ಭಾರತದಲ್ಲಿ ರೆಡ್ಮಿ A1+ ಸ್ಮಾರ್ಟ್‌ಫೋನ್‌ ಲಾಂಚ್!..7,000ರೂ. ಒಳಗೆ ಲಭ್ಯ!

|

ಶಿಯೋಮಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ರೆಡ್ಮಿ A1+ (Redmi A1+) ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ರೆಡ್ಮಿ A1 ಸ್ಮಾರ್ಟ್‌ಫೋನಿನ ಅಪ್‌ಗ್ರೇಡ್‌ ಆವೃತ್ತಿಯಾಗಿದ್ದು, ಇದು ಸಹ ಅಗ್ಗದ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೋ A22 SoC ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಜೊತೆಗೆ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಕ್ಯಾಮೆರಾ

ಹೌದು, ಶಿಯೋಮಿ ಕಂಪೆನಿ ತನ್ನ ನೂತನ ರೆಡ್ಮಿ A1+ (Redmi A1+) ಸ್ಮಾರ್ಟ್‌ಫೋನ್‌ ಅನ್ನು ಇದೀಗ ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್‌ AI ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 8 ಮೆಗಾ ಪಿಕ್ಸಲ್ ಸೆನ್ಸಾರ್‌ ನಲ್ಲಿದೆ. ಈ ಫೋನಿನ ಡಿಸ್‌ಪ್ಲೇಯು 400 nits ಬ್ರೈಟ್ನೆಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಬ್ಲ್ಯಾಕ್‌, ಗ್ರೀನ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆಯನ್ನು ಈ ಫೋನ್‌ ಪಡೆದಿದೆ.

ವೇರಿಯಂಟ್‌

ಇನ್ನು ಈ ಫೋನ್‌ ಎರಡು ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 2GB RAM + 32 GB ಮತ್ತು 3GB + 32GB ಆಗಿವೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಆಯ್ಕೆಯನ್ನು ಇದು ಪಡೆದಿದೆ. ಈ ಫೋನಿನ ಆರಂಭಿಕ ಬೆಲೆಯು 6,999 ರೂ. ಆಗಿದ್ದು, ಅಕ್ಟೋಬರ್ 17 ರಿಂದ ಮಿ.ಕಾಮ್‌, ಮಿ.ಹೋಮ್‌, ಅಮೆಜಾನ್‌ ಇ ಕಾಮರ್ಸ್‌ ತಾಣ ಹಾಗೂ ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೇ ರೆಡ್ಮಿ A1+ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ರೆಡ್ಮಿ A1+ ಸ್ಮಾರ್ಟ್‌ಫೋನ್‌ 1600 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ ಫುಲ್‌ ಹೆಚ್‌ಡಿ + ಸ್ಕ್ರ್ಯಾಚ್‌ ರೆಸಿಸ್ಟೆನ್ಸ್‌ ಮಾದಿರಯ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 20:9 ರಚನೆಯ ಅನುಪಾತವನ್ನು ಹೊಂದಿದ್ದು, 400 nits ಬ್ರೈಟ್ನೆಸ್‌ ಸಾಮರ್ಥ್ಯ ಪಡೆದಿದೆ. ಡಿಸ್ಪ್ಲೇ ಪ್ಯಾನೆಲ್ ಮುಂಭಾಗದ ಸೆಲ್ಫಿ ಶೂಟರ್ ಅನ್ನು ವಾಟರ್‌ಡ್ರಾಪ್ ನಾಚ್‌ನೊಳಗೆ ಹೊಂದಿದೆ.

ಪ್ರೊಸೆಸರ್‌ ಪವರ್ ಯಾವುದು

ಪ್ರೊಸೆಸರ್‌ ಪವರ್ ಯಾವುದು

ರೆಡ್ಮಿ A1+ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೋ A22 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಗೋ ಎಡಿಷನ್ ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಫೋನ್ ಎರಡು ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 2GB RAM + 32 GB ಮತ್ತು 3GB + 32GB ಆಗಿವೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಿಸಬಹುದು.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್

ಡ್ಯುಯಲ್ ಕ್ಯಾಮೆರಾ ಸೆನ್ಸಾರ್

ರೆಡ್ಮಿ A1+ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಸೆನ್ಸಾರ್ ಒಳಗೊಂಡಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಾಗಿ ಈ ಫೋನ್ 8 ಮೆಗಾ ಪಿಕ್ಸಲ್‌ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿ ಇವೆ.

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ

ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ

ರೆಡ್ಮಿ A1+ ಸ್ಮಾರ್ಟ್‌ಫೋನ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದಿದೆ. ಇದು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದೆ. ಹ್ಯಾಂಡ್‌ಸೆಟ್ ಮೀಸಲಾದ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ಮ ತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಸಹ ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರೆಡ್ಮಿ A1+ ಸ್ಮಾರ್ಟ್‌ಫೋನ್‌ 2GB RAM + 32 GB ವೇರಿಯಂಟ್‌ ಬೆಲೆಯು 6,999 ರೂ. ಆಗಿದೆ, ಅದೇ ರೀತಿ 3GB + 32GB ವೇರಿಯಂಟ್‌ ಬೆಲೆಯು 7,999ರೂ. ಆಗಿದೆ. ಹಾಗೆಯೇ ಇದು ಬ್ಲ್ಯಾಕ್‌, ಗ್ರೀನ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಫೋನ್‌ ಇದೇ ಅಕ್ಟೋಬರ್ 17 ರಿಂದ ಮಿ.ಕಾಮ್‌, ಮಿ.ಹೋಮ್‌, ಅಮೆಜಾನ್‌ ಇ ಕಾಮರ್ಸ್‌ ತಾಣ ಹಾಗೂ ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Redmi A1+ With dual rear camera Launched in India: Price Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X