ಕೆಲವೇ ನಿಮಿಷಗಳಲ್ಲಿ ಫೋನ್‌ ಬ್ಯಾಟರಿ ಫುಲ್‌!..ರಿಯಲ್‌ಮಿಯಿಂದ ಹೊಸ 240W ಕ್ರಾಂತಿ!

|

ಪ್ರಸ್ತುತ ಮೊಬೈಲ್‌ ಸಂಸ್ಥೆಗಳು ತಮ್ಮ ನೂತನ ಫೋನ್‌ಗಳಿಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ನೀಡುತ್ತಿವೆ. ಅದಾಗ್ಯೂ, ಕೆಲವು ಸಂಸ್ಥೆಗಳು ಹೈ ಎಂಡ್ ಫಾಸ್ಟ್‌ ಚಾರ್ಜಿಂಗ್ ಲಭ್ಯ ಮಾಡುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಫೋನಿನ ಬ್ಯಾಟರಿ ಪೂರ್ಣ ಭರ್ತಿ ಆಗುತ್ತದೆ. ಜನಪ್ರಿಯ ರಿಯಲ್‌ಮಿ (Realme) ಸಂಸ್ಥೆಯು ಇದೀಗ ಬರೋಬ್ಬರಿ 240W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ನೀಡಲು ಮುಂದಾಗಿದ್ದು, ಈ ಮೂಲಕ ಫೋನ್‌ ಚಾರ್ಜಿಂಗ್‌ ವಲಯದಲ್ಲಿ ಹೊಸ ಕ್ರಾಂತಿ ಮಾಡಲು ಸಜ್ಜಾಗಿದೆ.

ಕೆಲವೇ ನಿಮಿಷಗಳಲ್ಲಿ ಫೋನ್‌ ಬ್ಯಾಟರಿ ಫುಲ್‌!..ರಿಯಲ್‌ಮಿಯಿಂದ ಹೊಸ 240W ಕ್ರಾಂತಿ!

ಹೌದು, ರಿಯಲ್‌ಮಿ (Realme) ಕಂಪನಿಯು ತನ್ನ ಮುಂದಿನ ಪ್ರಮುಖ ಫೋನಿನಲ್ಲಿ 240W ಚಾರ್ಜಿಂಗ್ ವೇಗದ ಬೆಂಬಲದೊಂದಿಗೆ ಟೈಪ್-ಸಿ ಮಾದರಿಯಲ್ಲಿ ತರಲು ಯೋಜಿಸುತ್ತಿದೆ. ಇದು ಜಾಗತಿಕವಾಗಿ ಇಷ್ಟು ವೇಗದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡುವ ಮೊದಲ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗ ಗುರುತಿಸಿಕೊಳ್ಳಲಿದೆ. ಜೊತೆಗೆ, 240W ಚಾರ್ಜಿಂಗ್ ಆರ್ಕಿಟೆಕ್ಚರ್ ಕಡಿಮೆ ವೋಲ್ಟೇಜ್ ಚಾರ್ಜಿಂಗ್ ಪರಿಹಾರದೊಂದಿಗೆ ಬರುವ ಸಾಧ್ಯತೆಯಿದೆ.

ಇನ್ನು 240W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಫೂರ್ಣ ಬ್ಯಾಟರಿ ಭರ್ತಿ ಮಾಡಲು ಕೇವಲ 9 ನಿಮಿಷಗಳಲ್ಲಿ ಚಾರ್ಜಿಂಗ್ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಕೆಲವು ವರದಿಗಳು ಹೇಳುತ್ತವೆ.ರಿಯಲ್‌ಮಿ ಸಂಸ್ಥೆಯು, ಈ ಮೊದಲು ರಿಯಲ್‌ಮಿ GT ನಿಯೋ 3 ಫೋನ್‌ನೊಂದಿಗೆ 2021 ಮತ್ತು 2022 ರಲ್ಲಿ 67W ಮತ್ತು 150W ಚಾರ್ಜಿಂಗ್ ಬೆಂಬಲವನ್ನು ಲಭ್ಯ ಮಾಡಿತ್ತು. ಇದು 0 ರಿಂದ 100% ವರೆಗೆ 20 ನಿಮಿಷಗಳ ಚಾರ್ಜಿಂಗ್ ಸಮಯವನ್ನು ತೆಗೆದುಕೊಳ್ಳುತ್ತದೆ.

ಕೆಲವೇ ನಿಮಿಷಗಳಲ್ಲಿ ಫೋನ್‌ ಬ್ಯಾಟರಿ ಫುಲ್‌!..ರಿಯಲ್‌ಮಿಯಿಂದ ಹೊಸ 240W ಕ್ರಾಂತಿ!

