ಜಿಯೋ ಗ್ರಾಹಕರಿಗೆ ಮೊದಲ ಶಾಕಿಂಗ್ ನ್ಯೂಸ್!..ಇನ್ಮುಂದೆ ಕಷ್ಟ ಕಷ್ಟ!!

|

ಇಲ್ಲಿಯವರೆಗೂ ಗ್ರಾಹಕರಿಗೆ ಸಿಹಿಸುದ್ದಿಗಳನ್ನಷ್ಟೇ ನೀಡುತ್ತಿದ್ದ ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪೆನಿ ಜಿಯೋ ಇದೀಗ ಶಾಕಿಂಗ್ ನ್ಯೂಸ್ ನೀಡಿದೆ. ಇನ್ಮುಂದೆ ಜಿಯೋ ಟಿವಿ ಹಾಗೂ ಸಿನಿಮಾ ನೋಡಲು ಗ್ರಾಹಕರು ಹಣ ಪಾವತಿ ಮಾಡಬೇಕು. ಶೀಘ್ರವೇ ಜಿಯೋ ಉಚಿತ ಸೇವೆಯನ್ನು ರದ್ದು ಮಾಡುತ್ತಿದೆ ಎಂದು ಪ್ರಮುಖ ಮಾಧ್ಯಮಗಳ ವರದಿ ಮಾಡಿವೆ.

ಹೌದು, ಇತ್ತೀಚಿಗೆ ಮಾಧ್ಯಮಗಳ ವರದಿ ಮಾಡಿರುವ ಪ್ರಕಾರ, ಇಲ್ಲಿಯವರೆಗೂ ಜಿಯೋ ಟಿವಿ ಹಾಗೂ ಸಿನಿಮಾವನ್ನು ಜಿಯೋ ಬಳಕೆದಾರರು ಉಚಿತವಾಗಿ ನೋಡುತ್ತಿದ್ದರು. ಆದರೆ, ಜಿಯೋ ಉಚಿತ ಮಾದರಿಗಳನ್ನು ಪ್ರೀಮಿಯಮ್ ಮಾದರಿಗೆ ವರ್ಗಾವಣೆ ಮಾಡುವ ಆಲೋಚನೆಯಲ್ಲಿದೆ. ಇದರಿಂದ ಈ ಉಚಿತ ಸೇವೆಗಳು ರದ್ದಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬ ಸುದ್ದಿ ಹೊರಬಿದ್ದಿದೆ.

ಜಿಯೋ ಗ್ರಾಹಕರಿಗೆ ಮೊದಲ ಶಾಕಿಂಗ್ ನ್ಯೂಸ್!..ಇನ್ಮುಂದೆ ಕಷ್ಟ ಕಷ್ಟ!!

2016ರಿಂದ ರಿಲಯನ್ಸ್ ಜಿಯೋ ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದಲೂ ಉಚಿತ ಕರೆ ಹಾಗೂ ಉಚಿತ ಸೇವೆಗಳಿಗೆ ಅವಲಂಬಿತವಾಗಿದೆ. ಆದರೆ, ಡೇಟಾಗಾಗಿ ಮಾತ್ರ ಚಾರ್ಜ್ ಮಾಡುತ್ತಿರುವ ಜಿಯೋ ಕಂಪೆನಿ ಈಗ ಜಿಯೋಟಿವಿ, ಜಿಯೊಮ್ಯೂಸಿಕ್ ಹಾಗೂ ಜಿಯೊಸಿನಿಮಾಗಳಿಗೂ ಫ್ರಿಮಿಯಂ ಮಾದರಿಯನ್ನು ಕಾರ್ಯಗತಗೊಳಿಸಬಹುದು ಎನ್ನಲಾಗಿದೆ.

