ಮಾರುಕಟ್ಟೆಗೆ ಹೊಸ ತಂತ್ರಜ್ಞಾನದ ಏರ್‌ ಕಂಡಿಷನರ್‌ ಪರಿಚಯಿಸಿದ ರಿಯಲ್‌ಮಿ!

|

ಟೆಕ್‌ ವಲಯದ ಜನಪ್ರಿಯ ಬ್ರ್ಯಾಂಡ್‌ ರಿಯಲ್‌ಮಿ ಭಿನ್ನ ಮಾದರಿಯ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ವಿವಿಧ ರೀತಿಯ ಡಿವೈಸ್‌ಗಳಿಂದ ಗ್ರಾಹಕರ ಗಮನಸೆಳೆದಿದೆ. ಸದ್ಯ ಇದೀಗ ಭಾರತದಲ್ಲಿ ಹೊಸ ಏರ್‌ ಕಂಡಿಷನರ್‌ಗಳನ್ನು ಲಾಂಚ್‌ ಮಾಡಿದೆ. ಇದು 4 ಇನ್‌ 1 ಕನ್ವರ್ಟಿಬಲ್ ಏರ್ ಕಂಡಿಷನರ್‌ ಆಗಿದೆ. ಬೇಸಿಗೆ ಕಾಲಕ್ಕೆ ಸೂಕ್ತವಾದ ಈ ಏರ್‌ ಕಂಡಿಷನ್‌ ಹೆಚ್ಚುವರಿ ಎಸಿಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡ್ತಿದೆ.

ಮಾರುಕಟ್ಟೆಗೆ ಹೊಸ ತಂತ್ರಜ್ಞಾನದ ಏರ್‌ ಕಂಡಿಷನರ್‌ ಪರಿಚಯಿಸಿದ ರಿಯಲ್‌ಮಿ!

ಹೌದು, ರಿಯಲ್‌ಮಿ ಕಂಪೆನಿ ಹೊಸ 4 ಇನ್‌ 1 ಕನ್ವರ್ಟಿಬಲ್ ಏರ್ ಕಂಡಿಷನರ್‌ಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಎಸಿಗಿಂತ ಹೆಚ್ಚುವರಿ ಎಸಿಯನ್ನು ಈ ಏರ್‌ ಕಂಡಿಷನರ್‌ ಒಳಗೊಂಡಿದೆ. ಇದು 1.0 ಮತ್ತು 1.5- ಟನ್ ಕ್ಯಾಪಸಿಟಿ ಹೊಂದಿದ್ದು, ರಾಪಿಡ್ ಕೂಲ್ ಫೀಚರ್ಸ್‌ ಅನ್ನು ಹೊಂದಿರುವುದು ಮೇನ್‌ ಹೈಲೈಟ್‌ ಆಗಿದೆ. ಇನ್ನುಳಿದಂತೆ ಈ ಹೊಸ ಏರ್‌ ಕಂಡಿಷಷನರ್‌ ವಿಶೇಷತೆ ಏನು? ಬೆಲೆ ಎಷ್ಟಿದೆ? ಮಾರುಕಟ್ಟೆಯಲ್ಲಿ ಇದು ಗಮನಸೆಳೆಯಲು ಕಾರಣವಾದ ವಿಚಾರ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ 4 ಇನ್‌ 1 ACಯನ್ನು ಅಪ್ಡೇಟೆಡ್‌ ಟೆಕ್ನಾಲಜಿಯ ಮೂಲಕ ವಿನ್ಯಾಸಗೊಳಿಸಲಾಗಿದೆ. ಇದು ವೇರಿಯಬಲ್ ಸ್ಪೀಡ್ ಕಂಪ್ರೆಸರ್‌ನೊಂದಿಗೆ ಇನ್ವರ್ಟರ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದರಿಂದ ಹೆಚ್ಚಿನ ವೇಗ ಮತ್ತು ಹೆಚ್ಚು ಪರಿಣಾಮಕಾರಿ ಕೂಲಿಂಗ್‌ ಅನ್ನು ನೀಡಲು ಸಾಧ್ಯವಾಗಲಿದೆ. ಅಲ್ಲದೆ ಈ ಏರ್‌ ಕಂಡಿಷನರ್‌ ಹೆಚ್ಚಿ ವಿದ್ಯುತ್‌ ಬಳಸುವುದಿಲ್ಲ, ಇದು ವಿದ್ಯುತ್‌ ಬಳಕೆಯನ್ನು ಉಳಿಸಲಿದ್ದು, ಲಾಂಗ್‌ ಕಂಪ್ರೆಸರ್‌ ಲೈಫ್‌ ಅನ್ನು ನೀಡಲಿದೆ.

ಮಾರುಕಟ್ಟೆಗೆ ಹೊಸ ತಂತ್ರಜ್ಞಾನದ ಏರ್‌ ಕಂಡಿಷನರ್‌ ಪರಿಚಯಿಸಿದ ರಿಯಲ್‌ಮಿ!

