ಸೆಪ್ಟೆಂಬರ್ 6 ರಂದು ಭಾರತಕ್ಕೆ ಎಂಟ್ರಿ ಕೊಡಲಿದೆ ಅಗ್ಗದ ರೆಡ್ಮಿ ಸ್ಮಾರ್ಟ್‌ಫೋನ್‌!

|

ಶಿಯೋಮಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಅಗ್ಗದ ದರದ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಸಂಸ್ಥೆಯು ಇದೀಗ ಭಾರತದಲ್ಲಿ ನೂತನವಾಗಿ ರೆಡ್ಮಿ A1 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಅಧಿಕೃತವಾಗಿ ಸಜ್ಜಾಗಿದೆ. ಸಂಸ್ಥೆಯು ರೆಡ್ಮಿ A1 ಫೋನ್‌ ಬಗ್ಗೆ ಟ್ವೀಟ್ ಮಾಡಿದ್ದು ಜೊತೆಗೆ ಪೋಸ್ಟರ್ ಅನ್ನು ಹಂಚಿಕೊಂಡಿದೆ.

ಭಾರತದಲ್ಲಿ

ಹೌದು, ಶಿಯೋಮಿ ಸಂಸ್ಥೆಯು ಭಾರತದಲ್ಲಿ ರೆಡ್ಮಿ A1 ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದಲಿದೆ. ಇದೇ ಸೆಪ್ಟೆಂಬರ್ 6, 2022 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲಾಂಚ್ ಮಾಡಲಿದೆ. ಇನ್ನು ಈ ಫೋನ್ ಎಂಟ್ರಿ ಲೆವೆಲ್ ಮಾದರಿಯಲ್ಲಿ ಇರಲಿದ್ದು, ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳಲಿದೆ. ಅದೇ ದಿನ ರೆಡ್ಮಿ 11 ಪ್ರೈಮ್‌ ಮತ್ತು ರೆಡ್ಮಿ 11 ಪ್ರೈಮ್‌ 5G ಫೋನ್‌ಗಳನ್ನು ಸಂಸ್ಥೆಯು ದೇಶದಲ್ಲಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ರೆಡ್ಮಿ A1 ನಿರೀಕ್ಷಿತ ಫೀಚರ್ಸ್‌

ರೆಡ್ಮಿ A1 ನಿರೀಕ್ಷಿತ ಫೀಚರ್ಸ್‌

ರೆಡ್ಮಿ A1 ಸ್ಮಾರ್ಟ್‌ಫೋನ್‌ (Redmi A1) ಮೀಡಿಯಾ ಟೆಕ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಲಾಂಚ್‌ ಮೈಕ್ರೋ ಸೈಟ್ ತಿಳಿಸುತ್ತದೆ. ಶಿಯೋಮಿ ನಿಖರವಾದ ಪ್ರೊಸೆಸರ್ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಮೀಡಿಯಾ ಟೆಕ್ ಹಿಲಿಯೋ A22 ಪ್ರೊಸೆಸರ್‌ ಪಡೆದಿರುವ ಸಾಧ್ಯತೆಗಳಿವೆ. ಹಾಗೆಯೇ ರೆಡ್ಮಿ A1 ಫೋನ್‌ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ ಎಂದು ಲಾಂಚ್ ಮೈಕ್ರೋ-ಸೈಟ್ ಬಹಿರಂಗಪಡಿಸುತ್ತದೆ. ಅವು ಕ್ರಮವಾಗಿ ಹಸಿರು, ನೀಲಿ ಮತ್ತು ಕಪ್ಪು ಎನ್ನಲಾಗಿದೆ.

ಡ್ಯುಯಲ್

ರೆಡ್ಮಿ A1 ಸ್ಮಾರ್ಟ್‌ಫೋನ್‌ 5000mAh ಬ್ಯಾಟರಿ ಬ್ಯಾಕ್‌ಅಪ್‌ ನೊಂದಿಗೆ ಬರಲಿದೆ ಎಂದು ಶಿಯೋಮಿ ದೃಢಪಡಿಸಿದೆ. ಸ್ಮಾರ್ಟ್‌ಫೋನ್‌ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಷ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಸಹ ನೀಡುತ್ತದೆ ಎಂದು ದೃಢಪಡಿಸಲಾಗಿದೆ. ಈ ಫೋನ್ ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು ಇದು ಹೆಚ್‌ಡಿ+ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಫೋನ್‌ 3GB RAM ಸಾಮರ್ಥ್ಯದ ಆಯ್ಕೆಯನ್ನು ಪಡೆದಿರಲಿದೆ ಎನ್ನಲಾಗಿದೆ.

ಕ್ಯಾಮರಾ

ಮೈಕ್ರೋಸೈಟ್ ಪ್ರಕಾರ, ರೆಡ್ಮಿ A1 ಭಿನ್ನ ರಚನೆಯ ಹಿಂಭಾಗದ ಫಲಕವನ್ನು ಹೊಂದಿದೆ. ಇದು ಎಲ್ಇಡಿ ಫ್ಲ್ಯಾಷ್ನೊಂದಿಗೆ ಜೋಡಿಸಲಾದ ಒಂದೇ ಸಂವೇದಕವನ್ನು ಹೊಂದಿರುವ ಚದರ ಕ್ಯಾಮರಾ ಮಾಡ್ಯೂಲ್ ಅನ್ನು ಹೊಂದಿದೆ. ಈ ಫೋನ್ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ ಎಂದು ತೋರುತ್ತದೆ. SIM ಕಾರ್ಡ್ ಟ್ರೇ ಎಡಭಾಗದಲ್ಲಿದೆ ಹಾಗೆಯೇ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಭಾಗದಲ್ಲಿವೆ. ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇಲ್ಲ ಮತ್ತು ಇದು ಪವರ್ ಬಟನ್‌ನೊಂದಿಗೆ ಎಂಬೆಡ್ ಆಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ರೆಡ್ಮಿ 11 ಪ್ರೈಮ್ 5G ನಿರೀಕ್ಷಿತ ಫೀಚರ್ಸ್‌

ರೆಡ್ಮಿ 11 ಪ್ರೈಮ್ 5G ನಿರೀಕ್ಷಿತ ಫೀಚರ್ಸ್‌

ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್‌ಫೋನ್‌ ಸೆ. 6 ರಂದು ಲಾಂಚ್ ಆಗಲಿದೆ. ಈ ಫೋನ್ ಅಮೆಜಾನ್‌ ಮೈಕ್ರೋಸೈಟ್‌ನಲ್ಲಿ ಮೀಡಿಯಾ ಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ಅನ್ನು ಪ್ಯಾಕ್ ಮಾಡುತ್ತದೆ ಎಂದು ಖಚಿತಪಡಿಸುತ್ತದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿರಲಿದೆ. ಜೊತೆಗೆ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ವಾಟರ್‌ಡ್ರಾಪ್-ಶೈಲಿಯ ನಾಚ್ಡ್ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ರೆಡ್‌ಮಿ ಟೀಸರ್‌ನಲ್ಲಿ ಹೇಳಲಾಗಿದೆ.

Best Mobiles in India

English summary
Redmi A1 India Arrival has been Confirmed: Know These Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X