ಆದ್ರೆ, ಇದೀಗ 240W ವೇಗದ ಚಾರ್ಜಿಂಗ್ ಸಾಮರ್ಥ್ಯ ಸೌಲಭ್ಯವು ರಿಯಲ್‌ಮಿ GT ನಿಯೋ 5 ಪ್ರೊ ಸ್ಮಾರ್ಟ್‌ಫೋನ್‌ನೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದೆ. ಇನ್ನು ಈ ವರ್ಷದ ಫೆಬ್ರವರಿಯಲ್ಲಿ ರಿಯಲ್‌ಮಿ GT ನಿಯೋ 5 ಪ್ರೊ ಫೋನ್ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಹಾಗಾದರೆ ರಿಯಲ್‌ಮಿ GT ನಿಯೋ 5 ಫೋನಿನ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ GT ನಿಯೋ 5 ನಿರೀಕ್ಷಿತ ಫೀಚರ್ಸ್‌
ರಿಯಲ್‌ಮಿ GT ನಿಯೋ 5 ಪ್ರೊ 240W ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಆದರೆ ರಿಯಲ್‌ಮಿ GT 5 ಫೋನ್ 150W ವೇಗದ ಚಾರ್ಜಿಂಗ್ ಅನ್ನು ಹೊಂದಿರಬಹುದು. ಜೊತೆಗೆ, ಹೈ-ಎಂಡ್ ಮಾದರಿಯು 4,600mAh ಬ್ಯಾಟರಿಯನ್ನು ಹೊಂದುವ ನಿರೀಕ್ಷೆಯಿದೆ. ರಿಯಲ್‌ಮಿ GT ನಿಯೋ 5 ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಹೊಂದಿರಲಿದ್ದು, ಸೋನಿ IMX890 ಮುಖ್ಯ ಕ್ಯಾಮೆರಾ ಸೆನ್ಸಾರ್ ಹೊಂದಿರುತ್ತದೆ ಎಂದು ಸೂಚಿಸುತ್ತದೆ.

ಕೆಲವೇ ನಿಮಿಷಗಳಲ್ಲಿ ಫೋನ್‌ ಬ್ಯಾಟರಿ ಫುಲ್‌!..ರಿಯಲ್‌ಮಿಯಿಂದ ಹೊಸ 240W ಕ್ರಾಂತಿ!

ಹಾಗೆಯೇ, ಈ ಫೋನ್ 6.7 ಇಂಚಿನ OLED ಡಿಸ್‌ಪ್ಲೇ ಜೊತೆಗೆ 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರಕ್ಕೆ ಬೆಂಬಲವನ್ನು ಹೊಂದಿರುತ್ತದೆ. ಜೊತೆಗೆ, ಸ್ಕ್ರೀನ್‌ 2160Hz PWM ಮಬ್ಬಾಗಿಸುವಿಕೆ, ಪ್ಲಾಸ್ಟಿಕ್ ಫ್ರೇಮ್ ಮತ್ತು RBG ಲೈಟಿಂಗ್ ಅನ್ನು ಬೆಂಬಲಿಸುವ ಸಾಧ್ಯತೆಯಿದೆ. ಜೊತೆಗೆ ಇದು 12GB RAM ಮತ್ತು 256GB ಅಥವಾ 512GB ಆಂತರಿಕ ಸಂಗ್ರಹಣೆಯ ಆಯ್ಕೆಯನ್ನು ಪಡೆದಿರುವ ಸಾಧ್ಯತೆಗಳಿದ್ದು, ಆಂಡ್ರಾಯ್ಡ್‌ 13 ಓಎಸ್ ಸಪೋರ್ಟ್‌ ಪಡೆದಿರಲಿದೆ.

ಅಂದಹಾಗೆ ಕಂಪನಿಯು ಇದೇ ಜನವರಿ 9, 2023 ರಂದು ರಿಯಲ್‌ಮಿ 10 4G ಫೋನ್ ಅನ್ನು ಲಾಂಚ್ ಮಾಡಲು ಸಿದ್ಧವಾಗಿದ್ದು, ಇದು ಫ್ಲಿಪ್‌ಕಾರ್ಟ್‌ ನಲ್ಲಿ ಲಭ್ಯವಿರುತ್ತದೆ. ಮೀಡಿಯಾ ಟೆಕ್‌ ಹಿಲಿಯೊ G99 SoC ಪ್ರೊಸೆಸರ್‌ ಅನ್ನು ಹೊಂದಿರುತ್ತದೆ. ಇದಲ್ಲದೆ, ಈ ಫೋನ್ 5000mAh ಬ್ಯಾಟರಿ, 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು 90Hz ಸೂಪರ್ AMOLED ಡಿಸ್ಪ್ಲೇ ಒಳಗೊಂಡಿರಲಿದೆ. ಇದು ಮುಂಭಾಗದಲ್ಲಿ 16ಎಂಪಿ ಕ್ಯಾಮೆರಾ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿರುತ್ತದೆ.

Best Mobiles in India

English summary
Realme To Bring 240W Fast Charging Support In Upcoming Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X