ಆರೋಗ್ಯ ಕ್ಷೇತ್ರದಲ್ಲಿ ಜಿಯೋ 5G ಎಂಟ್ರಿ!..ಏನೆಲ್ಲಾ ಅನುಕೂಲ ಆಗಲಿದೆ?

|

ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಅನ್ವಯ ಮಾಡಲು ಜಿಯೋ ಟ್ರೂ (Jio True) 5G ಮತ್ತು ಐಎಲ್‌ಬಿಎಸ್‌ (ILBS) ಕಾರ್ಯತಂತ್ರ ಪಾಲುದಾರಿಕೆ ಹೊಂದಿವೆ. ಪ್ರತಿ ಭಾರತೀಯರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದಕ್ಕೆ ನೆರವಾಗುವುದು ಜಿಯೋ ಟ್ರೂ 5G ಯ ಉದ್ದೇಶವಾಗಿದೆ.

ಜಿಯೋ ಟ್ರೂ 5G ಮತ್ತು ಐಎಲ್‌ಬಿಎಸ್‌ (ILBS)

ಜಿಯೋ ಟ್ರೂ 5G ಮತ್ತು ಐಎಲ್‌ಬಿಎಸ್‌ (ILBS) ಮಧ್ಯದ ಈ ಕಾರ್ಯತಂತ್ರದ ಪಾಲುದಾರಿಕೆಯು ಹೆಲ್ತ್‌ಕೇರ್ ಕ್ಷೇತ್ರದಲ್ಲಿ ಆಧುನಿಕ ಪ್ರಗತಿಗಾಗಿ ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನಗಳನ್ನು ಸಕ್ರಿಯಗೊಳಿಸುತ್ತದೆ.

ಆರೋಗ್ಯ

ಕಡಿಮೆ-ಲೇಟೆನ್ಸಿಯೊಂದಿಗೆ ಟ್ರೂ 5G ತಂತ್ರಜ್ಞಾನದ ಶಕ್ತಿಯು ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ವರ್ಧಿಸುತ್ತದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬಳಕೆ-ಪ್ರಕರಣಗಳಿಗೆ ಜೀವ ತುಂಬುತ್ತದೆ. ಅವು ಈ ಕೆಳಗಿನಂತೆ ಇವೆ:

ಆಂಬ್ಯುಲೆನ್ಸ್

1) ರೊಬೊಟಿಕ್ಸ್-ಆಧಾರಿತ ಚಿಕಿತ್ಸೆ / ಶಸ್ತ್ರಚಿಕಿತ್ಸೆ

2) ರಿಮೋಟ್ - ಐಸಿಯು

3) ಐಸಿಯು - ಆಂಬ್ಯುಲೆನ್ಸ್

4) ಸಮುದಾಯ ಚಿಕಿತ್ಸಾಲಯಗಳು ಮತ್ತು ಇನ್ನೂ ಅನೇಕ

ಜಿಯೋ ಟ್ರೂ 5G ನೆಟ್‌ವರ್ಕ್‌

ಜಿಯೋ ಟ್ರೂ 5G ನೆಟ್‌ವರ್ಕ್‌

ಜಿಯೋದ ಟ್ರೂ 5G ನೆಟ್‌ವರ್ಕ್‌ನಲ್ಲಿನ ಡೇಟಾ ಬಳಕೆಯು ಜಿಯೋದ 4G ನೆಟ್‌ವರ್ಕ್‌ನಲ್ಲಿ ಸೇವಿಸುವ ಪ್ರಸ್ತುತ ಡೇಟಾಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಪ್ರಮುಖ ಸಂಗತಿಯೆಂದರೆ, ಈ ಡೇಟಾ ಅನುಭವವನ್ನು 500 Mbps ನಿಂದ 1 Gbps ವರೆಗಿನ ಬ್ರೇಕ್-ನೆಕ್ ವೇಗದಲ್ಲಿ ಮತ್ತು ಅತ್ಯಂತ ಕಡಿಮೆ ಲೇಟೆನ್ಸಿಯಲ್ಲಿ ವಿತರಿಸಲಾಗುತ್ತದೆ.

