'ಇಂಟರ್ನೆಟ್ ಬ್ಯಾಂಕಿಂಗ್' ಸೇವೆಗಳಿಗೆ ಇನ್ಮುಂದೆ ಶುಲ್ಕವಿಲ್ಲ!!

|

RTGS, NEFT ಮತ್ತು ಮೊಬೈಲ್ ವಾಲೆಟ್‌ಗಳು ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್ ಹಣ ವರ್ಗಾವಣೆ ಮಾಡುವುದಕ್ಕೆ ಬ್ಯಾಂಕುಗಳು ವಿಧಿಸುವ ಶುಲ್ಕಗಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಏಕೆಂದರೆ, ಗುರುವಾರ ಹಣಕಾಸು ನೀತಿ ಪರಿಷ್ಕರಣೆಯ ಸಂದರ್ಭದಲ್ಲಿ ಡಿಜಿಟಲ್ ಹಣ ವರ್ಗಾವಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸ್ವಲ್ಪ ಬದಲಾಗಿದೆ.

ಹೌದು, RTGS ಹಾಗೂ NEFT (ಇಂಟರ್ನೆಟ್) ವಿಧಾನದಲ್ಲಿ ಹಣ ವರ್ಗಾವಣೆ ಮಾಡುವುದಕ್ಕೆ ಬ್ಯಾಂಕುಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಕೇಂದ್ರೀಯ 'ರಿಸರ್ವ್ ಬ್ಯಾಂಕ್' ತೆಗೆದುಹಾಕಿದೆ. ಅಲ್ಲದೇ ಈ ಅನುಕೂಲವನ್ನು ಬ್ಯಾಂಕುಗಳು ನೇರವಾಗಿ ಗ್ರಾಹಕರಿಗೇ ವರ್ಗಾಯಿಸುವಂತೆಯೂ ಸಹ ಸೂಚಿಸಿದೆ. ಇದರಿಂದ ಗ್ರಾಹಕರಿಂದ ಶುಲ್ಕದ ರೂಪದಲ್ಲಿ ಪಾವತಿಯಾಗುತ್ತಿದ್ದ ಹಣ ಉಳಿಯಲಿದೆ.

'ಇಂಟರ್ನೆಟ್ ಬ್ಯಾಂಕಿಂಗ್' ಸೇವೆಗಳಿಗೆ ಇನ್ಮುಂದೆ ಶುಲ್ಕವಿಲ್ಲ!!

ಈ ಮೊದಲು RTGS ಹಾಗೂ NEFT ಮೂಲಕ ವರ್ಗಾಯಿಸಲಾಗುವ ಹಣಕಾಸು ವಹಿವಾಟಿಗೆ ಬ್ಯಾಂಕುಗಳಿಗೆ ಕನಿಷ್ಠ ದರ ವಿಧಿಸಲಾಗುತ್ತಿತ್ತು. ಈ ಶುಲ್ಕವನ್ನು ಬ್ಯಾಂಕುಗಳು ಗ್ರಾಹಕರ ಮೇಲೆ ವರ್ಗಾಯಿಸುತ್ತಿದ್ದವು. ಆದರೆ, ಡಿಜಿಟಲ್ ಹಣ ವರ್ಗಾವಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಶುಲ್ಕ ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.

ಮೊನ್ನೆ ಮೊನ್ನೆಯಷ್ಟೇ RTGS ಹಾಗೂ NEFT ಸೇವೆಗಳ ಬಳಕೆ ಸಮಯವನ್ನು ಆರ್‌ಬಿಐ ಹೆಚ್ಚಿಸಿತ್ತು. ಜೂನ್‌ 1 ರಿಂದ ಅನ್ವಯವಾಗುವಂತೆ ಆರ್‌ಟಿಜಿಎಸ್‌ಸೇವಾವಧಿ ಸಮಯವನ್ನು ಬೆಳಗ್ಗೆ 8 ರಿಂದ 11 ಗಂಟೆ, 11 ಗಂಟೆಯಿಂದ ಮಧ್ಯಾಹ್ನ 1, ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ತನಕ ವಿಸ್ತರಣೆ ಮಾಡಲಾಗಿತ್ತು. 1 ಗಂಟೆಯ ನಂತರ ಪ್ರತಿ ಹಣ ವರ್ಗಾವಣೆಗೆ 5 ರೂ.ನಿಗದಿಪಡಿಸಲಾಗಿತ್ತು.

'ಇಂಟರ್ನೆಟ್ ಬ್ಯಾಂಕಿಂಗ್' ಸೇವೆಗಳಿಗೆ ಇನ್ಮುಂದೆ ಶುಲ್ಕವಿಲ್ಲ!!

ಸಮಯ ವಿಸ್ತರಣೆ ಮಾಡಿರುವುದರಿಂದ ಆರ್‌ಟಿಜಿಎಸ್ ವ್ಯವಸ್ಥೆಯಲ್ಲಿ 6 ಲಕ್ಷ ರೂಪಾಯಿಗಿಂತ ಮೇಲ್ಪಟ್ಟು ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ತಕ್ಷಣವೇ ಹಣ ವರ್ಗಾವಣೆ ಮಾಡಬಹುದಾಗಿದೆ.ಇನ್ನು ಆರ್‌ಟಿಜಿಎಸ್ ಮೂಲಕ ಹಣ ಕಳುಹಿಸಲು ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ಕೋಡ್ ಮತ್ತು ಫಲಾನುಭವಿಯ ಖಚಿತ ಖಾತೆಯ ಸಂಖ್ಯೆ ಮುಖ್ಯವಾಗಿದೆ.

ಓದಿರಿ: ಜಪಾನ್ ನಮಗಿಂತ ಹತ್ತಾರು ವರ್ಷಗಳ ಕಾಲ ಮುಂದಿದೆ ಅಂತ ಹೇಳೋದು ಇದಕ್ಕೆ!!

Best Mobiles in India

English summary
Banks, in turn, levy charges on their customers. In order to provide an impetus to digital funds movement, it has been decided to do away with the charges levied by the RBI for transactions processed in the RTGS and NEFT systems. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X