ರಿಯಲ್‌ಮಿ ಬ್ಯಾಂಡ್‌ 2 ಖರೀದಿಸುವ ಗ್ರಾಹಕರಿಗೆ ಗುಡ್‌ನ್ಯೂಸ್‌!..ಭಾರೀ ಡಿಸ್ಕೌಂಟ್‌!

|

ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಅಗತ್ಯ ಗ್ಯಾಡ್ಜೆಟ್ಸ್‌ಗಳ ಲಿಸ್ಟ್‌ ಸೇರಿವೆ. ನೀವೇನಾದರೂ ನೂತನ ಫಿಟ್ನೆಸ್‌ ಬ್ಯಾಂಡ್‌ವೊಂದನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಯೋಚನೆ ಮಾಡಿದ್ದರೆ, ಅದಕ್ಕೆ ಇದೀಗ ಸರಿಯಾದ ಸಮಯ ಬಂದಿದೆ. ಏಕೆಂದರೇ ರಿಯಲ್‌ಮಿ ಸಂಸ್ಥೆಯ ಇತ್ತೀಚಿಗಿನ ರಿಯಲ್‌ಮಿ ಬ್ಯಾಂಡ್‌ 2 (realme Band 2) ಡಿವೈಸ್‌ ಈಗ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್

ಹೌದು, ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ರಿಯಲ್‌ಮಿ ಬ್ಯಾಂಡ್‌ 2 (realme Band 2) ಡಿವೈಸ್‌ ಆಕರ್ಷಕ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್‌ ಬೆಲೆಯು 3,499ರೂ. ಆಗಿದ್ದು, ಫ್ಲಿಪ್‌ಕಾರ್ಟ್‌ 47% ರಿಯಾಯಿತಿ ನೀಡಿದೆ. ಹೀಗಾಗಿ ಈ ಫಿಟ್ನೆಸ್‌ ಬ್ಯಾಂಡ್‌ 1848ರೂ. ಗಳ ಡಿಸ್ಕೌಂಟ್‌ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ.

ಸಿಟಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌

ಇದರೊಂದಿಗೆ ಸಿಟಿ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಇನ್ನು ಈ ಡಿವೈಸ್‌ 90 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದ್ದು, 5ATM ವಾಟರ್‌ ರೆಸಿಸ್ಟನ್ಸ್‌ ಸೌಲಭ್ಯ ಸಹ ಪಡೆದಿದೆ. ಹಾಗಾದರೆ ರಿಯಲ್‌ಮಿ ಬ್ಯಾಂಡ್‌ 2 (realme Band 2) ಡಿವೈಸ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಫರ್ ಮಾಹಿತಿ:

ಆಫರ್ ಮಾಹಿತಿ:

* ಸಿಟಿ ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 10% ರಿಯಾಯಿತಿ.
* ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ Trxn ಮೇಲೆ 10% ರಿಯಾಯಿತಿ.
* ICICI ಕ್ರೆಡಿಟ್ ಕಾರ್ಡ್ EMI Trxn ಮೇಲೆ 10% ರಿಯಾಯಿತಿ.
* ಕೋಟಾಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI Trxn ನಲ್ಲಿ 10% ರಿಯಾಯಿತಿ.

ರಿಯಲ್‌ಮಿ ಬ್ಯಾಂಡ್‌ 2 ಫೀಚರ್ಸ್‌

ರಿಯಲ್‌ಮಿ ಬ್ಯಾಂಡ್‌ 2 ಫೀಚರ್ಸ್‌

ರಿಯಲ್‌ಮಿ ಬ್ಯಾಂಡ್‌ 2 (Realme Band 2) ಫಿಟ್ನೆಸ್‌ ಸಾಧನವು ಆಯತಾಕಾರದ 1.4 ಇಂಚಿನ HD ಬಣ್ಣದ ಡಿಸ್‌ಪ್ಲೇ ಯೊಂದಿಗೆ ಪ್ರಕಾಶಮಾನವಾದ, ವರ್ಣರಂಜಿತ ಮತ್ತು ಸ್ಪಂದಿಸುವ ಸ್ಪರ್ಶ ಅನುಭವವನ್ನು ನೀಡುತ್ತದೆ. ಫಿಟ್ನೆಸ್ ಟ್ರ್ಯಾಕರ್ ಅಂತರ್ನಿರ್ಮಿತ SpO2 ಸಂವೇದಕದೊಂದಿಗೆ ನಿರಂತರ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ರಕ್ತದ ಶುದ್ಧತ್ವ ಮಟ್ಟವನ್ನು ಒದಗಿಸುತ್ತದೆ.

