ಬಳಕೆದಾರರಿಗೆ ಬಹುದೊಡ್ಡ ಶಾಕ್ ನೀಡಿದ ಜಿಯೋ!..ಭಾರಿ ಸಂಕಷ್ಟದಲ್ಲಿ ಗ್ರಾಹಕ!!

By Bhaskar N J

  120 ದಶಲಕ್ಷಕ್ಕೂ ಅಧಿಕ ರಿಲಯನ್ಸ್ ಜಿಯೊ ಗ್ರಾಹಕರ ಅಂಕಿಅಂಶ, ದತ್ತಾಂಶಗಳು 'ಮ್ಯಾಜಿಕ್ಪ್ಯಾಕ್' ಎನ್ನುವ ವೆಬ್‌ಸೈಟ್‌ಗೆ ಸೋರಿಕೆಯಾಗಿದೆ ಎಂದು ಹಲವು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ. http://magicapk.com ವೆಬ್‌ಸೈಟ್ ಸರ್ಚ್ಬಾಕ್ಸ್ ನಲ್ಲಿ ಜಿಯೊ ನಂಬರ್ ಹಾಕಿ ಹುಡುಕಿದಾಗ ಜಿಯೋ ಬಳಕೆದಾರರೆಲ್ಲರ ವೈಯಕ್ತಿಕ ಮಾಹಿತಿಗಳು ಸಿಕ್ಕಿವೆ!!

  ಇದು ಭಾರತದಲ್ಲಿಯೇ ಅತಿದೊಡ್ಡ ದತ್ತಾಂಶ ಸೋರಿಕೆ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿದ್ದು, ಈ ಬಗ್ಗೆ ಗ್ರಾಹಕರ ವೈಯಕ್ತಿಕ ಮಾಹಿತಿಯ ಹಕ್ಕು ಕಾನೂನಿನ ಮೇಲೆ ಜಿಯೋ ಮೇಲೆ ತನಿಖೆ ನಡೆಸಲಾಗುತ್ತಿದೆ.!! ವೈಯಕ್ತಿಕ ಮಾಹಿತಿಯನ್ನು ಸುರಕ್ಷತೆ ಮಾಡುವುದಾಗಿ ಹೇಳಿದ್ದ ಜಿಯೋ ಇದೀಗ ಸಂಕಷ್ಟಕ್ಕೆ ಸಿಲುಕಿದೆ.!!

  ಹಾಗಾದರೆ, ಜಿಯೋ ಗ್ರಾಹಕರ ಮಾಹಿತಿಯನ್ನು ಮಾರಾಟ ಮಾಡಿದೆಯೇ? ಇದಕ್ಕೆ ಜಿಯೋ ಹೇಳಿದ್ದೇನು? ಆರೋಪ ಸಾಭೀತಾದರೆ ಏನು ಕ್ರಮ ಕೈಗೊಳ್ಳಲಾಗುವುದು?  ಭಾರತದ ಬಹುದೊಡ್ಡ ದತ್ತಾಂಶ ಸೋರಿಕೆಯಾದೆಯೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಯಾವ ಯಾವ ಖಾಸಾಗಿ ಮಾಹಿತಿ ಸೋರಿಕೆ?

  'ಮ್ಯಾಜಿಕ್ಪ್ಯಾಕ್' ವೆಬ್‌ಸೈಟ್ನಲ್ಲಿ ಜಿಯೊ ಗ್ರಾಹಕರ ಮೊದಲ ಹೆಸರು, ಕೊನೆಯ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಸರ್ಕಲ್, ಸಿಮ್ ಆಕ್ಟಿವೇಶನ್ ದಿನಾಂಕ, ಆಧಾರ್ ಸಂಖ್ಯೆ ಇತ್ಯಾದಿ ಮಾಹಿತಿಗಳು ಸಿಕ್ಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

  10 ಕೋಟಿ ಗ್ರಾಹಕರ ಮಾಹಿತಿ ಸೋರಿಕೆ!!

