Subscribe to Gizbot

ಜಿಯೋ ನಂಬರ್ ಒನ್: ಬೆನ್ನು ತಟ್ಟಿದ ಟ್ರಾಯ್ ವರದಿ..!

Posted By:

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಅಬ್ಬರ ಜೋರಾಗಿಯೇ ಇದ್ದು, ಇದಕ್ಕೆ ಸಾಕ್ಷಿಯಾಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವೂ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಜಿಯೋ ದೇಶದಲ್ಲಿಯೇ ನಂಬರ್ ಒನ್ ಮೊಬೈಲ್ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಟೆಲಿಕಾಂ ಕಂಪನಿಯಾಗಿದೆ ಎಂದು ತಿಳಿಸಿದೆ.

ಜಿಯೋ ನಂಬರ್ ಒನ್: ಬೆನ್ನು ತಟ್ಟಿದ ಟ್ರಾಯ್ ವರದಿ..!

ಜಿಯೋ ತನ್ನ ಬಳಕೆದಾರರಿಗೆ ಅತೀ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ನೀಡಿದೆ. ಅಲ್ಲದೇ ಅತೀ ಹೆಚ್ಚಿನ ಡೌನ್‌ಲೋಡ್ ವೇಗವನ್ನು ಹೊಂದಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ತಿಳಿಸಿದೆ. ಇತರೆ ಎಲ್ಲಾ ಟೆಲಿಕಾಂ ಕಂಪನಿಗಳಿಗಿಂತಲೂ ಉತ್ತಮವಾದ ಸೇವೆಯನ್ನು ಜಿಯೋ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ 25.6 MBPS ವೇಗ:

ಜಿಯೋ 25.6 MBPS ವೇಗ:

ಜಿಯೋ ನವೆಂಬರ್ ತಿಂಗಳಿನಲ್ಲಿ ಅತ್ಯಂತ ವೇಗದ ಇಂಟರ್ನೆಟ್ ಸೇವೆಯನ್ನು ನೀಡಿದೆ ಎನ್ನಲಾಗಿದೆ. ಜಿಯೋ 25.6 MBPS ವೇಗದ ಸೇವೆಯನ್ನು ನೀಡಿದ್ದು, ಮೊದಲ ಸ್ಥಾನವನ್ನು ಅಲಂಕರಿಸಿದೆ. ವೊಡಾಫೋನ್ ಎರಡನೇಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಮೂರನೇ ಸ್ಥಾನದಲ್ಲಿ ಏರಟೆಲ್ ನಿಂತಿದೆ.

ಏರ್‌ಟೆಲ್‌ ಕುಸಿತ

ಏರ್‌ಟೆಲ್‌ ಕುಸಿತ

ಕಳೆದ ಎರಡು ತಿಂಗಳಿನಿಂದ ಏರ್‌ಟೆಲ್ ಇಂಟರ್ನೆಟ್ ವೇಗವು ಕುಸಿತವನ್ನು ಕಂಡಿದ್ದು, ಇದೇ ಮಾದರಿಯಲ್ಲಿ ವೊಡಾಪೋನ್ ಉತ್ತಮ ಸೇವೆಯನ್ನು ನೀಡುವ ಮೂಲಕ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ನಾಲ್ಕನೆ ಸ್ಥಾನದಲ್ಲಿ ಐಡಿಯಾ ನಿಂತಿದ್ದು, ಗ್ರಾಹಕರಿಗೆ ಕಡಿಮೆ ವೇಗ ಸೇವೆಯನ್ನು ನೀಡುತ್ತಿದೆ.

