ಟಾಪ್ 10 ವೈರ್ಡ್ ಇಯರ್‌ಫೋನ್‌ಗಳು: ಬೆಲೆ, ಫೀಚರ್ಸ್‌ ವಿವರ

|

ಸ್ಮಾರ್ಟ್‌ಫೋನ್‌ ಇದ್ದ ಮೇಲೆ ಅದಕ್ಕೆ ಹೆಡ್‌ಫೋನ್ ಅಥವಾ ಇಯರ್‌ಫೋನ್‌ ಎಲ್ಲರ ಬಳಿ ಕಡ್ಡಾಯವಾಗಿರುತ್ತವೆ. ಈ ನಡುವೆ ಪ್ರಮುಖ ಕಂಪೆನಿಗಳು ಸಹ ಉತ್ತಮ ಕ್ವಾಲಿಟಿಯ ವೈರ್ಡ್‌ ಇಯರ್‌ಫೋನ್‌ಗಳನ್ನು ಪರಿಚಯಿಸಿವೆ. ಅದರಲ್ಲೂ ಹೆಚ್ಚಾಗಿ ಫಿಲಿಪ್ಸ್‌, ಜೆಬಿಎಲ್‌ ಹಾಗೂ ಇನ್ನಿತರ ಕಂಪೆನಿಯ ಇಯರ್‌ಫೋನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ.

ಇಯರ್‌ಫೋನ್‌

ಹೌದು, ಹಲವು ಇಯರ್‌ಫೋನ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ಉತ್ತಮ ಕ್ವಾಲಿಟಿ ಇರುವ, ಧೀರ್ಘ ಬಾಳಿಗೆ ಬರುವ ಜೊತೆಗೆ ಕೈಕೆಟಕುವ ಬೆಲೆಯಲ್ಲಿ ಲಭ್ಯ ಆಗುವ ಪ್ರಮುಖ ವೈರ್ಡ್ ಇಯರ್‌ಫೋನ್‌ಗಳನ್ನು ಪಟ್ಟಿ ಮಾಡಿ ಈ ಲೇಖನದಲ್ಲಿ ನೀಡಲಾಗಿದೆ. ನೀವೇನಾದರೂ ಇಯರ್‌ಫೋನ್‌ ಖರೀದಿ ಮಾಡಬೇಕೆಂದು ಕೊಂಡಿದ್ದರೆ ಈ ಲೇಖನ ಓದಿ.

ಬ್ಲೂಪಂಕ್ಟ್EM10

ಬ್ಲೂಪಂಕ್ಟ್EM10

ಈ ವೈರ್ಡ್ ಇಯರ್‌ಫೋನ್ ಬೆಲೆ ಕೇವಲ 499ರೂ. ಗಳಾಗಿದೆ. ಇದು ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಇನ್ ಲೈನ್ ಮೈಕ್‌ ಬೆಂಬಲದ ಆಯ್ಕೆಯನ್ನು ಪಡೆದಿದೆ. ಈ ಇಯರ್‌ಫೋನ್‌ ಉತ್ತಮ ಸೌಂಡ್‌ ಕ್ವಾಲಿಟಿ ಹೊಂದಿದೆ.

ಗೋವೊ ಗೋಬೇಸ್ 400

ಗೋವೊ ಗೋಬೇಸ್ 400

ಈ ವೈರ್ಡ್ ಇಯರ್‌ಫೋನ್‌ 349ರೂ. ಗಳಿಗೆ ಲಭ್ಯ ಇದೆ. ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಹೊಂದಿರುವ ಇದು ಗುಣಮಟ್ಟದಲ್ಲಿ ಹೆಚ್ಚು ಆಕರ್ಷಕವಾಗಿದೆ. ಜೊತೆಗೆ ಇನ್ ಲೈನ್ ಮೈಕ್‌ ಬೆಂಬಲ ಈ ಇಯರ್‌ಫೋನ್‌ನಲ್ಲಿದೆ.

ಇನ್ಫಿನಿಟಿ (ಜೆಬಿಎಲ್) ಜಿಪ್ 100

ಇನ್ಫಿನಿಟಿ (ಜೆಬಿಎಲ್) ಜಿಪ್ 100

ಈ ಇಯರ್‌ಫೋನ್‌ 499ರೂ. ಗಳಿಗೆ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯ ಇದೆ. ಈ ಇಯರ್‌ಫೋನ್‌ ಕಿವಿಗೆ ಯಾವುದೇ ಕಿರಿಕಿರಿ ಮಾಡದ ಫಿಟಿಂಗ್‌ ಆಯ್ಕೆ ಪಡೆದಿದೆ. ಹ್ಯಾಂಡ್ಸ್‌ಫ್ರೀ ಕರೆ ಜೊತೆಗೆ ಉತ್ತಮ ಗುಣಮಟ್ಟದ ಸೌಂಡ್‌ ಆಯ್ಕೆ ಇದರಲ್ಲಿದೆ.

ಫಿಲಿಪ್ಸ್‌ ಆಡಿಯೋ TAE1126

ಫಿಲಿಪ್ಸ್‌ ಆಡಿಯೋ TAE1126

ಈ ಇಯರ್‌ಫೋನ್‌ ಅನ್ನು 328ರೂ. ಗಳಿಗೆ ಕೊಂಡುಕೊಳ್ಳಬಹುದು. ಇದು ಕಿವಿಗೆ ಆರಾಮದಾಯಕ ಅನುಭವ ನೀಡಲಿದ್ದು, ಇನ್ ಲೈನ್ ಮೈಕ್‌ ಬೆಂಬಲದ ಜೊತೆಗೆ ಬಾಹ್ಯ ಶಬ್ಧವನ್ನು ತಡೆಯುವ ಸಾಮರ್ಥ್ಯ ಪಡೆದಿದೆ.

