4G ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದಲ್ಲಿ ಜಿಯೋಗೆ ಅಗ್ರಸ್ಥಾನ!

|

ಸದ್ಯ ದೇಶದಲ್ಲಿ 5G ಪರ್ವ ಪ್ರಾರಂಭವಾಗಿದ್ದು, ಜಿಯೋ ಟೆಲಿಕಾಂ ಸಹ ಈಗಾಗಲೇ ಕೆಲವು ನಗರಗಳಲ್ಲಿ ಜಿಯೋ ಟ್ರೂ 5G ಸೇವೆಯನ್ನು ಶುರು ಮಾಡಿದೆ. 5G ​​ರೋಲ್-ಔಟ್ ನಡುವೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಅಕ್ಟೋಬರ್ ತಿಂಗಳ 4G ವೇಗ ಪರೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಪ್ರಮುಖ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಜಿಯೋ ಸರಾಸರಿ 4G ಡೌನ್‌ಲೋಡ್ ವೇಗದೊಂದಿಗೆ ಅಪ್‌ಲೋಡ್ ವೇಗದಲ್ಲೂ ಮೊದಲ ಸ್ಥಾನದಲ್ಲಿದೆ.

TRAI ಬಿಡುಗಡೆ ಮಾಡಿದ

ಹೌದು, TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್ (mbps)​ ಜಿಗಿತ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ (mbps)​ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ (mbps)​ ತಲುಪಿದೆ.

4G ಡೌನ್‌ಲೋಡ್ ವೇಗ

ಅಂಕಿ ಅಂಶಗಳ ಅನ್ವಯ ಸರಾಸರಿ ಡೌನ್‌ಲೋಡ್ ವೇಗದ ವಿಚಾರದಲ್ಲಿ ಏರ್‌ಟೆಲ್ ಮತ್ತು ವಿ (ವೊಡಾಫೋನ್-ಐಡಿಯಾ) ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಏರ್‌ಟೆಲ್‌ನ ಸರಾಸರಿ 4G ಡೌನ್‌ಲೋಡ್ ವೇಗ 15 ಎಂಬಿಪಿಎಸ್​ ಆಗಿದ್ದರೆ ವಿ 14.5 ಎಂಬಿಪಿಎಸ್​ ವೇಗ ಹೊಂದಿತ್ತು. ಕಳೆದ ತಿಂಗಳಿನಿಂದ ಎರಡೂ ಕಂಪನಿಗಳು ತಮ್ಮ ವೇಗದಲ್ಲಿ ಸುಧಾರಣೆ ಮಾಡಿಕೊಂಡಿವೆ. ಆದರೆ ಏರ್ಟೆಲ್ ಮತ್ತು Vi ಗೆ ಹೋಲಿಸಿದರೆ ರಿಲಯನ್ಸ್​ ಜಿಯೋದ ಸರಾಸರಿ 4G ಡೌನ್‌ಲೋಡ್ ವೇಗವು 5 ಎಂಬಿಪಿಎಸ್​ಗಿಂತ (mbps) ಹೆಚ್ಚು ಇದೆ.

ಸರಾಸರಿ 4G ಅಪ್​ಲೋಡ್​

ರಿಲಯನ್ಸ್ ಜಿಯೋ ಕಳೆದ ತಿಂಗಳು ಸರಾಸರಿ 4G ಅಪ್​ಲೋಡ್​ ವೇಗದಲ್ಲಿ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಕಂಪನಿಯು ಈ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ 6.2 ಎಂಬಿಪಿಎಸ್​ ವೇಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ವಿ (VI) ಟೆಲಿಕಾಂ 4.5 ಎಂಬಿಪಿಎಸ್​ (mbps) ವೇಗದೊಂದಿಗೆ ಎರಡನೇ ಸ್ಥಾನದಲ್ಲಿದೆ.

4G ಅಪ್‌ಲೋಡ್

ಇದೇ ವೇಳೆ, ಏರ್‌ಟೆಲ್‌ನ ಅಪ್‌ಲೋಡ್ ವೇಗದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಏರ್‌ಟೆಲ್‌ನ ಸರಾಸರಿ 4G ಅಪ್‌ಲೋಡ್ ವೇಗವು ಅಕ್ಟೋಬರ್‌ನಲ್ಲಿ 2.7 ಎಂಬಿಪಿಎಸ್​ ತಲುಪಿದೆ. ಅಂದರೆ ಏರ್‌ಟೆಲ್‌ನ ಅಪ್‌ಲೋಡ್ ವೇಗವು ಜಿಯೋ ಹೊಂದಿರುವ ವೇಗದ ಅರ್ಧಕ್ಕಿಂತ ಕಡಿಮೆ ಮಟ್ಟದಲ್ಲಿದೆ.

5G

ಜಿಯೋ 5G ಸೇವೆ ವಿಸ್ತರಣೆ ರಿಲಯನ್ಸ್ ಜಿಯೋ ತನ್ನ 5G ಸೇವೆಗಳನ್ನು ಇತ್ತೀಚಿಗೆ ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿ ಹೊರತಂದಿದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ ಹೀಗೆ ಆರು ನಗರಗಳಲ್ಲಿ ಜಿಯೋ ಟ್ರೂ 5G ಸೇವೆಗಳ ಯಶಸ್ವಿ ಬೀಟಾ ಅನಾವರಣ ಆದ ಬಳಿಕ ಇದೀಗ ಜಿಯೋ ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ - 5G ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಇನ್ನು ಡಿಸೆಂಬರ್ 2023 ರೊಳಗೆ ದೇಶವ್ಯಾಪಿ 5G ಸೇವೆಯನ್ನು ಒದಗಿಸುವುದಾಗಿ ಜಿಯೋ ಭರವಸೆ ನೀಡಿದೆ.

ಜಿಯೋ 5G - ಕೆಲವು ಮಾಹಿತಿ

ಜಿಯೋ 5G - ಕೆಲವು ಮಾಹಿತಿ

* 4G ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5G ನೆಟ್‌ವರ್ಕ್‌ ನೊಂದಿಗೆ ಅದ್ವಿತೀಯ 5G ಆರ್ಕಿಟೆಕ್ಚರ್.
* 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5G ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.
* ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5G ಫ್ರೀಕ್ವೆನ್ಸಿಗಳನ್ನು ಏಕರೂಪದ "ಡೇಟಾ ಹೈವೇ" ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.

Best Mobiles in India

English summary
Reliance Jio tops 4G network speed chart in October: TRAI Data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X