Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 18 hrs ago
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋ ಗಿಗಾಫೈಬರ್ ಸೆಟ್‌ಅಪ್ ಬಾಕ್ಸ್‌ನ ಫಸ್ಟ್ ಲುಕ್ ಲೀಕ್!
ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ಸಖತ್ ಆಗಿಯೇ ಸದ್ದು ಮಾಡುತ್ತಿದ್ದು, ಇದೇ ಅಗಷ್ಟ್ 12ರಂದು ಗಿಗಾಫೈಬರ್ ಅನಾವರಣ ಮಾಡಿ ಮಾರುಕಟ್ಟೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತು. ಜಿಯೋ ಗಿಗಾಫೈಬರ್‌ನಲ್ಲಿ ಲೈವ್ ಟಿವಿ ಮತ್ತು ಓಟಿಟಿ (OTT) ವಿಡಿಯೊ ಸ್ಟ್ರಿಮಿಂಗ್ ಆಪ್‌ಗಳ ಲಭ್ಯತೆ ಇರಲಿದ್ದು, ಈ ಸೇವೆ ಬಳಸಲು ಗ್ರಾಹಕರು ಉತ್ಸಕರಾಗಿರುವುದಂತು ಸುಳ್ಳಲ್ಲ. ಆದ್ರೆ ಜಿಯೋದ ಲೀಕ್ ಇಮೇಜ್ ಕುತೂಹಲವನ್ನು ಡಬಲ್ ಮಾಡಿದೆ.

ಹೌದು, ಜಿಯೋ ಗಿಗಾಫೈಬರ್ ಸೇವೆಯು ಇದೇ ಸೆಪ್ಟಂಬರ್ 5ರಂದು ಶುರುವಾಗಲಿದ್ದು, ಆದ್ರೆ ಈ ನಡುವೆ ರಿಲಾಯನ್ಸ್ ಜಿಯೋ ಹೈಬ್ರಿಡ್ ಎಸ್‌ಟಿಬಿ ಸೆಟ್‌ಅಪ್ ಬಾಕ್ಸ್ ಫಸ್ಟ್ ಲುಕ್ ಲೀಕ್ ಆಗಿದೆ. ಈ ಚಿತ್ರವನ್ನು ಡ್ರೀಮ್ ಡಿಟಿಎಚ್ ಶೇರ್ ಮಾಡಿದ್ದು, ಎಚ್‌ಡಿಎಮ್‌ಐ ಪೋರ್ಟ್, ಎಮ್‌ಓಎಸ್‌ಗಾಗಿ ಕಾಕ್ಸಿಯಲ್ ಕೇಬಲ್, ಯುಎಸ್‌ಬಿ 2.0, ಯುಎಸ್‌ಬಿ 3 ಪೋರ್ಟ್ ಆಯ್ಕೆಗಳು ಲೀಕ್ ಆದ ಜಿಯೋ ಹೈಬ್ರಿಡ್ ಎಸ್‌ಟಿಬಿ ಸೆಟ್‌ಅಪ್ ಬಾಕ್ಸ್ ಚಿತ್ರದಲ್ಲಿ ಕಾಣಿಸಿವೆ.

