ಬಿಎಸ್‌ಎನ್‌ಎಲ್‌ನಿಂದ ಉಚಿತ ಕರೆ ಆಫರ್: ತಿಳಿಯಲೇಬೇಕಾದ 5 ಅಂಶಗಳು

By Suneel
|

ಬಿಎಸ್‌ಎನ್‌ಎಲ್‌ ತನ್ನ ಇತ್ತೀಚಿನ ಮುನ್ನಡೆಯ ಚಲನೆಯಲ್ಲಿ, ಉಚಿತ ವಾಯ್ಸ್ ಟ್ಯಾರಿಫ್‌ ಪ್ಲಾನ್‌ ಅನ್ನು ಜನವರಿ ಇಂದ ತನ್ನ ಗ್ರಾಹಕರಿಗೆ ನೀಡಲಿದೆ. ಅಂದಹಾಗೆ ಈ ಮುನ್ನಡೆ ರಿಲಾಯನ್ಸ್ ಜಿಯೋಗೆ ಸ್ಪರ್ಧಿಯಾಗಿ ಎಂಬುದನ್ನು ಮರೆಯುವ ಹಾಗಿಲ್ಲ.

ಈ ತಿಂಗಳ ಆರಂಭದಲ್ಲಿ ಬಿಎಸ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಾದ ಅನುಪಮ್‌ ಶ್ರೀವತ್ಸ'ರವರು 'ವಾಯ್ಸ್ ಫ್ರೀ ಟ್ಯಾರಿಫ್ ಪ್ಲಾನ್ ಅನ್ನು, ರಿಲಾಯನ್ಸ್ ಜಿಯೋದೊಂದಿಗೆ ಉತ್ತಮವಾಗಿದ್ದರೆ ಆಫರ್‌ ಮಾಡುವುದಾಗಿ" ಹೇಳಿದ್ದರು. ಅಂತೆಯೇ ಈಗ ಶೀವತ್ಸ'ರವರು ಟೈಮ್ಸ್‌ ಆಫ್‌ ಇಂಡಿಯಾದೊಂದಿಗೆ ನೀಡಿದ ಸಂದರ್ಶನದಲ್ಲಿ ವಾಯ್ಸ್ ಫ್ರೀ ಟ್ಯಾರಿಫ್ ಪ್ಲಾನ್‌ ಅನ್ನು ಜನವರಿ ತಿಂಗಳಿಂದ ನೀಡುವುದಾಗಿ ಹೇಳಿದ್ದಾರೆ.

ಬಿಎಸ್‌ಎನ್‌ಎಲ್‌ ಪ್ರೀಪೇಡ್‌ ಸಿಮ್ ಖರೀದಿಗೆ ಮುನ್ನ ಚೆಕ್‌ ಮಾಡಲೇಬೇಕಾದ 5 ಅಂಶಗಳು

ಅಂದಹಾಗೆ 'ವಾಯ್ಸ್ ಪ್ರೀ' ಆಫರ್‌ ಏನಿದು? ಜಿಯೋ ಈಗಾಗಲೇ ತನ್ನ ಹಲವು ಪ್ಲಾನ್‌ಗಳನ್ನು ಅತೀ ಕಡಿಮೆ ಬೆಲೆಗೆ ನೀಡುತ್ತಿದೆ. ಆದರೆ ಜಿಯೋದ 'ಟ್ಯಾರಿಫ್‌ ಪ್ಲಾನ್', 'ವೆಲ್ಕಮ್‌ ಆಫರ್' ಮುಗಿಯದ ಕಾರಣ ಪ್ರಕಟಗೊಂಡಿಲ್ಲ. ಬಿಎಸ್‌ಎನ್‌ಎಲ್‌(BSNL) ಜನವರಿ ತಿಂಗಳಿನಿಂದ ನೀಡಲಿರುವ ವಾಯ್ಸ್ ಪ್ರೀ ಆಫರ್‌ ಬಗ್ಗೆ ತಿಳಿಯಬೇಕಾದ 5 ಪ್ರಮುಖ ಅಂಶಗಳನ್ನು ಇಂದಿನ ಲೇಖನದಲ್ಲಿ ಓದಿರಿ.

ವಾಯ್ಸ್ ಪ್ರೀ ಕರೆಗಳು

ವಾಯ್ಸ್ ಪ್ರೀ ಕರೆಗಳು

ಬಿಎಸ್‌ಎನ್‌ಎಲ್‌ಗೆ ಇದು ಬಹುದೊಡ್ಡ ಡೀಲ್‌. ರಿಲಾಯನ್ಸ್ ಜಿಯೋ ಮತ್ತು ಬಿಎಸ್‌ಎನ್‌ಎಲ್‌ ಟೆಲಿಕಾಂಗಳು 4G ಬಿಡುಗಡೆ ನಂತರ ಭಿನ್ನವಾಗಿವೆ. ಆದರೆ ಬಿಎಸ್‌ಎನ್‌ಎಲ್‌ ಇನ್ನು ಕೆಲವೇ ಸಿಟಿಗಳಲ್ಲಿ ಮಾತ್ರ 4G ಸೇವೆಯನ್ನು ನೀಡಬೇಕಾಗಿದೆ.

