ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಗೂಗಲ್ ಹೂಡಿಕೆ; ಡಿಜಿಟಲ್‌ ಇಂಡಿಯಾದ ಕನಸಿಗೆ ಬಲ!

|

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರು ಸಂಸ್ಥೆಯ 43ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಬುಧವಾರ ಮಾತನಾಡಿದರು. ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಕಾರ್ಯತಂತ್ರದ ಹೂಡಿಕೆದಾರರಾಗಿ ಗೂಗಲ್‌ ಅನ್ನು ಅಂಬಾನಿ ಸ್ವಾಗತಿಸಿದರು. ಎರಡೂ ಸಂಸ್ಥೆಗಳು ಬದ್ಧಪಡಿಸುವ ಪಾಲುದಾರಿಕೆ ಹಾಗೂ ಒಪ್ಪಂದಕ್ಕೆ ಸಹಿಹಾಕಿದ್ದು ಅದರ ಅನ್ವಯ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 7.7% ಪಾಲಿಗಾಗಿ ಗೂಗಲ್ 33,737 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಹೂಡಿಕೆ ಮಾಡಲಿದೆ.

ಪ್ರಮುಖಾಂಶಗಳು ಇಲ್ಲಿವೆ:

ಪ್ರಮುಖಾಂಶಗಳು ಇಲ್ಲಿವೆ:

ಗೂಗಲ್ ಹಾಗೂ ಜಿಯೋ ಪಾಲುದಾರಿಕೆಯಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್ ಅನ್ನು ನಿರ್ಮಿಸಲಾಗುವುದು, ಮತ್ತು ಜಿಯೋ-ಗೂಗಲ್‌ಗಳ ಈ ಪಾಲುದಾರಿಕೆಯು ಭಾರತವನ್ನು 2ಜಿ-ಮುಕ್ತವನ್ನಾಗಿಸಲು ನಿರ್ಧರಿಸಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಭಾರತವು 5ಜಿ ಯುಗದ ಹೊಸ್ತಿಲಿನಲ್ಲಿ ನಿಂತಿರುವುದರಿಂದ, ಪ್ರಸ್ತುತ 2ಜಿ ಫೀಚರ್ ಫೋನ್ ಬಳಸುತ್ತಿರುವ 350 ದಶಲಕ್ಷ ಭಾರತೀಯರನ್ನು ಕೈಗೆಟುಕುವ ಸ್ಮಾರ್ಟ್ ಫೋನ್‌ಗೆ ಸ್ಥಳಾಂತರಿಸಬೇಕು ಎಂದು ಅವರು ಹೇಳಿದ್ದಾರೆ.

ವರಮಾನ

1,62,936 ಕೋಟಿ ರೂ.ಗಳ ವರಮಾನ ಮತ್ತು 9,654 ಕೋಟಿ ರೂ.ಗಳ ಇಬಿಐಟಿಡಿಎನೊಂದಿಗೆ ರಿಲಯನ್ಸ್ ರಿಟೇಲ್ ಭಾರತದ ಅತಿದೊಡ್ಡ ಮತ್ತು ಅತ್ಯಂತ ಹೆಚ್ಚು ಲಾಭದಾಯಕ ರೀಟೇಲ್ ವ್ಯಾಪಾರವಾಗಿದ್ದು, ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರೀಟೇಲರ್ ಆಗಿದೆ. ಅಲ್ಲದೆ ಅಗ್ರ 100 ಜಾಗತಿಕ ರೀಟೇಲರ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದಿರುವ ಏಕೈಕ ಭಾರತೀಯ ಸಂಸ್ಥೆಯಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಲಕ್ಷಾಂತರ ಭಾರತೀಯ ಸಣ್ಣ ವ್ಯಾಪಾರಿಗಳಿಗೆ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಮತ್ತು ಗ್ರಾಹಕರು ಕಿರಾಣಿ ಅಂಗಡಿಗಳೊಂದಿಗೆ ತೊಡಕಿಲ್ಲದೆ ವಹಿವಾಟು ನಡೆಸುವುದನ್ನು ಸಾಧ್ಯವಾಗಿಸಲು ಜಿಯೋಮಾರ್ಟ್ ಮತ್ತು ವಾಟ್ಸಾಪ್ ನಿಕಟವಾಗಿ ಕಾರ್ಯನಿರ್ವಹಿಸಲಿವೆ ಎಂದೂ ಅವರು ಹೇಳಿದ್ದಾರೆ.