ಆಂಬ್ರೇನ್ ವೈರ್ಡ್ ಇಯರ್‌ಫೋನ್‌

ಆಂಬ್ರೇನ್ ವೈರ್ಡ್ ಇಯರ್‌ಫೋನ್‌

ಈ ಇಯರ್‌ಫೋನ್‌ ಕೇವಲ 249ರೂ. ಗಳಿಗೆ ಲಭ್ಯ ಇದೆ. ಇದು ಸಿಲಿಕೋನ್ ರಬ್ಬರ್ ವೈರ್‌ಗಳು ಮತ್ತು ಇನ್‌ಬಿಲ್ಟ್‌ ಮೈಕ್ರೊಫೋನ್‌ ಫೀಚರ್‌ ಪಡೆದಿದೆ. ಇದರ ಜೊತೆಗೆ ಸ್ಪಷ್ಟ ಧ್ವನಿಗಾಗಿ ಇನ್ ಲೈನ್ ಮೈಕ್ ಆಯ್ಕೆ ಪಡೆದಿದೆ.

ಬೋಲ್ಟ್‌ ಆಡಿಯೊ ಬೇಸ್‌ಬಡ್ಸ್ ಓಕ್

ಬೋಲ್ಟ್‌ ಆಡಿಯೊ ಬೇಸ್‌ಬಡ್ಸ್ ಓಕ್

ಬೋಲ್ಟ್‌ ಆಡಿಯೊ ಬೇಸ್‌ಬಡ್ಸ್ ಓಕ್ ಅಮೆಜಾನ್‌ನಲ್ಲಿ 499ರೂ. ಗಳಿಗೆ ಲಭ್ಯ ಇದೆ. ಇದು ತುಂಬಾ ಹಗುರವಾಗಿದ್ದು, ಧರಿಸಲು ಅನುಕೂಲಕರವಾದ ಬಡ್ಸ್‌ಗಳ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಇನ್‌ ಲೈನ್‌ ಮೈಕ್‌ ಬೆಂಬಲ ಇದರಲ್ಲಿದೆ.

ಜೆಬಿಎಲ್‌ C200SI

ಜೆಬಿಎಲ್‌ C200SI

ಜೆಬಿಎಲ್‌ C200SI ಇಯರ್‌ಫೋನ್‌ ಅನ್ನು ನೀವು 799ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಹೆಚ್ಚಿನ ಬೇಸ್‌ ಆಯ್ಕೆ ಇದರಲ್ಲಿದ್ದು, ಉತ್ತಮ ಗುಣಮಟ್ಟದ ಧ್ವನಿ ಅನುಭವ ಪಡೆಯಬಹುದಾಗಿದೆ.

ವಿಬೆಜ್ ಬೈ ಲೈಫ್‌ಲಾಂಗ್‌ 2 in 1

ವಿಬೆಜ್ ಬೈ ಲೈಫ್‌ಲಾಂಗ್‌ 2 in 1

ಈ ಇಯರ್‌ಫೋನ್‌ 1,159ರೂ. ಗಳಿಗೆ ಲಭ್ಯ ಇದೆ. ವೈರ್‌ಲೆಸ್ ಮತ್ತು ವೈರ್ಡ್ ಆಯ್ಕೆಯ ಇಯರ್‌ಫೋನ್‌ ಇದಾಗಿದ್ದು, ಹೆಚ್ಚಿನ ಬೇಸ್‌ ನೀಡಲಿದೆ. ಹಾಗೆಯೇ ಒಂದೇ ಬಟನ್‌ನಲ್ಲಿ ಎಲ್ಲವನ್ನೂ ನಿಯಂತ್ರಣ ಮಾಡುವ ಆಯ್ಕೆ ನೀಡಲಾಗಿದೆ.

ಜೆಬಿಎಲ್ ಎಂಡ್ಯೂರೆನ್ಸ್

ಜೆಬಿಎಲ್ ಎಂಡ್ಯೂರೆನ್ಸ್

ಜೆಬಿಎಲ್ ಎಂಡ್ಯೂರೆನ್ಸ್ ಇಯರ್‌ಫೋನ್‌ ಬೆಲೆ 999ರೂ. ಗಳಾಗಿದೆ. ಹಾಗೆಯೇ ಹಗುರವಾದ ಹಾಗೂ ಆರಾಮದಾಯಕ ಫಿಟ್ಟಿಂಗ್‌ ಆಯ್ಕೆ ಇದ್ದು, ಸಾಮಾನ್ಯ ಹಂತದ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್‌ ಪಡೆದಿದೆ.

ಬ್ಲೂಪಂಕ್ಟ್ EM01

ಬ್ಲೂಪಂಕ್ಟ್ EM01

ಬ್ಲೂಪಂಕ್ಟ್ EM01 ಇಯರ್‌ಫೋನ್‌ ಅನ್ನು ಅಮೆಜಾನ್‌ನಲ್ಲಿ ಕೇವಲ 399ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಆಕರ್ಷಕ ಸೌಂಡ್‌ ಕ್ವಾಲಿಟಿ ಇದರಲ್ಲಿದ್ದು, ಫಿಟ್ಟಿಂಗ್ ವಿಷಯದಲ್ಲಿ ಹೆಚ್ಚು ಆರಾಮದಾಯಕವಾಗಿದೆ. ಇನ್ ಲೈನ್ ಮೈಕ್ ಬೆಂಬಲದ ಆಯ್ಕೆ ಇದರಲ್ಲಿದೆ.

Best Mobiles in India

English summary
Many companies have introduced good quality wired earphones. In this article we have given information about Top 10 Wired Earphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X