ಈ ಏರ್‌ ಕಂಡಿಷನರ್‌ 1.0 ಮತ್ತು 1.5 ಟನ್ ಕ್ಯಾಪಸಿಟಿಯನ್ನು ಹೊಂದಿದೆ. ಇದರಲ್ಲಿ ರಾಪಿಡ್‌ ಕೂಲ್‌ ಫೀಚರ್ಸ್‌ ಅನ್ನು ಅಳವಡಿಸಲಾಗಿದ್ದು, ಇದು ಏರ್‌ ಫ್ಲೋ ಲೆವೆಲ್‌ ಅನ್ನು ಹೆಚ್ಚಿಸಲಿದೆ. ಜೊತೆಗೆ ಕೇವಲ 20 ನಿಮಿಷಗಳಲ್ಲಿ ಕೂಲಿಂಗ್ ಎಫೆಕ್ಟ್‌ ಅನ್ನು ನೀಡಲಿದೆ. ಇದಲ್ಲದೆ ಈ ಏರ್‌ಕಂಡಿಷನರ್‌ನ ಮತ್ತೊಂದು ವಿಶೇಷತೆ ಎಂದರೆ ರೂಮ್‌ನಲ್ಲಿರುವ ಜನಸಂಖ್ಯೆಯ ಆಧಾರದ ಮೇಲೆ ಎಸಿಯನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಇದಕ್ಕಾಗಿ ಫ್ಲೆಕ್ಸಿ ಕಂಟ್ರೋಲ್‌ ಟೆಕ್ನಾಲಜಿಯನ್ನು ನೀಡಲಾಗಿದೆ, ಇದರಿಂದ ನೀವು ಪವರ್‌ ಸೇವ್‌ ಕೂಡ ಮಾಡಬಹುದಾಗಿದೆ.

ಇನ್ನು ಈ ಏರ್‌ ಕಂಡಿಷನರ್‌ನಲ್ಲಿ ಹೀಟ್‌ ಟ್ರಾನ್ಸಪರ್‌ ಮಾಡೋದಕ್ಕಾಗಿ 100% ತಾಮ್ರದ ಕಂಡೆನ್ಸರ್ ಮತ್ತು ಇನ್ನರ್ ಗ್ರೂವ್ಡ್ ಕಾಪರ್ ಟ್ಯೂಬ್‌ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ಬ್ಲೂ ಫಿನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದ್ದು, ಇನ್‌ಬಿಲ್ಟ್‌ ಸರ್ಕ್ಯೂಟ್‌ಗಳು ನಡೆಯದಂತೆ ತಡೆಯಲಿದೆ. ಇದಲ್ಲದೆ ಈ ACಯು R32 ಅನ್ನು ಸಹ ಹೊಂದಿದೆ, ಇದು ಗ್ರೀನ್‌ಹೌಸ್‌ ಎಫೆಕ್ಟ್‌ ಅನ್ನು ತಡೆಕಟ್ಟಲಿದೆ, ಅಲ್ಲದೆ ವಾತಾವರಣದಲ್ಲಿ ಓಝೋನ್ ಪದರಕ್ಕೆ ಯಾವುದೇ ದಕ್ಕೆ ಆಗದಂತೆ ಕಾರ್ಯನಿರ್ವಹಿಸಲಿದೆ.

ಮಾರುಕಟ್ಟೆಗೆ ಹೊಸ ತಂತ್ರಜ್ಞಾನದ ಏರ್‌ ಕಂಡಿಷನರ್‌ ಪರಿಚಯಿಸಿದ ರಿಯಲ್‌ಮಿ!

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ 4 ಇನ್‌ 1 ಕನ್ವರ್ಟಿಬಲ್ ಎಸಿ ಭಾರತದಲ್ಲಿ 1.0-ಟನ್ ಮಾದರಿಗೆ 28,499ರೂ. ಬೆಲೆಯನ್ನು ಹೊಂದಿದೆ. ಆದರೆ ಇದರ 1.5 ಟನ್ ಮಾದರಿಯ ಎಸಿಗೆ 33,999ರೂ. ಬೆಲೆ ನಿಗಧಿಪಡಿಸಲಾಗಿದೆ. ಪ್ರಸ್ತುತ ಈ ಏರ್‌ ಕಂಡಿಷನರ್‌ಗಳು ಫ್ಲಿಪ್‌ಕಾರ್ಟ್ ಮೂಲಕ ಸೇಲ್‌ ಆಗುತ್ತಿವೆ

ಇದಲ್ಲದೆ ರಿಯಲ್‌ಮಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ರಿಯಲ್‌ಮಿ 10 ಪ್ರೊ ಸರಣಿ ಪರಿಚಯಿಸಿದೆ. ಈ ಸರಣಿಯಲ್ಲಿ ರಿಯಲ್‌ಮಿ 10 ಪ್ರೊ + 5G ಮತ್ತು ರಿಯಲ್‌ಮಿ 10 ಪ್ರೊ 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು, ಎರಡು ಫೋನ್‌ಗಳು ಕೂಡ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿವೆ. ಆದರೆ ಭಿನ್ನ ಮಾದರಿಯ ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿವೆ. ಇದರಲ್ಲಿ ರಿಯಲ್‌ಮಿ 10 ಪ್ರೊ + 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ ಹೊಂದಿದೆ. ಆದರೆ ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Realme New 4-in-1 Convertible Inverter Air Conditioners Launched in India. know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X