ಜಿಯೋ 4G ವೋಚರ್‌ ಮತ್ತು IUC ಟಾಪ್‌-ಅಪ್‌ ಪ್ಲ್ಯಾನ್: ಯಾವುದು ಯೋಗ್ಯ?

|

ದೇಶದ ಖಾಸಗಿ ಟೆಲಿಕಾಂ ವಲಯದಲ್ಲಿಯೇ ಹೊಸ ಸಂಚಲಯ ಮೂಡಿಸಿದ ಜಿಯೋ ಇದೀಗ ಹೊರ ಹೋಗುವ ಕರೆಗಳಿಗೆ 6ಪೈಸೆ ದರ ನಿಗದಿ ಮಾಡಿ ಸುದ್ದಿ ಆಗಿತ್ತು. ಅದರಿಂದ ತನ್ನ ಚಂದಾದಾರರಿಗೆ ಹೊರೆ ಆಗಬಾರದೆಂದು ವಿವಿಧ ಬೆಲೆಗಳಲ್ಲಿ IUC ಟಾಪ್-ಅಪ್‌ ರೀಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಹಲವು 4G ಡಾಟಾ ಪ್ಲ್ಯಾನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಆದರೆ ಯಾವುದನ್ನು ರೀಚಾರ್ಜ್ ಮಾಡಿಸುವುದು ಯೋಗ್ಯ ಎಂಬ ಪ್ರಶ್ನೆ ಅನೇಕ ಗ್ರಾಹಕರಲ್ಲಿದೆ.

IUC ಟಾಪ್‌-ಅಪ್‌

ಹೌದು, ಜಿಯೋ ಭಿನ್ನ ರೀಚಾರ್ಜ್ ಪ್ಲ್ಯಾನ್‌ ಆಯ್ಕೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ IUC ಟಾಪ್‌-ಅಪ್‌ ರೀಚಾರ್ಜ್ ಪ್ಲ್ಯಾನ್‌ಗಳು ಹಾಗೂ 4G ಡಾಟಾ ವೋಚರ್‌ಗಳು ಸೇರಿವೆ. ಆಲ್‌-ಇನ್‌-ಒನ್ ಪ್ಲ್ಯಾನ್‌, ದೀರ್ಘ ವ್ಯಾಲಿಡಿಟಿ ಅವಧಿಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸಿದ್ದರು ಕೆಲವೊಮ್ಮೆ ಹೆಚ್ಚುವರಿ ಡಾಟಾ ಅಗತ್ಯ ಅನಿವಾರ್ಯ ಆಗಿರುತ್ತದೆ. ಆಗ ಟಾಪ್‌-ಅಪ್‌ ರೀಚಾರ್ಜ್‌ ಆಯ್ಕೆಗಳನ್ನು ಗಮನಿಸುತ್ತಾರೆ. ಹೀಗೆ ರೀಚಾರ್ಜ್ ಮಾಡಿಸುವುದಕ್ಕೆ IUC ಟಾಪ್‌-ಅಪ್‌ ಮತ್ತು 4G ಡಾಟಾ ವೋಚರ್ ಪ್ಲ್ಯಾನ್‌ಗಳಲ್ಲಿ ಯಾವುದು ಬೆಸ್ಟ್‌ ಅಂತೀರಾ. ಮುಂದೆ ಓದಿರಿ.

IUC ಟಾಪ್‌-ಅಪ್‌ ಪ್ಲ್ಯಾನ್‌

IUC ಟಾಪ್‌-ಅಪ್‌ ಪ್ಲ್ಯಾನ್‌

ಜಿಯೋ ದಿಂದ ಇತರೆ ನೆಟವರ್ಕಗಳಿಗೆ ಹೊರಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿದ ನಂತರ ಜಿಯೋ ಈ IUC ಟಾಪ್‌-ಅಪ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿತು. ವ್ಯಾಲಿಡಿಟಿ ಇದ್ದು, ಇತರೆ ನೆಟವರ್ಕಗಳ ಉಚಿತ ಕರೆ ನಿಮಿಷದ ಮಿತಿ ಮುಗಿದಾಗ, ಜಿಯೋ ಗ್ರಾಹಕರ ಈ IUC ಟಾಪ್‌-ಅಪ್‌ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು 10ರೂ.ಯಿಂದ 1000ರೂ.ವರೆಗೂ ಸಹ IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳಿವೆ.

