ಜಿಯೋ ಆಲ್‌-ಇನ್-ಒನ್ ಪ್ಲ್ಯಾನ್‌ಗಳಿಗೆ ಈಗ 50ರೂ. ಡಿಸ್ಕೌಂಟ್‌!

|

ಅಗ್ಗದ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಹೆಚ್ಚಿನ ಪ್ರಯೋಜನ ನೀಡಿ ಗಮನ ಸೆಳೆದಿದ್ದ ಜಿಯೋ, ಇತ್ತೀಚಿಗೆ ಹೊರ ಹೋಗುವ ಕರೆಗಳಿಗೆ ದರ ನಿಗದಿ ಮಾಡಿ ಗ್ರಾಹಕರಿಗೆ ಶಾಕ್ ನೀಡಿತು. ಅದರ ಬೆನ್ನಲ್ಲೇ ಆಲ್‌-ಇನ್‌-ಒನ್ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ಖುಷಿ ನೀಡಿತು. ಜಿಯೋ ತನ್ನ ಗ್ರಾಹಕರಿಗೆ ಇದೀಗ ಮತ್ತೊಂದು ಸಿಹಿಸುದ್ದಿ ಹೊರಹಾಕಿದ್ದು, ಆಲ್‌-ಇನ್‌-ಒನ್‌ ಪ್ರೀಪೇಡ್‌ ಪ್ಲ್ಯಾನ್‌ಗಳಿಗೆ ಡಿಸ್ಕೌಂಟ್‌ ತಿಳಿಸಿದೆ.

ಆಲ್‌-ಇನ್‌-ಒನ್‌ ಪ್ಲ್ಯಾನ್‌

ಹೌದು, ಜಿಯೋ ಟೆಲಿಕಾಂ ಸಂಸ್ಥೆಯು ಜನಪ್ರಿಯ 444ರೂ. ಮತ್ತು 555ರೂ.ಪ್ರೀಪೇಡ್‌ ಆಲ್‌-ಇನ್‌-ಒನ್‌ ಪ್ಲ್ಯಾನ್‌ಗಳು ಈಗ 50ರೂ ಡಿಸ್ಕೌಂಟ್‌ನಲ್ಲಿ ಲಭ್ಯ. ಜಿಯೋ ಗ್ರಾಹಕರು ಪೇಟಿಎಮ್ ಆಪ್‌ ಮೂಲಕ ರೀಚಾರ್ಜ್ ಮಾಡಿಕೊಂಡು ಈ ಡಿಸ್ಕೌಂಟ್‌ ಪಡೆಯಬಹುದಾಗಿದೆ. ಇದೇ ನವಂಬರ್‌ 1 ರಿಂದ ಲಭ್ಯವಾಗಿರುವ ಈ ಡಿಸ್ಕೌಂಟ್‌ ಆಫರ್‌ ಸೀಮಿತ ಅವಧಿಯನ್ನು ಹೊಂದಿದ್ದು, ಇದೇ ನವಂಬರ್‌ 15ರಂದು ಕೊನೆಯಾಗಲಿದೆ. ಹಾಗಾದರೇ ಜಿಯೋ ಆಲ್‌-ಇನ್‌-ಒನ್‌ ಪ್ಲ್ಯಾನ್‌ಗಳಲ್ಲಿ ಡಿಸ್ಕೌಂಟ್ ಪಡೆಯುವುದು ಹೇಗೆ ಮತ್ತು ಇತರೆ ಆಲ್‌-ಇನ್‌-ಒನ್ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್ಕೌಂಟ್‌ ಪಡೆಯುವುದು ಹೇಗೆ

ಡಿಸ್ಕೌಂಟ್‌ ಪಡೆಯುವುದು ಹೇಗೆ

ಜಿಯೋ ಗ್ರಾಹಕರು ಪೇಟಿಎಮ್ ಆಪ್‌ನಲ್ಲಿ ಲಭ್ಯವಿರುವ 'ಶುಭ ಪೇಟಿಎಮ್‌ ಆಫರ್'(Shubh Paytm Offer) ಮೂಲಕ 50ರೂ.ಗಳ ಡಿಸ್ಕೌಂಟ್‌ ಪಡೆಯಬಹುದು. ಜನಪ್ರಿಯ 444ರೂ.ಪ್ರೀಪೇಡ್‌ ಪ್ಲ್ಯಾನ್‌ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರು 'SHUBHP44' ಹೆಸರಿನ ಕೋಪನ್ ಕೋಡ್ ಬಳಸಿದರೇ 44ರೂ. ಡಿಸ್ಕೌಂಟ್ ಸಿಗಲಿದೆ. ಹೀಗಾಗಿ 444ರೂ. ಪ್ಲ್ಯಾನ್‌ 400ರೂ.ಗೆ ಸಿಗಲಿದೆ. ಅದೇ ರೀತಿ 555ರೂ.ಪ್ರೀಪೇಡ್‌ ಪ್ಲ್ಯಾನ್‌ ರೀಚಾರ್ಜ್ ಮಾಡಿಸುವ ಗ್ರಾಹಕರು 'SHUBHP50' ಕೋಪನ್ ಕೋಡ್ ಬಳಸುವ ಮೂಲಕ 50ರೂ. ಡಿಸ್ಕೌಂಟ್ ಪಡೆಯಬಹುದಾಗಿದೆ. ಹೀಗಾಗಿ 555ರೂ.ಪ್ಲ್ಯಾನ್‌ 505ರೂ.ಗೆ ದೊರೆಯಲಿದೆ.

ಆಲ್‌-ಇನ್‌-ಒನ್‌ ಪ್ಲ್ಯಾನ್‌

ಆಲ್‌-ಇನ್‌-ಒನ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯು ಇತ್ತೀಚಿಗೆ ಇತರೆ ಟೆಲಿಕಾಂಗಳಿಗೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ನಿಗದಿ ಮಾಡಿತು. ಈ ಬದಲಾವಣೆಯಿಂದ ಗ್ರಾಹಕರ ಸಂಖ್ಯೆ ಇಳಿಮುಖ ಆಗಬಾರದೆಂದು ಜಿಯೋ ತನ್ನ ಗ್ರಾಹಕರಿಗೆ ಶುಲ್ಕದ ಹೊರೆ ಇಳಿಸಲು ಹೊಸದಾಗಿ 'ಆಲ್‌-ಇನ್‌-ಒನ್‌' ಪ್ಲ್ಯಾನ್‌ಗಳನ್ನು ಪರಿಚಯ ಮಾಡಿತು. ಈ ಪ್ಲ್ಯಾನ್‌ಗಳಲ್ಲಿ ಗ್ರಾಹಕರಿಗೆ ಉಚಿತ ಕರೆಗಳ ಪ್ರಯೋಜನಗಳು ಸಿಗಲಿವೆ.

222 ರೂ.ಪ್ರೀಪೇಡ್‌ ಪ್ಲಾನ್‌

222 ರೂ.ಪ್ರೀಪೇಡ್‌ ಪ್ಲಾನ್‌

ಜಿಯೋ ಆಲ್ ಇನ್ ಒನ್ ಯೋಜನೆಯಲ್ಲಿ ಹೊಸದಾಗಿ 222ರೂ. ಪ್ರೀಪೇಡ್‌ ಪ್ಲ್ಯಾನ್‌ ಪರಿಚಯಿಸಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರು ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳನ್ನು ಪಡೆದರೆ, ಇತರೆ ನೆಟ್‌ವರ್ಕ್‌ಗಳಿಗೆ 1,000 ನಿಮಿಷಗಳ ವಾಯ್ಸ್‌ ಕರೆಗಳನ್ನು ಪಡೆಯಲಿದ್ದಾರೆ. ಇನ್ನು, ದೈನಂದಿನವಾಗಿ 2 ಜಿಬಿ ಡೇಟಾವನ್ನು ಬಳಕೆದಾರರು ಪಡೆಯಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

333 ರೂ.ಪ್ರೀಪೇಡ್‌ ಪ್ಲಾನ್‌

333 ರೂ.ಪ್ರೀಪೇಡ್‌ ಪ್ಲಾನ್‌

ಅದೇ ರೀತಿ ಜಿಯೋ ಆಲ್ ಇನ್ ಒನ್ ಯೋಜನೆಯಲ್ಲಿ 333 ರೂ. ಪ್ರಿಪೇಯ್ಡ್ ಪ್ಲ್ಯಾನ್‌ ಸಹ ಒಂದಾಗಿದ್ದು, 56 ದಿನಗಳ ವ್ಯಾಲಿಡಿಟಿ ಹೊಂದಿದೆ. 444 ರೂ. ಪ್ಲಾನ್‌ ಕೂಡ ಮೇಲಿನ ಪ್ಲಾನ್‌ಗಳಂತೆ ಒಂದೇ ರೀತಿಯ ಯೋಜನೆಗಳನ್ನು ನೀಡಿದರೂ, 84 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. 111 ರೂ. ಹೆಚ್ಚುವರಿ ಪಾವತಿ ಮೇಲೆ ಜಿಯೋ ಹೆಚ್ಚುವರಿ ಒಂದು ತಿಂಗಳ ಪ್ರಯೋಜನಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಉಪಯುಕ್ತವಾಗಲಿದೆ.

Best Mobiles in India

English summary
The prepaid recharge plans priced at Rs 444 and Rs 555 are available at discount. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X