900 ಸಿಟಿಗಳಲ್ಲಿ ರಿಲಯನ್ಸ್ ಜಿಯೋ ಗಿಗಾಫೈಬರ್ ಮತ್ತು ಕೌಂಟಿಂಗ್- ತಿಳಿಯಬೇಕಾದ 15 ಅಂಶಗಳು

By GizBot Bureau
|

ಜಿಯೋ ಬಂದ ಮೇಲೆ ಇತರೆ ಟೆಲಿಕಾಂ ಆಪರೇಟರ್ ಗಳು ಎದ್ವಾತದ್ವಾ ಸುಲಿಗೆ ಮಾಡುವುದು ನಿಂತಿದೆ. ಜಿಯೋ ನೀಡುವ ಆಫರ್ ಗಳಿಂದ ಕೆಂಗೆಟ್ಟ ಟೆಲಿಕಾಂ ಆಪರೇಟರ್ ಗಳು ತಾವು ಕೂಡ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಲೆಯಲ್ಲಿ ಇಳಿಕೆ ಮಾಡಿದರು.ಇದೀಗ ಬ್ರಾಡ್ ಬ್ಯಾಂಡ್ ಸೇವೆಯ ಅವಧಿ. ಹೌದು ರಿಲಯನ್ಸ್ ಜಿಯೋ ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ಸದ್ಯದಲ್ಲೇ ಆರಂಭಿಸಲಿದೆ. ಹಾಗಾಗಿ ಇತರೆ ಕೇಬಲ್ ಆಪರೇಟರ್ ಗಳಿಗೆ ನಡುಕ ಶುರುವಾಗಿದೆ. ಹಾಗಾದ್ರೆ ರಿಲಯನ್ಸ್ ಜಿಯೋ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳ ಬಗೆಗಿನ ವಿವರಣೆಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ರಿಲಯನ್ಸ್ ಜಿಯೋ ಗಿಗಾಫೈಬರ್ ಮತ್ತು ಕೌಂಟಿಂಗ್- ತಿಳಿಯಬೇಕಾದ 15 ಅಂಶಗಳು

ರಿಲಯನ್ಸ್ ಸಂಸ್ಥೆ ಇಲ್ಲದ ಕ್ಷೇತ್ರವೇ ಇಲ್ಲ. ತನ್ನೆಲ್ಲ ಬ್ಯೂಸಿನೆಸ್ ನ ರೂಪಗಳಲ್ಲೂ ಮುಖೇಶ್ ಅಂಬಾನಿಯದ್ದು ಯಶಸ್ಸಿನ ಮೇಲುಗೈ. ಇದೀಗ ರಿಲಯನ್ಸ್ ಜಿಯೋದ ಗಿಗಾಫೈಬರ್ ರಿಜಿಸ್ಟ್ರೇಷನ್ ಕಾರ್ಯಕ್ರಮ ಲೈವ್ ಆಗಿದೆ .ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಂಸ್ಥೆ ಜುಲೈನಲ್ಲಿ ನಡೆದ ತನ್ನ 41 ನೇ ವಾರ್ಷಿಕ ಜನರಲ್ ಮೀಟಿಂಗ್ ನಲ್ಲಿ ಫೈಬರ್-ಟು-ದಿ-ಹೋಮ್ ಸೇವೆಯ ಬಗ್ಗೆ ಪ್ರಕಟಣೆ ಹೊರಡಿಸಿದ್ದರು. ಈ ವಾರ ಎರಡು ವರ್ಷಗಳ ಪೂರ್ಣಗೊಂಡ ಕಂಪೆನಿಯು, ಆಗಸ್ಟ್ 15 ರಿಂದ ಬ್ರಾಡ್ ಬ್ಯಾಂಡ್ ಸೇವೆಗಾಗಿ ನೋಂದಣಿಗಳನ್ನು ಸ್ವೀಕರಿಸಲಾರಂಭಿಸಿತು.