ಲೀಕ್ ಚಿತ್ರವು ಸಾಫ್ಟ್‌ವೇರ್ ಕುರಿತಾಗಿ ಯಾವುದೇ ಮಾಹಿತಿಯನ್ನು ಹೊರಹಾಕಿಲ್ಲ. ಆದರೆ ಜಿಯೋದ (STB) ಎಸ್‌ಟಿಬಿಯು ಆಂಡ್ರಾಯ್ಡ್ ಓಎಸ್ ಮತ್ತು ಕಸ್ಟಮ್ UI ಬೆಂಬಲ್ ಪಡೆದಿರುತ್ತದೆ ಎನ್ನಲಾಗಿದೆ. ಜಿಯೋ ಗಿಗಾಫೈಬರ್ ಸೇವೆಗಾಗಿ ಈಗಾಗಲೇ 1600 ನಗರಗಳಲ್ಲಿ ಸುಮಾರು 15 ಮಿಲಿಯನ್ ಗ್ರಾಹಕರು ಪ್ರಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಆದ್ರೆ ಜಿಯೋ ಫೈಬರ್ ಸೇವೆಗಾಗಿ ಸೆಪ್ಟಂಬರ್ 5ರ ವರೆಗೆ ಕಾಯಲೆಬೇಕು.
ಜಿಯೋ ಗಿಗಾಫೈಬರ್ ಬೆಲೆಯು 700ರೂ.ಗಳಿಂದ 10,000ರೂ.ಗಳ ವರೆಗೆ ವಿವಿಧ ಪ್ಲ್ಯಾನ್‌ಗಳಲ್ಲಿ ದೊರೆಯಲಿದೆ. ಹಾಗೆಯೇ ಗ್ರಾಹಕರಿಗೆ ವೆಲ್‌ಕಮ್ ಆಫರ್ ಆಗಿ ಜಿಯೋ 4K ಟಿವಿ ಮತ್ತು 4K ಸೆಟ್‌ಅಪ್‌ಬಾಕ್ಸ್ ಸಹ ಉಚಿತವಾಗಿ ನೀಡುವುದಾಗಿ ಕಂಪನಿಯು ತನ್ನ ಜಿಯೋ AGM-2019 ವಾರ್ಷಿಕ ಸಭೆಯಲ್ಲಿ ತಿಳಿಸಿದೆ. ಕಡಿಮೆ ಬೆಲೆಯೊಂದಿಗೆ ವೇಗದ ಇಂಟರ್ನೆಟ್ ಸೇವೆಯು ಗ್ರಾಹಕರನ್ನು ಸೆಳೆದಿದೆ.
ಹಾಗೆಯೇ ಜಿಯೋ ಗಿಗಾಫೈಬರ್ ಗ್ರಾಹಕರಿಗೆ ಉಚಿತ ಸ್ಥಿರ ದೂರವಾಣಿ ಸೇವೆಯನ್ನು ನೀಡಲಿದೆ. ಗ್ರಾಹಕರು ಉಚಿತವಾಗಿ ನ್ಯಾಶನಲ್ ಮತ್ತು ಅಂತರಾಷ್ಟ್ರೀಯ ಕರೆಗಳನ್ನು ಮಾಡಬಹುದಾಗಿದೆ.

ಗಣೇಶ ಹಬ್ಬದ ಸ್ಪೆಷಲ್!..'ಮೊಟೊರಿಲಾ ಒನ್ ಆಕ್ಷನ್' ಫೋನ್ ಓಪೆನ್ ಸೇಲ್!
ಇತ್ತೀಚಿಗೆ ಮೊಟೊರೊಲಾ ಸಂಸ್ಥೆಯ ಹೊಸ 'ಮೊಟೊರೊಲಾ ಒನ್ ಆಕ್ಷನ್' ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿದ್ದು, ಮೊನ್ನೆ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಸೇಲ್ ಆರಂಭಿಸಿತು. ಈಗಾಗಲೇ ತನ್ನ ಫೀಚರ್ಸ್ ಮತ್ತು ಬಜೆಟ್ ಬೆಲೆಯಿಂದ ಗ್ರಾಹಕರನ್ನು ಅಕರ್ಷಿಸಿರುವ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ಈ ಗಣೇಶ ಹಬ್ಬದ ಸಮಯದಲ್ಲಿ ಗ್ರಾಹಕರಿಗೆ ಸಂಭ್ರಮದ ಸಮಾಚಾರವನ್ನು ನೀಡಿದೆ.
ಹೌದು, ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಇದೀಗ ಓಪೆನ್ ಸೇಲ್ ಆರಂಭಿಸಿದೆ. 4GB RAM ಮತ್ತು 128GB ಒಂದೇ ವೇರಿಯಂಟ್ ಹೊಂದಿದ್ದು, ಬ್ಲೂ, ವೈಟ್ ಮತ್ತು ಟೈಲ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಒಟ್ಟು ಮೂರು ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿರುವ ಈ ಫೋನ್ 'ಸ್ಯಾಮ್‌ಸಂಗ್ Exynos 9609' ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 13,999ರೂ.ಗಳಿಗೆ ಲಭ್ಯ. ಹಾಗಾದರೇ ಮೊಟೊರೊಲಾ ಒನ್ ವಿಷನ್ ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ
2520 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಸಿನಿಮಾ ವಿಶನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 21:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 435 ppi ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ. 81.52 % ಆಗಿದೆ. ಹಾಗೆಯೇ ಡಿಸ್‌ಪ್ಲೇಯ ಸುತ್ತಳತೆಯು 160.1 mm x 71.2 mm x 9.15 mm ಆಗಿದೆ.

ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ Exynos 9609 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಪೈ ಓಎಸ್‌ನ ಬೆಂಬಲ ಸಹ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯವಾಗಿ 512GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಪಡೆದಿದೆ.

ಕ್ಯಾಮೆರಾ ವಿಶೇಷತೆ
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು ಗೋಪ್ರೊ ಸ್ಟೈಲ್ ಜೊತೆಗೆ ವೈಲ್ಡ್ ಆಂಗಲ್ ಸೆನ್ಸಾರ್‌ನಲ್ಲಿದೆ. ಹಾಗೂ ಇದು 117 ಡಿಗ್ರಿ FOV ಯೊಂದಿಗೆ 1080p ವಿಡಿಯೊ ಸಪೋರ್ಟ್ ಇದೆ. ತೃತೀಯ ಕ್ಯಾಮೆರಾ 5ಎಂಪಿ ಸೆನ್ಸಾರ್ ಪಡೆದಿದೆ. ಸೆಲ್ಫಿಗಾಗಿ 12ಎಂಪಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಮತ್ತು ಓಎಸ್
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದಿದ್ದು, ಯುಎಸ್‌ಬಿ ಟೈಪ್ ಸಿ ಫೋರ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಆಂಡ್ರಾಯ್ಡ್ ಪೈ 9 ಓಎಸ್ ನೀಡಲಾಗಿದ್ದು, ಗ್ರಾಹಕರು ಮುಂದೆ ಆಂಡ್ರಾಯ್ಡ್ 10 ಮತ್ತು ಆಂಡ್ರಾಯ್ಡ್ 11 ಓಎಸ್‌ಗಳಿಗೆ ಅಪ್‌ಗ್ರೇಡ್ ಮಾಡಿಕೊಳ್ಳವ ಅವಕಾಶವನ್ನು ಒಳಗೊಂಡಿದೆ. ದೀರ್ಘಕಾಲ ಬಾಳಿಕೆ ಒದಗಿಸಲಿದೆ.

ಇತರೆ ಫೀಚರ್ಸ್‌ಗಳು
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ರಿಯರ್‌ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆ ಹೊಂದಿದ್ದು, 3.5mm ಆಡಿಯೊ ಜಾಕ್ ಆಯ್ಕೆಯ ಜೊತೆಗೆ ಡಾಲ್ಬಿ ಸೌಂಡ್ ಬೆಂಬಲ ಪಡೆದಿದೆ. ಇದರೊಂದಿಗೆ ಸ್ಲಾಶ್ ಪ್ರೂಫ್, ಹಾಟ್‌ಸ್ಪಾಟ್, 4G LTE, ವೈಫೈ, ಬ್ಲೂಟೂತ್, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಮೊಟೊರೊಲಾ ಒನ್ ಆಕ್ಷನ್ ಸ್ಮಾರ್ಟ್‌ಫೋನ್ ಇದೀಗ ಓಪೆನ್ ಸೇಲ್‌ನಲ್ಲಿ ಲಭ್ಯವಿದೆ. 4GB RAM ಮತ್ತು 128GB ವೇರಿಯಂಟ್ ಸ್ಮಾರ್ಟ್‌ಫೋನ್ 13,999ರೂ.ಗಳಿಗೆ ಲಭ್ಯವಾಗಲಿದೆ. ಬ್ಲೂ, ವೈಟ್ ಮತ್ತು ಟೀಲ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470