ಅಗ್ಗದ ಬೆಲೆಗೆ ಮತ್ತೊಂದು ಫೋನ್‌ ಲಾಂಚ್ ಮಾಡಲಿದೆ ಶಿಯೋಮಿ!..ಇಲ್ಲಿದೆ ಮಾಹಿತಿ!

|

ಶಿಯೋಮಿ ಸಂಸ್ಥೆಯು ಇತ್ತೀಚಿಗಷ್ಟೆ ನೂತನವಾಗಿ ರೆಡ್ಮಿ A1 (Redmi A1) ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಎಂಟ್ರಿ ಲೆವೆಲ್ ಫೋನ್‌ ಪ್ರಿಯರನ್ನು ಆಕರ್ಷಿಸಿದೆ. ಈ ಫೋನಿನ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೆ ಹೊಸದಾಗಿ ರೆಡ್ಮಿ A ಸರಣಿಯಲ್ಲಿ ಬಜೆಟ್‌ ದರದ ಸ್ಮಾರ್ಟ್‌ಫೋನ್‌ ಪರಿಚಯಿಸಲು ಮುಂದಾಗಿದೆ. ಬರಲಿರುವ ಫೋನ್ ಕೆಲವೊಂದು ಕುತೂಹಲಗಳನ್ನು ಹುಟ್ಟುಹಾಕಿದೆ.

ಹೊಸದಾಗಿ

ಹೌದು, ಶಿಯೋಮಿ ಕಂಪನಿಯು ಹೊಸದಾಗಿ ರೆಡ್ಮಿ A1+ (Redmi A1+) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ತಯಾರಾಗುತ್ತಿದೆ. ಇನ್ನು ಮುಂಬರಲಿರುವ ಈ ನೂತನ ಫೋನ್ ಭಾರತದಲ್ಲಿ ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಲಾಗಿದೆ. ಈ ಹಿಂದಿನ ಆವೃತ್ತಿಗಿಂತ ಕೆಲವೊಂದು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ A1+

ಶಿಯೋಮಿ ತನ್ನ ರೆಡ್ಮಿ A1+ ಅನ್ನು ಅಕ್ಟೋಬರ್ 14 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದೆ. ಅಂದಹಾಗೆ ಈ ಫೋನ್‌ನ ಬೆಲೆ 10,000ರೂ, ಕ್ಕಿಂತ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಂಸ್ಥೆಯು ರೆಡ್ಮಿ A1 ಫೋನ್ 6,499ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಬಿಡುಗಡೆ ಮಾಡಿದೆ. ಈ ಆಧಾರದ ಮೇಲೆ ಅಂದಾಜಿಸುವುದಾದರೆ, ರೆಡ್ಮಿ A1 ವೇರಿಯಂಟ್‌ ಸುಮಾರು 6,999ರೂ ರಿಂದ 7,499ರೂ. ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.

ಫಿಂಗರ್‌ಪ್ರಿಂಟ್

ಇನ್ನು ರೆಡ್ಮಿ A1 ಮತ್ತು ರೆಡ್ಮಿ A1+ ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಹಿಂಭಾಗದಲ್ಲಿನ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಗಿದೆ. ರೆಡ್ಮಿ A1+ ಫೋನ್ ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ರೆಡ್ಮಿ A1+ ಸ್ಕ್ರೀನ್‌ ಮೇಲ್ಭಾಗದಲ್ಲಿ ವಾಟರ್-ಡ್ರಾಪ್ ಮಾದರಿಯನ್ನು ಹೊಂದಿರಲಿದೆ. ಹಾಗೆಯೇ ಈ ನೂತನ ಫೋನ್ ಎಲ್ಇಡಿ ಫ್ಲ್ಯಾಶ್‌ ರಚನೆಯೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ.

ಅನುಪಾತವನ್ನು

ರೆಡ್ಮಿ A1+ ಸ್ಮಾರ್ಟ್‌ಫೋನ್ 1600 x 720 ಪಿಕ್ಸೆಲ್‌ಗಳ ಹೆಚ್‌ಡಿ+ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.52 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು 60Hz ರೀಫ್ರೆಶ್‌ ರೇಟ್‌ ಅನ್ನು ಹೊಂದಿದ್ದು, 20:9 ಆಕಾರ ಅನುಪಾತವನ್ನು ಹೊಂದಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಹಿಲಿಯೋ A22 (MediaTek Helio A22 SoC) ಪ್ರೊಸೆಸರ್‌ ಅನ್ನು ಒಳಗೊಂಡಿರಲಿದೆ.

ಆಂಡ್ರಾಯ್ಡ್‌

ಹಾಗೆಯೇ ಪ್ರೊಸೆಸರ್‌ಗೆ ಪೂರಕವಾಗಿ ಇದು ಆಂಡ್ರಾಯ್ಡ್‌ 12 (Android 12 Go Edition) ಓಎಸ್‌ ಸಪೋರ್ಟ್‌ ಪಡೆದಿರಲಿದೆ. ಜೊತೆಗೆ ರೆಡ್ಮಿ A1+ ಫೋನ್ 3GB RAM ಮತ್ತು 32GB ಹಾಗೂ 3GB RAM ಮತ್ತು 64GB ಆಂತರಿಕ ಸ್ಟೋರೇಜ್‌ ವೇರಿಯಂಟ್‌ ಮಾದರಿಗಳ ಆಯ್ಕೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.

5000mAh

ಈ ಫೋನ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿರಲಿದೆ. ಅದರಲ್ಲಿ 8 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಹೊಂದಿರಲಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಡೆಪ್ತ್ ಸೆನ್ಸಾರ್ ಹೊಂದಿರಲಿದೆ. ಇದರೊಂದಿಗೆ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್‌ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ. ಇನ್ನು ಈ ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರಲಿದ್ದು, ಅದಕ್ಕೆ ಪೂರಕವಾಗಿ 10W ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ.

ರೆಡ್ಮಿ A1 ಬೆಲೆ

ರೆಡ್ಮಿ A1 ಬೆಲೆ

ಇತ್ತೀಚಿಗೆ ರೆಡ್ಮಿ A1 ಸ್ಮಾರ್ಟ್‌ಫೋನ್‌ ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಬಿಡುಗಡೆ ಆಗಿದೆ. ಇದು 2 GB RAM + 32 GB ಸ್ಟೋರೇಜ್‌ನ ಸಿಂಗಲ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಇದರ ಬೆಲೆಯು 6,499 ರೂ. ಗಳಾಗಿವೆ. ಹಾಗೆಯೇ ಇದು ಬ್ಲ್ಯಾಕ್‌, ಗ್ರೀನ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Redmi A1+ Expected to launch in India on October 14: Expected Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X