ಜಿಯೋ ತನ್ನ ಅಪ್ಲಿಕೇಶನ್‌ಗಳಿಗೆ ಫ್ರಿಮಿಯಂ ಮಾದರಿಯನ್ನು ಕಾರ್ಯರೂಪಕ್ಕೆ ತರಲು ಯೋಜಿಸುತ್ತಿದೆ ಎಂದು 'ರಿಲಯನ್ಸ್ ಜಿಯೊ ಟಾರ್ಗೆಟ್ಸ್ ಡಿಜಿಟಲ್ ವಿಷಯ ಲೀಡರ್‌ಶಿಪ್' ಎಂಬ ವರದಿಯಲ್ಲಿ ಹೈಲೈಟ್ ಮಾಡಲಾಗಿದೆ. ಜಿಯೋ ಗ್ರಾಹಕರು ಪ್ರಾರಂಭದಿಂದಲೂ ಉಚಿತ ಸೇವೆಗಳನ್ನು ಪಡೆದಿರುವುದರಿಂದ ಇದು ಕಷ್ಟಸಾಧ್ಯವೆಂದು ಎಂದು ಸ್ಟ್ರಾಟಜಿ ಅನಾಲಿಟಿಕ್ಸ್ ಹೇಳಿದೆ.

ಜಿಯೋ ಗ್ರಾಹಕರಿಗೆ ಮೊದಲ ಶಾಕಿಂಗ್ ನ್ಯೂಸ್!..ಇನ್ಮುಂದೆ ಕಷ್ಟ ಕಷ್ಟ!!

ತನ್ನ ಯಾವುದೇ ರಿಚಾರ್ಜ್ ಪ್ಯಾಕ್ ನಲ್ಲಿಯೇ ಈ ಸೇವೆಗಳನ್ನು ಉಚಿತವಾಗಿ ನೀಡುತ್ತುದ್ದ ಜಿಯೋ ಇನ್ಮುಂದೆ ಇದಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸುವ ಸಾಧ್ಯತೆ ಸುದ್ದಿ ಈವರೆಗೂ ಪಕ್ಕಾ ಆಗಿಲ್ಲ. ಏಕೆಂದರೆ, ಪ್ರೀಮಿಯಮ್ ಆಪ್‌ಗಳಿಗೆ ಶುಲ್ಕ ನಿಗದಿ ಖಾತ್ರಿಯೇ? ಖಾತ್ರಿಯಾದರೂ ಶುಲ್ಕ ಎಷ್ಟು ಎಂಬ ಬಗ್ಗೆ ಅಧಿಕೃತ ಮಾಹಿತಿ ಜಿಯೋ ಕಂಪನಿಯಿಂದ ಈವರೆಗೂ ಹೊರಬಿದ್ದಿಲ್ಲ.

 ಬೆಂಗಳೂರಿನಲ್ಲಿ 'ಬ್ಯಾಂಕ್ ಖಾತೆಗೆ' ಕನ್ನ ಹಾಕಿರುವ ಈ ಪ್ರಕರಣಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!!

ಬೆಂಗಳೂರಿನಲ್ಲಿ 'ಬ್ಯಾಂಕ್ ಖಾತೆಗೆ' ಕನ್ನ ಹಾಕಿರುವ ಈ ಪ್ರಕರಣಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ!!

ಯಾವುದೇ ಕ್ಷಣದಲ್ಲಿ ನಿಮ್ಮ ಮೊಬೈಲ್ ಸಿಮ್ ಡೆಡ್ ಆಗಬಹುದು.! ನಿಮ್ಮ ಸಿಮ್ ಡೆಡ್ ಆದ ತಕ್ಷಣವೇ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿಯಾಗಬಹುದು.ಯಾವಾಗ, ಎಲ್ಲಿ, ಹೇಗೆ ಎಂಬುದು ನಿಮಗೆ ಸ್ವಲ್ಪವೂ ತಿಳಿಯುವುದಿಲ್ಲ ಎಂಬ ಇಂತಹ ಟಿ.ವಿ ಮಾಧ್ಯಮಗಳ ಹೆಡ್‌ಲೈನ್‌ಗಳಿಗೆ ಸರಿಹೊಂದುವಂತಹ ಬೆಚ್ಚಿಬೀಳಿಸುವ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿದೆ.

ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ನಡುಕ ಹುಟ್ಟಿಸುವ ಪ್ರಕರಣ ಇದಾಗಿದ್ದು, ಉದ್ಯಮಿಯೋರ್ವರ ಸಿಮ್ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿಸಿ, ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್‌ ಖಾತೆಯಲ್ಲಿದ್ದ ಹಣವೆಲ್ಲವನ್ನು ದೋಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಸಾರ್ವಜನಿಕರ ಬ್ಯಾಂಕ್‌ ಖಾತೆಗಳಿಗೆ ಬಹಳ ಬುದ್ದಿವಂತಿಕೆಯಿಂದ ಕನ್ನ ಹಾಕುವ ಜಾಲ ನಗರದಲ್ಲಿ ಸಕ್ರಿಯವಾಗಿದ್ದು ಹಾಗಾದರೆ, ಏನಿದು ಪ್ರಕರಣ? ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ನಡುಕ ಹುಟ್ಟಿಸಿರುವುದು ಏಕೆ? ಪೊಲೀಸರು ಹೇಳುವುದೇನು? ಎಂಬುದನ್ನು ಮುಂದೆ ತಿಳಿಯಿರಿ.

ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು

ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು

ನಗರದ ಉದ್ಯಮಿಯೊಬ್ಬರ ಮೊಬೈಲ್‌ನ ನೆಟ್‌ವರ್ಕ್‌ ಬಂದ್‌ ಆಗಿತ್ತು. ಕೆಲ ಗಂಟೆ ಬಳಿಕ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಸೇವಾ ಕಂಪನಿಯೊಂದರ ಪ್ರತಿನಿಧಿ ಎಂದು ಹೇಳಿ ನೆಟ್‌ವರ್ಕ್‌ ಪುನಃ ಬರಬೇಕಾದರೆ ಒಂದನ್ನು ಒತ್ತುವಂತೆ ಹೇಳಿದ್ದ. ಉದ್ಯಮಿ, ಒಂದನ್ನು ಒತ್ತಿದ್ದರು. ನಂತರವೂ ನೆಟ್‌ವರ್ಕ್‌ ಬಂದಿರಲಿಲ್ಲ ಅತ್ತ ಅಕೌಂಟ್‌ನಲ್ಲಿ ಹಣವೂ ಖಾಲಿಯಾಗಿದೆ.

ಉದ್ಯಮಿ ಹೆಸರಿನಲ್ಲಿ ಅಪರಿಚಿತರಿಗೆ ಸಿಮ್ ಕಾರ್ಡ್‌

ಉದ್ಯಮಿ ಹೆಸರಿನಲ್ಲಿ ಅಪರಿಚಿತರಿಗೆ ಸಿಮ್ ಕಾರ್ಡ್‌

ಈ ಬಗ್ಗೆ ಅವರು ಬ್ಯಾಂಕ್‌ನಲ್ಲಿ ವಿಚಾರಿಸಿದಾಗಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ ಎಂದು ಠಾಣೆಗೆ ದೂರು ನೀಡಿದ್ದರು. ನಂತರ ಈ ಬಗ್ಗೆ ಸೈಬರ್ ಕ್ರೈಂ ಇಲಾಖೆ ತನಿಖೆ ಕೈಗೊಂಡಾಗ, ಉದ್ಯಮಿ ಹೆಸರಿನಲ್ಲಿ ಅಪರಿಚಿತರು ಸಿಮ್ ಕಾರ್ಡ್‌ ಖರೀದಿಸಿ ಬಹಳ ಸುಲಭವಾಗಿ ಬ್ಯಾಂಕ್ ಹಣವನ್ನು ದೋಚಿದ್ದಾರೆ ಎಂಬ ಮಾಹಿತಿಯನ್ನು ಸೈಬರ್ ಕ್ರೈಂ ಠಾಣೆಯ ಮೂಲಗಳು ತಿಳಿಸಿವೆ.