ಹಾಗಾದ್ರೆ ಇಲ್ಲಿದೆ ನೋಡಿ ರಿಲಯನ್ಸ್ ಜಿಯೋನ ಗಿಗಾಫೈಬರ್ ಸೇವೆಯ ಅಪ್ ಡೇಟ್ ಗಳು:

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

1,100 ಸಿಟಿಗಳಲ್ಲಿ ಸ್ಥಿರವಾಗ- ಬ್ರಾಡ್ ಬ್ಯಾಂಡ್ ಸೇವೆಯ ಲಭ್ಯತೆ

ರಿಲಯನ್ಸ್ ಜಿಯೋ ಸಂಸ್ಥೆ ಗಿಗಾಫೈಬರ್ ಬ್ರಾಂಡ್ ಬ್ಯಾಂಡ್ ಸೇವೆಯನ್ನು ದೇಶದಾದ್ಯಂತ ಸುಮಾರು 1,100 ನಗರಗಳಲ್ಲಿ ಲಭ್ಯತೆ ಒದಗಿಸಲು ಪ್ಲಾನ್ ಮಾಡಿದೆ. ಈಗಾಗಲೇ ಸುಮಾರು 900 ಸಿಟಿಗಳಲ್ಲಿ ಇದರ ಸೇವೆಯನ್ನು ಆರಂಭಿಸಲಾಗಿದೆ.

ಸ್ಥಳೀಯ ಕೇಬಲ್ ಆಪರೇಟರ್ ಗಳಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ.

ರಿಲಯನ್ಸ್ ಜಿಯೋ ಕೆಲವು ಸ್ಥಳೀಯ ಕೇಬಲ್ ಆಪರೇಟರ್ ಗಳಿಂದ ಪ್ರತಿರೋಧವನ್ನು ಎದುರಿಸುತ್ತಿರುವ ಬಗ್ಗೆ ತಿಳಿದುಬಂದಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಸಂಪರ್ಕವನ್ನು ವಿಸ್ತರಿಸುವಲ್ಲಿ ಸಮಸ್ಯೆಯಾಗುತ್ತಿದೆ. ಎಕನಾಮಿಕ್ ಟೈಮ್ಸ್ ವರದಿ ಮಾಡಿರುವಂತೆ, ಸ್ಥಳೀಯ ಕೇಬಲ್ ಆಪರೇಟರ್ ಗಳಿಗೆ ಜಿಯೋ ಜೊತೆ ಸ್ಪರ್ಧೆಯೊಡ್ಡಲು ಸಾಧ್ಯವಿಲ್ಲ ಎಂಬ ಭಯ ಕಾಡುತ್ತಿದೆ. ಮೊಬೈಲ್ ಸೇವೆಗಳಲ್ಲಿ ಮಾಡಿದಂತೆಯೇ ಕೇಬಲ್ ಸೇವೆಯಲ್ಲಿಯೂ ಕೂಡ ರಿಲಯನ್ಸ್ ಜಿಯೋ ದೊಡ್ಡ ಹೊಡೆತ ಕೊಡಬಹುದು ಎಂಬ ಭಯ ಅವರದ್ದು.

ಕೊನೆಯ ಹಂತದ ಕನೆಕ್ಟಿವಿಟಿಯು ರಿಲಯನ್ಸ್ ಜಿಯೋಗೆ ಬಹಳ ಮುಖ್ಯ - ತಜ್ಞರ ಅಭಿಪ್ರಾಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುವಂತೆ, ಕೊನೆಯ ಹಂತದ ಕನೆಕ್ಟಿವಿಟಿಯು ರಿಲಯನ್ಸ್ ಜಿಯೋ ಸಂಸ್ಥೆಗೆ ಬಹಳ ಮುಖ್ಯವಾದುದ್ದಾಗಿದೆ. ಪ್ರತಿ ಬಿಲ್ಡಿಂಗ್ ಗಳನ್ನು ಫಿಸಿಕಲಿ ಕನೆಕ್ಟ್ ಮಾಡಬೇಕಾದ ಅನಿವಾರ್ಯತೆ ಇರುವುದರ ಪರಿಣಾಮದಿಂದಾಗಿ ಇದು ಕಷ್ಟಸಾಧ್ಯ ವಿಚಾರವಾಗಿದೆ. ಮೊಬೈಲ್ ಸೇವೆಗಳಲ್ಲಿ ಟವರ್ ಗಳು ಸುಲಭದಲ್ಲಿ ಲಭ್ಯವಾಗುತ್ತದೆ ಮತ್ತು ಅದನ್ನು ದೂರಸಂಪರ್ಕ ಸಂಸ್ಥೆಗಳು ಹಂಚಿಕೊಳ್ಳಲು ಲಭ್ಯವಿರುತ್ತದೆ ಆದರೆ ಇದರಲ್ಲಿ ಹಾಗಾಗುವುದಿಲ್ಲ ಎಂಬುದೇ ರಿಲಯನ್ಸ್ ಚಿಂತೆಗೆ ಕಾರಣವಾಗಿದೆ.

