ರಿಯಲ್‌ಮಿ 10S 5G ಫೋನ್‌ ಲಾಂಚ್!..ಅಚ್ಚರಿಯ ಬೆಲೆ, ಅತ್ಯುತ್ತಮ ಫೀಚರ್ಸ್‌!

|

ರಿಯಲ್‌ಮಿ ಸಂಸ್ಥೆಯು ಇದೀಗ ನೂತನವಾಗಿ ರಿಯಲ್‌ಮಿ 10S 5G (Realme 10S 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಸಹ ಒಳಗೊಂಡಿದೆ.

ರಿಯಲ್‌ಮಿ 10S 5G

ಹೌದು, ರಿಯಲ್‌ಮಿ ಕಂಪನಿಯು ರಿಯಲ್‌ಮಿ 10S 5G ಸ್ಮಾರ್ಟ್‌ಫೋನ್‌ ಅನ್ನು ಚೀನಾ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ 60Hz ರಿಫ್ರೆಶ್‌ ರೇಟ್‌ ಹೊಂದಿದೆ. ಜೊತೆಗೆ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ

ರಿಯಲ್‌ಮಿ 10S 5G (Realme 10S 5G) ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 60Hz ರಿಫ್ರೆಶ್ ರೇಟ್‌ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಪಡೆದಿದ್ದು, 20.5:9 ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್‌ ಬಲ ಯಾವುದು?

ಪ್ರೊಸೆಸರ್‌ ಬಲ ಯಾವುದು?

ರಿಯಲ್‌ಮಿ 10S 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಸದ್ಯದಲ್ಲೇ ಆಂಡ್ರಾಯ್ಡ್‌ 13 ಓಎಸ್‌ಗೆ ಅಪ್‌ಡೇಟ್‌ ಸಹ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳ ಕ್ರಮವಾಗಿ 8GB + 128GB ಮತ್ತು 8GB + 256GB ಆಗಿವೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸಲು ಅವಕಾಶ ಸಹ ಪಡೆದಿದೆ.

ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್

ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್

ರಿಯಲ್‌ಮಿ 10S 5G (Realme 10S 5G) ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಸೆಲ್ಫಿ ಕ್ಯಾಮೆರಾ ರಚನೆಯು ವಾಟರ್‌ಡ್ರಾಪ್‌ ನಾಚ್‌ ಮಾದರಿಯಲ್ಲಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ರಿಯಲ್‌ಮಿ 10 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G VoLTE, ವೈ-ಫೈ 802.1ac, ಬ್ಲೂಟೂತ್ 5.2, ಜಿಪಿಎಸ್‌, USB-C ಪೋರ್ಟ್ ಮತ್ತು 3.5mm ಆಡಿಯೊ ಜಾಕ್ ಅನ್ನು ಬೆಂಬಲಿಸುತ್ತದೆ. ಇದು 164.4 x 75.1 x 8.1mm ಅಳತೆ ಹೊಂದಿದ್ದು, ಜೊತೆಗೆ ಸುಮಾರು 191 ಗ್ರಾಂ ತೂಕ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ 10S 5G (Realme 10S 5G) ಫೋನ್ 8GB + 128GB ಮತ್ತು 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, 8GB + 128GB ಬೆಲೆಯು ಚೀನಾದಲ್ಲಿ CNY 1099 (ಭಾರತದಲ್ಲಿ ಅಂದಾಜು 13,100ರೂ. ಆಗಿದೆ) ಹಾಗೆಯೇ 8GB + 256GB ವೇರಿಯಂಟ್‌ ಬೆಲೆಯು CNY 1299 (ಭಾರತದಲ್ಲಿ ಅಂದಾಜು 15,400ರೂ. ಆಗಿದೆ). ಇನ್ನು ಈ ಫೋನ್‌ ಸ್ಟಿಮ್ಮರ್ ಬ್ಲೂ ಮತ್ತು ಕ್ರಿಸ್ಟಲ್ ಬ್ಲ್ಯಾಕ್‌ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
Realme has unveiled the Realme 10S 5G as its new affordable 5G smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X