ಬಳಕೆದಾರರ ಸಂಖ್ಯೆಯೂ ಏರಿಕೆ

ಬಳಕೆದಾರರ ಸಂಖ್ಯೆಯೂ ಏರಿಕೆ

ಇದಲ್ಲದೇ ಜಿಯೋ ಬಳಕೆದಾರರ ಸಂಖ್ಯೆಯೂ ಬೇರೆ ಕಂಪನಿಗಳಿಗೆ ಹೋಲಿಕೆ ಮಾಡಿಕೊಂಡರೆ ಹೆಚ್ಚಾಗುತ್ತಾ ಸಾಗಿದೆ. ಇದರಲ್ಲಿ ಏರ್‌ಟೆಲ್ ಬಳಕೆದಾರರೂ ಕೊಂಚ ಏರಿಕೆ ಯಾಗಿದ್ದು, ವೋಡಾಫೋನ್ ಮತ್ತು ಐಡಿಯಾ ಬಳಕೆದಾರರ ಸಂಖ್ಯೆಯೂ ತೀರಾ ಕುಸಿತವನ್ನು ಕಂಡಿದೆ ಎಂದು ವರದಿಯು ತಿಳಿಸಿದೆ.

ಜಿಯೋ ನೀಡುವ ಶೇ.200% ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..?

ಜಿಯೋ ನೀಡುವ ಶೇ.200% ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ..?

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಶೇ.200% ಕ್ಯಾಷ್ ಬ್ಯಾಕ್ ಅನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಬಳಕೆದಾರರು ಹೇಗೆ ತಾವು ರಿಚಾರ್ಜ್ ಮಾಡಿಸಿದ ಮೊತ್ತದ ಶೇ.200ರಷ್ಟು ಹಿಂಪಡೆಯುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ರೂ.398ಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ರಿಚಾರ್ಜ್

ರೂ.398ಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ರಿಚಾರ್ಜ್

ಜಿಯೋ ಗ್ರಾಹಕರು ರೂ.398ಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಈ ಕ್ಯಾಷ್ ಬ್ಯಾಕ್ ಆಫರ್ ಅನ್ನು ಪಡೆಯಬಹುದಾಗಿದೆ. ಇದರಿಂದಾಗಿ ಜಿಯೋ ಗ್ರಾಹಕರು ಬೇರೆ ಯಾವುದೇ ಕಂಪನಿಯು ನೀಡಿದ ಆಫರ್ ಅನ್ನು ಪಡೆದುಕೊಳ್ಳಲಿದ್ದಾರೆ. ಬೇರೆ ಕಂಪನಿಗಳು ಈ ಮಾದರಿಯ ಆಫರ್ ಅನ್ನು ತಮ್ಮ ಬಳಕೆದಾರರಿಗೆ ನೀಡಿಲ್ಲ, ಮುಂದೆ ನೀಡುವ ಸಾಧ್ಯತೆಯೂ ಇಲ್ಲ ಎನ್ನಲಾಗಿದೆ.

ಫೆಬ್ರವರಿ 15ರ ವರೆಗೆ ದೊರೆಯಲಿದೆ:

ಫೆಬ್ರವರಿ 15ರ ವರೆಗೆ ದೊರೆಯಲಿದೆ:

ಜಿಯೋ ನೀಡಿರುವ ಕ್ಯಾಷ್ ಬ್ಯಾಕ್ ಆಫರ್ ಫೆಬ್ರವರಿ 15ನೇ ತಾರೀಕಿನ ವರೆಗೂ ಜಾರಿಯಲ್ಲಿ ಇರಲಿದೆ ಎನ್ನಲಾಗಿದೆ. ಅದರ ಒಳಗೆ ರಿಚಾರ್ಜ್ ಮಾಡಿಸಿಕೊಂಡ ಜಿಯೋ ಪ್ರೈಮ್ ಸದಸ್ಯರು ಈ ಆಫರ್ ಲಾಭವನ್ನು ಪಡೆಯಬಹುದಾಗಿದೆ. ರೂ.398ಕ್ಕೆ ರಿಚಾರ್ಜ್ ಮಾಡಿಸಿದರೆ ರೂ.799ರವರೆಗೂ ಕ್ಯಾಷ್ ಬ್ಯಾಕ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಯೋ ಆಪ್:

ಜಿಯೋ ಆಪ್:

ಮೈ ಜಿಯೋ ಆಪ್ ಬಳಕೆ ಮಾಡಿಕೊಂಡು ರಿಚಾರ್ಜ್ ಮಾಡಿಕೊಂಡ ಸಂದರ್ಭದಲ್ಲಿ ರೂ. 400 ಕ್ಯಾಷ್ ಬ್ಯಾಕ್ ದೊರೆಯಲಿದ್ದು, ಇದರಲ್ಲಿ ಗ್ರಾಹಕರು ರೂ.50ರ 8 ವೋಚರ್ ಗಳನ್ನು ಪಡೆಯಬಹುದಾಗಿದೆ. ಇದನ್ನು ಮುಂದಿನ ಬಾರಿ ರಿಚಾರ್ಜ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇತರೇ ಆಪ್ ಗಳು:

ಇತರೇ ಆಪ್ ಗಳು:

ಇದಲ್ಲದೇ ಮೊಬೈಲ್ ವ್ಯಾಲೆಟ್‌ಗಳ ಮೂಲಕ ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ಸಹ ಬಳಕೆದಾರರಿಗೆ ಕ್ಯಾಚ್ ಆಫರ್ ದೊರೆಯಲಿದೆ. ಮೊಬ್ವಿ ಕ್ವೀಕ್ ನಲ್ಲಿ ರಿಚಾರ್ಜ್ ಮಾಡಿಸಿಕೊಂಡವರಿಗೆ ಶೇ.100ರಷ್ಟು ಕ್ಯಾಷ್ ಬ್ಯಾಕ್ ದೊರೆಯಲಿದೆ. ಅಲ್ಲದೇ ಹೋಟೆಲ್ ವೋಚರ್ ಸಹ ದೊರೆಯಲಿದೆ.

ಪೇಟಿಎಂ ನಲ್ಲಿಯೂ ಆಫರ್:

ಪೇಟಿಎಂ ನಲ್ಲಿಯೂ ಆಫರ್:

ಇದಲ್ಲದೇ ಪೇಟಿಎಂ ನಲ್ಲಿ ಶೇ.50 ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಇದಲ್ಲದೇ ಅಮೆಜಾನ್ ಪೇ ನಲ್ಲಿ ರೂ.50 ಹಾಗೂ ಪೋನ್ ಫೇ ಮತ್ತು ಫ್ರೀಚಾರ್ಜ್ ನಲ್ಲಿ ರಿಚಾರ್ಜ್ ಮಾಡಿಸಿಕೊಂಡವರಿಗೆ ರೂ.75 ಕ್ಯಾಷ್ ಬ್ಯಾಕ್ ದೊರೆಯಲಿದೆ.

ಟೆಲಿಕಾಂ ಲೋಕದ ಇತಿಹಾಸವನ್ನು ಬದಲಿಸಲಿರುವ ಜಿಯೋ ಆಫರ್

ಟೆಲಿಕಾಂ ಲೋಕದ ಇತಿಹಾಸವನ್ನು ಬದಲಿಸಲಿರುವ ಜಿಯೋ ಆಫರ್

ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಭಾರತೀಯ ಟೆಲಿಕಾಂ ಇತಿಹಾಸದಲ್ಲಿ ಈಗಾಗಲೇ ಅಚ್ಚಳಿಯುವಂತ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದೇ ಮಾದರಿಯಲ್ಲಿ ಸದ್ಯ ಲಾಂಚ್ ಮಾಡಿರುವ ಹೊಸ ಆಫರ್ ವೊಂದು ಟೆಲಿಕಾಂ ಲೋಕದ ಇತಿಹಾಸದಲ್ಲೇ ಮತ್ತೊಂದು ಮೈಲಿಗಲ್ಲು ಆಗಲಿದ್ದು, ಈ ಹೊಸ ಆಫರ್ ಈಗಾಗಲೇ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿರುವ ಟೆಲಿಕಾಂ ಬಳಕೆದಾರರ ಸಂಖ್ಯೆಯನ್ನು ಇಷ್ಟು ಪ್ರಮಾಣದಲ್ಲಿ ಹೆಚ್ಚಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಭಾಗದ ಜನರು ಸಹ ಅತೀ ಕಡಿಮೆ ಬೆಲೆಗೆ ಉತ್ತಮ ಸೇವೆಯನ್ನು ಈ ಆಫರ್ ನಿಂದ ಪಡೆಯಬಹುದಾಗಿದೆ.