ಒನ್‌ಟೈಮ್ ಪಾಸ್‌ವರ್ಡ್

ಒನ್‌ಟೈಮ್ ಪಾಸ್‌ವರ್ಡ್

ಉದ್ಯಮಿಯ ಮೊಬೈಲ್‌ ಕಳೆದಿರುವುದಾಗಿ ಟೆಲಿಕಾಂ ಕಂಪನಿಗೆ ತಿಳಿಸಿರುವ ಆರೋಪಿಗಳು, ನಕಲಿ ದಾಖಲೆ ಕೊಟ್ಟು ಉದ್ಯಮಿಯದ್ದೇ ನಂಬರ್‌ ಇರುವ ಹೊಸ ಸಿಮ್ ಕಾರ್ಡ್‌ ಖರೀದಿಸಿದ್ದಾರೆ. ನಂತರ ಉದ್ಯಮಿಯ ಕಾರ್ಡ್ ಸಿವಿವಿ ಅಥವಾ ಆನ್‌ಲೈನ್ ಪೇಮೆಂಟ್ ಮೂಲಕ ವ್ಯವಹಾರ ನಡೆಸಿ ಒನ್‌ಟೈಮ್ ಪಾಸ್‌ವರ್ಡ್ ನೀಡಿ ಹಣವನ್ನು ಇತರೆ ಖಾತೆಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.

ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿ

ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿ

ನಿಗದಿತ ಸ್ಥಳದಲ್ಲಿ ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ಅವಧಿಯಲ್ಲೇ ಕಾರ್ಡ್‌ ಸಂಖ್ಯೆ ಹಾಗೂ ಸಿವಿಸಿ ಮಾಹಿತಿಯನ್ನು ಖದೀಮರು ಕದಿಯುತ್ತಿದ್ದಾರೆ. ನಂತರ, ಒನ್ ಟೈಂ ಪಾಸ್‌ವರ್ಡ್‌ಗಾಗಿ ನಕಲಿ ದಾಖಲೆಗಳನ್ನು ಕೊಟ್ಟು ಖರೀದಿಸುವ ಸಿಮ್‌ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ನೆಟ್‌ವರ್ಕ್‌ ಬಂದಾದರೆ ಹೀಗೆ ಮಾಡಿ!!

ನೆಟ್‌ವರ್ಕ್‌ ಬಂದಾದರೆ ಹೀಗೆ ಮಾಡಿ!!

ಒಮ್ಮಿಂದೊಮ್ಮೆಲೇ ನಿಮ್ಮ ಮೊಬೈಲ್‌ ನೆಟ್‌ವರ್ಕ್‌ ಬ್ಲಾಕ್‌ ಆದರೆ, ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿಸಿ. ಬ್ಲಾಕ್‌ ಆದ ನಂತರ ಬರುವ ಕರೆಗಳು ಹಾಗೂ ಸಂದೇಶಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯಿಸಬೇಡಿ.ನಿಮ್ಮ ಹೆಸರಿನಲ್ಲಿ ಬೇರೊಬ್ಬರು ಸಿಮ್ ಕಾರ್ಡ್‌ ಖರೀದಿಸಿದ್ದರೆ, ಬಹುಬೇಗ ಸೈಬರ್ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿ.

ಓದಿರಿ: 'ರೆಡ್ ಮಿ ನೋಟ್ 6 ಪ್ರೊ' ರಿಲೀಸ್...ಮತ್ತೊಮ್ಮೆ ವಿಶ್ವವನ್ನೇ ಬೆಚ್ಚಿಬೀಳಿಸಿದ ಶಿಯೋಮಿ!!

ಓದಿರಿ: ಸ್ಮಾರ್ಟ್‌ಫೋನ್‌ ಅನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡರೆ ಅಕಾಲಿಕ ಮರಣ ಸಾಧ್ಯತೆ!

Best Mobiles in India

English summary
Reliance Jio is perhaps one of those companies which have raked in a lot of subscribers and active users thanks to its free offerings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X