ದೀಪಾವಳಿಯಲ್ಲಿ ಜಿಯೋ ಗಿಗಾಫೈಬರ್ ಬಿಡುಗಡೆಗೊಳ್ಳುವ ಸಾಧ್ಯತೆ

ಇದುವರೆಗೂ ಕಂಪೆನಿಯು ಯಾವಾಗ ಅಧಿಕೃತವಾಗಿ ಬ್ರಾಡ್ ಬ್ಯಾಂಡ್ ಸೇವೆಯು ಬಿಡುಗಡೆಗೊಳ್ಳುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಆದರೆ ಈಗಾಗಲೇ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನವೆಂಬರ್ 6 ರ ಒಳಗೆ ಇದು ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಅಂದರೆ ದೀಪಾವಳಿ ಕೊಡುಗೆಯಾಗಿ ಗ್ರಾಹಕರಿಗೆ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಸಿಗಬಹುದು.

ಜಿಯೋ ಗಿಗಾ ರೂಟರ್ ಜೋಡಿಸುವಿಕೆ

ರಿಲಯನ್ಸ್ ಜಿಯೋ ಈ ಸೇವೆಗಾಗಿ ತನ್ನದೇ ಸ್ವಂತ ರೂಟರ್ ನ್ನು ಜೋಡಿಸಲಿದೆ. ಅದನ್ನೇ ಜಿಯೋ ಗಿಗಾರೂಟರ್ ಎಂದು ಕರೆಯಲಾಗುತ್ತದೆ.

ಸ್ಮಾರ್ಟ್ ರಿಮೋಟ್ ಜೊತೆಗೆ ವೀಡಿಯೋ ಕಾಲಿಂಗ್ ವೈಶಿಷ್ಟ್ಯತೆ

ವರದಿಯೊಂದು ತಿಳಿಸುವಂತೆ ಜಿಯೋ ಗಿಗಾಫೈಬರ್ ನಲ್ಲಿ ವಾಯ್ಸ್ ಕಮಾಂಡ್ ಗಳಿಗೆ ಬೆಂಬಲ ಸಿಗಲಿದ್ದು ಸ್ಮಾರ್ಟ್ ರಿಮೋಟ್ ಮೂಲಕ ಹ್ಯಾಂಡಲ್ ಮಾಡಲು ಅವಕಾಶವಿರುತ್ತದೆ. ಒಮ್ಮೆ ಟಿವಿಗೆ ಕನೆಕ್ಟ್ ಮಾಡಿದ ನಂತರ ಸೆಟ್-ಅಪ್- ಬಾಕ್ಸ್ ಗ್ರಾಹಕರಿಗೆ ವೀಡಿಯೋ ಕರೆಗಳನ್ನು ಮಾಡಲು ಅನುವು ಮಾಡಿಕೊಡಲಿದೆ. ಅಂದರೆ ಟಿವಿ ಮೂಲಕ ವೀಡಿಯೋ ಕರೆಗಳನ್ನು ಮಾಡಲು ಅವಕಾಶವಿರುತ್ತದೆ.

ಸ್ಮಾರ್ಟ್ ರಿಮೋಟ್ ಭಾರತದ ಹಲವು ಭಾಷೆಗಳಿಗೆ ಬೆಂಬಲ ನೀಡುತ್ತದೆ.

ಕಂಪೆನಿಯು ಹೇಳಿರುವಂತೆ ಸ್ಮಾರ್ಟ್ ರಿಮೋಟ್ ಭಾರತದ ಹಲವು ಭಾಷೆಗಳಿಗೆ ಬೆಂಬಲ ನೀಡುತ್ತದೆ. ಯಾವುದೆಲ್ಲ ಭಾಷೆಗಳಿಗೆ ಬೆಂಬಲ ನೀಡುತ್ತದೆ ಎಂಬ ಬಗ್ಗೆ ಇದುವರೆಗೂ ಕಂಪೆನಿ ಮಾಹಿತಿ ನೀಡಿಲ್ಲ.

Jio.com ವೆಬ್ ಸೈಟ್ ಮತ್ತು MyJio ಆಪ್ ನಲ್ಲಿ ರಿಜಿಸ್ಟ್ರೇಷನ್ ಮಾಡಲಾಗುತ್ತದೆ

ಆಸಕ್ತಿವುಳ್ಳ ಗ್ರಾಹಕರು ಜಿಯೋ ಗಿಗಾ ಫೈಬರ್ ನ್ನು ಕಂಪೆನಿಯ ಅಧಿಕೃತ ವೆಬ್ ಸೈಟ್ Jio.com ಮತ್ತು ಅಧಿಕೃತ ಆಪ್ ಆಗಿರುವ MyJio. ಆಪ್ ಮೂಲಕ ರಿಜಿಸ್ಟ್ರೇಷನ್ ಮಾಡಲು ಅವಕಾಶ ನೀಡುತ್ತದೆ.