ಇತರೆ ಕಂಪನಿಗಳಿಗೂ ಪಾಠ..!

ಇತರೆ ಕಂಪನಿಗಳಿಗೂ ಪಾಠ..!

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕರೆ ಮತ್ತು ಡೇಟಾ ದರಗಳು ಗಗನ ಮುಟ್ಟಿದ್ದ ಸಂದರ್ಭದಲ್ಲಿ ಉಚಿತ ಸೇವೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿದ ಜಿಯೋ, ತದ ನಂತರದಲ್ಲಿ ಉಚಿತ ಕರೆ ಮತ್ತು ಅತೀ ಕಡಿಮೆ ಬೆಲೆಗೆ ಡೇಟಾ ಸೇವೆಯನ್ನು ನೀಡುವ ಮೂಲಕ ಮತ್ತೊಂದು ಸುತ್ತಿನ ಬದಲಾವಣೆಗೆ ಕಾರಣವಾಯಿತು. ತಿಂಗಳಿಗೆ ಒಂದು GB 3G ಡೇಟಾ ಖರೀದಿಸಲು ಮತ್ತು ಬಳಸಲು ಹಿಂದೆ ಮುಂದೆ ನೋಡುತ್ತಿದ್ದ ಭಾರತೀಯರು, ಇಂದು ದಿನಕ್ಕೊಂದು GB 4G ಡೇಟಾ ಸಾಲುತ್ತಿಲ್ಲ ಎನ್ನುವದಕ್ಕೆ ನೇರಾ ಕಾರಣ ಜಿಯೋ ಎಂದರೆ ತಪ್ಪಾಗುವುದಿಲ್ಲ ಎನ್ನಬಹುದಾಗಿದೆ.

ಜಿಯೋ ಕೇವಲ 4G VoLTE ಸಪೋರ್ಟ್:

ಜಿಯೋ ಕೇವಲ 4G VoLTE ಸಪೋರ್ಟ್:

ಜಿಯೋ ಕೇವಲ 4G VoLTE ಸಪೋರ್ಟ್ ಮಾಡುವ ಫೋನ್‌ಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತಿತ್ತು, ಅಲ್ಲದೇ 4G VoLTE ಕೇವಲ ಹೊಸ ಸ್ಮಾರ್ಟ್‌ ಫೋನ್‌ಗಳಲ್ಲಿ ಮಾತ್ರವೇ ಕಾಣಲು ಸಾಧ್ಯವಿತ್ತು. ಈ ಕಾರಣಕ್ಕಾಗಿ ಹಲವು ಮಂದಿ ತಮ್ಮ ಹಳೇ ಫೋನ್‌ಗಳನ್ನೇ ಬದಲಾಯಿಸಿದರು. ಆದರೆ ಗ್ರಾಮೀಣ ಪ್ರದೇಶದ ಮಂದಿ ಮತ್ತು ಹೊಸ ಫೋನ್ ಕೊಳ್ಳಲು ಸಾಧ್ಯವಾಗದೆ ಇದ್ದವರು ಜಿಯೋ ಸೇವೆಯಿಂದ ವಂಚಿತರಾಗಿದರು.

ಜಿಯೋ ಫೋನ್:

ಜಿಯೋ ಫೋನ್:

ಈ ಸಮಸ್ಯೆಗೆ ಪರಿಹಾರ ಮತ್ತು ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜಿಯೋ ಬಿಡುಗಡೆ ಮಾಡಿದ ಸ್ಮಾರ್ಟ್ ಫೀಚರ್ ಫೋನ್ 'ಜಿಯೋ ಫೋನ್' ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು. ಜಿಯೋ ತನ್ನ ನೂತನ ಫೋನ್‌ಗಾಗಿಯೇ ಹೊಸ ಆಫರ್ ಲಾಂಚ್ ಮಾಡಿತ್ತು. ಇದರಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಒಂದೇ ಸೇಲ್‌ನಲ್ಲಿ ಜಿಯೋ ಸುಮಾರು 60 ಲಕ್ಷ ಜಿಯೋ ಫೋನ್ ಗಳನ್ನು ಮಾರಾಟ ಮಾಡಿ, ದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಫೀಚರ್ ಫೋನ್ ಎನ್ನುವ ಪಟ್ಟವನ್ನು ಪಡೆದುಕೊಂಡಿತ್ತು.