5ಜಿ

ಸಂಪೂರ್ಣ 5ಜಿ ಪರಿಹಾರವೊಂದನ್ನು ಜಿಯೋ ಹೊಸದಾಗಿ ಅಭಿವೃದ್ಧಿಪಡಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. 5ಜಿ ಸ್ಪೆಕ್ಟ್ರಮ್ ಲಭ್ಯವಾದ ತಕ್ಷಣ ಇದಕ್ಕಾಗಿ ಪ್ರಯೋಗಗಳನ್ನು ಪ್ರಾರಂಭಿಸಲಾಗುತ್ತದೆ. ಮಾಧ್ಯಮ, ಹಣಕಾಸು ಸೇವೆಗಳು, ಹೊಸ ವಾಣಿಜ್ಯ, ಶಿಕ್ಷಣ, ಆರೋಗ್ಯ, ಕೃಷಿ, ಸ್ಮಾರ್ಟ್ ನಗರಗಳು, ಸ್ಮಾರ್ಟ್ ಉತ್ಪಾದನೆ ಮತ್ತು ಸ್ಮಾರ್ಟ್ ಮೊಬಿಲಿಟಿಯಂತಹ ಅನೇಕ ಉದ್ಯಮ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ನಾವು ಸದೃಢ ಪರಿಹಾರಗಳನ್ನು ರಚಿಸಬಹುದು ಎಂದು ಅವರು ಹೇಳಿದ್ದಾರೆ. ಮೂಲ, ನಿರ್ಬಂಧದಲ್ಲಿರುವ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ ಅನ್ನು ಪ್ರಾರಂಭಿಸಲಾಗಿದೆ. ಇದನ್ನು ಬಳಸಿಕೊಂಡು ನಾವು ಅನೇಕ ಪರಿಸರ ವ್ಯವಸ್ಥೆಗಳಲ್ಲಿ - ಮೊದಲು ಭಾರತದಲ್ಲಿ, ಮತ್ತು ನಂತರ ಪ್ರಪಂಚದ ಉಳಿದ ಭಾಗಗಳಲ್ಲಿ - ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಪ್ರದರ್ಶಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಿಫ್ರೆಶ್

ವಿಶ್ವಾಸಾರ್ಹ ಸರಬರಾಜು, ತಾಜಾ ಉತ್ಪನ್ನಗಳು, ಮನೆ ಬಾಗಿಲಿಗೆ ತಲುಪಿಸುವ ಸೇವೆ; ಉತ್ತಮ ಮೌಲ್ಯ ಮತ್ತು ಆಕರ್ಷಕ ಬೆಲೆಗಳು; ಬಹು ಭಾಷೆಗಳಲ್ಲಿ ಧ್ವನಿ-ಏಕೀಕರಣದೊಂದಿಗೆ ಸಹಜ ಅನುಭವವನ್ನು ನೀಡುವ ಸುಲಭವಾದ ಪ್ಲಾಟ್‌ಫಾರ್ಮ್ ಎಂದು ಗ್ರಾಹಕರಿಗೆ ರಿಲಯನ್ಸ್ ಮಾರ್ಟ್‌ನ ವಿಶಿಷ್ಟ ಕೊಡುಗೆಗಳ ಸಾರಾಂಶವನ್ನು ಇಶಾ ಅಂಬಾನಿ ಪರಿಚಯಿಸಿದರು. ಜಿಯೋಮಾರ್ಟ್ ನೀಡುವ ಒಂದು ಅನನ್ಯ ಪರಿಹಾರವೆಂದರೆ ಅಸ್ತಿತ್ವದಲ್ಲಿರುವ ಕಿರಾಣಿ ಮಳಿಗೆಗಳನ್ನು 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅದು ರಿಫ್ರೆಶ್ ಮಾಡಿದ ಸ್ವ-ಸೇವಾ ಮಳಿಗೆಗಳಾಗಿ ಪರಿವರ್ತಿಸುತ್ತದೆ, ಮತ್ತು ಆ ಮೂಲಕ ಅವರ ಗ್ರಾಹಕರ ಅನುಭವವನ್ನೂ ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಅವರು ಹೇಳಿದರು. ಪರಿಚಯಾತ್ಮಕ ಕೊಡುಗೆಯಾಗಿ, ಗ್ರಾಹಕರು ಜಿಯೋಮಾರ್ಟ್‌ನಲ್ಲಿ ಮಾಡುವ ಮೊದಲ ಆರ್ಡರ್‌ನೊಂದಿಗೆ ಉಚಿತ ಕೋವಿಡ್ ಅಗತ್ಯಗಳ ಕಿಟ್ ಅನ್ನು ಪಡೆಯಲಿದ್ದಾರೆಂದು ಅವರು ಹೇಳಿದ್ದಾರೆ.

ಕಾಲಿಂಗ್

ಆರ್‌ಐಎಲ್ ಈ ವಾರದ ಪ್ರಾರಂಭದಲ್ಲಿ ಅಪರಿಮಿತ ಉಚಿತ ಕಾಲಿಂಗ್ ಸೌಲಭ್ಯವಿರುವ ಜಿಯೋಮೀಟ್ ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಅನ್ನು ಪರಿಚಯಿಸಿದ್ದು, ಪ್ರತಿಸ್ಪರ್ಧಿಯಾದ ಜೂಮ್ ವಿರುದ್ಧದ ದರಸಮರವೆಂದೇ ಇದನ್ನು ಪರಿಗಣಿಸಲಾಗುತ್ತಿದೆ. ಭಾರತದ ಮೊದಲ ಕ್ಲೌಡ್-ಆಧಾರಿತ ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಆದ ಜಿಯೋಮೀಟ್ ಅನ್ನು ಪ್ರಾರಂಭದ ಕೆಲವೇ ದಿನಗಳಲ್ಲಿ 5 ದಶಲಕ್ಷ ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ ಎಂದು ಅಂಬಾನಿ ಹೇಳಿದ್ದಾರೆ.

