ರಿಪೇಯ್ಡ್ ಪ್ಯಾಕ್ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದ್ದರೆ ವಾರ್ಷಿಕ ಯೋಜನೆ ರೀಚಾರ್ಜ್ ಮಾಡಿಸುವುದು ಉತ್ತಮ.

ಏರ್‌ಟೆಲ್‌

ಹೌದು, ಜಿಯೋ, ವೊಡಾಫೋನ್ ಮತ್ತು ಏರ್‌ಟೆಲ್‌ ಟೆಲಿಕಾಂಗಳು ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಬಳಕೆದಾರರು ರೀಚಾರ್ಜ್‌ ಮಾಡಿಸುವ ಯೋಜನೆ ಇದ್ರೆ, ದೀರ್ಘಾವಧಿಯ ಪ್ರಿಪೇಯ್ಡ್ ಪ್ಯಾಕ್‌ಗೆ ಹೋಗುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಶುಲ್ಕ ಹೆಚ್ಚಳದ ನಂತರ ಮತ್ತೆ ರೀಚಾರ್ಜ್‌ ಮಾಡುವ ಅಗತ್ಯವನ್ನು ಇರುವುದಿಲ್ಲ. ಹಾಗಾದರೇ ಜಿಯೋ, ವಿ ಟೆಲಿಕಾಂ ಹಾಗೂ ಏರ್‌ಟೆಲ್‌ಗಳ ದೀರ್ಘಾವಧಿಯ ಯೋಜನೆಗಳ ಲಿಸ್ಟ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ದೀರ್ಘಾವಧಿಯ ಜಿಯೋ ಪ್ಲ್ಯಾನ್‌ಗಳು:

ದೀರ್ಘಾವಧಿಯ ಜಿಯೋ ಪ್ಲ್ಯಾನ್‌ಗಳು:

ರಿಲಯನ್ಸ್ ಜಿಯೋ ಹಲವು ಪ್ರಿಪೇಯ್ಡ್ ಪ್ಯಾಕ್‌ಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ದೀರ್ಘಾವಧಿಗೆ ಜಿಯೋ 2,399ರೂ ಮತ್ತು ಜಿಯೋ 2,121ರೂ. ಯೋಜನೆಗಳು ಅತ್ಯುತ್ತಮ ಪ್ರಿಪೇಯ್ಡ್ ಪ್ಯಾಕ್‌ಗಳಾಗಿ ಗಮನ ಸೆಳೆದಿವೆ. ಆ ಪೈಕಿ 2,399ರೂ. ಪ್ಯಾಕ್ 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಜಿಯೋ 2,121ರೂ ಪ್ಯಾಕ್ 336 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಇನ್ನು ಈ ಎರಡೂ ಯೋಜನೆಗಳು ದೈನಂದಿನ ಡೇಟಾದೊಂದಿಗೆ, ಅನಿಯಮಿತ ವಾಯಿಸ್‌ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಜೊತೆಗೆ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ನೀಡುತ್ತವೆ.

ದೀರ್ಘಾವಧಿಯ ಏರ್‌ಟೆಲ್ ಪ್ಲ್ಯಾನ್‌ಗಳು:

ದೀರ್ಘಾವಧಿಯ ಏರ್‌ಟೆಲ್ ಪ್ಲ್ಯಾನ್‌ಗಳು:

ಏರ್‌ಟೆಲ್‌ ಟೆಲಿಕಾಂನಲ್ಲಿ 2,498ರೂ. ಮತ್ತು 1,498ರೂ. ಯೋಜನೆಗಳು ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಹೆಚ್ಚು ಗಮನ ಸೆಳೆದಿವೆ. ಏರ್‌ಟೆಲ್ 2,498ರೂ. ಯೋಜನೆಯು 365 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾವನ್ನು ಪಡೆದಿದೆ. ಹಾಗೆಯೇ 1,498ರೂ.ಗಳ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಒಟ್ಟು 24GB ಡೇಟಾವನ್ನು ಹೊಂದಿದೆ. ಈ ಎರಡೂ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ / ದಿನ ಲಾಭದೊಂದಿಗೆ ಬರುತ್ತವೆ.

ದೀರ್ಘಾವಧಿಯ ವಿ ಟೆಲಿಕಾಂ ಪ್ಲ್ಯಾನ್‌ಗಳು:

ದೀರ್ಘಾವಧಿಯ ವಿ ಟೆಲಿಕಾಂ ಪ್ಲ್ಯಾನ್‌ಗಳು:

ವಿ ಟೆಲಿಕಾಂ ಎರಡು ಪ್ರಿಪೇಯ್ಡ್ ಆಕರ್ಷಕ ದೀರ್ಘಾವಧಿಯ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಅವುಗಳ ಕ್ರಮವಾಗಿ 2,595ರೂ. ಮತ್ತು 2,399ರೂ. ಆಗಿದೆ. ಅವುಗಳಲ್ಲಿ 2,595ರೂ.ಯೋಜನೆಯು 2GB ದೈನಂದಿನ ಡೇಟಾದ ಜೊತೆ 365 ದಿನಗಳ ಮಾನ್ಯತೆ ಪಡೆದಿದೆ. ಹಾಗೆಯೇ 2,399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾವನ್ನು ಸೌಲಭ್ಯ ನೀಡುತ್ತದೆ. ಈ ಎರಡೂ ಯೋಜನೆಗಳು ‘ವೀಕೆಂಡ್ ಡಾಟಾ ರೋಲ್‌ಓವರ್' ಪ್ರಯೋಜನ ಒಳಗೊಂಡಿದೆ.

Most Read Articles
Best Mobiles in India

English summary
Prepaid Plans You Should Get Before Tariff Hikes Kick-In.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X