Subscribe to Gizbot

ಶೀಘ್ರವೇ ಜಿಯೋದಿಂದ ಹೊಸ ಸೇವೆ: ಟೆಲಿಕಾಂ ಕಂಪನಿಗಳಿಗೆ ಮತ್ತೊಂದು ಹೊಡೆತ..!

Written By:

ರಿಲಯನ್ಸ್ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಇದೇ ಹಿನ್ನಲೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಳ್ಳುವ ಸಲುವಾಗಿ ಉದ್ಯಮಗಳಿಗೆ ತನ್ನ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರಿಂದ ಉದ್ಯಮಗಳ ಕಡೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಯೋಜನೆಯನ್ನು ರೂಪಿಸಿದೆ.

ಶೀಘ್ರವೇ ಜಿಯೋದಿಂದ ಹೊಸ ಸೇವೆ: ಟೆಲಿಕಾಂ ಕಂಪನಿಗಳಿಗೆ ಮತ್ತೊಂದು ಹೊಡೆತ..!
 

ಓದಿರಿ: ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ಕಾರ್ಡ್ ಅಗತ್ಯತೆ ಇರುವುದಿಲ್ಲ..!

ಈಗಾಗಲೇ ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿರುವ ಜಿಯೋ, ತನ್ನ ಉದ್ಯಮವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಮತ್ತು ಇತರೆ ಟೆಲಿಕಾಂ ಕಂಪನಿಗಳ ವಿರುದ್ಧ ಸೆಣೆಸುವ ಸಲುವಾಗಿ ವಿವಿಧ ಹೊಸ ಸೇವೆಗಳನ್ನು ಉದ್ಯಮಗಳಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವಿಧ ಸೇವೆಗಳು:

ವಿವಿಧ ಸೇವೆಗಳು:

ಮಲ್ಟಿಪ್ರೊಟೊಕಾಲ್ ಲೇಬಲ್ ಸ್ವಿಚಿಂಗ್ ನೆಟ್ ವರ್ಕ್ (ಹೈಸ್ಪೀಡ್ ಟೆಲಿಕಾಂ ಟ್ರಾಪಿಕ್) ಸೇರಿದಂತೆ ವಿವಿಧ ಮಾದರಿಯ ಸೇವೆಗಳನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, ವರ್ಚುಚಲ್ ಪ್ರೈವೆಟ್ ನೆಟ್ವರ್ಕ್, ಕ್ಲೌಡ್ ಸೇವೆ ಸೇರಿದಂತೆ ಇನ್ನು ಹಲವು ಹೊಸ ಸೇವೆಗಳನ್ನು ಜಿಯೋ ಉದ್ಯಮಗಳಿಗೆ ನೀಡಲಿದೆ ಎನ್ನಲಾಗಿದೆ. ಅದುವೇ ಕಡಿಮೆ ವೆಚ್ಚದಲ್ಲಿ.

ವಿಡಿಯೋ ಕಾನ್ಪರೆನ್ಸ್:

ವಿಡಿಯೋ ಕಾನ್ಪರೆನ್ಸ್:

ಇದಲ್ಲದೇ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ಕಾನ್ಪರೆನ್ಸ್ ನಡೆಸುವ ಸಲುವಾಗಿ ತನ್ನ ನೆಟ್ ಸೇವೆಯನ್ನು ಜಿಯೋ ಒದಗಿಸಲಿದೆ ಎನ್ನಲಾಗಿದೆ. ಇದರೊಂದಿಗೆ ಇನ್ನು ಅನೇಕ ಸೇವೆಗಳನ್ನು ಜಿಯೋ ಉದ್ಯಮಗಳಿಗಾಗಿಯೇ ರೂಪಿಸಿದೆ ಎನ್ನಲಾಗಿದೆ.

ಭರ್ಜರಿ ತಯಾರಿ:

ಭರ್ಜರಿ ತಯಾರಿ:

ಇದಕ್ಕಾಗಿಯೇ ಜಿಯೋ ದೇಶದಲ್ಲಿ ಒಂದು ಲಕ್ಷ ಟೆಲಿಕಾಂ ಟವರ್ ಗಳು ಹಾಗೂ ಎರಡು ಲಕ್ಷ ಕಿಲೋ ಮೀಟರ್ ಉದ್ದದ ಆಪ್ಟಿಕಲ್ ಫೈಬರ್ ಅನ್ನು ಅಳವಡಿಸಿದ್ದು, ಈ ಮೂಲಕ ಕಾರ್ಪೋರೇಟ್ ಸೇವೆಯನ್ನು ಜಿಯೋ ಆರಂಭಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಮತ್ತಷ್ಟು ಆದಾಯವನ್ನು ಕ್ರೋಢಿಕರಣ ಮಾಡಲು ಮುಂದಾಗಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಈಗಾಗಲೇ ಪರೀಕ್ಷೆ:

ಈಗಾಗಲೇ ಪರೀಕ್ಷೆ:

ತನ್ನ ಹೊಸ ಸೇವೆಯನ್ನು ಉದ್ಯಮಗಳಿಗೆ ನೀಡುವ ಸಲುವಾಗಿ ಈಗಾಗಲೇ ಪರೀಕ್ಷೆಯನ್ನು ಜಿಯೋ ಆರಂಭಿಸಿದ್ದು, ಶೀಘ್ರವೇ ಈ ಸೇವೆಯು ಎಲ್ಲಾರಿಗೂ ಮುಕ್ತವಾಗಲಿದೆ. ಇದರಿಂದಾಗಿ ಇತರೆ ಟೆಲಿಕಾಂ ಕಂಪನಿಗಳು ಮತ್ತೊಂದು ಸುತ್ತಿನ ಪರೀಕ್ಷೆಯನ್ನು ಎದುರಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio to soon launch enterprise services. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot