ರೆಡ್ಮಿ ಬಡ್ಸ್‌ 4 ಲೈಟ್‌ ಅನಾವರಣ; ಆಕರ್ಷಕ ಕಲರ್‌ನಲ್ಲಿ ಲಭ್ಯ!

|

ರೆಡ್ಮಿ ಕಂಪೆನಿಯ ಫೋನ್‌ಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಮೇಲೆ ತನ್ನದೇ ಆದ ಪ್ರಭಾವ ಬೀರಿವೆ. ಅದರಲ್ಲೂ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವುದರಿಂದ ಹೆಚ್ಚಾಗಿ ಈ ಕಂಪೆನಿಯ ಫೋನ್‌ಗಳ ಕಡೆ ಗ್ರಾಹಕರು ಒಲವು ತೋರುತ್ತಾರೆ. ಅದರಂತೆ ಈ ಕಂಪೆನಿಯಿಂದ ಈಗಾಗಲೇ ವಿವಿಧ ಫೀಚರ್ಸ್‌ ಆಯ್ಕೆ ಇರುವ ಇಯರ್‌ಬಡ್ಸ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಈ ಬಡ್ಸ್‌ಗಳ ಸಾಲಿಗೆ ಹೊಸ ಇಯರ್‌ಬಡ್ಸ್‌ವೊಂದು ಸೇರಿಕೊಳ್ಳಲಿದೆ.

ಫಿಟ್‌ನೆಸ್

ಹೌದು, ಫಿಟ್‌ನೆಸ್ ಟ್ರ್ಯಾಕರ್ ರೆಡ್ಮಿ ಬ್ಯಾಂಡ್ 2 ಅನಾವರಣದ ಜೊತೆಗೆ ಈ ಹೊಸ ರೆಡ್ಮಿ ಬಡ್ಸ್‌ 4 ಲೈಟ್‌ (Redmi Buds 4 Lite ) ಅನ್ನು ಅನಾವರಣ ಮಾಡಲಾಗಿದೆ. ಈ ಇಯರ್‌ಬಡ್ಸ್‌ 12mm ಡ್ರೈವರ್‌ ಆಯ್ಕೆ ಹೊಂದಿದ್ದು, ಬ್ಲೂಟೂತ್ ಆವೃತ್ತಿ 5.3 ಅನ್ನು ಬೆಂಬಲಿಸುತ್ತವೆ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಏನು? ಹಾಗೂ ಈ ಇಯರ್‌ಬಡ್ಸ್‌ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ರೆಡ್ಮಿ ಬಡ್ಸ್‌ 4 ಲೈಟ್‌ 12mmನ ದೊಡ್ಡ ಡ್ರೈವರ್‌ಗಳ ಆಯ್ಕೆ ಪಡೆದುಕೊಂಡಿದ್ದು, ನಿಮ್ಮನ್ನು ತಲ್ಲೀನವಾಗಿಸುವ ಸೌಂಡ್‌ ನೀಡಲಿದೆ. ಹಾಗೆಯೆ ವಾಯರ್‌ಲೆಸ್‌ ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.3 ನಲ್ಲಿ ಕೆಲಸ ಮಾಡಲಿದ್ದು, 10m ಶ್ರೇಣಿಯಲ್ಲಿ ಕೆಲಸ ಮಾಡಲಿದೆ. ಇದರೊಂದಿಗೆ IP54 ರೇಟಿಂಗ್‌ ಹೊಂದಿರುವುದು ವಿಶೇಷ.

ಇಯರ್‌ಬಡ್ಸ್‌

ಇಯರ್‌ಬಡ್ಸ್‌

ಹಾಗೆಯೇ ಈ ಇಯರ್‌ಬಡ್ಸ್‌ ಕರೆ ಸಂದರ್ಭದಲ್ಲಿ ಇತರೆ ಶಬ್ಧದ ಅಡೆತಡೆ ತಡೆದು ಉತ್ತಮ ಕರೆ ಅನುಭವ ನೀಡಲಿದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಬಡ್ಸ್‌ಗಳು 3.9 ಗ್ರಾಂ. ತೂಕ ಹೊಂದಿದ್ದು, ಕಿವಿಯಲ್ಲಿ ಭಾರ ಎನಿಸುವ ಅನುಭವ ಉಂಟಾಗುವುದಿಲ್ಲ. ಇದಕ್ಕಾಗಿಯೇ ಆಫ್‌ ಇಯರ್‌ ಶೈಲಿಯನ್ನೂ ಸಹ ಪಡೆದುಕೊಂಡಿವೆ. ಇದರೊಂದಿಗೆ ಕರೆಗಳು ಮತ್ತು ಸಂಗೀತಕ್ಕಾಗಿ ಟಚ್‌ ಕಂಟ್ರೋಲ್‌ ಫೀಚರ್ಸ್‌ ಇದರಲ್ಲಿದ್ದು, ಶಿಯೋಮಿ ಡಿವೈಸ್‌ಗಳಿಗೆ ತ್ವರಿತ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಬಡ್ಸ್‌ಗಳು ಒಂದು ಪೂರ್ಣ ಚಾರ್ಜ್‌ನಲ್ಲಿ 5 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ನೀಡಲಿವೆ. ಹಾಗೆಯೇ ಚಾರ್ಜಿಂಗ್‌ ಕೇಸ್‌ನ ಬ್ಯಾಟರಿ ಸಾಮರ್ಥ್ಯ ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 20 ಗಂಟೆಗಳ ವರೆಗೆ ಇರಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ರೆಡ್ಮಿ ಬಡ್ಸ್‌ 4 ಲೈಟ್‌ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಾಂಚ್‌ ಆಗಿದ್ದು, ಇದಕ್ಕೆ ಅಲ್ಲಿ 139 ಯುವಾನ್ (1,650ರೂ. ಗಳ) ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ ಇಯರ್‌ಬಡ್‌ಗಳು ಸನ್ನಿ ವೈಟ್, ಮಿಡ್‌ನೈಟ್ ಬ್ಲಾಕ್, ಸನ್‌ಸೆಟ್ ಆರೆಂಜ್ ಮತ್ತು ಟ್ರೆಂಡ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತವೆ. ಈ ಬಣ್ಣಗಳು ಭಾರತದ ಧ್ವಜದ ಬಣ್ಣಕ್ಕೆ ಹೋಲಿಕೆಯಾಗಲಿದ್ದು, ಖಂಡಿತವಾಗಿಯೂ ಭಾರತೀಯರಿಗೆ ಇಷ್ಟವಾಗದೆ ಇರದು. ಇದರೊಂದಿಗೆ ಇಯರ್‌ಬಡ್‌ಗಳನ್ನು ಜಾಗತಿಕವಾಗಿ ಯಾವಾಗ ಲಾಂಚ್‌ ಮಾಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ರೆಡ್ಮಿ ನೋಟ್ 12 ಪ್ರೊ ಸ್ಪೀಡ್ ಆವೃತ್ತಿ ಲಾಂಚ್‌

ರೆಡ್ಮಿ ನೋಟ್ 12 ಪ್ರೊ ಸ್ಪೀಡ್ ಆವೃತ್ತಿ ಲಾಂಚ್‌

ರೆಡ್ಮಿ ನೋಟ್ ಪ್ರೊ ಸ್ಪೀಡ್ ಆವೃತ್ತಿಯ ಸೇರ್ಪಡೆಯೊಂದಿಗೆ ರೆಡ್ಮಿ ತನ್ನ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸಿಕೊಂಡಿದೆ. ಇನ್ನು ಈ ಹೊಸ ರೆಡ್ಮಿ ನೋಟ್‌12 ಪ್ರೊ ಸ್ಪೀಡ್ ಆವೃತ್ತಿಯು 6.67 ಇಂಚಿನ FHD+ OLED ಡಿಸ್‌ಪ್ಲೆ ಹೊಂದಿದ್ದು, ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಇದರಲ್ಲಿದ್ದು, ಆಂಡ್ರಾಯ್ಡ್ 13 ಆಧಾರಿತ MIUI 14 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.

Best Mobiles in India

English summary
Redmi Buds 4 Lite true wireless earbuds launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X