1Gbps ಸ್ಪೀಡ್ ಮತ್ತು4K video ಸ್ಟ್ರೀಮಿಂಗ್ ಗೆ ಬೆಂಬಲ

ಜಿಯೋ ಗಿಗಾ ಫೈಬರ್ 1Gbps ಸ್ಪೀಡ್ ನ್ನು ಆಫರ್ ಮಾಡುತ್ತದೆ ಎಂದು ಕಂಪೆನಿ ತಿಳಿಸಿದೆ.ಬಳಕೆದಾರರು 4K video ಸ್ಪ್ರೀಮಿಂಗ್ ಗೆ ಅವಕಾಶ ನೀಡುತ್ತದೆ ಮತ್ತು ನೆಟ್ ವರ್ಕ್ ಮೂಲಕ VR ಗೇಮ್ಸ್ ಗೆ ಸಪೋರ್ಟ್ ಸಿಗುತ್ತದೆ.

ವಾಯ್ಸ್ ನೇವಿಗೇಷನ್ ಗೆ ಬೆಂಬಲ ನೀಡಲಿದೆ ಜಿಯೋ ಗಿಗಾ ಟಿವಿ ಸೆಟ್-ಅಪ್ – ಬಾಕ್ಸ್

ಜಿಯೋ ಗಿಗಾ ಟಿವಿ ಸೆಟ್-ಅಪ್ ಬಾಕ್ಸ್ ವಾಯ್ಸ್ ಕಮಾಂಡ್ ಗಳಿಗೆ ಬೆಂಬಲ ನೀಡುತ್ತದೆ. ಪ್ಲೇಬ್ಯಾಕ್ ಕಂಟೆಂಟ್ ಗಳನ್ನು ಬಳಕೆದಾರರು ಕಂಟ್ರೋಲ್ ಮಾಡಲು ವಾಯ್ಸ್ ಕಮಾಂಡ್ ಗಳನ್ನು ಬಳಸಲು ಗ್ರಾಹಕರಿಗೆ ಅವಕಾಶವಿರುತ್ತದೆ.

ಜಿಯೋ ಗಿಗಾ ಫೈಬರ್ ಇನ್ಸ್ಟಾಲೇಷನ್ ಫೀ

ಗಿಗಾಫೈಬರ್ ಬ್ರಾಡ್ ಬ್ಯಾಂಡ್ ಕನೆಕ್ಷನ್ ನ್ನು ಪಡೆದುಕೊಳ್ಳಲು ಗ್ರಾಹಕರು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ.

ಫಿಕ್ಸ್ಡ್ ಸೆಕ್ಯುರಿಟಿ ಮೊತ್ತವನ್ನು ಗ್ರಾಹಕರು ಡೆಸಾಪಿಟ್ ಮಾಡಬೇಕಾಗಬಹುದು

ಜಿಯೋ ಗಿಗಾ ಫೈಬರ್ ಉಚಿತವಾಗಿ ಲಭ್ಯವಾಗುತ್ತದೆ. ಆದರೆ ವರದಿಯೊಂದು ಮಾಹಿತಿ ನೀಡಿರುವ ಪ್ರಕಾರ ಗ್ರಾಹಕರು ಸ್ವಲ್ಪ ಮೊತ್ತವನ್ನು ಭದ್ರತಾ ದೃಷ್ಟಿಯಿಂದ ಫಿಕ್ಸ್ಡ್ ಡೆಪಾಸಿಟ್ ಮಾಡಬೇಕಾಗುತ್ತದೆ.

