ಜಿಯೋ ಸಿಮ್‌ನ ಕಿತ್ತಳೆ, ನೀಲಿ ಪ್ಯಾಕೆಟ್‌ಗಳ ಗುಟ್ಟೇನು?

By Shwetha
|

ಟೆಲಿಕಾಮ್ ಕ್ಷೇತ್ರದಲ್ಲಿ ಜಿಯೋ ಉಂಟುಮಾಡಿರುವ ಸದ್ದುಗದ್ದಲ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ ಎಂಬುದಾಗಿ ಹೇಳಬಹುದಾಗಿದೆ. ತಮ್ಮ ಪ್ರಿವ್ಯೂ ಆಫರ್ ಅನ್ನೇ ಬಳಕೆದಾರರಿಗೆ ವೆಲ್‌ಕಮ್ ಆಫರ್ ಎಂಬುದಾಗಿ ಒದಗಿಸಿರುವ ಸಂಸ್ಥೆ ಇತರ ಸರ್ವೀಸ್ ಪ್ರೊವೈಡರ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುವ ಸರ್ವಲಕ್ಷಣಗಳನ್ನು ತನ್ನಲ್ಲಿ ಹೊಂದಿಸಿಕೊಳ್ಳುತ್ತಿದೆ.

ಓದಿರಿ: ಮೈಕ್ರೋಸಾಫ್ಟ್ ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ಆಕ್ಟಿವೇಟ್‌ ಹೇಗೆ?

ಸಪ್ಟೆಂಬರ್ 1 ರಂದು ಮುಕೇಶ್ ಅಂಬಾನಿ ಪ್ರಸ್ತುತ ಬಳಕೆದಾರರಿಗೆ ಇನ್ನಷ್ಟು ಆಫರ್‌ಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ. ಅವರು ಇದುವರೆಗೂ ಇದಕ್ಕಾಗಿ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಅದಾಗ್ಯೂ ಇದರ ಕುರಿತು ಯಾವುದೇ ವದಂತಿಯೂ ಹಬ್ಬಿಲ್ಲ.

ಓದಿರಿ: ಜಿಯೋ ಸಿಮ್ ಬಳಕೆಯ ನಂತರ ನಿಮ್ಮ ಫೋನ್ ಲಾಕ್ ಆಗುತ್ತದೆಯೇ? ಇದೆಷ್ಟು ಸತ್ಯ?

ಇಂದಿನ ಲೇಖನದಲ್ಲಿ ಜಿಯೋ ಸಿಮ್ ನೀಲಿ ಮತ್ತು ಕಿತ್ತಳೆ ಬಣ್ಣದ ಪ್ಯಾಕ್‌ನಲ್ಲಿ ಬಂದಿದ್ದು ಇವೆರಡೂ ಪ್ಯಾಕ್‌ಗಳಿಗಿರುವ ವ್ಯತ್ಯಾಸಗಳೇನು ಎಂಬುದನ್ನು ಅರಿತುಕೊಳ್ಳೋಣ.

ಎಮ್‌ಎನ್‌ಪಿಗಾಗಿ ನೀಲಿ ಪ್ಯಾಕೇಜ್

ಎಮ್‌ಎನ್‌ಪಿಗಾಗಿ ನೀಲಿ ಪ್ಯಾಕೇಜ್

ಇನ್ನೊಂದು ನೆಟ್‌ವರ್ಕ್‌ನಿಂದ ಜಿಯೋಗೆ ಪೋರ್ಟ್ ಆಗುವವರಿಗಾಗಿ ನೀಲಿ ಪ್ಯಾಕೇಜ್ ಅನ್ನು ನೀಡಲಾಗುತ್ತಿದೆ. ಇವರುಗಳು ಜಿಯೋ ಸಿಮ್ ಅನ್ನು ನೀಲಿ ಪ್ಯಾಕೆಟ್‌ನಲ್ಲಿ ಪಡೆದುಕೊಳ್ಳುತ್ತಿದ್ದಾರೆ.

ಎಂಟರ್ಪ್ರೈಸ್ ಬಳಕೆದಾರರಿಗಾಗಿ

ಎಂಟರ್ಪ್ರೈಸ್ ಬಳಕೆದಾರರಿಗಾಗಿ

ಈ ಹಿಂದೆ ಹೇಳಿದಂತೆ, ನೀಲಿ ಪ್ಯಾಕೇಜಿಂಗ್ ವಿಶೇಷವಾಗಿ ಎಂಟರ್ಪ್ರೈಸ್ ಬಳಕೆದಾರರಿಗಾಗಿ ಸಿದ್ಧಪಡಿಸಲಾಗಿದೆ. ಆದರೆ ಕಂಪೆನಿ ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ರಿಲಾಯನ್ಸ್ ಉದ್ಯೋಗಿಗಳಿಗಾಗಿ

ರಿಲಾಯನ್ಸ್ ಉದ್ಯೋಗಿಗಳಿಗಾಗಿ

ಆಯ್ಕೆಮಾಡಿದ ಬಳಕೆದಾರರಿಗಾಗಿ ಸೇವೆಯನ್ನು ಲಭ್ಯಗೊಳಿಸುತ್ತಿರುವಾಗ, ರಿಲಾಯನ್ಸ್ ಜಿಯೋ 4ಜಿ ಸಿಮ್ ಕಾರ್ಡ್‌ಗಳನ್ನು ತನ್ನ ಉದ್ಯೋಗಿಗಳಿಗಾಗಿ ನೀಡುತ್ತಿದೆ, ಅಂತೆಯೇ ಇತರ ಬಳಕೆದಾರರು ಈ ಉದ್ಯೋಗಿಗಳು ಕಳುಹಿಸಿದ ಆಮಂತ್ರಣದ ಸಹಾಯದೊಂದಿಗೆ ಸಿಮ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಉದ್ಯೋಗಿಗಳು ನೀಲಿ ಪ್ಯಾಕೆಟ್‌ನಲ್ಲಿ ಸಿಮ್ ಅನ್ನು ಪಡೆದುಕೊಳ್ಳುತ್ತಿದ್ದಾರೆ.

ಎರಡೂ ಆಫರ್‌ಗಳಲ್ಲಿ ಒಂದೇ ಸೇವೆ

ಎರಡೂ ಆಫರ್‌ಗಳಲ್ಲಿ ಒಂದೇ ಸೇವೆ

ನಿಮ್ಮ ನೀಲಿ ಪ್ಯಾಕೆಟ್‌ನ ಜಿಯೋ ಸಿಮ್ ಮತ್ತು ಆರೆಂಜ್ ಬಣ್ಣದ ಸಿಮ್‌ಗಳಲ್ಲಿ ಆಫರ್‌ಗಳು ಬೇರೆ ಬೇರೆಯಾಗಿರುತ್ತದೆ ಎಂಬುದಾಗಿ ಭಾವಿಸಬೇಡಿ. ಇದು ಅನಿಯಮಿತ ಕರೆಗಳು, ಎಸ್‌ಎಮ್‌ಎಸ್, ಅನಿಯಮಿತ 4ಜಿ ಡೇಟಾವನ್ನು ಒಳಗೊಂಡಿದೆ.

ಸ್ಟೋರ್‌ಗಳಲ್ಲಿ ಬ್ಲ್ಯೂ ಪ್ಯಾಕೇಜ್ ಸಿಮ್ ಏಕಿದೆ?

ಸ್ಟೋರ್‌ಗಳಲ್ಲಿ ಬ್ಲ್ಯೂ ಪ್ಯಾಕೇಜ್ ಸಿಮ್ ಏಕಿದೆ?

ಇದಕ್ಕೆ ಉತ್ತರ ತುಂಬಾ ಸರಳ. ಸಾರ್ವಜನಿಕರ ತೀವ್ರ ಸ್ಪಂದನೆಯಿಂದಾಗಿ, ಸಾಮಾನ್ಯ ಆರೆಂಜ್ ಬಣ್ಣದ ಪ್ಯಾಕೆಟ್‌ಗಳಲ್ಲಿ ಅಭಾವ ಕಂಡುಬರುತ್ತಿದೆ. ಬಳಕೆದಾರರನ್ನು ನಿರಾಶೆಗೊಳಿಸಬಾರದು ಎಂಬ ಕಾರಣಕ್ಕಾಗಿ ನೀಲಿ ಪ್ಯಾಕೆಟ್‌ನಲ್ಲೂ ಕಂಪೆನಿ ಸಿಮ್ ಅನ್ನು ವಿತರಿಸುತ್ತಿದೆ.

Best Mobiles in India

English summary
Now, how a Jio SIM card with blue packaging differs from a Jio 4G SIM in orange packaging? Let's find out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X