  ಫೆಬ್ರವರಿ 2017ರ ಹೊತ್ತಿಗೆ 10ಕೋಟಿಗೂ ಅಧಿಕ ಗ್ರಾಹಕರು ರಿಲಯನ್ಸ್ ಜಿಯೊ ಚಂದಾದಾರರೆಆಇಗಿದ್ದು, ಬಹುತೇಕ ಎಲ್ಲಾ ಜಿಯೋ ಬಳಕೆದಾರರ ಮಾಹಿತಿ ಸಹ 'ಮ್ಯಾಜಿಕ್ಪ್ಯಾಕ್' ವೆಬ್‌ಸೈಟ್ನಲ್ಲಿ ಲೀಕ್ ಆಗಿದೆ. ದತ್ತಾಂಶಗಳ ಸೋರಿಕೆ ಗ್ರಾಹಕರ ಮೇಲಾದರೆ ಇದು ನಿಜಕ್ಕೂ ಭಾರತದಲ್ಲಿ ಇದುವರೆಗೆ ಆದ ಬಹುದೊಡ್ಡ ದತ್ತಾಂಶಗಳ ಸೋರಿಕೆಯಾಗಿಲಿದೆ.

  ಈ ಬಗ್ಗೆ ಜಿಯೋ ಹೇಳಿದ್ದೇನು?

  ಗ್ರಾಹಕರ ವೈಯಕ್ತಿಕ ಮಾಹಿತಿಯ ಹಕ್ಕು ಕಾನೂನಿನ ಮೇಲೆ ಜಿಯೋ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಯೋ ಕಂಪೆನಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ಯಾವುದೇ ಕಾರಣಕ್ಕೂ ದತ್ತಾಂಶ ಸೋರಿಕೆಯಾಗಿಲ್ಲ. ನಾವು ದತ್ತಾಂಶವನ್ನು ಸುರಕ್ಷಿತವಾಗಿಟ್ಟಿದ್ದೇವೆ ಎಂದು ಜಿಯೋ ಹೇಳಿದೆ.!!

  ಆರೋಪ ಸಾಭೀತಾದರೆ ಏನು ಕ್ರಮ?

  ಜಿಯೋ ಏನಾದರೂ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿದ್ದರೆ ಟ್ರಾಯ್ ಮತ್ತು ಗ್ರಾಹಕರ ವೈಯಕ್ತಿಕ ಮಾಹಿತಿಯ ಹಕ್ಕು ಕಾನೂನಿನ ಮೇಲೆ ಜಿಯೋವಿಗೆ ಭಾರಿ ದಂಡ ವಿಧಿಸುವ ಸಾಧ್ಯತೆ ಇದೆ. ಆದರೆ, ಗ್ರಾಹಕರ ಮಾಹಿತಿ ಸೋರಿಕೆಯನ್ನು ತಡೆಹಿಡಿಯಲು ಸಾಧ್ಯವಿಲ್ಲಾ ಎಂದು ಟೆಲಿಕಾಂ ತಜ್ಞರು ಹೇಳಿದ್ದಾರೆ.!!

  Fonearena.com ನಲ್ಲಿ ಈ ಬಗ್ಗೆ ಮೊದಲ ಮಾಹಿತಿ!!

  ಭಾರೀ ದತ್ತಾಂಶ ಸೋರಿಕೆ ಬಗ್ಗೆ Fonearena.com ಎಂಬ ಟೆಕ್ ವೆಬ್‌ಸೈಟ್ ಮೊದಲಿಗೆ ವರದಿ ಮಾಡಿತ್ತು. ವೆಬ್ಸೈಟ್ ಸಂಪಾದಕ ವರುಣ್ ಕೃಷ್ ಇಂಡಿಯನ್ ಎಕ್ಸ್ಪ್ರೆಸ್ ಪ್ರತಿಕ್ರಿಯೆ ನೀಡಿ, ತಮ್ಮ ಮತ್ತು ತಮ್ಮ ಕೆಲವು ಸಹೋದ್ಯೋಗಿಗಳ ವೈಯಕ್ತಿಕ ಮಾಹಿತಿಗಳು ನೀಡಿದಾಗ ತಮಗೆ ನಿಜಕ್ಕೂ ಆಘಾತವುಂಟಾಯಿತು. ಜಿಯೊ ಸಿಮ್ ಪ್ರಿವ್ಯು ಆಫರ್ ಪಡೆದ ಗ್ರಾಹಕರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

  ಓದಿರಿ:ಆಧಾರ್ ಮಾಹಿತಿ ಲೀಕ್ ಆದರೆ ಏನೆಲ್ಲಾ ತೊಂದರೆ ಆಗುತ್ತೆ?!!.ಇದಕ್ಕೆ ಪರಿಹಾರವೇನು?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  India's newest telecoms entrant, Reliance Jio, said it was investigating claims of customer personal data being leaked onto a website called Magicapk.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more