90 ಕ್ರೀಡಾ ವಿಧಾನ

ಹಾಗೆಯೇ ರಿಯಲ್‌ಮಿ ಬ್ಯಾಂಡ್‌ 2 ಡಿವೈಸ್‌ ಸುಮಾರು 90 ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಇದು 12 ದಿನಗಳವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ಬ್ಯಾಕಪ್‌ನೊಂದಿಗೆ ಲಿಥಿಯಂ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ವಿಭಿನ್ನ ಬಟ್ಟೆಗಳು ಮತ್ತು ಸಂದರ್ಭಗಳಿಗೆ ಹೊಂದಿಕೊಳ್ಳಲು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿವೆ.

ರಿಯಲ್ ಮಿ ಬ್ಯಾಂಡ್ ಫೀಚರ್ಸ್‌

ರಿಯಲ್ ಮಿ ಬ್ಯಾಂಡ್ ಫೀಚರ್ಸ್‌

ರಿಯಲ್ ಮಿ ಬ್ಯಾಂಡ್ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 80x160 ಆಗಿದೆ. ಡಿಸ್‌ಪ್ಲೇಯಲ್ಲಿ ನ್ಯಾವಿಗೇಶನ್ನಗಾಗಿ ಒಂದು ಬಟನ್ ನೀಡಲಾಗಿದೆ. ಇದರೊಂದಿಗೆ 5 ಡಯಲ್ ಫೇಸ್‌ ಅನ್ನು ಹೊಂದಿದೆ. ಡಿಸ್‌ಪ್ಲೇ ಬೆಳಕನ್ನು ಅಡ್ವಸ್ಟ್ ಮಾಡುವ ಆಯ್ಕೆ ಸಹ ಪಡೆದುಕೊಂಡಿದೆ. ರಿಯಲ್ ಮಿ ಬ್ಯಾಂಡ್ ಡಿವೈಸ್ ಯೋಗಾ, ರನ್ನಿಂಗ್, ವಾಕಿಂಗ್, ಕ್ರಿಕೆಟ್ ಸೇರಿಂದತೆ ಒಟ್ಟು ಒಂಬತ್ತು ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಉನ್ನತ ಮಟ್ಟದ ಹಾರ್ಟ್‌ ರೇಟ್ ಸೆನ್ಸಾರ್ ಪಡೆದಿದೆ.

ನೋಟಿಫಿಕೇಶನ್

ಹಾಗೆಯೇ ಇದು 24*7 ಸ್ಲಿಪ್ ಟ್ರಾಕರ್ ಸೌಲಭ್ಯವನ್ನು ಹೊಂದಿದೆ. ಸಾಮಾಜಿಕ ತಾಣಗಳ ನೋಟಿಫಿಕೇಶನ್ ಡಿಸ್‌ಪ್ಲೇ ಮಾಡುತ್ತದೆ. ರಿಯಲ್‌ ಮಿ ಬ್ಯಾಂಡ್ ಡಿವೈಸ್ 90mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ದೀರ್ಘ ಬಾಳಿಕೆ ಸಾಮರ್ಥ್ಯ ನೀಡಲಿದೆ. ಆಕ್ಸಲರೋಮೀಟರ್, ಬ್ಲೂಟೂತ್ 4.2, ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಡಿವೈಸ್ ಆಂಡ್ರಾಯ್ಡ್ 5.0 ಲಾಲಿಪಾಪ್ ಓಎಸ್‌ ಮೇಲ್ಪಟ್ಟ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಪೋರ್ಟ್‌ ಮಾಡಲಿದೆ.

Best Mobiles in India

English summary
Realme Band 2 Available at Huge discount on Flipkart: Check this offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X