ನೆಟ್‌ವರ್ಕ್‌ನ

* 4G ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5G ನೆಟ್‌ವರ್ಕ್‌ ನೊಂದಿಗೆ ಅದ್ವಿತೀಯ 5G ಆರ್ಕಿಟೆಕ್ಚರ್.

* 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5G ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.

* ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5G ಫ್ರೀಕ್ವೆನ್ಸಿಗಳನ್ನು ಏಕರೂಪದ "ಡೇಟಾ ಹೈವೇ" ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.

ಬ್ಯಾಂಡ್‌ಗಳಲ್ಲಿ

ಜಿಯೋ ಟೆಲಿಕಾಂ 700MHz (n28) ಆವರ್ತನದಲ್ಲಿ 5G ಬ್ಯಾಂಡ್‌ಗಳನ್ನು ಹೊಂದಿರುವ ಏಕೈಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಜಿಯೋ 800MHz (n5), 1800MHz (n3), 3300MHz (n78) ಮತ್ತು 26GHz (n258) ಆವರ್ತನ ಬ್ಯಾಂಡ್‌ಗಳಲ್ಲಿ ಬ್ಯಾಂಡ್‌ಗಳನ್ನು ಖರೀದಿಸಿತು. ಒಂದೇ ದೃಢವಾದ "ಡೇಟಾ ಹೈವೇ" ಅನ್ನು ನೀಡಲು, ಟೆಲಿಕಾಂ ಈ 5G ಆವರ್ತನಗಳನ್ನು ಸಂಯೋಜಿಸುವ ಮೂಲಕ ಕ್ಯಾರಿಯರ್ ಒಟ್ಟುಗೂಡಿಸುವಿಕೆಯನ್ನು ಬಳಸುತ್ತದೆ.

ಏನಿದು ಜಿಯೋ 5G ವೆಲ್‌ಕಮ್‌ ಆಫರ್?

ಏನಿದು ಜಿಯೋ 5G ವೆಲ್‌ಕಮ್‌ ಆಫರ್?

ಜಿಯೋ 5G ವೆಲ್‌ಕಮ್‌ ಆಫರ್ ಸದ್ಯ ದೆಹಲಿ - NCR, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಇತರ 5 ನಗರಗಳು ಸೇರಿದಂತೆ ಅರ್ಹ ನಗರಗಳಲ್ಲಿ ಮಾತ್ರ ಲಭ್ಯವಿದೆ. ಅಂದಹಾಗೆ ಈ 5G ಕೊಡುಗೆಯಲ್ಲಿ ಜಿಯೋ ತನ್ನ ಗ್ರಾಹಕರಿಗೆ 1gbps ವೇಗದೊಂದಿಗೆ ಅನಿಯಮಿತ 5G ಡೇಟಾವನ್ನು ಒದಗಿಸುತ್ತಿದೆ.

ಜಿಯೋ 5G ಅನ್ನು ವೆಲ್‌ಕಮ್‌ ಆಫರ್ ಪಡೆಯುವುದು ಹೇಗೆ?

ಜಿಯೋ 5G ಅನ್ನು ವೆಲ್‌ಕಮ್‌ ಆಫರ್ ಪಡೆಯುವುದು ಹೇಗೆ?

ಜಿಯೋ ವೆಲ್‌ಕಮ್‌ ಆಫರ್ ಆಹ್ವಾನ ಆಧಾರಿತವಾಗಿದೆ. ಹಾಗಂತ ಜಿಯೋ 5G ಸಂಪರ್ಕದ ನಗರಗಳಲ್ಲಿರುವ ಎಲ್ಲರಿಗೂ ಆಹ್ವಾನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ವರದಿಗಳ ಪ್ರಕಾರ, ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್‌ನಲ್ಲಿ 239ರೂ. ಪ್ಲಾನ್ ಅಥವಾ ಅದಕ್ಕಿಂತ ಹೆಚ್ಚಿನ ಸಕ್ರಿಯ ಯೋಜನೆಯನ್ನು ಹೊಂದಿರುವ ಬಳಕೆದಾರರಿಗೆ ಜಿಯೋ ಉಚಿತ 5G ಸೇವೆಗಳ ಆಹ್ವಾನವನ್ನು ಕಳುಹಿಸುತ್ತದೆ.

Best Mobiles in India

English summary
Reliance Jio, ILBS to partner for 5G use in healthcare.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X