ರಿಲಾಯನ್ಸ್ ಜಿಯೋ: ಬ್ಯಾಲೆನ್ಸ್ ಚೆಕ್‌, ಡಾಟಾ ಬಳಕೆ, ಜಿಯೋ ನಂಬರ್ ಚೆಕ್‌'ಗಾಗಿ USSD ಕೋಡ್‌ಗಳು

ರಿಲಾಯನ್ಸ್ ಜಿಯೋ USSD ಕೋಡ್‌ಗಳ ಬಗ್ಗೆ ಕಂಪ್ಲೀಟ್ ಮಾಹಿತಿ ತಿಳಿಯಿರಿ

By Suneel
|

ಉಚಿತ ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕರೆ ಹಾಗು 4G ಡಾಟಾ ಬಳಕೆಯ ಬೆನಿಫಿಟ್‌ಗಳ ಸಲುವಾಗಿ ಈಗಾಗಲೇ ಬಹುಸಂಖ್ಯಾತ ಸ್ಮಾರ್ಟ್‌ಫೋನ್ ಬಳಕೆದಾರರು ಜಿಯೋ ಸಿಮ್ ಖರೀದಿಸಿದ್ದಾರೆ. ಅಂದಹಾಗೆ ರಿಲಾಯನ್ಸ್ ಜಿಯೋ ಉಚಿತ ಬೆನಿಫಿಟ್‌ಗಳು ಈ ವರ್ಷದ ಡಿಸೆಂಬರ್ 31 ರವರೆಗೆ ಎಂಬುದನ್ನು ಮರೆಯದಿರಿ.

ಈಗಾಗಲೇ ನೀವು ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್‌ ಅನ್ನು ಬಳಸುತ್ತಿರಬಹುದು. ಈಗೇನೋ ಡಾಟಾ ಬಳಕೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಆದ್ರೆ ಒಮ್ಮೆ ವೆಲ್ಕಮ್ ಆಫರ್ ಮುಗಿದ ನಂತರ ಚಿಂತೆಯು ಆರಂಭವಾಗುತ್ತೆ. ಹಾಗೆ ರೂ.149 ರಿಂದ ರೂ.4,999 ರವರೆಗೆ ಯಾವುದಾದರೂ ಪ್ಲಾನ್‌ ಅನ್ನು ಸಬ್‌ಸ್ಕ್ರೈಬ್‌ ಸಹ ಮಾಡಿಕೊಳ್ಳಬೇಕಾಗುತ್ತದೆ.

ಅನ್‌ಲಿಮಿಟೆಡ್ ರಿಲಾಯನ್ಸ್ ಜಿಯೋ ಬಾರ್‌ಕೋಡ್‌ ಜೆನೆರೇಟ್‌ಗಾಗಿ ಈ ಹಂತಗಳನ್ನು ಪಾಲಿಸಿ

ಅಂದಹಾಗೆ ಹೊಸ ಪ್ಲಾನ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿಕೊಳ್ಳುವ ಪ್ರಕ್ರಿಯೆ ಜನವರಿ 1, 2017 ರಿಂದ ಆರಂಭವಾಗುತ್ತದೆ. ನಂತರದಲ್ಲಿ ಜಿಯೋ ಸಿಮ್ ಡಾಟಾ ಬಳಕೆಯ ಬಗ್ಗೆ ಕಡ್ಡಾಯವಾಗಿ ಟ್ರ್ಯಾಕ್‌ ಮಾಡಬೇಕಾಗುತ್ತದೆ. ಇಂತಹ ಹಲವು ಬಳಕೆಗಳನ್ನು ಟ್ರ್ಯಾಕ್ ಮಾಡಲು, ಬ್ಯಾಲೆನ್ಸ್ ಚೆಕ್‌ ಮಾಡಲು, ಜಿಯೋ(Jio) ನಂಬರ್ ತಿಳಿಯಲು ಅನುಕೂಲವಾಗುವ USSD ಕೋಡ್‌ಗಳು ಯಾವುವು ಎಂದು ಮುಂದಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ನಿಮ್ಮ ಮೇನ್ ಬ್ಯಾಲೆನ್ಸ್ ಚೆಕ್ ಮಾಡಿ

ನಿಮ್ಮ ಮೇನ್ ಬ್ಯಾಲೆನ್ಸ್ ಚೆಕ್ ಮಾಡಿ

ಮೇನ್‌ ಬ್ಯಾಲೆನ್ಸ್ ಚೆಕ್‌ ಮಾಡಲು ಎರಡು ಮಾರ್ಗಗಳಿವೆ. *333# ಡಯಲ್‌ ಮಾಡಿದರೆ ಜಿಯೋ ನಂಬರ್‌ನ ಮೇನ್‌ ಬ್ಯಾಲೆನ್ಸ್ ಅನ್ನು ಸ್ಕ್ರೀನ್‌ನಲ್ಲಿ ತೋರಿಸುತ್ತದೆ. ಅಥವಾ MBAL ಎಂದು ಟೈಪಿಸಿ 55333 ಗೆ ಸೆಂಡ್‌ ಮಾಡಿ ಮೆಸೇಜ್‌ ಮೂಲಕ ಮೇನ್‌ ಬ್ಯಾಲೆನ್ಸ್ ಮಾಹಿತಿ ಪಡೆಯಿರಿ.