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

IUC ಟಾಪ್‌-ಅಪ್‌ ಡಾಟಾ ಪ್ರಯೋಜನಗಳು

ಅಗ್ಗದ ಬೆಲೆಗೆ ಈ IUC ಟಾಪ್‌-ಅಪ್‌ ರೀಚಾರ್ಜ್‌ಗಳು ಅನುಕೂಲಕರ ಎನ್ನಬಹುದಾಗಿದೆ. IUC ಟಾಪ್‌-ಅಪ್‌ ರೀಚಾರ್ಜ್ ಆಯ್ಕೆಗಳು ಕ್ರಮವಾಗಿ 10ರೂ, 20ರೂ, 50ರೂ, 100ರೂ, 500ರೂ, ಮತ್ತು 1000ರೂ. ಆಗಿವೆ. ಇನ್ನು ಈ ಫ್ಲ್ಯಾನ್‌ಗಳು ಡಾಟಾ ಪ್ರಯೋಜನ ಪಡೆದಿದ್ದು, ಕ್ರಮವಾಗಿ 1GB, 2GB, 5GB, 10GB, 50GB ಮತ್ತು 100GB ಡಾಟಾ ಸೌಲಭ್ಯವನ್ನು ಒದಗಿಸಲಿವೆ.

ಜಿಯೋ 4G ಡಾಟಾ ವೋಚರ್ಸ್‌ ಆಯ್ಕೆಗಳು

ಜಿಯೋ 4G ಡಾಟಾ ವೋಚರ್ಸ್‌ ಆಯ್ಕೆಗಳು

ಜಿಯೋ ಸಂಸ್ಥೆಯು ಹೆಚ್ಚುವರಿ ಡಾಟಾ ಬಳಕೆಗಾಗಿ ಅಗತ್ಯವಿರುವ ಗ್ರಾಹಕರಿಗಾಗಿ ಹಾಗೂ 4G ಡಾಟಾ ಬಳಕೆಗಾಗಿ ಕೆಲವು 4G ಡಾಟಾ ವೋಚರ್ಸ್‌ ಆಯ್ಕೆಗಳು ಪರಿಚಯಿಸಿದೆ. 11ರೂ. ಡಾಟಾ ವೋಚರ್ ನಲ್ಲಿ 400MB ಡಾಟಾ ಲಭ್ಯ, 21ರೂ. ವೋಚರ್‌ನಲ್ಲಿ 1GB ಡಾಟಾ, 51ರೂ. ನಲ್ಲಿ 3GB ಡಾಟಾ, ಹಾಗೂ 101ರೂ. ಡಾಟಾ ವೋಚರ್ ಪ್ಲ್ಯಾನಿನಲ್ಲಿ ಒಟ್ಟು 6GB ಡಾಟಾ ಸಿಗಲಿದೆ.

ಯಾವುದು ಯೋಗ್ಯ?

ಯಾವುದು ಯೋಗ್ಯ?

ಜಿಯೋ ಬಳಕೆದಾರರ ಹೆಚ್ಚುವರಿ 4G ಡಾಟಾ ಅಗತ್ಯಕ್ಕಾಗಿ IUC ಟಾಪ್‌-ಅಪ್‌ ರೀಚಾರ್ಜ್ ಪ್ಲ್ಯಾನುಗಳೆ ಉತ್ತಮ. ಏಕೆಂದರೇ ಅಗ್ಗದ ಬೆಲೆಯಲ್ಲಿ ಉಚಿತ ಕರೆ ನಿಮಿಷ ಹಾಗೂ ಹೆಚ್ಚಿನ ಡಾಟಾ ಪ್ರಯೋಜನಗಳನ್ನು ಒದಗಿಸುತ್ತದೆ. ಅದೇ IUC ಟಾಪ್‌-ಅಪ್‌ಗೆ ಹೋಲಿಸಿದರೇ, ಜಿಯೋ 4G ಡಾಟಾ ರೀಚಾರ್ಜ್ ವೋಚರ್‌ನಲ್ಲಿ ಡಾಟಾ ಪ್ರಯೋಜನ ಕಡಿಮೆ.

Most Read Articles
Best Mobiles in India

English summary
Reliance Jio IUC Top Ups Vs 4G Data Vouchers: Which One Should You Opt

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X