ಜಿಯೋ ಗಿಗಾ ಫೈಬರ್ ಮಾಸಿಕ ಪ್ಯಾಕೇಜ್ ಗಳು 500 ರುಪಾಯಿಯಿಂದ ಆರಂಭವಾಗುವ ಸಾಧ್ಯತೆ

ಊಹೆಯೊಂದರ ಪ್ರಕಾರ ರಿಲಯನ್ಸ್ ಜಿಯೋ ಇತರೆ ಆಪರೇಟರ್ ಗಳಿಂದ ಶೇಕಡಾ 50 ರಷ್ಟು ಮೊತ್ತವನ್ನು ಕಡಿಮೆ ಪಡೆಯುವ ಸಾಧ್ಯತೆ ಇದೆ. ಇದೀಗ ಹೆಚ್ಚಿನ ಇತರೆ ಆಪರೇಟರ್ ಗಳು ಸುಮಾರು 700ರಿಂದ 1000 ದ ವರೆಗೆ ಮಾಸಿಕ ಪ್ಯಾಕೇಜ್ ನೀಡುತ್ತಿದ್ದಾರೆ. ಈಗಿರುವ ಸಧ್ಯದ ಮಾರುಕಟ್ಟೆಯ ಮೊತ್ತಕ್ಕಿಂತ ಜಿಯೋ ಗಿಗಾ ಫೈಬರ್ ಕಡಿಮೆ ಪಾವತಿ ಕೇಳುತ್ತದೆ ಮತ್ತು 500 ರುಪಾಯಿಗೆ ಮಾಸಿಕ ಪ್ಯಾಕೇಜ್ ಆರಂಭಿಸುವ ಸಾಧ್ಯತೆ ಇದೆ.

"ಹೆಚ್ಚು ರಿಜಿಸ್ಟ್ರೇಷನ್ ನಿಮ್ಮ ಏರಿಯಾದಿಂದ ಕಂಡು ಬಂದಲ್ಲಿ ಅಷ್ಟು ಬೇಗನೇ ನಿಮಗೆ ಜಿಯೋ ಗಿಗಾ ಫೈಬರ್ ಲಭ್ಯವಾಗುತ್ತದೆ"

ಎಷ್ಟು ಬೇಗ ನಿಮ್ಮ ಸಿಟಿಯಲ್ಲಿ ಅಥವಾ ನಿಮ್ಮ ಏರಿಯಾದಲ್ಲಿ ಜಿಯೋ ಗಿಗಾಫೈಬರ್ ಲಭ್ಯವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಎಷ್ಟು ಮಂದಿ ನಿಮ್ಮ ಏರಿಯಾದಿಂದ ರಿಜಿಸ್ಟ್ರೇಷನ್ ಮಾಡಿಸುತ್ತಾರೆ ಎಂಬುದನ್ನು ಅವಲಂಬಿಸಿದೆ.ನೀವು ಮಾತ್ರ ರಿಜಿಸ್ಟ್ರರ್ ಮಾಡುದಲ್ಲ ಬದಲಾಗಿ ನಿಮ್ಮ ಅಕ್ಕಪಕ್ಕದವರು ಕೂಡ ರಿಜಿಸ್ಟ್ರೇಷನ್ ಮಾಡಿದ್ದಾರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಹಾಗೆ ಮಾಡಿದರೆ ಮಾತ್ರ ಅತೀ ಬೇಗನೆ ನಿಮಗೆ ನಮ್ಮ ಸೌಲಭ್ಯ ಲಭ್ಯವಾಗುತ್ತದೆ ಎಂಬುದಾಗಿ ಮುಖೇಶ್ ಅಂಬಾನಿ ಒಮ್ಮೆ ಸಭೆಯೊಂದರಲ್ಲಿ ಹೇಳಿಕೆ ನೀಡಿದ್ದರು.

ಗಿಗಾ ಪೈಬರ್ ಟ್ರಯಲ್ ರನ್ನಿಂಗ್ ಈಗಾಗಲೇ ಆರಂಭವಾಗಿದೆ

ರಿಲಯನ್ಸ್ ಜಿಯೋ ಈಗಾಗಲೇ ಬೆಟಾ ಟ್ರಯಲ್ ರನ್ನಿಂಗ್ ನ್ನು ಆರಂಭಿಸಿದೆ. ಹೌದು ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯ ಟ್ರಯಲ್ ರನ್ನಿಂಗ್ ರನ್ನು ಕಳೆದ ಕೆಲವು ತಿಂಗಳಿನಿಂದ ನಡೆಸಲಾಗುತ್ತಿದೆ. ಈಗಾಗಲೇ ಸುಮಾರು 10,000 ಮನೆಗಳಲ್ಲಿ ರಿಲಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಸೇವೆಯು ಕಾರ್ಯ ನಿರ್ವಹಿಸುತ್ತಿದೆ ಎಂದು ಕಂಪೆನಿಯು ಜುಲೈನಲ್ಲಿ ತಿಳಿಸಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

Read more about:
English summary
Reliance Jio GigaFiber in 900 cities and counting: 15 things to know

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more