 ಪ್ರೀಪೇಡ್‌ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಚೆಕ್‌ ಮಾಡಿ

ಪ್ರೀಪೇಡ್‌ ಬ್ಯಾಲೆನ್ಸ್ ಮತ್ತು ವ್ಯಾಲಿಡಿಟಿ ಚೆಕ್‌ ಮಾಡಿ

BAL ಎಂದು ಟೈಪಿಸಿ 199 ಗೆ ಮೆಸೇಜ್‌ ಸೆಂಡ್‌ ಮಾಡಿ, ಪ್ರೀಪೇಡ್ ಬ್ಯಾಲೆನ್ಸ್ ಮತ್ತು ಪ್ಯಾಕ್ ವ್ಯಾಲಿಡಿಟಿ ಬಗ್ಗೆ ಮಾಹಿತಿ ತಿಳಿಯಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಲ್‌ ಹಣ ತಿಳಿಯಿರಿ

ಬಿಲ್‌ ಹಣ ತಿಳಿಯಿರಿ

ರಿಲಾಯನ್ಸ್ ಜಿಯೋ ಪೋಸ್ಟ್‌ಪೇಡ್ ಬಿಲ್‌ ಹಣವನ್ನು ಚೆಕ್‌ ಮಾಡಲು BILL ಎಂದು ಟೈಪಿಸಿ 199 ಸೆಂಡ್‌ ಮಾಡಿ. ನಂತರ ಬಿಲ್ ಹಣ ಎಷ್ಟು ಎಂದು ಮೆಸೇಜ್ ಬರುತ್ತದೆ.

ಯಾವ ಟ್ಯಾರಿಫ್‌ ಪ್ಲಾನ್‌ಗೆ ಸಬ್‌ಸ್ಕ್ರೈಬ್‌ ಆಗಿದ್ದೀರಿ ತಿಳಿಯಿರಿ

ಯಾವ ಟ್ಯಾರಿಫ್‌ ಪ್ಲಾನ್‌ಗೆ ಸಬ್‌ಸ್ಕ್ರೈಬ್‌ ಆಗಿದ್ದೀರಿ ತಿಳಿಯಿರಿ

ನೀವು ಯಾವ ಟ್ಯಾರಫ್‌ ಪ್ಲಾನ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿದ್ದೀರಿ ಎಂದು ತಿಳಿಯದಿದ್ದಲ್ಲಿ, MY PLAN ಎಂದು ಟೈಪಿಸಿ 199 ಸೆಂಡ್‌ ಮಾಡಿ. ನಂತರ ನೀವು ಯಾವ ಪ್ಲಾನ್‌ ಅನ್ನು ಸಬ್‌ಸ್ಕ್ರೈಬ್‌ ಮಾಡಿದ್ದೀರಿ ಎಂದು ತಿಳಿಯುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಜಿಯೋ ನಂಬರ್ ತಿಳಿಯಿರಿ

ನಿಮ್ಮ ಜಿಯೋ ನಂಬರ್ ತಿಳಿಯಿರಿ

*1# ಡಯಲ್‌ ಮಾಡಿ ನಿಮ್ಮ ರಿಲಾಯನ್ಸ್ ಜಿಯೋ ನಂಬರ್‌ ಅನ್ನು ತಿಳಿಯಿರಿ

4G ಡಾಟಾ ಬಳಕೆಯನ್ನು ರಿಲಾಯನ್ಸ್ ಜಿಯೋದಲ್ಲಿ ತಿಳಿಯಿರಿ

4G ಡಾಟಾ ಬಳಕೆಯನ್ನು ರಿಲಾಯನ್ಸ್ ಜಿಯೋದಲ್ಲಿ ತಿಳಿಯಿರಿ

ರಿಲಾಯನ್ಸ್ ಜಿಯೋ ಈಗ 4G ಡಾಟಾವನ್ನು ಮಾತ್ರ ಉಚಿತವಾಗಿ ನೀಡಿರಬಹುದು. ನಂತರ ನೀವು ಆಯ್ಕೆ ಮಾಡಿಕೊಂಡ ಟ್ಯಾರಿಫ್ ಪ್ಲಾನ್‌ನಲ್ಲಿ ಎಷ್ಟು 4G ಡಾಟಾ ಬಳಕೆ ಆಗಿದೆ ಎಂದು ತಿಳಿಯಲು ಯಾವುದೇ USSD ಕೋಡ್ ಅನ್ನು ತಿಳಿಸಿಲ್ಲ. ಆದರೆ ಸ್ಮಾರ್ಟ್‌ಫೋನ್‌ನಲ್ಲಿ 'Data Usage' ಆಪ್ಶನ್‌ಗೆ ಹೋಗಿ ಡಾಟಾ ಬಳಕೆ ಬಗ್ಗೆ ತಿಳಿಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Reliance Jio: How to Check Balance, Data Usage, Jio Number, and More. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X