ದೇಶದಲ್ಲಿ ವೇಗದ ಇಂಟರ್‌ನೆಟ್ ನೀಡುತ್ತಿರುವ ಟೆಲಿಕಾಂ ಯಾವುದು ಗೊತ್ತಾ?

|

ಇಂಟರ್‌ನೆಟ್ ಸಿಗುವುದಕ್ಕಿಂತ ಆ ಇಂಟರ್‌ನೆಟ್ ಎಷ್ಟು ವೇಗದಲ್ಲಿ ಸಿಗುತ್ತದೆ ಎಂಬುದು ಈಗ ಮುಖ್ಯವಾಗಿರುತ್ತದೆ. ಇಂಟರ್‌ನೆಟ್ ಕಾರ್ಯ ಕ್ಷಣಮಾತ್ರದಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ಆಗಬೇಕಿರುವುದರಿಂದ ವೇಗವಾದ ಇಂಟರ್ನೆಟ್ ಸೇವೆ ಒದಗಿಸುವ ಕಂಪೆನಿಗೆ ಹೆಚ್ಚು ಮಹತ್ವ ಸಿಗುತ್ತದೆ. ಆ ಮಹತ್ವ ಕೂಡ ಈಗ ಜಿಯೋ ಟೆಲಿಕಾಂ ಸಂಸ್ಥೆಯ ಪಾಲಾಗಿದೆ.

ಹೌದು, 2019ರ ಮಾರ್ಚ್ ತಿಂಗಳ ಸ್ಪೀಡ್ ಚಾರ್ಟ್ ಅನ್ನು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಿಡುಗಡೆ ಮಾಡಿದ್ದು, ಭಾರತದಲ್ಲಿ 4G ಸೇವೆಯನ್ನು ಒದಗಿಸುತ್ತಿರುವ ಟೆಲಿಕಾಂ ಕಂಪೆನಿಗಳಲ್ಲಿ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಮುಂಚೂಣಿಯಲ್ಲಿವೆ. ವಿಶೇಷವೆಂದರೆ, ಪಟ್ಟಿಯಲ್ಲಿ ವೊಡಾಫೋನ್ ಮತ್ತು ಐಡಿಯಾ ಸಂಸ್ಥೆಗಳನ್ನು ಪ್ರತ್ಯೇಕಿಸಲಾಗಿದೆ.

ದೇಶದಲ್ಲಿ ವೇಗದ ಇಂಟರ್‌ನೆಟ್ ನೀಡುತ್ತಿರುವ ಟೆಲಿಕಾಂ ಯಾವುದು ಗೊತ್ತಾ?

ಮಾರ್ಚ್ ತಿಂಗಳಿನಲ್ಲಿ 22.2 Mbps (ಪ್ರತಿ ಸೆಕೆಂಡಿಗೆ ಮೆಗಾಬಿಟ್‌) ಸರಾಸರಿ ಡೌನ್‌ಲೋಡ್ ವೇಗವನ್ನು ಹೊಂದಿರುವ ರಿಲಯನ್ಸ್ ಜಿಯೋ ಈ ಬಾರಿ ಇತರೆಲ್ಲಾ ಸಂಸ್ಥೆಗಳನ್ನು ಹಿಂದಿಕ್ಕಿ ಡೌನ್‌ಲೋಡ್ ಡೇಟಾದಲ್ಲಿ ಅಗ್ರಸ್ಥಾನ ಪಡೆದಿದೆ. ಕಳೆದ ವರ್ಷ 20.9 Mbps ಸರಾಸರಿ ಡೌನ್‌ಲೋಡ್ ವೇಗ ನೀಡುತ್ತಿದ್ದ ಜಿಯೋವಿನ ಡೌನ್‌ಲೋಡ್ ವೇಗ ಈ ಬಾರಿ ಗಮನಾರ್ಹವಾಗಿ ಹೆಚ್ಚಿದೆ.

ಒಂದು ಕಾಲದ ದಿಗ್ಗಜನಾಗಿ ಮೆರೆದು ಈಗ ಟೆಲಿಕಾಂನಲ್ಲಿ ಮೂರನೇ ಸ್ಥಾನಕ್ಕೆ ಜಾರಿರುವ ಏರ್‌ಟೆಲ್‌ಗೆ ಮತ್ತೆ ಕೆಟ್ಟಸುದ್ದಿ ಇದಾಗಿದೆ. ಏರ್‌ಟೆಲ್‌ನ ಡೌನ್‌ಲೋಡ್ ಸ್ಪೀಡ್ ಡೇಟಾ ಈ ಹಿಂದಿನ ತಿಂಗಳಿಗಿಂತಲೂ ಕಡಿಮೆಯಾಗಿದ್ದು, ಕಳೆದ ಬಾರಿ ಸರಾಸರಿ 9.4 mbps ಇದ್ದ ಸ್ಪೀಡ್ ಡೇಟಾ ಈ ಬಾರಿ 9.3 mbpsಕ್ಕೆ ಇಳಿದಿದೆ. ಐಡಿಯಾ ಕೇವಲ 5.7 Mbps ಡೌನ್‌ಲೋಡ್ ವೇಗ ದಾಖಲಿಸಿದೆ.

ದೇಶದಲ್ಲಿ ವೇಗದ ಇಂಟರ್‌ನೆಟ್ ನೀಡುತ್ತಿರುವ ಟೆಲಿಕಾಂ ಯಾವುದು ಗೊತ್ತಾ?

ಇನ್ನು 5.5 mbps ವೇಗದೊಂದಿಗೆ ಅಪ್‌ಲೋಡ್ ಸ್ಪೀಡ್ ಚಾರ್ಟ್‌ನಲ್ಲಿ ವೊಡಾಫೋನ್ ಸಂಸ್ಥೆ ಮುಂದಿದ್ದು, 4.6 mbps ಅಪ್ಲೋಡ್ ಸ್ಪೀಡ್ ನೀಡುವ ಮೂಲಕ ಜಿಯೋ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೆ, ವೊಡಾಫೋನಿನ ಡೌನ್‌ಲೋಡ್ ಡೇಟಾ ಸ್ಪೀಡ್ ಕೇವಲ 7mbps ಆಗಿದ್ದು, ಜಿಯೋವಿನ 22 mbps ವೇಗಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ ಎಂದು ಹೇಳಬಹುದು.

ಓದಿರಿ: ಮಾರುಕಟ್ಟೆ ಪ್ರವೇಶಿಸುತ್ತಿಲ್ಲ 'ಗ್ಯಾಲಕ್ಸಿ ಫೋಲ್ಡ್'!..ಫೋನಿನಲ್ಲಿ ಸಮಸ್ಯೆ!

Best Mobiles in India

English summary
Reliance Jio tops 4G download, Vodafone upload speed in March. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X