ಜಿಯೋದ ಇ-ಸಿಮ್ ಸೇವೆ ಈಗ ಹೊಸ ಮೊಟೊರೊಲಾ ರೇಜರ್‌ನಲ್ಲಿ ಲಭ್ಯ!

|

ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಜಿಯೋ ಇ-ಸಿಮ್ (eSIM) ಸೇವೆಯನ್ನು ನೀಡಲು ಮುಂದಾಗಿದ್ದು, ಈ ಮೂಲಕ ಜಿಯೋ ಮತ್ತೊಮ್ಮೆ ತನ್ನ ಟೆಕ್-ಪ್ರಾಬಲ್ಯವನ್ನು ಭಾರತೀಯರ ಸೇವೆಗೆ ಮುಡಿಪಾಗಿಟ್ಟಿದೆ. ಭಾರತದಲ್ಲಿ ಮೊಟೊರೊಲಾ ರೇಜರ್ ಪ್ರಿ-ಬುಕಿಂಗ್ 16 ಮಾರ್ಚ್ 2020 ರಂದು ಪ್ರಾರಂಭವಾಗಿದ್ದು, ಈ ಫೋನ್ ಖರೀದಿ ಮಾಡಿದವರು ಜಿಯೋದ ಇ-ಸಿಮ್ (eSIM) ಸೇವೆಯ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಮೊಟೊರೊಲಾ

ಇದಲ್ಲದೆ ಜಿಯೋ ಮೊಟೊರೊಲಾ ರೇಜರ್‌ ಬಳಕೆದಾರರಿಗೆ ಬೆಸ್ಟ್ ಪ್ಲಾನ್ ಲಾಂಚ್ ಮಾಡಿದ್ದು, ಜಿಯೋ ವಾರ್ಷಿಕ ಪ್ರಿಪೇಯ್ಡ್ ಯೋಜನೆಯಡಿಯಲ್ಲಿ ರೂ. 4,999 / - ನಲ್ಲಿ ಡಬಲ್ ಡೇಟಾ ಮತ್ತು ಡಬಲ್ ವ್ಯಾಲಿಡಿಟಿಯನ್ನು ಒದಗಿಸುತ್ತಿದೆ.

ಇ-ಸಿಮ್ (eSIM)

ಇತ್ತೀಚೆಗೆ ಬಿಡುಗಡೆ ಮಾಡಿದ ಮೊಟೊರೊಲಾ ರೇಜರ್‌ನಲ್ಲಿ ಇ-ಸಿಮ್ (eSIM) ಸೇವೆಯ ಬೆಂಬಲವನ್ನು ಜಿಯೋ ಘೋಷಿಸಿದೆ, ಇದು ವಿಶ್ವದ ಮೊಟ್ಟಮೊದಲ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ.

ಮೊಟೊರೊಲಾ ರೇಜರ್

ಭೌತಿಕ ಸಿಮ್ ಕಾರ್ಡ್ ಇಲ್ಲದೆ, ಮೊಟೊರೊಲಾ ರೇಜರ್ ಬಳಕೆದಾರರು ಜಿಯೋ ನೆಟ್‌ವರ್ಕ್‌ನ ಮೂಲಕ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, ಡೇಟಾ ಮತ್ತು ಅಪ್ಲಿಕೇಶನ್‌ಗಳನ್ನು ಬಳಸಲು ಜಿಯೋ ಇ-ಸಿಮ್ (eSIM) ಸೇವೆಯು ಅನುಮತಿಸುತ್ತದೆ. ಎಲ್ಲಾ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಯನ್ನು ಬಳಸಬಹುದು. ಭೌತಿಕ ಸಿಮ್ ಕಾರ್ಡ್ ಸೇರಿಸಲು ಅಥವಾ ಬದಲಾಯಿಸುವ ಅಗತ್ಯವಿಲ್ಲದೆ, ಇ-ಸಿಮ್ (eSIM) ತಡೆರಹಿತ ಸಾಧನ ಸೆಟಪ್ ಅನುಭವವನ್ನು ಜಿಯೋ ಮೂಲಕ ಪಡೆಯಬಹುದಾಗಿದೆ.

ರೀಚಾರ್ಜ್

ರೀಚಾರ್ಜ್

ಜಿಯೋ ನೆಟ್‌ವರ್ಕ್‌ನಲ್ಲಿನ ಮೊಟೊರೊಲಾ ರೇಜರ್ ಬಳಕೆದಾರರಿಗೆ ವಿಶೇಷ ಆಫರ್ ಅನ್ನು ಸಹ ನೀಡಲಾಗುತ್ತಿದೆ, ಜಿಯೋ ರೂ .4999 / - ವಾರ್ಷಿಕ ಯೋಜನೆಯೊಂದಿಗೆ ರೀಚಾರ್ಜ್ ಮಾಡಿಸಿಕೊಂಡರೆ ಡಬಲ್ ಡೇಟಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ ಹೆಚ್ಚುವರಿ 1 ವರ್ಷದ ಅನಿಯಮಿತ ಸೇವೆಗಳು ಸಂಪೂರ್ಣವಾಗಿ ಉಚಿತವಾಗಿ ಮೊಟೊರೊಲಾ ರೇಜರ್ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. (ಯಾವುದೇ ದೈನಂದಿನ ಮಿತಿ ಇಲ್ಲದೆ 350 + 350 ಜಿಬಿ ಹೈಸ್ಪೀಡ್ ಡೇಟಾವನ್ನು ನೀಡಲಿದ್ದು + ಅನಿಯಮಿತ ಧ್ವನಿ ಮತ್ತು 700 ಜಿಬಿ ಡೇಟಾವನ್ನು ಮತ್ತೊಂದು ವರ್ಷಕ್ಕೆ ಉಚಿತವಾಗಿ ನೀಡಲಿದೆ. ಇದರಿಂದ ಗ್ರಾಹಕರಿಗೆ ರೂ .14,997 / - ಉಳಿತಾಯವಾಗಲಿದೆ.)

ರೇಜರ್ ಬ್ಲ್ಯಾಕ್

ಐಕಾನಿಕ್ ಮೊಟೊರೊಲಾ ರೇಜರ್ ಬ್ಲ್ಯಾಕ್ ನಾಯ್ರ್ ಬಣ್ಣದಲ್ಲಿ ಪ್ರೀ ಬುಕ್ಕಿಂಗೆ ಲಭ್ಯವಿದೆ, ಇದು ಮಾರ್ಚ್ 16 ರಿಂದ ಪ್ರಾರಂಭವಾಗಿದ್ದು, 2020 ರ ಏಪ್ರಿಲ್ 2 ರಿಂದ ರಿಲಯನ್ಸ್ ಡಿಜಿಟಲ್ನಲ್ಲಿ ರೂ. 124,999 / - ಕ್ಕೆ ಮಾರಾಟವಾಗಲಿದೆ.

Most Read Articles
Best Mobiles in India

English summary
The Motorola RAZR was just recently launched, and its price in India starts from Rs 1,24,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X