ಟಿವಿ

ದಶಕಗಳಿಂದ, ಟಿವಿ ಕಾರ್ಯಕ್ರಮಗಳು ಯಾವುದೇ ಸಂವಾದಾತ್ಮಕತೆಯಿಲ್ಲದೆ ಹೆಚ್ಚಾಗಿ ಪ್ರಸಾರ-ಅವಲಂಬಿತವಾಗಿವೆ. ಜಿಯೋ ಫೈಬರ್‌ನೊಂದಿಗೆ, ನಾವು ಈ ಅನುಭವವನ್ನು ಮರುರೂಪಿಸಿದ್ದೇವೆ ಮತ್ತು ಟಿವಿಗೆ ಸಂವಾದಾತ್ಮಕತೆಯನ್ನು ತಂದಿದ್ದೇವೆ. ಸೆಟ್ ಟಾಪ್ ಬಾಕ್ಸ್‌ನಲ್ಲಿರುವ ಜಿಯೋ ಆಪ್ ಸ್ಟೋರ್ ಮೂಲಕ, ಮನರಂಜನೆ, ಶಿಕ್ಷಣ, ಆರೋಗ್ಯ, ಅಡುಗೆ, ಯೋಗ, ಗೇಮಿಂಗ್, ಧರ್ಮ ಮತ್ತು ಇನ್ನಿತರ ಹಲವು ಪ್ರಕಾರಗಳಲ್ಲಿ ಇಂಟರ್ನೆಟ್ ಅಪ್ಲಿಕೇಶನ್‌ಗಳನ್ನು ಪಡೆಯಬಹುದು ಎಂದು ಆಕಾಶ್ ಅಂಬಾನಿ ಹೇಳಿದ್ದಾರೆ.

ಜಿಯೋ ಗ್ಲಾಸ್

ಜಿಯೋದ ಇತ್ತೀಚಿನ ನಾವೀನ್ಯವಾದ ಜಿಯೋ ಗ್ಲಾಸ್, ತಂತ್ರಜ್ಞಾನದ ಅತ್ಯಾಧುನಿಕ ಹಂತದಲ್ಲಿದೆ. ಬಳಕೆದಾರರಿಗೆ ನಿಜಕ್ಕೂ ಅರ್ಥಪೂರ್ಣವಾದ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಅತ್ಯುತ್ತಮ-ದರ್ಜೆಯ ಮಿಕ್ಸೆಡ್ ರಿಯಾಲಿಟಿ ಸೇವೆಗಳನ್ನು ಒದಗಿಸುತ್ತದೆ ಎಂದು ಕಿರಣ್ ಥಾಮಸ್ ಹೇಳಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಅರ್ಧ ಶತಕೋಟಿ ಮೊಬೈಲ್ ಗ್ರಾಹಕರು, ಒಂದು ಶತಕೋಟಿ ಸ್ಮಾರ್ಟ್ ಸೆನ್ಸರ್‌ಗಳು ಮತ್ತು 50 ದಶಲಕ್ಷ ಮನೆ ಮತ್ತು ವ್ಯಾಪಾರ ಸಂಸ್ಥೆಗಳನ್ನು ಜಿಯೋ ಸಂಪರ್ಕಿಸಲಿದೆ ಎಂದು ಮುಖೇಶ್ ಅಂಬಾನಿ ಹೇಳಿದರು. ಮೊಬೈಲ್ ಬ್ರಾಡ್‌ಬ್ಯಾಂಡ್, ಜಿಯೋ ಫೈಬರ್, ಜಿಯೋ ಎಂಟರ್‌ಪ್ರೈಸ್ ಬ್ರಾಡ್‌ಬ್ಯಾಂಡ್, ಎಸ್‌ಎಂಇಗಳಿಗಾಗಿ ಬ್ರಾಡ್‌ಬ್ಯಾಂಡ್, ಮತ್ತು ಜಿಯೋನ ನ್ಯಾರೋಬ್ಯಾಂಡ್ ಇಂಟರ್ನೆಟ್-ಆಫ್-ಥಿಂಗ್ಸ್ (ಎನ್‌ಬಿಐಒಟಿ) ಜೊತೆಗೆ ಡಿಜಿಟಲ್ ಸಂಪರ್ಕ ಬೆಳವಣಿಗೆಯ ಐದು ವೇಗವರ್ಧಕಗಳನ್ನು ನಾವು ಸಂಪೂರ್ಣವಾಗಿ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.

Best Mobiles in India

English summary
Mukesh Ambani addresses Reliance Industries' annual shareholder meet: Key points.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X