ಜಿಯೋ ಉಚಿತ ಕರೆ ಆಫರ್ ನೀಡಲು VoLTE ಬಳಸುತ್ತಿದ್ದು, ಆದರೆ ಬಿಎಸ್‌ಎನ್‌ಎಲ್‌ ಈಗ ಉಚಿತ ವಾಯ್ಸ್ ಕರೆ ಆಫರ್‌ ಮಾಡಲು ಯಾವುದನ್ನು ಬಳಸಿಕೊಳ್ಳುತ್ತದೆ ಎಂದು ತಿಳಿದಿಲ್ಲ.

 VoLTE ಜೊತೆಗೆ ಯಾವುದೇ ಅವ್ಯವಸ್ಥೆ ಇಲ್ಲ

VoLTE ಜೊತೆಗೆ ಯಾವುದೇ ಅವ್ಯವಸ್ಥೆ ಇಲ್ಲ

ರಿಲಾಯನ್ಸ್ ಜಿಯೋ ವಾಯ್ಸ್ ಕರೆಯನ್ನು VoLTE ಜೊತೆಗೆ ಉಚಿತವಾಗಿ ನೀಡುತ್ತಿತ್ತು. ಆದರೆ ಬಿಎಸ್‌ಎನ್‌ಎಲ್‌ ವಾಯ್ಸ್ ಕರೆಯನ್ನು ನೀಡಲು VoLTE ಬಳಸದೇ, ಸಾಮಾನ್ಯವಾಗಿ ನೀಡುತ್ತಿದೆ.

 2G, 3G ಬಳಕೆದಾರರಿಗೆ ಉಚಿತ ಕರೆಗಳು

2G, 3G ಬಳಕೆದಾರರಿಗೆ ಉಚಿತ ಕರೆಗಳು

ಬಿಎಸ್‌ಎನ್‌ಎಲ್‌ ಉಚಿತ ವಾಯ್ಸ್ ಕರೆಗಳನ್ನು ಡಾಟಾ ಪ್ಲಾನ್‌ನೊಂದಿಗೆ ನೀಡಿದಲ್ಲಿ, 2G, 3G ಬಳಕೆದಾರರಿಗೂ ಉಚಿತ ಕರೆ ಆಫರ್ ನೀಡುತ್ತದೆ. ಕಾರಣ ಕಂಪನಿ ತನ್ನ ಮೂಲಸೌಕರ್ಯವನ್ನು VoLTE ಗೆ ಅಪ್‌ಗ್ರೇಡ್‌ ಮಾಡಿಲ್ಲ.

ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೂ ಈ ಆಫರ್

ಬ್ರಾಡ್‌ಬ್ಯಾಂಡ್‌ ಬಳಕೆದಾರರಿಗೂ ಈ ಆಫರ್

ಬಿಎಸ್‌ಎನ್‌ಎಲ್‌ ನಿರ್ದೇಶಕರಾದ 'ಶ್ರೀವತ್ಸ'ರವರು ಬಹುಸಂಖ್ಯಾತ ಬಳಕೆದಾರರು ತಮ್ಮ ಸಮಯವನ್ನು ಮನೆಯಲ್ಲಿ ಕಳೆಯುವುದರಿಂದ, ಈ ಆಫರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೂ ಸಹ ಲಭ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 2-4 ರೂನಿಂದ ಆರಂಭ

2-4 ರೂನಿಂದ ಆರಂಭ

ಬಿಎಸ್‌ಎನ್‌ಎಲ್‌, ರಿಲಾಯನ್ಸ್ ಜಿಯೋಗಿಂತ ಹೆಚ್ಚಿನ ರೀತಿಯಲ್ಲಿ ಇತರೆ ಟೆಲಿಕಾಂಗಳಿಗೆ ಸ್ಪರ್ಧೆ ನೀಡಲು, ಜಿರೋ-ವಾಯ್ಸ್ ಟ್ಯಾರಿಫ್‌ ಪ್ಲಾನ್‌ ಅನ್ನು ರೂ.2-4 ಆರಂಭದಿಂದ ನೀಡಲಿದೆ. ಇದು ಎಲ್ಲರಿಗೂ ಕುತೂಹಲದ ವಿಷಯ. ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಮುಗಿದ ನಂತರ, ಬಿಎಸ್‌ಎನ್‌ಎಲ್‌ ಈ ಆಫರ್‌ ಅನ್ನು ಜನವರಿ ಇಂದ ಆರಂಭಿಸಲು ಪ್ಲಾನ್‌ ಮಾಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Reliance Jio Effect: BSNL to Offer Free Voice Calls from January 2017. To know more about this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X