ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ, ಜಿಯೋ ಕಾರ್ ಕನೆಕ್ಟ್, ಜಿಯೋ ಪಬ್ಲಿಕ್ ವೈ-ಫೈ ಇನ್ನು ಹಲವು...!

|

ದೇಶದಲ್ಲಿ ಈಗಾಗಲೇ ಸಖತ್ ಸದ್ದು ಮಾಡುತ್ತಿರುವ ಜಿಯೋ ಕೇವಲ 4G ಸೇವೆಗೆ ಮಾತ್ರ ಸಿಮೀತವಾಗಲಿದೆ ಎನ್ನುವ ಮಾತು ಸುಳ್ಳಲಾಗಲಿದೆ, 4G ಜಿಯೋದ ಆರಂಭ ಎನ್ನಬಹುದಷ್ಟೆ. ದೇಶದ ಜನರನ್ನು ಹೊಸದೊಂದು ಡಿಜಿಟಲ್ ಜಗತ್ತಿಗೆ ಕರೆದುಕೊಂಡು ಹೋಗುವುದು ಜಿಯೋದ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ. ಇದಕ್ಕಾಗಿ ಶೀಘ್ರವೇ ಜಿಯೋ ಡಿಜಿಟಲ್ ಲೈಫ್ ಎಂಬ ಹೊಸದೊಂದು ಕಾನ್ಸೆಪ್ಟೆ ಆರಂಭವಾಗಲಿದೆ.

ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ..!

ಓದಿರಿ..:ರೂ.17,999 ಮೌಲ್ಯದ Moto M ಫ್ಲಿಪ್‌ಕಾರ್ಟ್ ಏಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ ರೂ 2,999ಕ್ಕೆ ಲಭ್ಯ

ಈ ಮೂಲಕ ಜಿಯೋ ಜನರ ನಿತ್ಯ ಜೀವನವನ್ನು ಡಿಜಿಟಲ್ ಮಯ ಮಾಡಲು ಹೊರಟಿದೆ. ನಿಮ್ಮ ಕಾರನ್ನು ಮೊಬೈಲ್ ಮೂಲಕವೇ ಕಂಟ್ರೋಲ್ ಮಾಡಬಹುದಾದ ಆಪ್ ಒಂದನ್ನು ಬಿಡಲು ಜಿಯೋ ಚಿಂತನೆ ನಡೆಸಿದೆ, ಇಲ್ಲದೇ ನಿಮ್ಮ ಟಿವಿಯನ್ನು ಇನ್ನು ಸ್ಮಾರ್ಟ್‌ ಮಾಡಲು ನಿಮಗೆ ಬೇಕಾದ ಶೋಗಳು ಮಿಸ್ಸಾಗದಂತೆ ಮಾಡಲು ಜಿಯೋ ಹಲವು ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗುತ್ತಿದೆ.

ಇದಕ್ಕಾ ಧೀರೂಬಾಯು ಅಂಬಾನಿ ನಾಲೆಡ್ಜ್ ಸಿಟಿಯಲ್ಲಿ ತಯಾರಿ ನಡೆಯುತ್ತಿದ್ದು, ಜನರ ಜೀವನ ವಿಧಾನವನ್ನು ಬದಲಾಯಿಸಲು ಅವಶ್ಯವಿರುವ ಎಲ್ಲಾ ತಂತ್ರಜ್ಞಾನವನ್ನು ಭಾರತಕ್ಕೆ ಜಿಯೋ ಮೂಲಕ ಪರಿಚಯಿಸಲು ಅಂಬಾನಿ ಯೋಜನೆಯೊಂದನ್ನ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ..!

ಓದಿರಿ..: ರೂ.999 ಬೆಲೆಯ ರಿಲಯನ್ಸ್ ಜಿಯೋ 4G VoLTE ಪೋನು ಹೇಗಿದೆ..? ಇಲ್ಲಿದೆ ನೋಡಿ ಫಸ್ಟ್ ಪೋಟೋ..!

ಜಿಯೋ ಸ್ವಿಚ್‌ಎನ್‌ವಾಕ್ ಎನ್ನುವ ಡಿವೈಸ್ ಒಂದನ್ನು ಸಿದ್ಧ ಪಡಿಸುತ್ತಿದ್ದು, ಇದು 45 ಸೆಕೆಂಡ್ ನಲ್ಲಿ 1GB ಡೇಟಾವನ್ನು ಒಂದು ಡಿವೈಸ್‌ನಿಂದ ಇನ್ನೊಂದು ಡಿವೈಸ್‌ಗೆ ವರ್ಗಾವಣೆಯನ್ನು ಮಾಡಲಿದೆ. ಇದು ಎಲ್ಲಾ ಮಾದರಿಯ ಕಾರ್ಯಚರಣಾ ವ್ಯವಸ್ಥೆಯಲ್ಲೂ ಬಳಸಬಹುದಾಗಿದೆ.

ಇದಲ್ಲೇ ವೈ-ಫೈ ವಿಧಾನವನ್ನೇ ಬದಲಾಯಿಸಲು ಜಿಯೋ ಚಿಂತನೆ ನಡೆದಿದ್ದು, ಸರಕಾರದೊಂದಿಗೆ ಕೈ ಜೊಡಿಸಿ ಒಂದು ಮಿಲಿಯನ್ ಸಾರ್ವಜನಿಕ ಸ್ಥಳಗಳಲ್ಲಿ ವೈಫೈ ಸೇವೆಯನ್ನು ನೀಡುವ ಚಿಂತನೆಯನ್ನು ನಡೆಸಿದೆ.

ಜಿಯೋ ಡಿಜಿಟಲ್ ಮಿಷನ್ ಕೇವಲ 4G ಮಾತ್ರ ಸಿಮೀತವಲ್ಲ..!

ಓದಿರಿ..:ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್

ಜಿಯೋ ಕಾರ್‌ ಕನೆಕ್ಟ್‌ ಎನ್ನುವ ಹೊಸ ಆಯೋಚನೆಯನ್ನು ಮಾಡಿದ್ದು, ನಿಮ್ಮ ಸಿಂಪಲ್ ಕಾರನ್ನು ಸ್ಮಾರ್ಟ್‌ ಮಾಡಲು ಜಿಯೋ ಮುಂದಾಗಿದ್ದು, ನಿಮ್ಮ ಕಾರಿನ ಡ್ರೈವಿಂಗ್ ಶೈಲಿಯನ್ನೇ ಇದು ಬದಲಾಯಿಸಲಿದೆ ಎನ್ನಲಾಗಿದೆ. ಇದಲ್ಲದೇ ಇನ್ನು ಹಲವು ಯೋಜನೆಗಳು ಜಿಯೋ ಮುಂದಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲವೂ ಮಾರುಕಟ್ಟೆಗೆ ಬರಲಿವೆ.

Best Mobiles in India

Read more about:
English summary
coming out of Reliance Jios stable as a part of its ‘digital lifestyle mission. Is Jio only about 4G connectivity to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X