ಹೊಸ ವರ್ಷಕ್ಕೆ 'ಜಿಯೋ' ಇಂಥಾ ಕೊಡುಗೆ ನೀಡುತ್ತೆ ಅಂತಾ ಯಾರು ಊಹಿಸಿರಲಿಲ್ಲ!

|

ರಿಲಾಯನ್ಸ್ ಜಿಯೋ ಮೊದಲಿನಿಂದಲ್ಲೂ ಹಬ್ಬಗಳು ಮತ್ತು ವಿಶೇಷದಿನಗಳಲ್ಲಿ ತನ್ನ ಗ್ರಾಹಕರಿಗೆ ಭಾರಿ ಆಫರ್ ನೀಡಿತ್ತಾ ಬಂದಿದೆ. ಈಗ ಅದೇ ಹಾದಿಯಲ್ಲಿ ಮುನ್ನಡೆದಿರುವ ಜಿಯೋ ಸಂಸ್ಥೆಯು ಹೊಸ ವರ್ಷ 2020ರ ಸ್ವಾಗತಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದೆ. ಹೊಸ ವರ್ಷಕ್ಕೆ ಜಿಯೋ ಇಂಥಹದೊಂದು ಆಫರ್ ನೀಡುತ್ತೆ ಅಂತಾ ಬಹುಶಃ ಚಂದಾದಾರರು ಊಹಿಸಿರಲಿಕ್ಕಿಲ್ಲ.

ಹೌದು, ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಂಸ್ಥೆಯು ತನ್ನ ಚಂದಾದಾರರಿಗೆ 'ಹ್ಯಾಪಿ ನ್ಯೂ ಇಯರ್' ಆಫರ್ ಅನ್ನು ಬಿಡುಗಡೆ ಮಾಡಿದೆ. 2020ರೂ. ಬೆಲೆಯಲ್ಲಿ ಎರಡು ಭರ್ಜರಿ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ಲ್ಯಾನ್ ಜಿಯೋ ಚಂದಾದಾರರಿಗೆ ವಾರ್ಷಿಕ ಅವಧಿಯ ಪ್ರಯೋಜನೆಗಳನ್ನು ಒದಗಿಸಿದರೇ, ಇನ್ನೊಂದು ಕೊಡುಗೆಯು ಜಿಯೋ ಫೋನ್ ಗ್ರಾಹಕರಿಗೆ ವಾರ್ಷಿಕ ಧಮಾಕ ನೀಡಲಿದೆ. ಹಾಗಾದರೇ ಜಿಯೋದ ಹ್ಯಾಪಿ ನ್ಯೂ ಇಯರ್-2020 ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿರಿ.

ಜಿಯೋ ಹ್ಯಾಪಿ ನ್ಯೂ ಇಯರ್-2020 ಕೊಡುಗೆ

ಜಿಯೋ ಹ್ಯಾಪಿ ನ್ಯೂ ಇಯರ್-2020 ಕೊಡುಗೆ

ಜಿಯೋದ ಹ್ಯಾಪಿ ನ್ಯೂ ಇಯರ್ - 2020 ಕೊಡುಗೆಯು ಜಿಯೋ ಚಂದಾದಾರರಿಗೆ ಭರ್ಜರಿ ಆಫರ್ ನೀಡುತ್ತದೆ. 2020ರೂ.ಪ್ಲ್ಯಾನ್‌ ರೀಚಾರ್ಜ್‌ನಲ್ಲಿ ಚಂದಾದಾರರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಅನಿಯಮಿತ ಕರೆಗಳ ಸೌಲಭ್ಯ(ಜಿಯೋ ದಿಂದ ಇತರೆ ಟೆಲಿಕಾಂ 12,000ನಿಮಿಷ ಮಿತಿ), ಪ್ರತಿದಿನ 1.5GB ಡಾಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ಲಭ್ಯವಾಗಲಿದೆ. ಇನ್ನು ಹೆಚ್ಚುವರಿಯಾಗಿ ಜಿಯೋ ಆಪ್ಸ್‌ ಸೌಲಭ್ಯಗಳು ದೊರೆಯಲಿವೆ.

ಸೀಮಿತ ಅವಧಿಯ ಕೊಡುಗೆ

ಸೀಮಿತ ಅವಧಿಯ ಕೊಡುಗೆ

ರಿಲಯನ್ಸ್ ಜಿಯೋ ಇದೀಗ ಘೋಷಿಸಿರುವ ಹ್ಯಾಪಿ ನ್ಯೂ ಇಯರ್-2020ರೂ.ಕೊಡುಗೆಯು ಸೀಮಿತ ಅವಧಿಯನ್ನು ಪಡೆದಿವೆ. ಅಂದಾಹಾಗೇ ಈ ಹ್ಯಾಪಿ ನ್ಯೂ ಇಯರ್ 2020ರೂ. ರೀಚಾರ್ಜ್ ಆಫರ್ ಇಂದಿನಿಂದ(ಡಿ.24) ಲಭ್ಯವಿರಲಿದೆ. ಆಫರ್ ಮುಗಿದ ಮೇಲೆ ಈ ಪ್ಲ್ಯಾನ್‌ಗಳು ಅನ್ವಯವಾಗುವುದಿಲ್ಲ. ವಾರ್ಷಿಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡಾಟಾ ಬಯಸುವ ಗ್ರಾಹಕರಿಗೆ ಈ ಕೊಡುಗೆ ಬೆಸ್ಟ್ ಅನಿಸುವುದು.

ಈ ಆಫರ್ ಯೋಗ್ಯವೇ?

ಈ ಆಫರ್ ಯೋಗ್ಯವೇ?

ವಾರ್ಷಿಕ ವ್ಯಾಲಿಡಿಟಿ ಅವಧಿಯ ಜೊತೆಗೆ ಪ್ರತಿದಿನ ಡಾಟಾ ಮತ್ತು ಅನಿಯಮಿತ ಕರೆ ಪ್ರಯೋಜನ ಬಯಸುವ ಜಿಯೋ ಗ್ರಾಹಕರಿಗೆ ಹ್ಯಾಪಿ ನ್ಯೂ ಇಯರ್ ಪ್ಲ್ಯಾನ್ ಬೆಸ್ಟ್ ಅಂತಾ ಹೇಳಬಹುದು. ಏಕೆಂದರೇ ಜಿಯೋದ 2,199ರೂ ವಾರ್ಷಿಕ ಪ್ಲ್ಯಾನಿನಲ್ಲಿರುವ ಪ್ರಯೋಜನಗಳೆ ಹ್ಯಾಪಿ ನ್ಯೂ ಇಯರ್ ಪ್ಲ್ಯಾನಿನಲ್ಲಿಯೂ ಲಭ್ಯವಾಗಲಿವೆ. ಇನ್ನು ಇತರೆ ಟೆಲಿಕಾಂ ಸಂಸ್ಥೆಗಳ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್ 2400ರೂ.ಬೆಲೆಯನ್ನು ಪಡೆದಿವೆ.

Most Read Articles
Best Mobiles in India

English summary
Reliance Jio has launched a new Happy New Year Offer for the subscribers wherein the yearlong plan is available for Rs 2,020. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X