ಟೆಲಿಕಾಂ ಇತಿಹಾಸ ಬದಲಿಸುವ ಆಫರ್:

ಟೆಲಿಕಾಂ ಇತಿಹಾಸ ಬದಲಿಸುವ ಆಫರ್:

ಇಷ್ಟು ದಿನ ಜಿಯೋ ಫೋನ್ ಬಳಕೆದಾರರು ಪ್ರತಿ ತಿಂಗಳು ರೂ.149ಕ್ಕೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಇದು ಸಹ ಸಾಮಾನ್ಯರ ಜೇಬಿಗೆ ಹೆಚ್ಚಿನ ಹೊರೆಯಾಗುತ್ತಿದ್ದ ಕಾರಣದಿಂದಾಗಿ ಜಿಯೋ ಫೋನ್ ಬಳಕೆದಾರರಿಗೆ ರೂ.49ರ ಪ್ಲಾನ್ ಲಾಂಚ್ ಮಾಡಲಾಗಿದ್ದು, ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕರೆ ಮಾಡುವ ಮತ್ತು ಡೇಟಾವನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಜಿಯೋ ಬಳಕೆದಾರರಿಗೆ ಮಾಡಿಕೊಟ್ಟಿದೆ. ಈ ಆಫರ್ ಭಾರತೀಯ ಟೆಲಿಕಾಂ ಮಾರುಕಟ್ಟೆಯ ಇತಿಹಾಸವನ್ನು ಬದಲಾಯಿಸಲಿದೆ ಎನ್ನುವ ಮಾತು ತಜ್ಞ ವಲಯದಿಂದ ಕೇಳಿಬಂದಿದೆ.

ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಪಾಠ:

ಎಲ್ಲಾ ಟೆಲಿಕಾಂ ಕಂಪನಿಗಳಿಗೂ ಪಾಠ:

ಜಿಯೋ ಹೊಸದಾಗಿ ಲಾಂಚ್ ಮಾಡಿದ ರೂ.49 ಪ್ಲಾನ್ ನಿಂದಾಗಿ ಗ್ರಾಮೀಣ ಭಾಗದ ಜನರು ಸಹ ಫೋನ್ ಬಳಸುವಂತಾಗಿದ್ದು, ಈ ಮೂಲಕ ಸಂಪರ್ಕ ಕ್ರಾಂತಿಯ ಭಾಗವಾಗಲು ಸಾಧ್ಯವಾಗಿದೆ. ಇಂಟರ್ನೆಟ್, ಕರೆ ಮತ್ತು ಮೇಸೆಜ್ ಕಳುಹಿಸುವ ಮೂಲಕ ಹೆಚ್ಚಿನ ವಿಷಯಗಳನ್ನು ವೇಗವಾಗಿ ಪಡೆದುಕೊಳ್ಳಬಹುದಾಗಿದೆ. ತಮ್ಮ ಬಳಿ ಹಣವಿಲ್ಲ ಎನ್ನುವ ಕಾರಣಕ್ಕೆ ಹಲವು ಸೇವೆಗಳಿಂದ ವಂಚಿತರಾಗುವುದು ತಪ್ಪಲಿದೆ. ಜಿಯೋ ತೆಗೆದು ಕೊಂಡಿರುವ ಈ ಹೊಸ ಹೆಜ್ಜೆಯೂ ಇತರೆ ಟೆಲಿಕಾಂ ಕಂಪನಿಗಳಿಗೆ ಪಾಠವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ವಿಶ್ವದ ಮೊದಲ 5G ಸ್ಮಾರ್ಟ್‌ಫೋನ್: ಬೆಚ್ಚಿ ಬಿಳಿಸುವ ಡೌನ್‌ಲೋಡ್ ಸ್ಪೀಡ್..!

English summary
Reliance Jio fastest mobile broadband. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot